Tuesday, December 10, 2019

ಬಿಎಸ್ ವೈ ಸರ್ಕಾರಕ್ಕೀಗ ಸ್ಪಷ್ಟ ಬಹುಮತ; ಕಾಂಗ್ರೆಸ್, ಜೆಡಿಎಸ್ ಲೆಕ್ಕಾಚಾರ ಉಲ್ಟಾಪಲ್ಟಾ

ಬಿಎಸ್ ವೈ ಸರ್ಕಾರಕ್ಕೀಗ ಸ್ಪಷ್ಟ ಬಹುಮತ; ಕಾಂಗ್ರೆಸ್, ಜೆಡಿಎಸ್ ಲೆಕ್ಕಾಚಾರ ಉಲ್ಟಾಪಲ್ಟಾ
ಬೆಂಗಳೂರು: ರಾಜ್ಯದ ೧೫ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ೧೨ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ  2019 ಡಿಸೆಂಬರ್ 09ರ ಸೋಮವಾರ ಭರ್ಜರಿ ಬಹುಮತ ಗಳಿಸಿತು. ಇದರೊಂದಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಮೂರುವರೆ ವರ್ಷಗಳ ಕಾಲ ಭದ್ರವಾದಂತಾಯಿತು.

ಕಾಂಗ್ರೆಸ್ ಕೇವಲ ಸ್ಥಾನ ಗೆದ್ದರೆ, ಜನತಾದಳ (ಎಸ್) ಶೂನ್ಯಸ್ಥಾನ ಗಳಿಸಿತು. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಯಿತು.

ಯಡಿಯೂರಪ್ಪ
ನೇತೃತ್ವದ ಬಿಜೆಪಿ ಸರ್ಕಾರ ಉಪಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಗೆಲ್ಲಲೇಬೇಕಾದ ಅನಿರ್ವಾಯತೆಗೆ ಸಿಲುಕಿತ್ತು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕನಿಷ್ಠ ೧೧೨ ಶಾಸಕರ ಅಗತ್ಯವಿತ್ತು. ಇದೀಗ ಉಪಚುನಾವಣೆಯಲ್ಲಿ ೧೨ ಸ್ಥಾನಗಳಲ್ಲಿ ಜಯ ಸಾಧಿಸುವುದರೊಂದಿಗೆ ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ ಬಲ ೧೧೭ಕ್ಕೆ ಏರಿತು.

೧೦೫ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ವಿಧಾನಸಭೆಯಲ್ಲಿ ಸರಳ ಬಹುಮತ ಸಾಬೀತುಪಡಿಸಲು ೧೧೨ ಶಾಸಕರ ಅಗತ್ಯವಿತ್ತು. ಹಾಲಿ ೨೨೨ ಸದಸ್ಯಬಲದ ( ಕ್ಷೇತ್ರಗಳಿಗೆ ಉಪಚುನಾವಣೆ ಇನ್ನಷ್ಟೇ ಘೋಷಣೆಯಾಗಬೇಕಿದೆ) ವಿಧಾನಸಭೆಯಲ್ಲಿ ಬಿಜೆಪಿ ಪ್ರಸ್ತುತ ೧೧೭ ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ ೬೮, ಜೆಡಿಎಸ್ ೩೪ ಸ್ಥಾನ ಹೊಂದಿವೆ.. ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತ ಹೊಂದಿದ್ದು, ಬಿಎಸ್ ಯಡಿಯೂರಪ್ಪ ಸಿಎಂ ಕುರ್ಚಿ ಭದ್ರವಾದಂತಾಯಿತು.

೧೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂಬತ್ತು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಜೆಡಿಎಸ್ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದರಿಂದ ಮತ್ತೆ ಅಧಿಕಾರದ ಗದ್ದುಗೆ ಏರಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಕುಮಾರಸ್ವಾಮಿ ಲೆಕ್ಕಾಚಾರ ತಲೆಕೆಳಗಾಯಿತು.

ಉಪಚುನಾವಣೆಯಲ್ಲಿ ಗೆದ್ದವರು ಯಾರು?
ಕ್ರ.ಸಂ.  ಕ್ಷೇತ್ರ                         ಗೆದ್ದವರು (ಪಕ್ಷ)                             ಸೋತವರು (ಪಕ್ಷ)                          ಅಂತರ                         
.   ಅಥಣಿ                     ಮಹೇಶ್ ಕುಮಟಳ್ಳಿ (ಬಿಜೆಪಿ)        ಗಜಾನನ ಮಂಗಸೂಳಿ (ಕಾಂಗ್ರೆಸ್)   ೨೩,೬೪೬
.   ಕಾಗವಾಡ               ಶ್ರೀಮಂತ ಪಾಟೀಲ್ (ಬಿಜೆಪಿ)       ಭರಮಗೌಡ ಕಾಗೆ  (ಕಾಂಗ್ರೆಸ್)         ೧೮,೫೫೭
.   ಗೋಕಾಕ್              ರಮೇಶ್ ಜಾರಕಿಹೊಳಿ (ಬಿಜೆಪಿ)  ಲಖನ್ ಜಾರಕಿಹೊಳಿ (ಕಾಂಗ್ರೆಸ್)   ೨೫,೮೯೧
.  ಯಲ್ಲಾಪುರ            ಶಿವರಾಮ್ ಹೆಬ್ಬಾರ್  (ಬಿಜೆಪಿ)       ಭಿಮಣ್ಣ ನಾಯ್ಕ  (ಕಾಂಗ್ರೆಸ್)       ೩೧,೪೦೮
.  ಹಿರೇಕೆರೂರು         ಬಿ.ಸಿ.ಪಾಟೀಲ್ (ಬಿಜೆಪಿ)                ಬನ್ನಿಕೋಡ (ಕಾಂಗ್ರೆಸ್)       ೨೪,೩೯೮
.  ರಾಣೇಬೆನ್ನೂರು     ಅರುಣ್ಕುಮಾರ್ (ಬಿಜೆಪಿ)       ಕೋಳಿವಾಡ  (ಕಾಂಗ್ರೆಸ್)             ೨೩,೨೨೨
.  ವಿಜಯನಗರ           ಆನಂದಸಿಂಗ್  (ಬಿಜೆಪಿ)                  ಘೋರ್ಪಡೆ (ಕಾಂಗ್ರೆಸ್)      ೩೦,೧೨೫
.  ಚಿಕ್ಕಬಳ್ಳಾಪುರ        ಕೆ.ಸುಧಾಕರ್ (ಬಿಜೆಪಿ)             ಎಂ ಅಂಜನಪ್ಪ (ಕಾಂಗ್ರೆಸ್)           ೩೪,೮೦೧
.   ಕೆ.ಆರ್.ಪುರಂ         ಬೈರತಿ ಬಸವರಾಜ್ (ಬಿಜೆಪಿ)     ನಾರಾಯಣಸ್ವಾಮಿ  (ಕಾಂಗ್ರೆಸ್)   ೪೪,೩೬೬
೧೦.   ಯಶವಂತಪುರ        ಎಸ್.ಟಿ.ಸೋಮಶೇಖರ್ (ಬಿಜೆಪಿ  ಜವರಾಯಿಗೌಡ (ಜೆಡಿಎಸ್) ೨೭,೬೯೯
೧೧.   ಮಹಾಲಕ್ಷ್ಮೀ ಲೇಔಟ್ ಕೆ.ಗೋಪಾಲಯ್ಯ (ಬಿಜೆಪಿ)       ಎಂ ಶಿವರಾಜು  (ಕಾಂಗ್ರೆಸ್)   ೫೪,೩೮೬
೧೨.   ಶಿವಾಜಿನಗರ              ರಿಜ್ವಾನ್ ಅರ್ಷದ್  (ಕಾಂಗ್ರೆಸ್)    ಎಂ ಸರವಣ  (ಬಿಜೆಪಿ) ೧೪,೬೦೦
೧೩.   ಹೊಸಕೋಟೆ          ಶರತ್ ಬಚ್ಚೇಗೌಡ (ಪಕ್ಷೇತರ),       ಎಂಟಿಬಿ ನಾಗರಾಜ್ (ಬಿಜೆಪಿ),  ೧೧,೮೭೦
೧೪.   ಕೆ.ಆರ್.ಪೇಟೆ          ನಾರಾಯಣಗೌಡ  (ಬಿಜೆಪಿ),        ಬಿ.ಎಲ್.ದೇವರಾಜ  (ಜೆಡಿಎಸ್)  ,೭೩೧
೧೫.   ಹುಣಸೂರು   ಎಚ್.ಪಿ.ಮಂಜುನಾಥ್ (ಕಾಂಗ್ರೆಸ್) , ಎಚ್.ವಿಶ್ವನಾಥ್ (ಬಿಜೆಪಿ),   ೩೯,೭೨೭

No comments:

Advertisement