Thursday, January 9, 2020

ಕ್ಷಿಪಣಿ ದಾಳಿಗೆ 80 ಬಲಿ: ಇರಾನ್; ಯಾರೂ ಸತ್ತಿಲ್ಲ: ಅಮೆರಿಕ

ಕ್ಷಿಪಣಿ ದಾಳಿಗೆ 80 ಬಲಿ: ಇರಾನ್; ಯಾರೂ  ಸತ್ತಿಲ್ಲಅಮೆರಿಕ
ಇರಾನ್ ವಿರುದ್ಧ ದಿಗ್ಬಂಧನದ ಸುಳಿವು, ತತ್ ಕ್ಷಣಕ್ಕೆ ಸೇನಾ ಕ್ರಮವಿಲ್ಲ: ಟಂಪ್
ವಾಷಿಂಗ್ಟನ್:  ಅಮೆರಿಕ ವು ಡ್ರೋಣ್  ದಾಳಿ ನಡೆಸಿ ತನ್ನ  ಜನರಲ್ ಕಮಾಂಡರ್ ಖಾಸಿಂ ಸೊಲೈಮಾನಿ ಅವರನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಇರಾಕ್ ಎರಡು ವಾಯುನೆಲೆಗಳಲ್ಲಿ ಮೈತ್ರಿ ಪಡೆಗಳ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿ 80 ಮಂದಿ ಅಮೆರಿಕನ್ ಭಯೋತ್ಪಾದಕರನ್ನು  (ಅಮೆರಿಕ ಯೋಧರನ್ನು) ಕೊಂದಿರುವುದಾಗಿ ಇರಾನ್ 2020 ಜನವರಿ 08 ಬುಧವಾರ ಪ್ರತಿಪಾದಿಸಿತು. ಆದರೆ ದಾಳಿಯಲ್ಲಿ ಯಾರೂ ಸತ್ತಿಲ್ಲ ಎಂದು ಅಮೆರಿಕ ಪ್ರತಿಕ್ರಿಯಿಸಿತು.

ಮೈತ್ರಿಪಡೆಗಳ
ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ ಇರಾನ್ ಕ್ರಮಕಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರುಆಲ್ ಇಸ್ ವೆಲ್ಎಂದು ಶಾಂತ ಪ್ರತಿಕ್ರಿಯೆ ನೀಡಿದರು. ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಟೆಲಿವಿಷನ್ ಭಾಷಣ ಮಾಡಿದ ಅವರು ಇರಾನ್ ವಿರುದ್ಧ ದಿಗ್ಭಂಧನ ಸಾಧ್ಯತೆಯನ್ನು ಪ್ರಕಟಿಸಿದರಾದರೂ ತತ್ ಕ್ಷಣ ಸೇನಾ ಕಾರ್ಯಾಚರಣೆಯ ಸಾಧ್ಯತೆ ಇಲ್ಲ ಎಂಬ ಸುಳಿವು ನೀಡಿದರು.

 ಇರಾಕ್ನಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿಸಿಕೊಂಡು ೧೫ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದ್ದು, ೮೦ಕ್ಕೂ ಅಧಿಕ ಅಮೆರಿಕನ್ ಟೆರರಿಸ್ಟ್ (ಸೈನಿಕರು)ಗಳು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ ಟಿಲಿವಿಷನ್ ವರದಿ ಮಾಡಿತ್ತು.

ಇರಾನ್ ದಾಳಿಯಲ್ಲಿ ಎಷ್ಟು ಸಾವು ಹಾಗೂ ನಷ್ಟ ಸಂಭವಿಸಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ತಿಳಿಸಿದರು.
 ೨೦೧೮ರ ಡಿಸೆಂಬರಿನಲ್ಲಿ ಇರಾಕಿನಲ್ಲಿರುವ ಐನ್ ಅಲ್ ಅಸ್ಸಾದ್ ವಾಯು ನೆಲೆಗೆ ಟ್ರಂಪ್ ಭೇಟಿ ನೀಡಿದ್ದಾಗ ಕೂಡಾಅಲ್ ಇಸ್ ವೆಲ್ಎಂದು ಟ್ರಂಪ್ ಶುಭ ಕೋರಿದ್ದರು ಎಂದು ವರದಿ ವಿವರಿಸಿದೆ.

ಅಮೆರಿಕ್ಕೆ ಇಸ್ರೇಲ್ ಬೆಂಬಲ: ಮಧ್ಯೆ, ತನ್ನ ತಂಟೆಗೆ ಬಂದರೆಅದ್ಭುತ ಹೊಡೆತಕೊಡುತ್ತೇವೆಎಂಬುದಾಗಿ ಹೇಳುವ ಮೂಲಕ ಇಸ್ರೇಲ್ ಕೂಡಾ ಬುಧವಾರ ಇರಾನಿಗೆ ಸವಾಲು ಹಾಕಿತು.

ಅಮೆರಿಕ
ಹಾಗೂ ಇರಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಇಸ್ರೇಲ್ ಕೂಡಾ ಇರಾನ್ ದೇಶವನ್ನು ಪ್ರಚೋದಿಸುವ ಹೇಳಿಕೆ ನೀಡಿತು. ಇರಾನ್ ಒಂದು ವೇಳೆ ಇಸ್ರೇಲ್ ಮೇಲೆ ದಾಳಿ ನಡೆಸಿದರೆ ನಾವುಅದ್ಭುತ ಹೊಡೆತಕೊಡುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದರು. ತನ್ಮೂಲಕ ಇರಾನ್ ಕಾಲು ಕೆರೆದು ಜಗಳಕ್ಕೆ ಬಂದರೆ ನಾವೂ ಪ್ರತಿದಾಳಿಗೆ ಸಿದ್ಧ ಎಂದು ಇಸ್ರೇಲ್ ಪಂಥಾಹ್ವಾನ ನೀಡಿತು.

ಇರಾನ್ ದೇಶಕ್ಕೆ ಪಂಥಾಹ್ವಾನ ನೀಡಿರುವ ಜೊತೆಯಲ್ಲೇ ಅಮೆರಿಕಕ್ಕೂ ತನ್ನ ಬೆಂಬಲವನ್ನು ಇಸ್ರೇಲ್ ಘೋಷಿಸಿತು. ಇಸ್ರೇಲಿಗೆ ಅಮೆರಿಕ ದೇಶಕ್ಕಿಂತ ಒಳ್ಳೆಯ ಗೆಳೆಯನಿಲ್ಲ ಎಂದಿರುವ ಬೆಂಜಮಿನ್ ನೆತನ್ಯಾಹು, ಟ್ರಂಪ್ ಅವರಿಗೆ ಬೆಂಬಲವಿದೆ. ಅಷ್ಟೇ ಅಲ್ಲ, ಅಮೆರಿಕ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೂ ತಮ್ಮ ಬೆಂಬಲವಿದೆ ಎಂದು ಘೋಷಿಸಿದರು.

ಇರಾಕಿನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಮಂಗಳವಾರ ರಾತ್ರಿ (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ೧೦:೩೦) ೧೨ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿಗಳನ್ನು ಸಿಡಿಸಿದೆ. ಸಾವು ಹಾಗೂ ನಷ್ಟದ ಕುರಿತು ಅಮೆರಿಕ ಸೇನೆ ಇದುವರೆಗೂ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ದೊಡ್ಡ ಮಟ್ಟದ ಪ್ರತಿದಾಳಿಗೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕಾದ
ಸೇನಾ ಪಡೆಯ ನೆಲೆಗಳ ಮೇಲೆ ದಾಳಿ ನಡೆಸಿದರೆ ಅತ್ಯಾಧುನಿಕ ತಂತ್ರಜ್ಞಾನದ ಆಯುಧಗಳ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂಬ ಖಡಕ್ ಎಚ್ಚರಿಕೆಯನ್ನು ಇರಾನಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದರು. ಆದರೆ, ಇದೀಗ ಇರಾನ್ ಟ್ರಂಪ್ ಎಚ್ಚರಿಕೆಯನ್ನೂ ಲೆಕ್ಕಿಸದೆ, ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಯುದ್ಧಭೀತಿ ಎದುರಾಗಿದೆ.

ಇರಾಕಿನಲ್ಲಿ ಸದ್ದಾಂ ಹುಸೇನ್ ಅಧಿಕಾರ ನಡೆಸುತ್ತಿದ್ದ ಕಾಲದಲ್ಲಿ ವೈಭವೋಪೇತ ನಗರವಾಗಿದ್ದ ಬಾಗ್ದಾದ್, ಇದೀಗ ಯುದ್ಧ ಭೂಮಿಯಂತಾಗಿದೆ. ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಪ್ರತಿದಾಳಿಗೆ ಅಮೆರಿಕ ಸಮರೋಪಾದಿಯ ತಯಾರಿ ನಡೆಸುತ್ತಿದ್ದು, ಬಾಗ್ದಾದ್ ಮಾರ್ಗವಾಗಿ ಪ್ರಯಾಣಿಕರ ಯುದ್ಧ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಇರಾಕಿಗೆ ಅಮೆರಿಕದ ಪ್ರಯಾಣಿಕ ವಿಮಾನಗಳ ಹಾರಾಟವನ್ನೂ ರದ್ದುಪಡಿಸಲಾಗಿದೆ. ಜೊತೆಗೆ ಇರಾಕ್ ಪ್ರವೇಶಿಸದಂತೆ ಅಮೆರಿಕವು ತನ್ನ ಪ್ರಜೆಗಳಿಗೆ ಸೂಚನೆಯನ್ನೂ ಕೊಟ್ಟಿದೆ.

ಅಮೆರಿಕ
ಪಡೆಗಳು ಭಯೋತ್ಪಾದಕರು: ಮಧ್ಯೆ, ಅಮೆರಿಕದ ಎಲ್ಲಾ ಪಡೆಗಳನ್ನುಭಯೋತ್ಪಾದಕರುಎಂದು ಘೋಷಿಸಿ ಮಸೂದೆಯೊಂದನ್ನು ಇರಾನ್ ಸಂಸತ್ ಮಂಗಳವಾರ ಅಂಗೀಕರಿಸಿದೆ.

ಮಸೂದೆ ಅಡಿಯಲ್ಲಿ, ಅಮೆರಿಕದ ಎಲ್ಲಾ ಪಡೆಗಳು, ಪೆಂಟಗನ್ ಮತ್ತು ಅದರ ಅಂಗಸಂಸ್ಥೆಗಳು, ಕಮಾಂಡರುಗಳು ಹಾಗೂ ಸೊಮಲೈಮಾನಿ ಹತ್ಯೆಗೆ ಆದೇಶಿಸಿದವರನ್ನು ಭಯೋತ್ಪಾದಕರು ಎಂದು ಹೆಸರಿಸಲಾಗಿದೆ.

ಸೇನೆ, ಗುಪ್ತಚರ, ಹಣಕಾಸು, ತಾಂತ್ರಿಕ ಸೇವೆ ಸೇರಿದಂತೆ ಪಡೆಗಳಿಗೆ ಯಾವುದೇ ಸಹಾಯ ಮಾಡುವವರನ್ನು ಭಯೋತ್ಪಾದಕ ಕಾಯ್ದೆ ಅಡಿಯಲ್ಲಿ ಪರಿಗಣಿಸಲಾಗುವುದುಎಂದು ಸಂಸತ್ ತಿಳಿಸಿದೆ. ಇರಾನಿನ ರೆವಲ್ಯೂಷನರಿ ಗಾರ್ಡ್ಸ್ನ್ನು ಭಯೋತ್ಫಾದಕ ಸಂಘಟನೆ ಎಂಬುದಾಗಿ ಅಮೆರಿಕ ಘೋಷಿಸಿ ಕಪ್ಪು ಪಟ್ಟಿಗೆ ಸೇರಿಸಿದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇರಾನಿನ ಉನ್ನತ ಮಟ್ಟದ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.

No comments:

Advertisement