Monday, January 13, 2020

ಐಎನ್‌ಎಸ್ ವಿಕ್ರಮಾದಿತ್ಯದಿಂದ ಹಗುರ ಯುದ್ಧ ವಿಮಾನ (ಎಲ್‌ಸಿಎ) ಚೊಚ್ಚಲ ಯಾನ

ಐಎನ್ಎಸ್ ವಿಕ್ರಮಾದಿತ್ಯದಿಂದ ಹಗುರ ಯುದ್ಧ ವಿಮಾನ (ಎಲ್ಸಿಎ)  ಚೊಚ್ಚಲ ಯಾನ
ನವದೆಹಲಿ: ಐಎನ್ಎಸ್ ವಿಕ್ರಮಾದಿತ್ಯ ವಿಮಾನ ವಾಹಕ ನೌಕೆಯಲ್ಲಿ ಹಗುರ ಯುದ್ಧ ವಿಮಾನದ (ಎಲ್ಸಿಎ) ನೌಕಾ ಆವೃತ್ತಿಯ ಮೂಲಮಾದರಿಯು ತನ್ನ ಚೊಚ್ಚಲ ಲ್ಯಾಂಡಿಂಗ್ ಮಾಡಿದ ಒಂದು ದಿನದ ಬಳಿಕ,  2020 ಜನವರಿ 12ರ ಭಾನುವಾರ ಈ ತಂತ್ರಜ್ಞಾನ ಪ್ರದರ್ಶಕ ವಿಮಾನವು ಭಾರತದ ಏಕೈಕ ವಿಮಾನವಾಹಕ ನೌಕೆಯಿಂದ ಮೊದಲ ಬಾರಿಗೆ ಗಗನಕ್ಕೆ ಹಾರಿತು ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.

ತನ್ನದೇ
ಆದ ಡೆಕ್ ಆಧಾರಿತ ಸಮರ ವಿಮಾನಗಳ ಅಭಿವೃದ್ಧಿ ನಿಟ್ಟಿನಲ್ಲಿ   ಸಾಧನೆಯ ಭಾರತದ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ.

"ಅಭಿವೃದ್ಧಿಶೀಲ  ಎಲ್ಸಿಎ (ಎನ್) ಎಂಕೆ ವಿಕ್ರಮಾದಿತ್ಯದಿಂದ ಮೊದಲ ಸ್ಕೀ ಜಂಪ್ ಟೇಕ್-ಆಫ್ನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ" ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿತು. ವಿಕ್ರಮಾದಿತ್ಯ ವಿಮಾನ ವಾಹಕವನ್ನು ಪ್ರಸ್ತುತ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿದೆ.

ಮುಂದಿನ ಎಂಟು ರಿಂದ ೧೦ ದಿನಗಳಲ್ಲಿ ಎಲ್ಸಿಎ (ನೌಕಾಪಡೆ ಆವೃತ್ತಿಯು) ೨೦ ಲ್ಯಾಂಡಿಂಗ್ ಮತ್ತು ಟೇಕ್ಆಫ್ಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಇದು ಟೇಕಾಫ್ ಮಾಡಲು ಸ್ಕೀ ಜಂಪ್ನ್ನು ಬಳಸುತ್ತದೆ.

ಹಗುರ ಯುದ್ಧ ವಿಮಾನದ ನೌಕಾ ಆವೃತ್ತಿಯು ಶನಿವಾರ ಮೊತ್ತ ಮೊದಲ ಬಾರಿಗೆ ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯಲ್ಲಿ ಇಳಿದಿತ್ತು.

ವಿಶ್ವದಲ್ಲಿ
ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ - ಐದು ರಾಷ್ಟ್ರಗಳು ಮಾತ್ರವೇ ಡೆಕ್ ಮಾದರಿಯ ವಿಮಾನವಾಹಕ ನೌಕೆಗಳನ್ನು ನಿರ್ಮಿಸಿವೆ. ಇದೀಗ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.

No comments:

Advertisement