ನಿರ್ಭಯಾ
ಪ್ರಕರಣ: ೪ ಅಪರಾಧಿಗಳಿಗೆ ಜ.೨೨ರಂದು ಗಲ್ಲು
ಡೆತ್
ವಾರಂಟ್ ಜಾರಿಗೊಳಿಸಿದ ದೆಹಲಿ ನ್ಯಾಯಾಲಯ
ನವದೆಹಲಿ:
ಏಳು ವರ್ಷಗಳ ಹಿಂದೆ, ೨೦೧೨ರ ಡಿಸೆಂಬರ್ ೧೬ರ ರಾತ್ರಿ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ’ನಿರ್ಭಯಾ’ ಮೇಲೆ
ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರ ಹಲ್ಲೆ ನಡೆಸಿ ಆಕೆಯ ದಾರುಣ ಸಾವಿಗೆ ಕಾರಣರಾದ ನಾಲ್ವರು ಅಪರಾಧಿಗಳ ವಿರುದ್ಧ 2020 ಜನವರಿ 07ರ ಮಂಗಳವಾರ ’ಡೆತ್ ವಾರಂಟ್’ ಹೊರಡಿಸಿದ ದೆಹಲಿಯ ನ್ಯಾಯಾಲಯ, 2020 ಜನವರಿ ೨೨ರ ಬೆಳಗ್ಗೆ ೭ ಗಂಟೆಗೆ ಅವರನ್ನು
ಗಲ್ಲಿಗೆ ಏರಿಸುವಂತೆ ಆದೇಶ ನೀಡಿತು.
ಯುವ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆಸಿದ ೨೦೧೨ರ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಲೆ ಕೃತ್ಯದಲ್ಲಿ ಅಕ್ಷಯ್ ಥಾಕೂರ್ ಸಿಂಗ್, ಮುಖೇಶ್, ಪವನ್ ಗುಪ್ತ ಮತ್ತು ವಿನಯ್ ಶರ್ಮ ಅವರ ಅಪರಾಧಗಳು ಸಾಬೀತಾಗಿದ್ದು ಅವರಿಗೆ ವಿಧಿಸಲಾಗಿರುವ ಮರಣದಂಡನೆ ಜಾರಿಗೆ ನ್ಯಾಯಾಲಯ ಆದೇಶ ನೀಡಿದೆ. ಅಪರಾಧ ಕೃತ್ಯದಲ್ಲಿ ಶಾಮೀಲಾಗಿದ್ದ ೬ ಮಂದಿಯ ಪೈಕಿ ಒಬ್ಬನನ್ನು ಬಾಲಾಪರಾಧಿ ಎಂಬುದಾಗಿ ಪರಿಗಣಿಸಿ ೨೦೧೫ರ ಡಿಸೆಂಬರ್ ೨೦ರಂದು ಬಿಡುಗಡೆ ಮಾಡಲಾಗಿತ್ತು. ಇನ್ನೊಬ್ಬ ಆರೋಪಿ ರಾಮ್ ಸಿಂಗ್ ವಿಚಾರಣೆ ವೇಳೆಯಲ್ಲಿಯೇ ಸೆರೆಮನೆಯಲ್ಲೇ ಆತ್ಯಹತ್ಯೆ ಮಾಡಿಕೊಂಡಿದ್ದ.
ನಾಲ್ಕು ಮಂದಿ ಅಪರಾಧಿಗಳ ವಿರುದ್ಧ ನ್ಯಾಯಾಲಯವು ಹೊರಡಿಸಿದ ಡೆತ್ ವಾರಂಟ್ ಮತ್ತು ಗಲ್ಲು ಶಿಕ್ಷೆಯ ಜಾರಿಯು ’ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರು ಇರಿಸಿದ ನಂಬಿಕೆಯನ್ನು ಬಲಪಡಿಸುವುದು ಮತ್ತು ನನ್ನ ಮಗಳಿಗೆ ನ್ಯಾಯ ಒದಗಿಸುವುದರ ಜೊತೆಗೆ ಮಹಿಳೆಯನ್ನು ಸಬಲಗೊಳಿಸುವುದು’ ಎಂದು ಡೆತ್ ವಾರಂಟ್ ಹೊರಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಮೃತ ನಿರ್ಭಯಾಳ ತಾಯಿ ಪ್ರತಿಕ್ರಿಯಿಸಿದರು.
ಡೆತ್ ವಾರಂಟ್ ಎಂಬುದಾಗಿಯೇ ಪರಿಗಣಿಸಲಾಗುವ ’ಬ್ಲ್ಯಾಕ್ ವಾರಂಟ್ ವಾಸ್ತವವಾಗಿ ಮರಣದಂಡನೆ ಜಾರಿಗೆ ನೀಡುವ ಆದೇಶವಾಗಿದೆ, ಆದಾಗ್ಯೂ ತಪ್ಪಿತಸ್ಥರು ಮೇಲ್ಮನವಿ ಸಲ್ಲಿಸುವ ತಮ್ಮ ಹಕ್ಕು ಚಲಾಯಿಸಿದರೆ ಅಥವಾ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದರೆ, ’ಬ್ಲ್ಯಾಕ್ ವಾರಂಟನ್ನು ತಡೆ ಹಿಡಿಯಬಹುದು ಅಥವಾ ರದ್ದು ಪಡಿಸಬಹುದು.

ಕಾನೂನುಬದ್ಧ
ಪರಿಹಾರವನ್ನು ಬಳಸಿಕೊಳ್ಳಲು ನ್ಯಾಯಾಲಯವು ಅಪರಾಧಿಗಳಿಗೆ ೧೪ ದಿನಗಳ ಕಾಲಾವಕಾಶವನ್ನು
ಕೊಟ್ಟಿದೆ. ಈ ಪರಿಹಾರದಲ್ಲಿ ಸುಪ್ರೀಂಕೋರ್ಟಿನಲ್ಲಿ
ಕ್ಯುರೇಟಿವ್ ಅರ್ಜಿ ಸಲ್ಲಿಕೆ ಅಥವಾ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸುವ ಅವಕಾಶಗಳೂ ಸೇರಿವೆ.
ದೇಶವ್ಯಾಪಿ
ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಕ್ರೂರ ಸಾಮೂಹಿಕ ಅತ್ಯಾಚಾರ ಕೃತ್ಯದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಒಂದು ವರ್ಷದ ಒಳಗಾಗಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಮತ್ತು ಈ ಪ್ರಕರಣ ದೇಶದ
ಅತ್ಯಾಚಾರ ಸಂಬಂಧಿತ ಕಾನೂನನ್ನೇ ಮೊತ್ತ ಮೊದಲ ಬಾರಿಗೆ ಪರಿಷ್ಕರಿಸಲು ಕಾರಣವಾಗಿತ್ತು.
ವಿಚಾರಣಾ
ನ್ಯಾಯಾಲಯ ಒಂದು ವರ್ಷದ ಒಳಗಾಗಿ ಮರಣದಂಡನೆ ಶಿಕ್ಷೆ ವಿಧಿಸಿದ್ದರೂ, ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಲು ವರ್ಷಗಳೇ ಹಿಡಿದಿದ್ದವು.
೨೦೧೭ರಲ್ಲಿ ಸುಪ್ರೀಂಕೋರ್ಟ್ ಮರಣದಂಡನೆ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಮೊದಲ ಕಂತನ್ನು ತಿರಸ್ಕರಿಸಿತ್ತು.
ದೆಹಲಿ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು ಮಂಗಳವಾರ ಪೊಲೀಸರು ಮತ್ತು ಮೃತಳ ತಾಯಿ ಮಾಡಿದ ಮನವಿಯನ್ನು ಪುರಸ್ಕರಿಸಿ ’ಬ್ಲ್ಯಾಕ್ ವಾರಂಟ್’ ಜಾರಿಗೊಳಿಸಿದರು. ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ೨೦೧೭ರಲ್ಲಿ ಸುಪ್ರೀಂಕೋರ್ಟ್ ತಿರಸ್ಕರಿಸಿದಾಗ ಮೃತ ತಾಯಿ ’ಕೊನೆಗೂ ನ್ಯಾಯ ಲಭಿಸಿತು’ ಎಂದು ಸಮಾಧಾನ ಪಟ್ಟಿದ್ದರು.
ಪುತ್ರಿಯ ದಾರುಣ ಸಾವಿಗೆ ಕಾರಣರಾದ ನಾಲ್ವರು ಅಪರಾಧಿಗಳ ಕತ್ತಿಗೆ ಗಲ್ಲಿನ ಕುಣಿಕೆ ಬೀಳುವುದಕ್ಕಾಗಿ ವರ್ಷಗಟ್ಟಲೆ ಕಾದಿದ್ದ ಮೃತಳ ತಾಯಿ ಕಳೆದ ತಿಂಗಳು ನಾಲ್ವರು ಅಪರಾಧಿಗಳ ಪೈಕಿ ಒಬ್ಬ ವ್ಯಕ್ತಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಮೊದಲು ಇತ್ಯರ್ಥಗೊಳ್ಳಬೇಕು ಎಂದು ಹೇಳಿ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು ಪ್ರಕರಣವನ್ನು ಮುಂದೂಡಿದಾಗ ನ್ಯಾಯಾಲಯದಲ್ಲೇ ಕಣ್ಣೀರಿಟ್ಟಿದ್ದರು.
ಮಂಗಳವಾರದ ವಿಚಾರಣೆ ವೇಳೆ ’ಶಿಕ್ಷಿತರು ತಮ್ಮ ಕಾನೂನುಬದ್ಧ ಆಯ್ಕೆಗಳನ್ನು ಚಲಾಯಿಸುವುದಕ್ಕೂ ಮುನ್ನವೇ ಬ್ಲಾಕ್ ವಾರಂಟ್ ಜಾರಿಗೊಳಿಸಬಹುದು’ ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ಅವರು ನ್ಯಾಯಾಲಯದಲ್ಲಿ ವಾದಿಸಿದರು.
ಶಿಕ್ಷಿತರು ಅರ್ಜಿಗಳನ್ನು ಸಲ್ಲಿಸುವವರೆಗೆ ನ್ಯಾಯಾಲಯವು ಕಾಯಬೇಕು ಮತ್ತು ಬಳಿಕ ನಿರ್ಧಾರ ಕೈಗೊಳ್ಳಬೇಕು ಎಂಬ ಸಲಹೆಯು ವಿಳಂಬ ತಂತ್ರವಲ್ಲದೆ ಬೇರೇನಲ್ಲ’ ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ವಾದಿಸಿದರು.

ಡಿಸೆಂಬರ್
ತಿಂಗಳಲ್ಲಿ ನಡೆದಿದ್ದ ವಿಚಾರಣೆಯ ಬಳಿಕ ಸೆರೆಮನೆ ಅಧಿಕಾರಿಗಳು ಡಿಸೆಂಬರ್ ೧೮ರಂದು ಮರಣದಂಡನೆಗೆ ಗುರಿಯಾಗಿರುವ ಅಕ್ಷಯ್, ವಿನಯ್, ಪವನ್ ಮತ್ತು ಮುಖೇಶ್ ಅವರಿಗೆ ಅವರ ಕಾನೂನುಬದ್ಧ ಪರಿಹಾರದ ಅವಕಾಶ ಚಲಾವಣೆ ಬಗ್ಗೆ ನೋಟಿಸ್ ಜಾರಿ ಮಾಡಿದ್ದರು.
ಮರಣದಂಡನೆಯನ್ನು
ಸುಪ್ರೀಂಕೋರ್ಟ್ ಎತ್ತಿ ಹಿಡಿದ ಬಳಿಕ, ಶಿಕ್ಷಿತರ ಪೈಕಿ ಮೂವರು ಮರಣದಂಡನೆ ಜಾರಿ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಕಳೆದ ವರ್ಷ ಈ ಅರ್ಜಿಗಳನ್ನು ತಿರಸ್ಕರಿಸಿತ್ತು.
ಆ ಬಳಿಕ ತಿಹಾರ್ ಸೆರೆಮನೆ ಅಧಿಕಾರಿಗಳು ಗಲ್ಲು ಶಿಕ್ಷೆ ಜಾರಿಗೆ ಸಿದ್ಧತೆ ಆರಂಭಿಸಿದ್ದರು. ಅಷ್ಟರಲ್ಲಿ ನಾಲ್ಕನೇ ಅಪರಾಧಿ ಅಕ್ಷಯ್ ಸಿಂಗ್ ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಸುಪ್ರೀಂಕೋರ್ಟ್ ಅದನ್ನು ಕೂಡಾ ಕಳೆದ ತಿಂಗಳು ತಿರಸ್ಕರಿಸಿತ್ತು.
ಅಕ್ಷಯ್ ಸಿಂಗ್ ಅರ್ಜಿ ಸುಪ್ರೀಂಕೋರ್ಟಿನಲ್ಲಿ ತಿರಸ್ಕಾರಗೊಂಡ ಬೆನ್ನಲ್ಲೇ ನಿರ್ಭಯಾಳ ತಾಯಿ ಮತ್ತು ತಂದೆ ಡೆತ್ ವಾರಂಟ್ ಜಾರಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರು ಈದಿನದವರೆಗೆ ಪ್ರಕರಣವನ್ನು ಮುಂದೂಡಿದ್ದರು.
’ನಾನು ಕಳೆದ ಒಂದು ವರ್ಷದಿಂದ ಕಂಬ, ಕಂಬ ಸುತ್ತುತ್ತಿದ್ದೇನೆ’ ಎಂದು ನಿರ್ಭಯಾ ತಾಯಿ ಆಗ ನ್ಯಾಯಾಧೀಶರ ಎದುರಲ್ಲೇ ಕಣ್ಣೀರು ಸುರಿಸಿದ್ದರು. ’ನಾನು ಕಾನೂನು ಪಾಲಿಸಬೇಕಾಗಿದೆ’ ಎಂದು ನ್ಯಾಯಾಧೀಶರು ಅವರನ್ನು ಸಂತೈಸಿದ್ದರು.

೨೩ರ
ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಪ್ರಯಾಣಿಸುತ್ತಿದ್ದಾಗ ೨೦೧೨ರ ಡಿಸೆಂಬರ್ ೧೬ರಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಕ್ರೂರ ಚಿತ್ರಹಿಂಸೆಯ ಬಳಿಕ ತೀವ್ರ ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ನಗ್ನವಾಗಿ ರಸ್ತೆಗೆ ಎಸೆಯಲಾಗಿತ್ತು.
ತೀವ್ರ ಗಾಯಗಳ ಪರಿಣಾಮವಾಗಿ ಆಕೆ ಡಿಸೆಂಬರ್ ೨೯ರಂದು ಸಿಂಗಾಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಭೀಕರ ಘಟನೆಗೆ ಇಡೀ ದೇಶವೇ ಆಕ್ರೋಶ ವ್ಯಕ್ತ ಪಡಿಸಿತ್ತು.
ಅಪರಾಧಿಗಳ ಪುನರ್ ಪರಿಶೀಲನಾ ಅರ್ಜಿಯನ್ನು ಕಳೆದ ತಿಂಗಳು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್ ’ಪುನರ್ ಪರಿಶೀಲನಾ ಅರ್ಜಿ ಎಂದರೆ ಮೇಲ್ಮನವಿಯ ವಿಚಾರಣೆಯನ್ನು ಮತ್ತೆ ಮತ್ತೆ ನಡೆಸುವುದಲ್ಲ’ ಎಂದು ಹೇಳಿತ್ತು. ಇತರ ಮೂವರು ಅಪರಾಧಿಗಳ ಪುನರ್ ಪರಿಶೀಲನಾ ಅರ್ಜಿಗಳನ್ನು ಇದೇ ನೆಲೆಯಲ್ಲಿ ತಿರಸ್ಕರಿಸಿಲಾಗಿದೆ ಎಂದು ತ್ರಿಸದಸ್ಯ ಪೀಠವು ಬೊಟ್ಟು ಮಾಡಿತ್ತು.

No comments:
Post a Comment