‘ಜಲ್-ಜೀವನ್-ಹರಿಯಾಲಿ: ದಾಖಲೆ
ನಿರ್ಮಿಸಿದ ೧೮,೩೪೦ ಕಿ.ಮೀ. ಮಾನವ ಸರಪಳಿ!
ಪಟ್ನಾ:
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಅಭಿಯಾನ ‘ಜಲ್-ಜೀವನ್-ಹರಿಯಾಲಿ’
(ಹಸಿರು ಜಲಜೀವನ) ಅಂಗವಾಗಿ ಅವರು
2020 ಜನವರಿ 19ರ ಭಾನುವಾರ
ಬಕ್ಸಾರ್
ನಿಂದ ಜಾರ್ಖಂಡ್ ರಾಜ್ಯದ ಗಡಿಭಾಗ ದಲ್ಲಿನ ಭಾಗಲ್ಪುರದವರೆಗೆ ಗಂಗಾನದಿಯ ತೀರದುದ್ದಕ್ಕೂ ಸುಮಾರು ೧೮,೩೪೦ ಕಿಲೋ
ಮೀಟರ್ ಉದ್ದಕ್ಕೆ ನಿರ್ಮಿಸಲಾದ ಬೃಹತ್ ಮಾನವ ಸರಪಳಿ ಹೊಸ ದಾಖಲೆ ಸೃಷ್ಟಿಸಿತು.
ಸುಮಾರು
೪.೨೭ ಕೋಟಿ ಜನರು
ಈ ಮಾನವ ಸರಪಳಿ ನಿರ್ಮಾಣದಲ್ಲಿ ಕೈಜೋಡಿಸಿದ್ದರು ಮತ್ತು ಇವರೆಲ್ಲರ ಸಹಕಾರದಿಂದ ೧೮.೩೪ಸಾವಿರ ಕಿಲೋ
ಮೀಟರ್ ಉದ್ದದ ಈ ಮಾನವ ಸರಪಳಿ
ನಿರ್ಮಾಣವಾಗುವ ಮೂಲಕ ಈ ಹಿಂದಿನ ದಾಖಲೆಯನ್ನು
ಇದು ಅಳಿಸಿ ಹಾಕಿದೆ ಎಂಬ ಮಾಹಿತಿಯನ್ನು ಬಿಹಾರ ಸರಕಾರದ ಮುಖ್ಯಕಾರ್ಯದರ್ಶಿ ದೀಪಕ್ ಕುಮಾರ್ ಅವರು ನೀಡಿದರು.
೨೦೧೭ರಲ್ಲಿ
ನಡೆಸಲಾಗಿದ್ದ ಮಾನವ ಸರಪಳಿ ೧೧,೨೮೫ ಕಿಲೋ
ಮೀಟರ್ ಉದ್ದ ನಿರ್ಮಾಣಗೊಂಡಿತ್ತು. ೨೦೧೮ರಲ್ಲಿ
ವರದಕ್ಷಿಣೆ ಹಾಗೂ ಬಾಲ್ಯವಿವಾಹ ಪದ್ದತಿಗಳನ್ನು ವಿರೋಧಿಸಿ ನಿರ್ಮಾಣಗೊಂಡಿದ್ದ ಮಾನವ ಸರಪಳಿ೧೩,೬೬೦ ಕಿಲೋಮೀಟರ್ ಉದ್ದಕ್ಕೆ ನಿರ್ಮಾಣಗೊಂಡಿತ್ತು.
ಈ ಬಾರಿ ಇದಕ್ಕಿಂತ ೨೦% ಅಧಿಕ ಉದ್ದದ ಅಂದರೆ ೧೬,೨೦೦ ಕಿಲೋ ಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು.
ಈ ಬಾರಿ ಇದಕ್ಕಿಂತ ೨೦% ಅಧಿಕ ಉದ್ದದ ಅಂದರೆ ೧೬,೨೦೦ ಕಿಲೋ ಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು.
ರಾಜ್ಯದ
ಪ್ರಮುಖ ಪಟ್ಟಣಗಳಲ್ಲಿ ೪೫ ಲಕ್ಷ ಜನರು
ಇದರಲ್ಲಿ ಭಾಗವಹಿಸಿದರೆ ವಾರ್ಡ್ ಮಟ್ಟಗಳಲ್ಲಿ ಒಂದು ಕೊಟಿ ೧೩ ಲಕ್ಷದ ೪೪
ಸಾವಿರ ಜನರು ಒಟ್ಟಾಗುವ ಮೂಲಕ ಈ ಬೃಹತ್ ಮಾನವ
ಸರಪಳಿ ನಿರ್ಮಾಣಗೊಂಡಿತು. ಇನ್ನು ೫೭ ಲಕ್ಷ ವಿದ್ಯಾರ್ಥಿಗಳು
ಹಾಗೂ ೭೬ ಸಾವಿರ ಬೋಧಕ
ಸಿಬ್ಬಂದಿಯೂ ಸಹ ಈ ಬೃಹತ್
ಮಾನವ ಸರಪಳಿಯ ಭಾಗವಾಗಿದ್ದರು ಎಂಬ ಮಾಹಿತಿ ಲಭ್ಯವಾಯಿತು.
ಈ
ಅಭಿಯಾನಕ್ಕೆ ಸುಮಾರು ೧೫-೧೬ ಕೋಟಿ
ರೂಪಾಯಿಗಳನ್ನು ಖರ್ಚುಮಾಡಲಾಗಿದ್ದು ಇಷ್ಟು ಉದ್ದದ ಮಾನವ ಸರಪಳಿಯ ಚಿತ್ರಣವನ್ನು ಸೆರೆಹಿಡಿಯಲು ನಾಲ್ಕು ಹೆಲಿಕಾಫ್ಟರು ಗಳು, ಮೂರು ವಿಮಾನಗಳು ಹಾಗೂ ೧೦೦ ಡ್ರೋಣ್ ಗಳನ್ನು ಬಳಸಿಕೊಳ್ಳಲಾಗಿತ್ತು.
ಮಾನವ
ಸರಪಳಿ ರಚನೆಯ ಸಂದರ್ಭದಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆಯೂ ನಡೆದಿದ್ದು, ಮೃತರ ರಕ್ತ ಸಂಬಂಧಿಗಳಿಗೆ ರಾಜ್ಯ ಸರಕಾರ ತಲಾ ೦೪ ಲಕ್ಷ ರೂಪಾಯಿಗಳ
ಪರಿಹಾರವನ್ನು ಘೋಷಿಸಿತು.
No comments:
Post a Comment