'ಪೌರತ್ವ
ತಿದ್ದುಪಡಿ ಕಾಯ್ದೆ ಏಕೆ ಎಂಬುದು ಅರ್ಥವಾಗುತ್ತಿಲ್ಲ’
ಕಾಯ್ದೆ
ತಿದ್ದುಪಡಿ ಅಗತ್ಯ ಪ್ರಶ್ನಿಸಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ
ನವದೆಹಲಿ:
ಮೂರು ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ತ್ವರಿತವಾಗಿ
ಭಾರತದ ಪೌರತ್ವ ಒದಗಿಸುವ ನೂತನ ಕಾಯ್ದೆಯ ಅಗತ್ಯ ಏನಿತ್ತು ಎಂಬುದಾಗಿ ಪ್ರಶ್ನಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ’ಕಾಯ್ದೆಯ ಪರಿಣಾಮವಾಗಿ ಭಾರತದಲ್ಲಿನ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು
ಅವರು 2020 ಜನವರಿ 19ರ ಭಾನುವಾರ ಹೇಳಿದರು.
ಬಾಂಗ್ಲಾದೇಶದಲ್ಲಿ
ಸಾಕಷ್ಟು ಅಸಮಾಧಾನವನ್ನು ಹುಟ್ಟಿಸಿರುವ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಗಲ್ಫ್ ನ್ಯೂಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹಸೀನಾ ಅವರು ಇದೇ ಮೊದಲ ಬಾರಿಗೆ ಬಹಿರಂಗ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ಬಳಿಕ ಮೂರು ಮಂದಿ ಬಾಂಗ್ಲಾದೇಶೀ ಸಚಿವರು ತಮ್ಮ ಭಾರತ ಭೇಟಿಯನ್ನು ರದ್ದು ಪಡಿಸಿದ್ದರು.
‘(ಭಾರತ
ಸರ್ಕಾರವು) ಏಕೆ ಅದನ್ನು (ಪೌರತ್ವ ತಿದ್ದುಪಡಿ ಕಾಯ್ದೆ) ಮಾಡಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಅದು (ಪೌರತ್ವ ತಿದ್ದುಪಡಿ ಕಾಯ್ದೆ) ಅಗತ್ಯವಿರಲಿಲ್ಲ’ ಎಂದು
ಹಸೀನಾ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಸಂದರ್ಶನ ಕಾಲದಲ್ಲಿ
ಹೇಳಿದರು.
‘ಭಾರತದಿಂದ
ಮರುವಲಸೆಯೇನೂ ದಾಖಲಾಗಿಲ’
ಎಂದು ಹಸೀನಾ ನುಡಿದರು. ’ಇಲ್ಲ, ಭಾರತದಿಂದ ಮರುವಲಸೆಯೇನೂ ಇಲ್ಲ. ಆದರೆ ಭಾರತದಲ್ಲಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು
ಅವರು ಹೇಳಿದರು.
ಹಸೀನಾ
ಅವರ ಹೇಳಿಕೆಗೆ ಭಾರತೀಯ ಅಧಿಕಾರಿಗಳಿಂದ ತತ್ ಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
೨೦೧೪ರ
ಡಿಸೆಂಬರ್ಗಿಂತ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಪೌರತ್ವ ತಿದ್ದುಪಡಿ ಕಾಯ್ದೆಯು ತ್ವರಿತಗೊಳಿಸುತ್ತದೆ.
ಕಾನೂನಿನಲ್ಲಿ
ತಮ್ಮನ್ನು ಪಾಕಿಸ್ತಾನದ ಜೊತೆಗೆ ಸೇರಿಸಿದ್ದಕ್ಕಾಗಿ ಬಾಂಗ್ಲಾದೇಶಿ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಸೀನಾ ಸರ್ಕಾರವು ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಸಂಭವಿಸಿದ ಅಲ್ಪಸಂಖ್ಯಾತರ ಕಿರುಕುಳಕ್ಕಷ್ಟೇ ಕಾಯ್ದೆ ಸಂಬಂಧಿಸಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಆಕ್ರೋಶಕ್ಕೆ ಸ್ಪಷ್ಟನೆ
ನೀಡಿದೆ.
ಬಾಂಗ್ಲಾದೇಶದ
೧೬೧ ಮಿಲಿಯನ್ (೧೬.೧೦ ಕೋಟಿ)
ಜನಸಂಖ್ಯೆಯ ಶೇಕಡಾ ೧೦.೭ರಷ್ಟು ಮಂದಿ
ಹಿಂದುಗಳಾಗಿದ್ದಾರೆ. ಭಾರತದಲ್ಲಿ ತಮ್ಮ ಪೌರತ್ವವನ್ನು ಸಾಬೀತು ಪಡಿಸಲು ಸಾಧ್ಯವಾಗದ ಭಾರತೀಯ ಮುಸ್ಲಿಮರು ಬಾಂಗ್ಲಾದೇಶದಲ್ಲಿ ಆಶ್ರಯ ಕೋರಬಹುದು ಎಂದು ಬಾಂಗ್ಲಾದೇಶೀ ರಾಜಕಾರಣಿಗಳು ಮತ್ತು ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ.
ಪೌರತ್ವ
ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಭಾರತದ ಆಂತರಿಕ ವಿಷಯ ಎಂದೂ ಹಸೀನಾ ಅವರು ಸಂದರ್ಶನದಲ್ಲಿ ಸ್ಪಷ್ಟ ಪಡಿಸಿದರು.
‘(ಈಗಲೂ),
ಅದು ಆಂತರಿಕ ವ್ಯವಹಾರ’ ಎಂದು ಹಸೀನಾ ಹೇಳಿದರು. ’ಸಿಎಎ ಮತ್ತು ಎನ್ಆರ್ಸಿ ಭಾರತದ ಆಂತರಿಕ
ವಿಷಯಗಳು ಎಂಬುದಾಗಿ ಬಾಂಗ್ಲಾದೇಶ ಯಾವಾಗಲೂ ಹೇಳುತ್ತಲೇ ಬಂದಿದೆ. ಭಾರತ ಸರ್ಕಾರ ಕೂಡಾ ಎನ್ಆರ್ಸಿ ತನ್ನ ಆಂತರಿಕ
ಕಸರತ್ತು ಎಂದು ಪದೇ ಪದೇ ಹೇಳಿದೆ. ಪ್ರಧಾನಿ (ನರೇಂದ್ರ) ಮೋದಿ ಅವರು ೨೦೧೯ರ ಅಕ್ಟೋಬರ್ ತಿಂಗಳ ನನ್ನ ನವದೆಹಲಿ
ಭೇಟಿ ಕಾಲದಲ್ಲಿ ನನಗೆ ವೈಯಕ್ತಿಕವಾಗಿಯೇ ಈ ಭರವಸೆ ಕೊಟ್ಟಿದ್ದಾರೆ’ ಎಂದು
ಹಸೀನಾ ನುಡಿದರು.
ಅಸ್ಸಾಮಿನಲ್ಲಿ
ಎನ್ಆರ್ಸಿ ಜಾರಿ ಮತ್ತು
ಎಲ್ಲ ಅಕ್ರಮ ವಲಸಿಗರನ್ನೂ ಗಡೀಪಾರು ಮಾಡಲಾಗುವುದು ಎಂಬುದಾಗಿ ಬಿಜೆಪಿ ನಾಯಕತ್ವದ ಒಂದು ವರ್ಗವು ಪದೇ ಪದೇ ಹೇಳಿಕೆಗಳನ್ನು ನೀಡಿದ್ದು ಕಳೆದ ವರ್ಷ ಮೊತ್ತ ಮೊದಲ ಬಾರಿಗೆ ಭಾರತ- ಬಾಂಗ್ಲಾ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರಿತ್ತು. ಹಸೀನಾ ಅವರು ಸೆಪ್ಟೆಂಬರಿನಲ್ಲಿ ನ್ಯೂಯಾರ್ಕ್ನಲ್ಲಿ ಮತ್ತು ಅಕ್ಟೋಬರ್ನಲ್ಲಿ ನವದೆಹಲಿಯಲ್ಲಿನ ತಮ್ಮ ಭೇಟಿ ಕಾಲದಲ್ಲಿ ಎನ್ಆರ್ಸಿ ವಿಷಯವನ್ನು ಮೋದಿ
ಅವರ ಜೊತೆಗೆ ಪ್ರಸ್ತಾಪಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ಅಂಗೀಕಾರದೊಂದಿಗೆ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಿದ್ದವು.
ಆದಾಗ್ಯೂ,
ಭಾರತ-ಬಾಂಗ್ಲಾದೇಶ ಬಾಂಧವ್ಯ ಪ್ರಸ್ತುತ ಅತ್ಯುತ್ತಮವಾಗಿದ್ದು ವಿಸ್ತೃತ ಕ್ಷೇತ್ರಗಳಿಗೆ ಸಹಕಾರವು ವ್ಯಾಪಿಸಿದೆ ಎಂದು ಹಸೀನಾ ಪ್ರತಿಪಾದಿಸಿದರು.
ಬಾಂಗ್ಲಾದೇಶಕ್ಕೆ
ಮ್ಯಾನ್ಮಾರ್ ನಿಂದ ೧.೨ ಮಿಲಿಯನ್
(೧೨) ಕೋಟಿ ರೊಹಿಂಗ್ಯಾ ನಿರಾಶ್ರಿತರ ಆಗಮನದ ಮತ್ತು ಅವರು ಇನ್ನೂ ಆಗ್ನೇಯ ಕಾಕ್ಸ್ ಬಜಾರಿನಲ್ಲಿ ವಾಸ್ತವ್ಯ ಹೂಡಿರುವ ಬಗೆಗಿನ ಕಳವಳಕ್ಕೆ ಹಸೀನಾ ಒತ್ತು ನೀಡಿದರು.
‘ರೊಹಿಂಗ್ಯಾ
ಬಿಕ್ಕಟ್ಟು ಆರಂಭವಾದದ್ದು ಮ್ಯಾನ್ಮಾರ್ನಲ್ಲಿ ಮತ್ತು ಅದಕ್ಕೆ ಪರಿಹಾರ ಅವರ ಬಳಿಯೇ ಇದೆ. ಆದರೆ ದುರದೃಷ್ಟಕರವಾಗಿ ರೊಹಿಂಗ್ಯಾಗಳ ಸುರಕ್ಷತೆ ಮತ್ತು ಗೌರವಪೂರ್ಣವಾದ ವಾಪಸಾತಿಗೆ ಅರ್ಥಪೂರ್ಣ ಕ್ರಮಗಳನ್ನು ಮ್ಯಾನ್ಮಾರ್ ಇನ್ನೂ ಕೈಗೊಂಡಿಲ್ಲ. ಒಬ್ಬನೇ ಒಬ್ಬ ರೊಹಿಂಗ್ಯಾ ಕೂಡಾ ವಾಪಸಿಗೆ ಇಚ್ಛಿಸದೇ ಇರುವುದರಿಂದ ವಾಪಸಾತಿ ನಿಟ್ಟಿನ ಯತ್ನಗಳು ವಿಫಲಗೊಂಡಿವೆ. ವಾಪಸಾತಿಗೆ ಸೂಕ್ತವಾದ ಪರಿಸರವನ್ನು ಸೃಷ್ಟಿಸುವಲ್ಲಿ ಮ್ಯಾನ್ಮಾರ್ ವಿಫಲಗೊಂಡಿದೆ’ ಎಂದು
ಹಸೀನಾ ಹೇಳಿದರು.
ಹತ್ತು
ಲಕ್ಷಕ್ಕೂ ಹೆಚ್ಚಿನ ನಿರಾಶ್ರಿತರ ಹೊರೆಯನ್ನು ಅನಿರ್ದಿಷ್ಟ ಕಾಲ ಹೊತ್ತಕೊಳ್ಳಲು ಬಾಂಗ್ಲಾದೇಶಕ್ಕೆ ಸಾಧ್ಯವಿಲ್ಲ. ಸಮಸ್ಯೆ ಮುಂದುವರೆದರೆ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ಮೇಲೆ ಗಂಭೀರ ಪರಿಣಾಮಗಳಾಗಬಹುದು. (ಹೀಗಾಗಿ) ಅಂತಾರಾಷ್ಟ್ರೀಯ ಸಮುದಾಯವು ರೊಹಿಂಗ್ಯಾ ವಿಷಯ ಬಗ್ಗೆ ಗಮನ ಹರಿಸಿ ಸುಸ್ಥಿರ ಪರಿಹಾರ ಕಂಡು ಹಿಡಿಯಬೇಕು ಎಂದು ಹಸೀನಾ ನುಡಿದರು.
No comments:
Post a Comment