ಜೆಎನ್‌ಯು: ಮುಸುಕುಧಾರೀ ದಾಳಿಕೋರರಲ್ಲಿ ಕೆಲವರ ಗುರುತು ಪತ್ತೆ ಹಚ್ಚಿದ ಪೊಲೀಸರು
ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ (ಜೆಎನ್ಯು) ಆವರಣದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಮತ್ತು ಖಾಸಗಿ ಆಸ್ತಿಗಳನ್ನು ಹಾನಿ ಪಡಿಸಿದ ಮುಸುಕುಧಾರೀ ದಾಳಿಕೋರರ ಪೈಕಿ ಕೆಲವರ ಗುರುತುಗಳನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಸರ್ಕಾರಿ ಮೂಲಗಳು 2020 ಜನವರಿ
08ರ ಬುಧವಾರ ತಿಳಿಸಿದವು.
ಇದೇ ವೇಳೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ವಿಶ್ವವಿದ್ಯಾಯದ ಉಪಕುಲಪತಿ ಜಗದೀಶ ಕುಮಾರ್ ಅವರಿಗೆ ಆದಷ್ಟೂ ಶೀಘ್ರ ವಿಶ್ವವಿದ್ಯಾಲಯವು ಮಾಮೂಲಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ಮಾಡುವಂತೆ ಸೂಚಿಸಿದೆ.
’ಭೂತಕಾಲವನ್ನು ಹಿಂದಕ್ಕೆ ಬಿಟ್ಟು, ಆವರಣಗಳಿಗೆ ಮರಳಿ’ ಎಂದು ಜಗದೀಶ ಕುಮಾರ್ ಅವರು ಮಂಗಳವಾರ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದರು. ಆದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಾಳಿ ತಡೆಯಲಾಗದ್ದಕ್ಕಾಗಿ ಜಗದೀಶ್ ಕುಮಾರ್ ಅವರನ್ನು ಟೀಕಿಸಿದ್ದರು.
ದೆಹಲಿ ಪೊಲೀಸ್ ಅಪರಾಧ ವಿಭಾಗವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಡೆದ ದಾಳಿಯ ತನಿಖೆಯನ್ನು ನಡೆಸುತ್ತಿದೆ. ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾದ ಈ ಹಲ್ಲೆ ಘಟನೆಯಲ್ಲಿ ೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಎಡಪಕ್ಷ ನಿಯಂತ್ರಿತ ಜೆಎನ್ಯು ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಮತ್ತು ಎಬಿಪಿಪಿ ಸುಮಾರು ೨ ಗಂಟೆಗಳ ಕಾಲ ನಡೆದ ಈ ಹಿಂಸಾಚಾರಕ್ಕಾಗಿ ಪರಸ್ಪರ ದೂಷಿಸಿಕೊಂಡಿವೆ.

No comments:
Post a Comment