ಅಮೆರಿಕ
ವಾಯುದಾಳಿಗೆ ಇರಾನ್ ಕಮಾಂಡರ್
ಸೊಲೈಮಾನಿ ಬಲಿ
ಸೊಲೈಮಾನಿ ಬಲಿ
ಸೇಡು
ತೀರಿಸುವುದಾಗಿ ಖೊಮೈನಿ ಶಪಥ, ಅಮೆರಿಕನ್ನರಿಗೆ ಇರಾಕ್ ತ್ಯಜಿಸಲು ಸೂಚನೆ
ಬಾಗ್ದಾದ್: ಇರಾನಿನ ಉನ್ನತ ಕಮಾಂಡರ್ ಖಾಸಿಂ ಸೊಲೈಮಾನಿ ಅವರನ್ನು ಅಮೆರಿಕವು 2020 ಜನವರಿ
03ರ ಶುಕ್ರವಾರ ನಸುಕಿನ
ವಾಯುದಾಳಿಯಲ್ಲಿ ಹತ್ಯೆಗೈದಿದ್ದು,
ಇದಕ್ಕೆ ಉಗ್ರ ಪ್ರತೀಕಾರ ಕೈಗೊಳ್ಳುವುದಾಗಿ ಇರಾನ್ ಶಪಥ ಮಾಡಿತು. ಬೆನ್ನಲ್ಲೇ ಅಮೆರಿಕದ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತತ್ ಕ್ಷಣ ಇರಾಕ್ ತ್ಯಜಿಸುವಂತೆ ಸೂಚನೆ ನೀಡಿತು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಣ
ಪ್ರಕ್ಷುಬ್ಧತೆ ಇನ್ನಷ್ಟು ತೀವ್ರಗೊಂಡಿತು.
ಇರಾನಿನ
ಇಸ್ಲಾಮಿಕ್ ರಿಪಬ್ಲಿಕ್‌ನ ಖಡ್ಸ್ ಪಡೆಯ
ಉನ್ನತ ಇರಾನ್ ಕಮಾಂಡರ್ ಜನರಲ್ ಖಾಸಿಂ ಸೊಲೈಮಾನಿ ಅವರನ್ನು ಅಮೆರಿಕವು ಈದಿನ ನಸುಕಿನಲ್ಲಿ ನಡೆಸಿದ
ವಾಯುದಾಳಿಯಲ್ಲಿ ಹತ್ಯೆಗೈದ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕದ ನಾಗರಿಕರಿಗೆ ತತ್ ಕ್ಷಣ ಇರಾಕ್ ತೊರೆಯಲು ಸೂಚಿಸಲಾಗಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ಮೂಲಗಳು ತಿಳಿಸಿದವು.
‘ಅಮೆರಿಕದ
ನಾಗರಿಕರು ವಾಯುಮಾರ್ಗವಾಗಿ ತತ್ ಕ್ಷಣ ಇರಾಕ್ ತ್ಯಜಿಸಬೇಕು. ಸಾಧ್ಯವಾಗದಿದ್ದರೆ ಭೂ ಮಾರ್ಗದ ಮೂಲಕ
ಇತರ ರಾಷ್ಟ್ರಗಳಿಗೆ ತೆರಳಬೇಕು ಎಂದು ಅಮೆರಿಕದ ರಾಯಭಾರ ಕಚೇರಿಯು ಹೇಳಿಕೆಯಲ್ಲಿ ಸೂಚಿಸಿದೆ.
ಬಾಗ್ದಾದ್
ವಿಮಾನ ನಿಲ್ದಾಣದ ಹೊರವಲಯದಲ್ಲಿ ಶುಕ್ರವಾರ ನಸುಕಿನಲ್ಲಿ ಅಮೆರಿಕದ ವಾಯುದಾಳಿ ನಡೆಯಿತು. ಆದರೆ ವಿಮಾನ ನಿಲ್ದಾಣವು ಇನ್ನೂ ವಿಮಾನಗಳ ಹಾರಾಟಕ್ಕೆ ಮುಕ್ತವಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಸೊಲೈಮಾನಿ
ಅವರು ಇರಾಕಿನ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ಕಟ್ಟಾ ವೈರಿಯಾಗಿದ್ದರು. ಸೊಲೈಮಾನಿ ಅವರ ಸಲಹೆಗಾರ ಇರಾಕಿನ ಉನ್ನತ ಸೇನಾ ಕಮಾಂಡರ್ ಅಬು ಮಹ್ದಿ ಅಲ್-ಮುಹಾಂಡಿಸ್ ಕೂಡಾ ವಾಯುದಾಳಿಯಲ್ಲಿ ಹತರಾಗಿದ್ದಾರೆ.
ಅಮೆರಿಕ
ದಾಳಿಗೆ ಕೆಂಡಾಮಂಡಲ ಸಿಟ್ಟು ಪ್ರದರ್ಶಿಸಿದ ಇರಾನಿನ ಅತ್ಯುಚ್ಛ ನಾಯಕ ಅಯತೊಲ್ಲ ಅಲಿ ಖೊಮೇನಿ ಅವರು ’ಈ ಕ್ರಮಕ್ಕೆ ಅತ್ಯುಗ್ರ
ಪ್ರತೀಕಾರ’ ತೀರಿಸುವುದಾಗಿ
ಶಪಥ ಮಾಡಿದರು. ’ಈ ಎಲ್ಲ ವರ್ಷಗಳ
ವಿಶ್ರಾಂತಿರಹಿತ ಯತ್ನಗಳಿಗಾಗಿ ಅವರಿಗೆ ಹುತಾತ್ಮ ಪದವಿ ಲಭಿಸಿದೆ’ ಎಂದು ಖೊಮೇನಿ ಫಾರ್ಸಿ ಭಾಷೆಯ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಸೊಲೈಮಾನಿ ಅವರನ್ನು ಉಲ್ಲೇಖಿಸಿ ಬರೆದರು. ಮೂರು ದಿನಗಳ ಶೋಕಾಚರಣೆಯನ್ನೂ ಅವರು ಘೋಷಿಸಿದರು.
‘ದೇವರ
ಇಚ್ಛೆಯಂತೆ ಅವರು ಹೋಗಿದ್ದಾರೆ, ಆದರೆ ಅವರ ಕೆಲಸ ಮತ್ತು ಅವರು ಸಾಗಿದ ಮಾರ್ಗ ನಿಲ್ಲವುದಿಲ್ಲ. ಕಳೆದ ರಾತ್ರಿಯ ಘಟನೆಯಲ್ಲಿ ಹುತಾತ್ಮರಾದ ಸೊಲೈಮಾನಿ ಮತ್ತು ಇತರ ಹುತಾತ್ಮರ ರಕ್ತದಿಂದ ತಮ್ಮ ಕೈಗೊಳ್ಳನ್ನು ತೋಯಿಸಿಕೊಂಡಿರುವ ಕ್ರಿಮಿನಲ್ಗಳಿಗೆ ಭೀಕರ ಪ್ರತೀಕಾರ ಕಾದಿದೆ’ ಎಂದು ಖೊಮೇನಿ ಟ್ವೀಟ್ ಮಾಡಿದರು.
ಸೊಲೈಮಾನಿ
ಅವರು ’ಪ್ರತಿರೋಧದ ಅಂತಾರಾಷ್ಟ್ರೀಯ ಮುಖವಾಗಿದ್ದರು’ ಎಂದು
ಬಣ್ಣಿಸಿದ ಖೊಮೇನಿ, ’ಭೂಮಿಯ ಮೇಲಿನ ಅತಿ ಕ್ರೂರಿಗಳಿಂದ ಅವರು ಹತರಾಗಿದ್ದಾರೆ. ಅವರ ಪ್ರತಿರೋಧವನ್ನು ಬೆಂಬಲಿಸುವ ಎಲ್ಲ ವ್ಯಕ್ತಿಗಳೂ ಈ ಕೃತ್ಯಕ್ಕೆ ಸೇಡು
ತೀರಿಸುವವರಾಗಲಿದ್ದಾರೆ’ ಎಂದು
ಹೇಳಿದರು.
ಇರಾನ್ ದೀರ್ಘಕಾಲದಿಂದ ಅಮೆರಿಕದ ಜೊತೆಗೆ ಘರ್ಷಿಸುತ್ತಿದ್ದು, ಇರಾನ್ ಪರ ಸೈನಿಕರು ಇರಾಕಿನಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೇಲೆ ಕಳೆದವಾರ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವಣ ಘರ್ಷಣೆ ಇನ್ನಷ್ಟು ಬಿಗಡಾಯಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕವು ಮುಹಾಂಡಿಗಳು ಸ್ಥಾಪಿಸಿದ್ದ ಖತೀಬ್ ಹಿಜ್ಬುಲ್ಲಾ ಮಿಲೀಷಿಯ ಮೇಲೆ ವಾಯುದಾಳಿ ನಡೆಸಿತ್ತು.
ಇರಾನ್ ದೀರ್ಘಕಾಲದಿಂದ ಅಮೆರಿಕದ ಜೊತೆಗೆ ಘರ್ಷಿಸುತ್ತಿದ್ದು, ಇರಾನ್ ಪರ ಸೈನಿಕರು ಇರಾಕಿನಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೇಲೆ ಕಳೆದವಾರ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವಣ ಘರ್ಷಣೆ ಇನ್ನಷ್ಟು ಬಿಗಡಾಯಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕವು ಮುಹಾಂಡಿಗಳು ಸ್ಥಾಪಿಸಿದ್ದ ಖತೀಬ್ ಹಿಜ್ಬುಲ್ಲಾ ಮಿಲೀಷಿಯ ಮೇಲೆ ವಾಯುದಾಳಿ ನಡೆಸಿತ್ತು.
‘ಅಧ್ಯಕ್ಷರ
ನಿರ್ದೇಶನದ ಮೇರೆಗೆ, ಅಮೆರಿಕದ ಸೇನೆಯು ಖಾಸಿಂ ಖೊಮೇನಿಯನ್ನು ಕೊಲ್ಲುವ ಮೂಲಕ ವಿದೇಶಗಳಲ್ಲಿನ ಅಮೆರಿಕದ ಸಿಬ್ಬಂದಿ ರಕ್ಷಣೆಗಾಗಿ ನಿರ್ಣಾಯಕ ರಕ್ಷಣಾತ್ಮಕ ಕ್ರಮವನ್ನು ಕೈಗೊಂಡಿದೆ’
ಎಂದು ಪೆಂಟಗಾನ್ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
‘ಇರಾನಿನ
ಭವಿಷ್ಯದ ದಾಳಿಗಳ ಯೋಜನೆಯನ್ನು ತಡೆಗಟ್ಟುವ ಉದೇಶದಿಂದ ಈ ದಾಳಿ ನಡೆಸಲಾಗಿದೆ’ ಎಂದೂ
ಹೇಳಿಕೆ ತಿಳಿಸಿತ್ತು.
‘ಸೊಲೈಮಾನಿ ಮತ್ತು ಮಹಂಡಿಸ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಬಾಗ್ದಾದ್ ವಿಮಾನ ನಿಲ್ದಾಣದ ಹೊರಭಾಗದ ರಸ್ತೆಯಲ್ಲಿ ವಾಯುದಾಳಿ ನಡೆಸಿ ಅವರನ್ನು ಹತ್ಯೆಗೈಯಲಾಯಿತು. ಮಧ್ಯರಾತ್ರಿ ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಷಿಪಣಿದಾಳಿಗೆ ಒಳಗಾಯಿತು’ ಎಂದು ಇರಾಕ್ ಸೇನೆ ತಿಳಿಸಿತ್ತು.
‘ಸೊಲೈಮಾನಿ ಮತ್ತು ಮಹಂಡಿಸ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಬಾಗ್ದಾದ್ ವಿಮಾನ ನಿಲ್ದಾಣದ ಹೊರಭಾಗದ ರಸ್ತೆಯಲ್ಲಿ ವಾಯುದಾಳಿ ನಡೆಸಿ ಅವರನ್ನು ಹತ್ಯೆಗೈಯಲಾಯಿತು. ಮಧ್ಯರಾತ್ರಿ ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಷಿಪಣಿದಾಳಿಗೆ ಒಳಗಾಯಿತು’ ಎಂದು ಇರಾಕ್ ಸೇನೆ ತಿಳಿಸಿತ್ತು.
ಇರಾಕಿನಲ್ಲಿ
ಇರುವ ಅಮೆರಿಕದ ರಾಯಭಾರಿಗಳು ಮತ್ತು ಸೇವಾ ಸದಸ್ಯರ ಮೇಲೆ ದಾಳಿ ನಡೆಸಲು ಜನರಲ್ ಸೊಲೈಮಾನಿ ಯೋಜನೆ ರೂಪಿಸಿದ್ದರು. ಸೊಲೈಮಾನಿ ಅವರ ಸೇನಾ ಪಡೆ ನೂರಾರು ಅಮೆರಿಕನರು ಮತ್ತು ಸಮ್ಮಿಶ್ರ ಸೇವಾ ಸದಸ್ಯರ ಸಾವು ನೋವುಗಳಿಗೆ ಕಾರಣವಾಗಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆ ಮೂಲಗಳು ತಿಳಿಸಿದ್ದವು.
ಸೊಲೈಮಾನ್
ಹತ್ಯೆಯ ಬಳಿಕ ಅಮೆರಿಕ ಧ್ವಜದ ಚಿತ್ರವನ್ನು ಹಾಕಿ ಟ್ರಂಪ್ ಅವರು ಈ ಬಗ್ಗೆ ಟ್ವೀಟ್
ಮಾಡಿದ್ದರು.
ಸೊಲೈಮಾನಿಯನ್ನು
ಅಮೆರಿಕ ತನ್ನ ಬದ್ಧ ವೈರಿ ಎಂಬುದಾಗಿ ಪರಿಗಣಿಸಿತ್ತು. ಇರಾನಿನ
ಸಶಸ್ತ್ರ ಹೋರಾಟದ ನಿಯಂತ್ರಣ ಸೊಲೈಮಾನಿ ಕೈಯಲ್ಲೇ ಇತ್ತು. ’ನಿಮಗೆ ಇಷ್ಟ ಬಂದಾಗ ನೀವು ಯುದ್ಧ ಆರಂಭಿಸಿ. ಆದರೆ, ಅದನ್ನು ಮುಗಿಸುವುದು ನಾವೇ’ ಎಂಬುದಾಗಿ ಸೊಲೈಮಾನಿ ಅಮೆರಿಕಕ್ಕೆ ಬೆದರಿಕೆ ಹಾಕಿದ್ದು ಆತನನ್ನು ಹೊಡೆದುರುಳಿಸುವ ನಿರ್ಧಾರವನ್ನು ಅಮೆರಿಕ ಕೈಗೊಳ್ಳಲು ಕಾರಣ ಎಂದು ಹೇಳಲಾಗಿದೆ.
ತೈಲ
ಬೆಲೆ ಏರಿಕೆ: ಅಮೆರಿಕ ದಾಳಿಯ ಹಿನ್ನೆಲೆಯಲ್ಲಿ ಜಾಗತಿಕ ತೈಲಬೆಲೆಗಳು ಶುಕ್ರವಾರ ಶೇಕಡಾ ೪ರಷ್ಟು ಏರಿಕೆಯಾದವು. ಬ್ರೆಂಟ್ ಕಚ್ಚಾ ತೈಲವು ಶೇಕಡಾ ೪.೪ರಷ್ಟು ಏರಿಕೆಯಾಗಿದ್ದು,
ಡಬ್ಲ್ಯೂಟಿವಿ ಶೇಕಡಾ ೪.೩ರಷ್ಟು ಏರಿಕೆಯಾಯಿತು.
No comments:
Post a Comment