Saturday, February 29, 2020

ಮಹದಾಯಿ ನೀರು ಹಂಚಿಕೆ: ಕೇಂದ್ರದಿಂದ ಅಧಿಸೂಚನೆ

ಮಹದಾಯಿ ನೀರು ಹಂಚಿಕೆ: ಕೇಂದ್ರದಿಂದ ಅಧಿಸೂಚನೆ
ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಉಡುಗೊರೆಯಾಗಿ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಣ ಅಂತರರಾಜ್ಯ ಮಹಾದಾಯಿ ನದಿಯ ನೀರನ್ನು ಹಂಚಿಕೊಳ್ಳುವ ಕುರಿತು ಕೇಂದ್ರ ಸರ್ಕಾರ 2020 ಫೆಬ್ರುವರಿ 27ರ ಗುರುವಾರ ರಾತ್ರಿ ಅಧಿಸೂಚನೆ ಹೊರಡಿಸಿತು.

ನದಿಯಿಂದ ಕರ್ನಾಟಕಕ್ಕೆ ೧೩.೪೨ ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ ಮಹಾದಾಯಿ ಜಲ ವಿವಾದ ನ್ಯಾಯ ಮಂಡಳಿಯು (ನ್ಯಾಯಾಧಿಕರಣ)  ೨೦೧೮ ಆಗಸ್ಟ್ ತಿಂಗಳಲ್ಲಿ ನೀಡಿದ್ದ ತೀರ್ಪನ್ನು ಜಾರಿಗೆ ತರಲು ಅಧಿಸೂಚನೆ ಕೋರಿದೆ. ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಫೆಬ್ರುವರಿ ೨೧ ರಂದು ನಿರ್ದೇಶನ ನೀಡಿದ ನಂತರ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ನಾಲ್ಕು ದಶಕಗಳಿಂದ ನಡೆಯುತ್ತಿರುವ ಮೂರು ರಾಜ್ಯಗಳ ನಡುವಿನ ವಿವಾದವನ್ನು ಬಗೆಹರಿಸಲು ನ್ಯಾಯಮಂಡಳಿಯನ್ನು ರಚಿಸಲಾಗಿತ್ತು.

ನೀರಾವರಿ ಉದ್ದೇಶಗಳಿಗಾಗಿ ನೀರನ್ನು ಬಳಸುವ ಕಳಸ ಬಂಡೂರಿ ಯೋಜನೆಯನ್ನು ಜಾರಿಗೆ ತರಲು ಇದು ಕರ್ನಾಟಕಕ್ಕೆ ದಾರಿ ಮಾಡಿಕೊಡುತ್ತದೆ. ಕರ್ನಾಟಕದಲ್ಲಿ ಪ್ರಮುಖ ಬೇಡಿಕೆಯಾದ ಮಲಪ್ರಭಾ ನದಿಯ ಕಳಸ ಮತ್ತು ಬಂಡೂರಿ ಉಪನದಿಗಳಲ್ಲಿ ಕಾಲುವೆಗಳ ನಿರ್ಮಾಣವನ್ನು ಗೋವಾ ಸರ್ಕಾರ ವಿರೋಧಿಸಿತ್ತು.

ಹಂಚಿಕೆಯಾದ ೧೩.೪೨ ಟಿಎಂಸಿ ಅಡಿಗಳಲ್ಲಿ  . ಟಿಎಂಸಿಎಫ್ ಅಡಿ ನೀರನ್ನು  ನದಿ ಜಲಾನಯನ ಪ್ರದೇಶದ ಬಳಕೆಗಾಗಿ ಮತ್ತು ಮಲಪ್ರಭಾ ಜಲಾಶಯಕ್ಕೆ ತಿರುಗಿಸಲು ಮೀಸಲಿಡಲಾಗಿದ್ದು, . ಟಿಎಂಸಿ ಅಡಿ ನೀರನ್ನು  ವಿದ್ಯುತ್ ಉತ್ಪಾದನೆಗಾಗಿ ಜಲಸಂಪನ್ಮೂಲ ಅಭಿವೃದ್ಧಿ ಯೋಜನೆಗಳನ್ನು ಜಲಾನಯನ ಪ್ರದೇಶದಲ್ಲಿ ಕೈಗೆತ್ತಿಕೊಳ್ಳಲು ಅಧಿಸೂಚನೆಯು ಅನುಮತಿ ನೀಡಿದೆ.
ಮಹಾದಾಯಿ ನದಿ ಜಲಾನಯನ ಪ್ರದೇಶವು ೨೦೩೨ ಚದರ ಕಿ.ಮೀ ವಿಸ್ತೀರ್ಣದಷ್ಟು ವ್ಯಾಪಿಸಿದೆ. , ಅದರಲ್ಲಿ ೩೭೫ ಚದರ ಕಿ.ಮೀ ವಿಸ್ತೀರ್ಣ ಕರ್ನಾಟಕದಲ್ಲಿದೆ, ೭೭ ಚದರ ಕಿ.ಮೀ ಮಹಾರಾಷ್ಟ್ರ ಮತ್ತು ಉಳಿದ ಭಾಗ ಗೋವಾದಲ್ಲಿದೆ.

2018ರ ಆಗಸ್ಟ್ ತಿಂಗಳಲ್ಲಿ ನ್ಯಾಯಮಂಡಳಿಯ ತೀರ್ಪಿನ ನಂತರ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು  ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದವು. ಇದೇ ವೇಳೆಗೆ , ಕರ್ನಾಟಕವು ತೀರ್ಪಿನ ಜಾರಿಗಾಗಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಅರ್ಜಿಯನ್ನು ಸಲ್ಲಿಸಿತ್ತು.

No comments:

Advertisement