Wednesday, February 5, 2020

ಬಿಜೆಪಿ ಅಲೆ ಹಲವರ ನಿದ್ದೆಗೆಡಿಸುತ್ತಿದೆ: ಆಪ್ ಸರ್ಕಾರಕ್ಕೆ ಚುಚ್ಚಿದ ಪ್ರಧಾನಿ

ಬಿಜೆಪಿ ಅಲೆ  ಹಲವರ ನಿದ್ದೆಗೆಡಿಸುತ್ತಿದೆ:
ಆಪ್ ಸರ್ಕಾರಕ್ಕೆ ಚುಚ್ಚಿದ ಪ್ರಧಾನಿ
ನವದೆಹಲಿ: ’ಬಿಜೆಪಿಯ ಪರವಾಗಿ ಎದ್ದಿರುವ ಅಲೆಯು ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಉಳಿದಿರುವ ಹೊತ್ತಿನಲ್ಲಿ ಹಲವಾರು ಜನರ ನಿದ್ದೆಗೆಡಿಸಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರು  2020 ಫೆಬ್ರುವರಿ 04ರ ಮಂಗಳವಾರ ಇಲ್ಲಿ ಹೇಳಿದರು.

ದೆಹಲಿ ವಿಧಾನಸಭಾ ಚುನಾವಣೆ ಸಲುವಾಗಿ ದ್ವಾರಕಾದಲ್ಲಿ ತಮ್ಮ ಎರಡನೇ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಪ್ರಧಾನಿಕೊನೆಯ ನಾಲ್ಕು ದಿನಗಳಲ್ಲಿ ಬಿಜೆಪಿ ಪರವಾಗಿ ಎದ್ದಿರುವ ಅಲೆಯು ಹಲವಾರು ಜನರ ನಿದ್ದೆಯನ್ನು ಕೆಡಿಸಿದೆಎಂದು ನುಡಿದರು.

ಆಮ್ ಆದ್ಮಿ ಪಕ್ಷವು ಕೇಂದ್ರವು ಬಡವರಿಗಾಗಿ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯಂತಹ ಕಲ್ಯಾಣ ಯೋಜನೆಗಳಿಗೆ ತಡೆ ಹಾಕಿದೆ ಎಂದು ಪ್ರಧಾನಿ ಆಪಾದಿಸಿದರು. ಆದರೆ, ಫೆಬ್ರುವರಿ ೧೧ರ ಬಳಿಕ ಹೀಗೆ ಆಗುವುದಿಲ್ಲ ಎಂದು ಅವರು ನುಡಿದರು.

ದೆಹಲಿಯ ನಿವಾಸಿಯೊಬ್ಬರು ಗ್ವಾಲಿಯರ್ನಲ್ಲಿ ಪ್ರವಾಸ ಕಾಲದಲ್ಲಿ ಅಸ್ವಸ್ಥನಾದರೆ, ಮೊಹಲ್ಲಾ ಕ್ಲಿನಿಕ್ ಅಲ್ಲಿಗೆ ಹೋಗುತ್ತದೆಯೇ? ಆದರೆ ಆಯುಷ್ಮಾನ್ ಭಾರತ ಅನ್ವಯಗೊಂಡರೆ, ಅದರ ಫಲಾನುಭವಿ ಎಲ್ಲಿಯೇ ಅಸ್ವಸ್ಥನಾಗಲಿ ಅಲ್ಲಿ ಉಚಿತ ಚಿಕಿತ್ಸೆ ಪಡೆಯುತ್ತಾನೆ. ಕನಿಷ್ಠ ಒಬ್ಬ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಾದರೆ, ಅದು ಮಹತ್ವದ ಕೆಲಸ. ಆದರೆ ಇಲ್ಲಿ ಹೃದಯರಹಿತ ಸರ್ಕಾರವಿದೆ, ಅದಕ್ಕೆ ನಿಮ್ಮ ಬಗ್ಗೆ ಏನೇನೂ ಕಾಳಜಿ ಇಲ್ಲಎಂದು ಹೇಳುತ್ತಾ ಪ್ರಧಾನಿ ಮೋದಿ ಆಪ್ ಸರ್ಕಾರವು ತಡೆ ಹಿಡಿದ ಕೇಂದ್ರ ಯೋಜನೆಗಳ ಪಟ್ಟಿ ಮಾಡಿದರು.

ರಾಷ್ಟ್ರೀಯ ರಾಜಧಾನಿಗೆ ಇತರರನ್ನು ದೂಷಿಸುತ್ತಾ ಕಾಲಹರಣ ಮಾಡದ, ಬದಲಿಗೆ ಬಡವರಿಗಾಗಿ ಕೆಲಸ ಮಾಡುವ ಸರ್ಕಾರ ಬೇಕಾಗಿದೆ, ದ್ವೇಷ ರಾಜಕಾರಣ ಮಾಡುತ್ತಾ ಕಾಲ ಕಳೆಯುವ ಸರ್ಕಾರವಲ್ಲಎಂದು ಪ್ರಧಾನಿ ನುಡಿದರು.

ನಾವು ಮುಂದಿನ ದಶಕಕ್ಕೆ ಹಾದಿ ತೋರಿಸಬೇಕಾಗಿದೆ ಮತ್ತು ಮತದಾರರು ಫೆಬ್ರುವರಿ ೮ರಂದು ನಿರ್ಧಾರ ಕೈಗೊಳ್ಳಬೇಕಾಗಿದೆ. ದೆಹಲಿಗೆ ನಿರ್ದೇಶನಗಳನ್ನು ಕೊಡುವ ಸರ್ಕಾರ ಬೇಕಾಗಿದೆ. ನಾವು ನಮ್ಮೆಲ್ಲ  ಬಲದೊಂದಿಗೆ ಎದ್ದು ನಿಂತುಕೊಳ್ಳಬೇಕಾಗಿದೆಎಂದು ಅವರು ಹೇಳಿದರು.

ನೀವು ಬಿಜೆಪಿಯ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದ ಲೋಕಸಭಾ ಚುನಾವಣೆಯ ಬಳಿಕ ರಾಷ್ಟ್ರವು ಬದಲಾಗಿದೆ. ಬಾರಿಯ ಚುನಾವಣೆಯೊಂದಿಗೆ ದೆಹಲಿ ಬದಲಾಗಲಿದೆಎಂದು ಪ್ರಧಾನಿ ನುಡಿದರು.
ಮೋದಿಯವರು ಸಭೆಗೆ ಸರ್ಜಿಕಲ್ ದಾಳಿಗಳನ್ನು ನೆನಪಿಸಿದರು. ’ಸರ್ಜಿಕಲ್ ದಾಳಿಗಳನ್ನು ಪ್ರಶ್ನಿಸಿದ ವ್ಯಕ್ತಿಗಳು ಈಗ ನಿಮ್ಮ ಬಳಿ ಮತಗಳನ್ನು ಕೇಳುತ್ತಿದ್ದಾರೆ, ಅವರನ್ನು ಶಿಕ್ಷಿಸಬೇಡವೇ?’ ಎಂದು ಪ್ರಶ್ನಿಸಿದ ಪ್ರಧಾನಿ, ಅಂತಹ ಪಕ್ಷಗಳನ್ನು ಶಿಕ್ಷಿಸಲು ಮತದಾರರು ತಮ್ಮ ಮತಗಳನ್ನು ಚಲಾಯಿಸಬೇಕು ಎಂದು ಹೇಳಿದರು.

ಇತರ ಪಕ್ಷಗಳು ಭದ್ರತಾ ಪಡೆಗಳನ್ನು ಪ್ರಶ್ನಿಸುತ್ತವೆ, ಆದರೆ ಅವುಗಳಿಗೆ ದೆಹಲಿಯ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ ಎಂದು ಅವರು ನುಡಿದರು.

ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸುವ ವಿಚಾರದಲ್ಲಿ ಆಪ್ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಆಪಾದಿಸಿದ ಮೋದಿ, ’ಅನಧಿಕೃತ ಕಾಲೋನಿಗಳ ೪೦ ಲಕ್ಷ ನಿವಾಸಿಗಳಿಗೆ ವಸತಿ ಹಕ್ಕು ನೀಡುವ ಮೂಲಕ ಅವರ ಸ್ಥಿತಿಗತಿ ಬದಲಾಯಿಸುವ ದಿಟ್ಟ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆಎಂದು ಹೇಳಿದರು.

೪೦ ಲಕ್ಷ ಮಂದಿ ದೆಹಲಿ ನಿವಾಸಿಗಳಿಗೆ ತಮ್ಮ ಹಕ್ಕನ್ನು ನೀಡುವ ಧೈರ್ಯವನ್ನು ಬಿಜೆಪಿ ಪ್ರದರ್ಶಿಸಿದೆ.. ದೆಹಲಿಯಿಂದ ಸಂಸದರನ್ನು ಕಳುಹಿಸಲು ನೀವು ನೀಡಿದ ಮತಗಳು ಇದನ್ನು ಸಾಧ್ಯವಾಗಿಸಿದೆಎಂದು ಪ್ರಧಾನಿ ಹೇಳಿದರು. ಅನಧಿಕೃತ ಕಾಲೋನಿಗಳ ಅಭಿವೃದ್ಧಿಗಾಗಿ ಕಾಲೋನಿ ಅಭಿವೃದ್ಧಿ ಮಂಡಳಿಯೊಂದನ್ನು ರಚಿಸಲಾಗುವುದು ಎಂದು ಅವರು ನುಡಿದರು.

ಎನ್ ಡಿಎ ಸರ್ಕಾರವು ಮೂಲಸವಲತ್ತು ಅಭಿವೃದ್ಧಿಗೆ ನೀಡಿದ ಮಹತ್ವದ ಕಾರಣ ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಹೆದ್ದಾರಿಗಳು ಪೂರ್ಣಗೊಂಡಿದ್ದು ಈಗ ಪ್ರತಿದಿನ ೪೦,೦೦೦ ಟ್ರಕ್ಗಳು ದೆಹಲಿಯ ಹೊರಗಿನಿಂದಲೇ ಸಂಚರಿಸುತ್ತವೆ ಮತ್ತು ರಾಜಧಾನಿ ಪರಿಸರ ಮಾಲಿನ್ಯದಿಂದ ಅಷ್ಟರಮಟ್ಟಿಗೆ ಮುಕ್ತವಾಗಿದೆ ಎಂದು ಮೋದಿ ವಿವರಿಸಿದರು.

ನಾವು ದೆಹಲಿ ಮೆಟ್ರೋ ಜಾಲವನ್ನು ವಿಸ್ತರಿಸಲು ಯೋಜಿಸಿದ್ದೇವೆ. ನಾವು ದೆಹಲಿಯನ್ನು ಸುಂದರ ಮತ್ತು ಸುರಕ್ಷಿತವನ್ನಾಗಿ ಮಾಡಲು ಶ್ರಮಿಸುತ್ತೇವೆ. ನಾವು ಯಮುನಾ ದಂಡೆ ಹಸಿರೀಕರಣ ಯೋಜನೆಗಾಗಿ ಕೆಲಸ ಮಾಡುತ್ತಿದ್ದೇವೆ. ಇದು ಐಕಾನಿಕ್ ಹಸಿರು ಪ್ರದೇಶವಾಗುವುದಷ್ಟೇ ಅಲ್ಲ ದೆಹಲಿಗೆ ಆಮ್ಲಜನಕ ಒದಗಿಸುವ ಶ್ವಾಸನಾಳವಾಗಲಿದೆ ಎಂದು ಅವರು ನುಡಿದರು.

No comments:

Advertisement