ಶಾಹೀನ್‌ಬಾಗ್ ಪ್ರತಿಭಟನೆಗೆ ಪಿಎಫ್‌ಐ ಹಣ, ಕಾಂಗ್ರೆಸ್,
ಆಪ್ ಜೊತೆ ನಿಕಟ ಸಂಪರ್ಕ
ದೆಹಲಿ
ಚುನಾವಣೆಗೆ ಮುನ್ನ ಜಾರಿ ನಿರ್ದೇಶನಾಲಯದ ’ಬಾಂಬ್’
ನವದೆಹಲಿ:
ದೆಹಲಿಯ ಶಾಹೀನ್ಬಾಗ್ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಣ ಒದಗಿಸುತ್ತಿದ್ದು,
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಪಿಎಫ್‌ಐ ಮುಖ್ಯಸ್ಥನೊಂದಿಗೆ ಸಂಪರ್ಕ ಹೊಂದಿದ್ದಾರೆ
ಎಂದು ಬಹಿರಂಗ ಪಡಿಸುವ ಮೂಲಕ 2020 ಫೆಬ್ರುವರಿ 08ರ ಶನಿವಾರ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಉಳಿದಿರುವಾಗ ಜಾರಿ ನಿರ್ದೇಶನಾಲಯ 2020 ಫೆಬ್ರುವರಿ 06ರ ಗುರುವಾರ’ಬಾಂಬ್’ ಹಾಕಿತು.
ಜಾರಿ
ನಿರ್ದೇಶನಾಲಯವು ರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆಗಳಿಗೆ ಬಳಸಲಾಗುತ್ತಿದೆ ಎನ್ನಲಾಗಿರುವ ಹಣದ ಮೂಲಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಗೃಹ ವ್ಯವಹಾರಗಳ ಸಚಿವಾಲಯಕ್ಕೆ (ಎಂಎಚ್ಎ) ತನ್ನ ವರದಿಯನ್ನು
ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿತು.
ತನಿಖೆಗೆ
ಸಂಬಂಧಿಸಿದ ದಾಖಲೆಗಳು ತಮಗೆ ಲಭಿಸಿರುವುದಾಗಿ ಪ್ರಕಟಿಸಿರುವ ಕೆಲವು ಮಾಧ್ಯಮಗಳು ಒಟ್ಟು ೧೨೦ ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕುಗಳಲ್ಲಿನ ಪಿಎಫ್‌ಐ ಮತ್ತು ರೆಹಾಬ್
ಇಂಡಿಯಾ ಫೌಂಡೇಷನ್ಗೆ ಸಂಬಂಧಿಸಿದ ಬಾಂಕ್
ಖಾತೆಗಳಿಗೆ ಜಮಾ ಮಾಡಿರುವುದನ್ನು ಬಹಿರಂಗ ಪಡಿಸಿವೆ ಎಂದು ಹೇಳಿದವು.
೫೦೦೦
ರೂಪಾಯಿಯಿಂದ ೪೯,೦೦೦ ರೂಪಾಯಿಗಳವರೆಗಿನ
ವಿವಿಧ ಮೊತ್ತಗಳಲ್ಲಿ ಹಣ ವರ್ಗಾವಣೆಯಾಗಿದ್ದು ಹಣ ಜಮಾ
ಮಾಡಲು ನಗದು ಇಲ್ಲವೇ ಈ ಖಾತೆಗಳ ತತ್
ಕ್ಷಣ ಪಾವತಿ ಸೇವೆಗಳನ್ನು (ಇಮ್ಮೀಡಿಯೆಟ್ ಪೇಮೆಂಟ್ ಸರ್ವೀಸ್- ಐಎಂಪಿಎಸ್) ಬಳಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿದವು.
ಒಟ್ಟು
ನಿಧಿಯಲ್ಲಿ ೧.೦೫ ಕೋಟಿ
ರೂಪಾಯಿಗಳನ್ನು ಪಿಎಫ್ಐಗೆ ಸೇರಿದ ೧೫ ಬ್ಯಾಂಕ್ ಖಾತೆಗಳಿಗೆ
ಜಮಾ ಮಾಡಲಾಗಿದೆ ಮತ್ತು ಮೂರನೇ ಒಂದರಷ್ಟು ನಗದು ಹಣವನ್ನು ಅದರ ಶಾಹೀನ್ ಬಾಗ್ ಕೇಂದ್ರದಲ್ಲಿ (ಜಿ-೭೮, ಶಾಹೀನ್
ಬಾಗ್, ದೆಹಲಿ) ಇರಿಸಲಾಗಿದೆ ಎಂಬುದು ಕೂಡಾ ಜಾರಿ ನಿರ್ದೇಶನಾಲಯ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿದವು.
ದೇಶಾದ್ಯಂತ
ಹಣ ಸಂಗ್ರಹಿಸುವ ಪಿಎಫ್ಐಯ ಕಾರ್ಯ ತಂತ್ರವನ್ನು
ಕೂಡಾ ಬಯಲಿಗೆಳೆದಿರುವುದಾಗಿ ತನಿಖಾ ಸಂಸ್ಥೆ ಪ್ರತಿಪಾದಿಸಿತು.
ಪಿಎಫ್‌ಐ- ಆಪ್- ಕಾಂಗ್ರೆಸ್
ಲಿಂಕ್ ಬಹಿರಂಗ: ಪಿಎಫ್ಐಯ ದೆಹಲಿ ಘಟಕದ
ಅಧ್ಯಕ್ಷ ಮೊಹಮ್ಮದ್ ಪರ್ವೇಜ್ ಅಹ್ಮದ್ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಉದಿತ್ ರಾಜ್ ಸೇರಿದತೆ ಹಲವಾರು ಮಂದಿ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ಹೊಂದಿರುವುದನ್ನೂ ಜಾರಿ ನಿರ್ದೇಶನಾಲಯದ ತನಿಖೆಯು ಬಯಲಿಗೆ ಎಳೆದಿದೆ. ಇದಲ್ಲದೆ ’ಭೀಮ್ ಆರ್ಮಿ ಟಾಪ್ ೧೦೦’,
’ಯುನಿಫಿಕೇಷನ್ ಆಫ್ ಮುಸ್ಲಿಮ್ ಲೀಡರ್ಸ್’ ಇತ್ಯಾದಿಯಾಗಿ ಸುಮಾರು ನೂರಕ್ಕೂ ಹೆಚ್ಚು ವಿವಿಧ ವಾಟ್ಸಪ್ ಗುಂಪುಗಳಲ್ಲಿ ಕೂಡಾ ಅಹ್ಮದ್ ಸಕ್ರಿಯವಾಗಿರುವುದಾಗಿ ಜಾರಿ ನಿರ್ದೇಶನಾಲಯದ ವರದಿ ಹೇಳಿತು.
ಪರ್ವೇಜ್
ಅಹ್ಮದ ಜೊತೆಗೆ ಸಂಜಯ್ ಸಿಂಗ್ ನಡೆಸಿದ ವಾಟ್ಸಪ್ ಚಾಟ್ಗಳ ವಿವರಗಳನ್ನೂ ಜಾರಿ
ನಿರ್ದೇಶನಾಲಯ ವಿವರವಾಗಿ ಸಂಗ್ರಹಿಸಿದೆ.
ಪರ್ವೇಜ್
ಅಹ್ಮದ್ ಜೊತೆಗೆ ಸಂಪರ್ಕದಲ್ಲಿರುವುದಾಗಿ ಮಾಡಲಾದ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಉದಿತ್ ರಾಜ್, ’ನಾನು ಹಲವಾರು ಪಕ್ಷಗಳು, ಮುಸ್ಲಿಮ್ ನಾಯಕರು ಮತ್ತು ದಲಿತ ಗುಂಪುಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಕ್ಕಾಗಿ ಒಗ್ಗಟ್ಟಾಗಲು ಕರೆ ಮಾಡುತ್ತಿದ್ದಾಗ ಅಹ್ಮದ್ ಅವರನ್ನು ಸಂಪರ್ಕಿಸಿರಬಹುದು’ ಎಂದು ಹೇಳಿದರು.
ಪರ್ವೇಜ್
ಅಹ್ಮದ್ ಜೊತೆಗೆ ಅಥವಾ ಆತನ ಸಂಘಟನೆ ಜೊತೆಗೆ ಯಾವುದೇ ಹಣಕಾಸು ಬಾಂಧವ್ಯ ಇರುವ ಬಗೆಗಿನ ಆರೋಪವನ್ನು ಉದಿತ್ ರಾಜ್ ನಿರಾಕರಿಸಿದರು.
ಉತ್ತರ
ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಚಳವಳಿ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಪಿಎಫ್‌ಐ ಪ್ರಚೋದನೆ ನೀಡಿದ
ಬಗ್ಗೆ ಮತ್ತು ಅದರ ರಾಷ್ಟ್ರವಿರೋಧಿ ಚಟುವಟಿಕೆಗಳ ಬಗ್ಗೆ ಜಾರಿ ನಿರ್ದೇಶನಾಲವು ಹದ್ದುಗಣ್ಣು ಇಟ್ಟು ಪರಿಶೀಲಿಸುತ್ತಿದ್ದು, ಸಂಘಟನೆಯ ಕೇಂದ್ರವು ದೆಹಲಿಯ ಶಾಹೀನ್ ಬಾಗ್ನಲ್ಲಿ ಇದೆ ಮತ್ತು ಅದರ ಚಟುವಟಿಕೆಗಳಿಗಾಗಿ ಈ ಕೇಂದ್ರ ಕಚೇರಿಯಲ್ಲಿ
ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿ ಇಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿತು.
ಪಿಎಫ್‌ಐ ಮುಖಂಡ ಪರ್ವೇಜ್
ಅಹ್ಮದ್ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಮಾತ್ರವೇ ಅಲ್ಲ ಆಪ್ ನಾಯಕ ಸಂಜಯ್ ಸಿಂಗ್ ಜೊತೆಗೆ ’ಖಾಸಗಿ ಸಭೆಗಳು’,
’ದೂರವಾಣಿ ಕರೆಗಳು’ ಮತ್ತು ’ವಾಟ್ಸಪ್ ಚಾಟ್’ಗಳ ಮೂಲಕ ನಿರಂತರ
ಸಂಪರ್ಕದಲ್ಲಿ ಇರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿತು.
No comments:
Post a Comment