Saturday, February 22, 2020

೬೭ ಎಕರೆ ಜಾಗದಲ್ಲಿ ರಾಮಮಂದಿರ, ಅಯೋಧ್ಯೆಗೆ ಹೊಸ ರೂಪ

೬೭ ಎಕರೆ ಜಾಗದಲ್ಲಿ ರಾಮಮಂದಿರ, ಅಯೋಧ್ಯೆಗೆ ಹೊಸ ರೂಪ
ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಮಂಗಳೂರು:  ಅಯೋಧ್ಯೆಯಲ್ಲಿ 67 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣದ ಜೊತೆಗೇ ಸಂಪೂ ಣ ಅಯೋಧ್ಯೆಗೆ ಹೊಸ ರೂಪ ಕೊಡುವ ಉದ್ದೇಶವಿದೆ ಎಂದು ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ರಚಿಸಿರುವ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಸದಸ್ಯರಲ್ಲಿ ಒಬ್ಬರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  2020 ಫೆಬ್ರುವರಿ 21 ಶುಕ್ರವಾರ ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ವಿಶ್ವಸ್ಥ ಮಂಡಳಿ (ಟ್ರಸ್ಟ್)  ರಚಿಸಿದೆ.  ಈ ಟ್ರಸ್ಟಿನ ಮೊದಲ ಸಭೆಯಲ್ಲಿ ಈ ಹಿಂದಿನ ನೀಲನಕ್ಷೆ ಪ್ರಕಾರವೇ ಯೋಜನಾಬದ್ಧವಾಗಿ ಮಂದಿರ ನಿರ್ಮಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  ನುಡಿದರು.

ಮಂದಿರ ನಿರ್ಮಾಣಕ್ಕೆ ಬೇಕಾದ ಶಿಲಾಕಲ್ಲುಗಳ ಕೆತ್ತನೆ ಕೆಲಸ ಹಲವು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಇವು ಶಿಲೆಕಲ್ಲುಗಳಾದ್ದರಿಂದ ಶಿಥಿಲಗೊಳ್ಳುವ ಸಂಭವ ಇಲ್ಲ. ಇವೆಲ್ಲವನ್ನೂ ಮತ್ತೆ ಪರಿಶೀಲಿಸಿಯೇ ಮಂದಿರ ನಿರ್ಮಾಣಕ್ಕೆ ಮುಂದಾಗಲಿದ್ದೇವೆ ಎಂದು ಅವರು ನುಡಿದರು.

ಈ ಮಂದಿರ ಶತಮಾನಗಳವರೆಗೆ ಚಿರಸ್ಥಾಯಿಯಾಗಿ ಉಳಿದುಕೊಳ್ಳಬೇಕು ಎಂಬ ಬಯಕೆ ಇದೆ. ಇದಕ್ಕಾಗಿ ಅಯೋಧ್ಯೆಯನ್ನೇ ಮಂದಿರ ನಿರ್ಮಾಣದ ಸುಸಜ್ಜಿತ ಜಾಗವಾಗಿ ಪರಿವರ್ತಿಸುವ  ಉದ್ದೇಶ ಹೊಂದಲಾಗಿದೆ. ಅಯೋಧ್ಯೆಯ ಸುಮಾರು ೬೭ ಎಕರೆ ಪ್ರದೇಶದಲ್ಲಿ ಮಂದಿರ ನಿರ್ಮಾಣವಾದರೆ, ಇಡೀ ಅಯೋಧ್ಯೆಯನ್ನೇ ಯೋಜನಾಬದ್ಧವಾಗಿ ಮರುನಿರ್ಮಾಣ ಮಾಡುವ ಪ್ರಸ್ತಾಪವೂ ಇದೆ ಎಂದು ಅವರು ನುಡಿದರು.

 ಅಯೋಧ್ಯೆ ರಾಮಮಂದಿರ ಒಂದು ಯಾತ್ರೀ ಕೇಂದ್ರವಾಗಿ ಪ್ರಸಿದ್ಧಿ ಪಡೆಯಬೇಕು. ಇದಕ್ಕಾಗಿ ನಾಲ್ಕು ಪಥದ ರಸ್ತೆ, ಯಾತ್ರಿ ನಿವಾಸ, ಪ್ರಾಚೀನ ಸಂಸ್ಕೃತಿಯ ಕಲಾಭವನ ಸೇರಿದಂತೆ ಪ್ರಪಂಚದಾದ್ಯಂತ ಎಲ್ಲ ಭಕ್ತರ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಅಯೋಧ್ಯೆ ಮಾರ್ಪಡಲಿದೆ ಎಂದು ಅವರು ವಿವರಿಸಿದರು.

ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ವಿಶ್ವಸ್ಥ ಮಂಡಳಿ, ಮಂದಿರ ನಿರ್ಮಾಣ ಸಮಿತಿ ರಚಿಸಲಾಗಿದೆ. ಇದರ ಪ್ರಥಮ ಸಭೆಯೂ ನಡೆದಿದೆ. ಮುಂದಿನ ಸಭೆ ಯಾವಾಗ ಎನ್ನುವುದು ನಿರ್ಧಾರವಾಗಿಲ್ಲ. ಮಂದಿರ ನಿರ್ಮಾಣ ಸಮಿತಿಯಲ್ಲಿದಕ್ಷಿಣ ಭಾರತದ ಪ್ರತಿನಿಧಿಯಾಗಿರುವ ನನಗೆ ಎಲ್ಲರ ಸಹಕಾರ ಬೇಕು. ಗುರುಗಳ ಹಾದಿಯಲ್ಲೇ ನಾನು ಮುನ್ನಡೆಯುತ್ತೇನೆ. ಸಮಿತಿಯಲ್ಲಿಗೌರವ ಸ್ಥಾನಕ್ಕಿಂತ ಜವಾಬ್ದಾರಿ ಹೆಚ್ಚಿದೆ. ಮಂದಿರ ನಿರ್ಮಾಣ ಟ್ರಸ್ಟ್ಗೆ ಗುರುಗಳಾದ ಶ್ರೀವಿಶ್ವೇಶತೀರ್ಥರ ಸ್ಮರಣಾರ್ಥ ಪ್ರಥಮ ದೇಣಿಗೆ ೫ ಲಕ್ಷ ರೂ. ನೀಡಲಾಗಿದೆ ಎಂದು ಸ್ವಾಮೀಜಿ ನುಡಿದರು.

ಮಂದಿರ ನಿರ್ಮಾಣ ಯಾವಾಗ ಆರಂಭಿಸಬೇಕು ಮತ್ತು ಯಾವಾಗ ಪೂರ್ಣಗೊಳಿಸಬೇಕು ಎಂಬ ಚರ್ಚೆ ಈಗ ನಡೆದಿಲ್ಲ. ರಾಮನವಮಿಯಂದು ಭೂಮಿ ಪೂಜೆ ಕಾರ್ಯಕ್ರಮ ನಡೆಸುವುದು ಬೇಡ ಎಂಬ ಸಲಹೆ ಬಂದಿದೆ. ಅಲ್ಲಿಲಕ್ಷಾಂತರ ಭಕ್ತರು ಭಾಗವಹಿಸುವ ಕಾರಣದಿಂದ ಅಂದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮುಂದೆ ಎರಡೂ ಸಮಿತಿಗಳು ಸೇರಿ ಸೂಕ್ತ ದಿನ ನಿರ್ಧಾರ ಮಾಡಲಿದೆ ಎಂದು ಶ್ರೀಗಳು ಹೇಳಿದರು.

No comments:

Advertisement