Saturday, March 14, 2020

ಮೊಬೈಲ್ ಫೋನುಗಳು ದುಬಾರಿ, ಜಿಎಸ್‌ಟಿ ಶೇ.೬ರಷ್ಟು ಏರಿಕೆ

ಮೊಬೈಲ್ ಫೋನುಗಳು ದುಬಾರಿ, ಜಿಎಸ್ಟಿ ಶೇ.೬ರಷ್ಟು ಏರಿಕೆ
ಮಂಡಳಿ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಪ್ರಕಟಣೆ
ನವದೆಹಲಿ: ಮೊಬೈಲ್ ಹ್ಯಾಂಡ್ಸೆಟ್ಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಶೇಕಡಾ ೧೨ರಿಂದ ೧೮ಕ್ಕೆ ಏರಿಸಲು ಕೇಂದ್ರ ಸರ್ಕಾರವು 2020 ಮಾರ್ಚ್ 14ರ ಶನಿವಾರ ನಿರ್ಧರಿಸಿದ್ದು, ಪರಿಣಾಮವಾಗಿ ಮೊಬೈಲ್ ಫೋನುಗಳು ತುಟ್ಟಿಯಾಗುವ ಸಂಭವ ಇದೆ.

ಸೆಲ್ಯುಲಾರ್ ಹ್ಯಾಂಡ್ಸೆಟ್ಗಳ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಈಗಿನ ಶೇಕಡಾ ೧೨ರಿಂದ ಶೇಕಡಾ ೧೮ಕ್ಕೆ ಏರಿಸಲು ರಾಜಧಾನಿಯಲ್ಲಿ ಶನಿವಾರ ನಡೆದ ಜಿಎಸ್ಟಿ ಮಂಡಳಿಯ ೩೯ನೇ ಸಭೆಯಲ್ಲಿ ನಿರ್ಧರಿಸಲಾಯಿತು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ  ಹಣಕಾಸು ಸಚಿವರು ಮತ್ತು ಕೇಂದ್ರ ಹಾಗೂ ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

"ವಿಲೋಮ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೊಬೈಲ್ ಹ್ಯಾಂಡ್ಸೆಟ್ಗಳ ಸರಕು ಮತ್ತು ಸೇವಾ ತೆರಿಗೆಯನ್ನು ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು" ಎಂದು ನಿರ್ಮಲಾ ಸೀತಾರಾಮನ್  ಶನಿವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಮೊಬೈಲ್ಗಳಿಗೆ ಪ್ರಸ್ತುತ ವಿಧಿಸಲಾಗುತ್ತಿರುವ ಸುಂಕವು ಶೇಕಡಾ ೧೨ ಆಗಿದ್ದರೆ, ಅದರ ಕೆಲವು ಭಾಗಗಳ ಮೇಲೆ ಶೇಕಡಾ ೧೮ರಷ್ಟು ಸುಂಕ ಬೀಳುತ್ತಿದೆ.

ಮೊಬೈಲ್ ಫೋನ್ಗಳು, ಪಾದರಕ್ಷೆಗಳು ಮತ್ತು ಜವಳಿ ಸೇರಿದಂತೆ ಐದು ಕ್ಷೇತ್ರಗಳ  ತರಿಗೆ ದರವನ್ನು ಜಿಎಸ್ಟಿ ಮಂಡಳಿಯು ತರ್ಕಬದ್ಧಗೊಳಿಸಬಹುದು ಎಂದು ವಾರದ ಆರಂಭದಲ್ಲಿ ಸುದ್ದಿ ಮೂಲಗಳು ತಿಳಿಸಿದ್ದವು.

ವಿಲೋಮ ಸ್ಥಿತಿಯನ್ನು ಕೊನೆಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊಬೈಲ್ ಫೋನ್ ತಯಾರಕರು ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ಅವರೇ ನಿರ್ಧರಿಸಬೇಕಾಗುತ್ತದೆ. ವಿಲೋಮ ಸ್ಥಿತಿಯು ತಯಾರಕರಿಗೆ ಒಂದು ಸಮಸ್ಯೆಯಾಗಿದೆಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮೊಬೈಲ್ಗಳ ಮೇಲಿನ ಜಿಎಸ್ಟಿಯು ಶೇಕಡಾ ೬ರಷ್ಟು ಹೆಚ್ಚಿದೆ ಎಂದ ಮಾತ್ರಕ್ಕೆ ಹ್ಯಾಂಡ್ಸೆಟ್ಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದೇನೂ  ಅರ್ಥವಲ್ಲಎಂದು ಅವರು ಹೇಳಿದರು.

ಯಂತ್ರಗಳಿಂದ ಸಿದ್ಧಪಡಿಸಿದ ಹಾಗೂ ಕೈಗಳಿಂದ ತಯಾರಿಸಿದ ಬೆಂಕಿ ಪೊಟ್ಟಣಗಳಿಗೆ ಏಕರೂಪದ ತೆರಿಗೆ ಇರಲಿದ್ದು, ಶೇಕಡಾ ೧೨ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಗದಿ ಪಡಿಸಲಾಗಿದೆ. ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲಿಸುವ (ಎಂಆರ್) ಸೇವೆಗಳ ಮೇಲಿನ ತೆರಿಗೆಯನ್ನು ಶೇ ೧೮ರಿಂದ ಶೇ ೫ಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ನವದೆಹಲಿಯಲ್ಲಿ ಶನಿವಾರ ೩೯ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ ವಹಿವಾಟು ಹೊಂದಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ತೆರಿಗೆದಾರರಿಗೆ ೨೦೧೮-೧೯ರ ವಿತ್ತ ವರ್ಷದಲ್ಲಿ ಜಿಎಸ್ಟಿಆರ್೯ಸಿ ರೂಪದಲ್ಲಿ ಹೊಂದಾಣಿಕೆ ಮಾಡಿದ ಲೆಕ್ಕ ಪಟ್ಟಿ ಸಲ್ಲಿಕೆಗೆ ಸಡಿಲಿಕೆ ನೀಡಲಾಗಿದೆ. ವಾರ್ಷಿಕ ರಿಟರ್ನ್ಸ್ ಸಲ್ಲಿಕೆ ಮತ್ತು ಲೆಕ್ಕ ಪಟ್ಟಿ ಸಲ್ಲಿಕೆಗೆ ೨೦೨೦ರ ಜೂನ್ ೩೦ರ ವರೆಗೂ ಅವಧಿ ವಿಸ್ತರಿಸಲಾಗಿದೆ.

ರಸಗೊಬ್ಬರಗಳು, ಮೊಬೈಲ್ ಫೋನ್ಗಳು, ಪಾದರಕ್ಷೆಗಳು, ನವೀಕರಿಸಬಹುದಾದ ಇಂಧನ ಉಪಕರಣಗಳು ಮತ್ತು ಕೈಯಿಂದ ತಯಾರಿಸುವ ನೂಲುಗಳಂತಹ ಸರಕುಗಳ ಜಿಎಸ್ಟಿ ಶೇಕಡಾ -೧೨ಕ್ಕೆ ಏರಲಿವೆ. ಇದರಿಂದಾಗಿ ಸಿದ್ಧಪಡಿಸಿದ ಸರಕುಗಳ ಮೇಲಿನ ಜಿಎಸ್ಟಿಯು ಕಚ್ಛಾ ವಸ್ತುಗಳ ಮೇಲಿನ ಸುಂಕಕ್ಕೆ ಹೋಲಿಸಿದರೆ ಕಡಿಮೆಯಾಗಲಿದೆ.

ಸಿದ್ಧ ಉತ್ಪನ್ನಗಳ ಮೇಲಿನ ತೆರಿಗೆಯು ಕಚ್ಚಾ ವಸ್ತುಗಳ ಮೇಲಿನ ತೆರಿಗೆಗಿಂತ ಕಡಿಮೆಯಾದಾಗ-ಸರ್ಕಾರವು ಹೆಚ್ಚುವರಿ ಮೊತ್ತವನ್ನು ಮರುಪಾವತಿಸುವ ಅಗತ್ಯವಿದೆ.

ಜಿಎಸ್ಟಿ ಜಾಲತಾಣದ (ವೆಬ್ ಸೈಟ್) ತಾಂತ್ರಿಕ ದೋಷಗಳನ್ನು ಪರಿಹರಿಸುವುದು, ಸಾಮರ್ಥ್ಯ ವೃದ್ಧಿ, ಸಿಬ್ಬಂದಿಯಿಂದ ಉತ್ತಮ ಸ್ಪಂದನೆ, ಪರಿಹಾರ ಚುರುಕುಗೊಳಿಸುವುದರ ಬಗ್ಗೆ ನಂದನ್ ನಿಲೇಕಣಿ ಅವರು ನೀಡಿರುವ ಪ್ರಸ್ತಾಪಗಳನ್ನು ಇದೇ ವರ್ಷ ಜುಲೈ ವೇಳೆಗೆ ಅನುಷ್ಠಾನಗೊಳಿಸಲು ಜಿಎಸ್ಟಿ ಮಂಡಳಿ ನಿರ್ಧರಿಸಿದೆ. ೨೦೨೧ರ ಜನವರಿಗೆ ಅನುಷ್ಠಾನದ ಅವಧಿ ನಿಗದಿಗೊಳಿಸಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಒಟ್ಟು ಕೋಟಿ ರೂಪಾಯಿಗಿಂತ ಕಡಿಮೆ ವಹಿವಾಟು ಮೌಲ್ಯ ಹೊಂದಿರುವ ಕೈಗಾರಿಕೆಗಳ ೨೦೧೭-೧೮ ಮತ್ತು ೨೦೧೮-೧೯ರ ಸಾಲಿನ ಲೆಕ್ಕ ಪಟ್ಟಿ ಸಲ್ಲಿಸಲು ವಿಳಂಬ ಮಾಡಿರುವುದಕ್ಕೆ ವಿಳಂಬ ಶುಲ್ಕ ವಿಧಿಸದಿರಲು ಮಂಡಳಿ ನಿರ್ಧರಿಸಿದೆ. 
ಅಬಕಾರಿ ಮತ್ತು ಸೇವಾ ತೆರಿಗೆ ಸೇರಿದಂತೆ ಇದ್ದ ಒಂದು ಡಜನ್ಗೂ ಹೆಚ್ಚು ಪರೋಕ್ಷ ತೆರಿಗೆಗಳನ್ನು ನಿವಾರಿಸುವ ಸಲುವಾಗಿ  ಏಕೀಕೃತ ತೆರಿಗೆ ವ್ಯವಸ್ಥೆಯನ್ನು ರೂಪಿಸಲು ೨೦೧೭ರ ಜುಲೈ ೧ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯನ್ನು ಆರಂಭಿಸಲಾಗಿತ್ತು.

No comments:

Advertisement