Wednesday, March 18, 2020

ಮಧ್ಯಪ್ರದೇಶ ಸದನ ಬಲಾಬಲ ಪರೀಕ್ಷೆ: ಹಸ್ತಕ್ಷೇಪಕ್ಕೆ ಸುಪ್ರಿಂ ನಕಾರ

ಮಧ್ಯಪ್ರದೇಶ ಸದನ ಬಲಾಬಲ ಪರೀಕ್ಷೆ: ಹಸ್ತಕ್ಷೇಪಕ್ಕೆ ಸುಪ್ರಿಂ ನಕಾರ, ಕಲಾಪ ಗುರುವಾರಕ್ಕೆ ಮುಂದೂಡಿಕೆ
ನವದೆಹಲಿ: ಯಾರಿಗೆ ಬಹುಮತ ಇದೆ ಎಂಬುದಾಗಿ ನಿರ್ಧರಿಸುವ ಸಲುವಾಗ ಶಾಸನಸಭೆಯ ಮಾರ್ಗಕ್ಕೆ ತಾನು ಅಡ್ಡ ಬರುವುದಿಲ್ಲ ಎಂಬುದಾಗಿ 2020 ಮಾರ್ಚ್  18ರ  ಬುಧವಾರ ಇಲ್ಲಿ ಸ್ಪಷ್ಟ ಪಡಿಸಿದ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು 2020 ಮಾರ್ಚ್ 19ರ ಗುರುವಾರ ಬೆಳಗ್ಗೆ ೧೦.೩೦ ಗಂಟೆಗೆ ಮುಂದೂಡಿತು. ಬಂಡಾಯ ಶಾಸಕರನ್ನು ಭೇಟಿ ಮಾಡಲು ಬೆಂಗಳೂರಿಗೆ ತನ್ನ ರಿಜಿಸ್ಟ್ರಾರ್ ಅವರನ್ನು ಕಳುಹಿಸಲೂ ಕೋರ್ಟ್ ನಿರಾಕರಿಸಿತು.

ಮಧ್ಯಪ್ರದೇಶ ವಿಧಾನಸಭೆಯಲ್ಲಿ ತತ್ ಕ್ಷಣ ವಿಶ್ವಾಸ ಮತ ಯಾಚನೆ ಕಲಾಪ ನಡೆಸುವಂತೆ ನಿರ್ದೇಶನ ಕೋರಿ ಭಾರತೀಯ ಜನತಾ ಪಕ್ಷವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಾಲದಲ್ಲಿ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹೇಮಂತ ಗುಪ್ತ ಅವರನ್ನು ಒಳಗೊಂಡ ಪೀಠವು ಸ್ಪಷ್ಟನೆಯನ್ನು ನೀಡಿತು.

ಸಂವಿಧಾನಬದ್ಧ ನ್ಯಾಯಾಲಯವಾಗಿ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆಎಂದು ಪೀಠ ಹೇಳಿತು.

೨೨ ಶಾಸಕರ ರಾಜೀನಾಮೆಯ ನಂತರ, ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಲ್ಪಮತಕ್ಕೆ ಇಳಿದಿದೆಯೇ ಅಥವಾ ಇನ್ನೂ ಬಹುಮತವನ್ನು ಹೊಂದಿದೆಯೇ ಎಂಬುದನ್ನು ನಿರ್ಧರಿಸಲು ತತ್ ಕ್ಷಣ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂದು ಬಿಜೆಪಿ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತ್ತು.

ಮಧ್ಯೆ, ತನ್ನ ಶಾಸಕರನ್ನು ಬೆಂಗಳೂರಿನಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ಆಪಾದಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ "ಪ್ರಜಾಪ್ರಭುತ್ವವನ್ನು ಮಟ್ಟಹಾಕಲು" ಬಿಜೆಪಿ ಯತ್ನಿಸಿದೆ ಎಂದು ದೂಷಿಸಿತು.

ಬಂಡಾಯ ಎದ್ದಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠಾವಂತರಾದ ೨೨ ಶಾಸಕರಲ್ಲಿ ಆರು ಜನರ ರಾಜೀನಾಮೆಯನ್ನು ಮಧ್ಯಪ್ರದೇಶ ವಿಧಾನಭೆ ಸಭಾಧ್ಯಕ್ಷ ಎನ್.ಪಿ. ಪ್ರಜಾಪತಿ ಅವರು ಅಂಗೀಕರಿಸಿದ್ದಾರೆ.   ಆದರೆ ವಿಶ್ವಾಸಮತ ಕಲಾಪಕ್ಕೆ  ಮುನ್ನ ಉಳಿದ ೧೬ ಶಾಸಕರನ್ನು ಮರಳಿ ಕರೆತರಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಶಾಸಕರನ್ನು ದಿಗ್ಬಂಧನದಲ್ಲಿ ಇರಿಸಲು ಸಾಧ್ಯವಿಲ್ಲಎಂದು ಹೇಳಿದ ಸುಪ್ರೀಂ ಕೋರ್ಟ್,  ಸಮತೋಲನವನ್ನು ಒಂದು ರೀತಿಯಲ್ಲಿ ಅಥವಾ ಇನ್ನೊಂದಕ್ಕೆ ತಿರುಗಿಸಬಹುದು ಎಂಬುದು ನಮಗೆ ತಿಳಿದಿದೆಎಂದು ಹೇಳಿದರು.

೧೬ ಬಂಡಾಯ ಶಾಸಕರು ಸದನದತ್ತ ನಡೆಯಬಹುದು ಅಥವಾ ನಡೆಯದಿರಬಹುದು. ಆದರೆ ಖಂಡಿತವಾಗಿಯೂ ಅವರನ್ನು ದಿಗ್ಬಂಧನದಲ್ಲಿ ಇರಿಸಲು ಸಾಧ್ಯವಿಲ್ಲಎಂದು ಪೀಠ ಹೇಳಿತು.

ಬಿಜೆಪಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ಎಲ್ಲ ೧೬ ಮಂದಿ ಬಂಡಾಯ ಶಾಸಕರನ್ನು ನ್ಯಾಯಾಧೀಶರ ಕೊಠಡಿಯಲ್ಲಿ ಹಾಜರುಪಡಿಸಲು ಮುಂದಾದರು ಆದರೆ ನ್ಯಾಯಾಲಯವು ಮನವಿಯನ್ನು ಒಪ್ಪಲಿಲ್ಲ.

ಬಂಡಾಯ ಶಾಸಕರು ಭೋಪಾಲ್ಗೆ ಹೋಗಬೇಕೆಂದು ಕಾಂಗ್ರೆಸ್ ಬಯಸಿದೆ, ತನ್ಮೂಲಕ ಅವರನ್ನು ಅಮಿಷಕ್ಕೆ ಒಳಪಡಿಸಬಹುದು ಮತ್ತು ಕುದುರೆವ್ಯಾಪಾರವನ್ನು ನಡೆಸಬಹುದು ಎಂಬುದು ಅವರ ಲೆಕ್ಕಾಚಾರಎಂದು ರೋಹಟ್ಟಿ ಹೇಳಿದರು.

ಬಂಡಾಯ ಶಾಸಕರನ್ನು ಭೇಟಿ ಮಾಡಲು ಸುಪ್ರೀಂಕೋರ್ಟ್ ರಿಜಿಸ್ಟಾರ್ ಅವರನ್ನು ಬೆಂಗಳೂರಿಗೆ ಕಳುಹಿಸುವುದಿಲ್ಲ. ಇದು ಮಗುವನ್ನು ವಶದಲ್ಲಿ ಇಟ್ಟುಕೊಳ್ಳುವ ವಿಚಾರವಲ್ಲ. ನ್ಯಾಯಾಲಯದ ಆದೇಶದ ಮೂಲಕ ಅವರನ್ನು ನಿಮ್ಮ ಸಂಪರ್ಕಕ್ಕೆ ಸಿಗುವಂತೆ ಮಾಡಲು ಸಮಸ್ಯೆ ಇದೆಎಂದೂ ಪೀಠ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಹೇಳಿತು.

ಇತ್ತೀಚಿನ ತೀರ್ಪಿನಲ್ಲಿ ನ್ಯಾಯಾಲಯವು ಇಂತಹ ಪ್ರಕರಣವನ್ನು ಕ್ಷಿಪ್ರವಾಗಿ ನಿರ್ಧರಿಸುವಂತೆ ವಿಧಾನಸಭಾಧ್ಯಕ್ಷರಿಗೆ ಸೂಚಿಸಿತ್ತು. ನೀವು ಯಾವಾಗ ನಿರ್ಧರಿಸುತ್ತೀರಿ ಎಂಬುದಾಗಿ ನನಗೆ ತಿಳಿಸಿ?’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಸಿಂಘ್ವಿ ಅವರನ್ನು ಪ್ರಶ್ನಿಸಿದರು.

ವಿಧಾನಸಭಾಧ್ಯಕ್ಷರ ವಿವೇಚನಾ ಅಧಿಕಾರವನ್ನು ಮೊಟಕುಗೊಳಿಸಲು ನಾನು ಬಯಸುವುದಿಲ್ಲ. ನಾನು ಬಗ್ಗೆ ನಿಮಗೆ ನಾಳೆ ತಿಳಿಸಬಹುದುಎಂದು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ಸುಪ್ರೀಂಕೋರ್ಟ್ ನೀಡಿದ ಇತ್ತೀಚಿನ ತನ್ನ ಎಲ್ಲ ಆದೇಶಗಳಲ್ಲೂ ಕುದುರೆ ವ್ಯಾಪಾರ ನಡೆಯಬಾರದು ಎಂಬ ಕಾಳಜಿಯನ್ನು ವ್ಯಕ್ತ ಪಡಿಸಿದೆಎಂಬುದಾಗಿ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದಾಗಕುದುರೆ ಈಗಾಗಲೇ ದಿಗ್ಬಂಧನದಲ್ಲಿ ಇದೆಎಂದು ಸಿಂಘ್ವಿ ಉತ್ತರಿಸಿದರು.

ಅವರು ನಾಳೆ ನಿಮ್ಮ ಮುಂದೆ ಹಾಜರಾದರೆ ಅವರ ರಾಜೀನಾಮೆ ವಿಚಾರವನ್ನು ನೀವು ನಿರ್ಧರಿಸುವಿರಾ?’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಿಂಘ್ವಿ ಅವರನ್ನು ಪ್ರಶ್ನಿಸಿದರು.

ನಾವು ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗಲು ಇಚ್ಛಿಸುವುದಿಲ್ಲ, ಇದು ಸುರಕ್ಷತೆಯ ಪ್ರಶ್ನೆಎಂದು ಬಂಡಾಯ ಕಾಂಗ್ರೆಸ್ ನಾಯಕರ ಪರ ವಕೀಲರ ಮಾತಿಗೆ ಪ್ರತಿಯಾಗಿ ನ್ಯಾಯಮೂರ್ತಿ ಸಿಂಘ್ವಿ ಅವರಿಗೆ ಪ್ರಶ್ನೆ ಕೇಳಿದರು.

ಕೊರೋನಾವೈರಸ್ ಕಾರಣದಿಂದ ಆರು ವಿಧಾನಸಭೆಗಳ ಅಧಿವೇಶನವನ್ನು ಮುಂದೂಡಲಾಗಿದೆ. ಇದೊಂದು ಕಣ್ಣಿಗೆ ಮಣ್ಣೆರಚುವ ಅರ್ಜಿ. ಅವರ ಪ್ರಾರ್ಥನೆಯನ್ನು ಮನ್ನಿಸಬೇಡಿ. ಅವರು ವಿಧಾನಸಭಾಧ್ಯಕ್ಷರ ವಿವೇಚನಾ ಅಧಿಕಾರವನ್ನು ಮೊಟಕುಗೊಳಿಸಲು ಬಯಸಿದ್ದಾರೆ ಎಂದೂ ಸಿಂಘ್ವಿ ನ್ಯಾಯಾಲಯದಲ್ಲಿ ವಾದಿಸಿದರು.

ನೀವು ಯಾಕೆ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು? ಆಗ ತಾನೇತಾನಾಗಿ ಅವರು ಅನರ್ಹರಾಗುವರಲ್ಲವೇ? ನಿಮಗೆ ಸಮಾಧಾನವಾಗದೇ ಇದ್ದಲ್ಲಿ ನೀವು ಅವರ ರಾಜೀನಾಮೆಯನ್ನು ತಿರಸ್ಕರಿಸಬಹದಲ್ಲ. ನೀವು ಮಾರ್ಚ್ ೧೬ರಂದು ಬಜೆಟ್ ಅಧಿವೇಶನವನ್ನು ಮುಂದೂಡಿದ್ದೀರಿ. ಬಜೆಟನ್ನು ಅಂಗೀಕರಿಸದಿದರೆ ರಾಜ್ಯ ಕಾರ್ ನಿರ್ವಹಿಸುವುದು ಹೇಗೆ? ಅಲ್ಲದೆ  ಆದಿನ ನೀವು ಸಮಾವೇಶಗೊಂಡಿರಲಿಲ್ಲ ಎಂದೇನೂ ಅಲ್ಲವಲ್ಲ? ವಿಧಾನಸಭೆಯನ್ನು ಆದಿನ ಸಮಾವೇಶಗೊಳಿಸಲಾಗಿತ್ತು ಮತ್ತು ಮುಂದೂಡಲಾಯಿತು ಅಲ್ಲವೇ? ಎಂದೂ ಸುಪ್ರೀಂಕೋರ್ಟ್ ಸಿಂಘ್ವಿ ಅವರನ್ನು ಪ್ರಶ್ನಿಸಿತು.

ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕು. ಆದರೆ, ರಾಜ್ಯಪಾಲರು ಟಿವಿಯಲ್ಲಿ ಏನನ್ನೋ ನೋಡಿದರು ಎಂಬ ಕಾರಣಕ್ಕಾಗಿ ಅದನ್ನು ಅಂಗೀಕರಿಸಲಾಗದು. ೧೯ ರಾಜೀನಾಮೆ ಪತ್ರಗಳಲ್ಲಿ ೭ನ್ನು ಒಬ್ಬರೇ ವ್ಯಕ್ತಿ ಬರೆದಿದ್ದು ವಿವಿಧ ಶಾಸಕರು ಸಹಿ ಮಾಡಿದ್ದಾರೆ ಮತ್ತು ಇಬ್ಬರು ಇತರ ಆರು ಪತ್ರಗಳನ್ನು ಬರೆದಿದ್ದಾರೆ. ಪತ್ರಗಳು ಒಂದೇ ರೀತಿಯಾಗಿದ್ದು ಎರಡು ಸಾಲುಗಳನ್ನು ಹೊಂದಿದೆ ಎಂದು ಸಿಂಘ್ವಿ ಹೇಳಿದರು.

ನಿರ್ಲಕ್ಷಿಸಲಾಗಿರುವ ಇನ್ನೊಂದು ವಿಷಯ ಏನೆಂದರೆ ಇದು ಮುಂದುವರೆದಿರುವ ವಿಧಾನಸಭೆ, ಹೊಸ ಅಥವಾ ನೂತನ ವಿಧಾನಸಭೆಯಲ್ಲ. ನ್ಯಾಯಾಲಯವು ನಡೆಯುತ್ತಿರುವ ವಿಧಾನಸಭೆಯ ಸಭಾಧ್ಯಕ್ಷರ ವಿವೇಚನಾಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಮೂರು ಅವಿಶ್ವಾಸ ನಿರ್ಣಯಗಳು ವಿಫಲಗೊಂಡಿವೆಎಂದು ಸಿಂಘ್ವಿ ವಾದಿಸಿದರು.     
     
ಬಿಜೆಪಿ ಮುಖಂಡರು ರಾಜ್ಯ ವಿಧಾನಸಭಾ ಅಧ್ಯಕ್ಷರಿಗೆ ಸಲ್ಲಿಸಿದ ಕಾಂಗ್ರೆಸ್ಸಿನ ಬಂಡಾಯ ಶಾಸಕರ ರಾಜೀನಾಮೆ ಪತ್ರಗಳ ಬಗ್ಗೆ ತನಿಖೆ ಅಗತ್ಯ ಎಂದು ಇದಕ್ಕೂ ಮುನ್ನ ಮಧ್ಯಪ್ರದೇಶ ಕಾಂಗ್ರೆಸ್ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.

ಮಧ್ಯಪ್ರದೇಶದಲ್ಲಿ ತನ್ನ ಬಂಡಾಯ ಶಾಸಕರ ರಾಜೀನಾಮೆಯನ್ನು ಬಲವಂತವಾಗಿ ತೋಳುತಿರುಚಿ ಪಡೆದುಕೊಳ್ಳಲಾಗಿದೆ, ಅವರು ಯಾರೂ ತಮ್ಮ ಮುಕ್ತ ಇಚ್ಛೆಗೆ ಅನುಗುಣವಾಗಿ ವರ್ತಿಸಿಲ್ಲಎಂದೂ ಕಾಂಗ್ರೆಸ್ ಪ್ರತಿಪಾದಿಸಿತ್ತು.

ಸದನ ಬಲಾಬಲ ಪರೀಕ್ಷೆಯ ವಿಷಯದಲ್ಲಿ ಇನ್ನಷ್ಟು ಕಾಲಾವಕಾಶ ನೀಡುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿದ ಕಾಂಗ್ರೆಸ್ತತ್ ಕ್ಷಣವೇ ಸದನ ಬಲಾಬಲ ಪರೀಕ್ಷೆ ನಡೆಯದೇ ಇದ್ದಲ್ಲಿ ಸ್ವರ್ಗವೇನೂ ಕೆಳಕ್ಕೆ ಬೀಳುವುದಿಲ್ಲಎಂದು ಹೇಳಿತ್ತು.

No comments:

Advertisement