ಮಹಾರಾಷ್ಟ್ರದಲ್ಲಿ
ಕೋವಿಡ್ ಶಂಕಿತನ ಸಾವು
ನವದೆಹಲಿ:
ಮಹಾರಾಷ್ಟ್ರದ ಬಲ್ದಾನ ಜಿಲ್ಲೆಯಲ್ಲಿ ಕೊರೋನಾವೈರಸ್ ಸೋಂಕಿನ ಶಂಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೭೧ರ ಹರೆಯದ ವ್ಯಕ್ತಿ 2020 ಮಾರ್ಚ್ 14ರ ಶನಿವಾರ ಮಧ್ಯಾಹ್ನ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು.
ಈ
ವ್ಯಕ್ತಿ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಅವರು ಹೇಳಿದ್ದಾದರು.
ಸದರಿ
ವ್ಯಕ್ತಿ ಸೌದಿ ಅರೇಬಿಯಾದಿಂದ ವಾಪಸಾಗಿದ್ದರು ಮತ್ತು ಕೊರೋನಾವೈರಸ್ ಸೋಂಕು ತಗುಲಿದ ಗುಮಾನಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿ ತಿಳಿಸಿದೆ.
No comments:
Post a Comment