Monday, March 9, 2020

ಷೇರುಪೇಟೆ ಮಹಾಪತನ, ಕರಗಿದ ೭ ಲಕ್ಷ ಕೋಟಿ ರೂಪಾಯಿ

ಕೊರೋನಾವೈರಸ್ ಭೀತಿ, ತೈಲ ಬೆಲೆಗಳ ಕುಸಿತ
ಷೇರುಪೇಟೆ ಮಹಾಪತನ, ಕರಗಿದ   ಲಕ್ಷ ಕೋಟಿ ರೂಪಾಯಿ
ಮುಂಬೈ: ಭಾರತ ಸೇರಿದಂತೆ ವಿಶ್ವಾದ್ಯಂತ ಕ್ಷಿಪ್ರವಾಗಿ ಹರಡುತ್ತಿರುವ ಮಾರಕ ಕೋರೋನಾವೈರಸ್ ಭೀತಿಗೆ ಜಗತ್ತು ತತ್ತರಿಸುತ್ತಿರುವುದರ ಜೊತೆಗೇ ಸೌದಿ ಅರೇಬಿಯಾ ಆರಂಭಿಸಿದ ದರ ಸಮರದ ಫಲವಾಗಿ ಜಾಗತಿಕ ಮಾರುಕಟ್ಟೆಯಲ್ಲಿ 2020 ಮಾರ್ಚ್ 09ರ ಸೋಮವಾರ ತೈಲ ಬೆಲೆ ಕುಸಿಯಿತು. ಪರಿಣಾಮವಾಗಿ ಷೇರು ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ೧೯೪೧ ಅಂಶದಷ್ಟು ಕುಸಿದು ಹೂಡಿಕೆದಾರರ ಸುಮಾರು ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಕರಗಿಸಿತು.

ಹಗಲಿನಲ್ಲಿ ,೪೬೭ ಅಂಶ ಕುಸಿತದ ಬಳಿಕ ಮುಂಬೈ ಷೇರುಪೇಟೆಯಲ್ಲಿ ೩೦ ಷೇರುಗಳ ಸಂವೇದಿ ಸೂಚ್ಯಂಕವು ,೯೪೧.೬೭ ಅಂಶಗಳಷ್ಟು  ಅಥವಾ ಶೇಕಡಾ .೧೭ರಷ್ಟು ಇಳಿಕೆ ಕಂಡು ೩೫,೬೩೪.೯ರಲ್ಲಿ ಸ್ಥಿರಗೊಂಡಿತು.

ಅದೇ ರೀತಿ ಎನ್ಎಸ್ ನಿಫ್ಟಿ ೫೩೮ ಅಂಶ ಅಥವಾ ಶೇಕಡಾ .೯೦ ರಷ್ಟು ಕುಸಿದು ೧೦,೪೫೧.೪೫ ಕ್ಕೆ ತಲುಪಿತು.

ಒಎನ್ಜಿಸಿ ಶೇಕಡಾ ೧೬ ರಷ್ಟು ಕುಸಿತ ಕಂಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಎಸ್ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಆಟೋ ಅದನ್ನು ಅನುಸರಿಸಿದವು.

ಹೆವಿವೇಯ್ಟ್ ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ ೧೨ ಕ್ಕಿಂತ ಹೆಚ್ಚು ಮೌಲ್ಯ ನಷ್ಟ ಅನುಭವಿಸಿತು.
,೪೫೦ ಕೋಟಿ ರೂಪಾಯಿಗಳನ್ನು ತೊಡಗಿಸಿ ಯೆಸ್ ಬ್ಯಾಂಕಿನ ಶೇ ೪೯ ರಷ್ಟು ಪಾಲನ್ನು ಪಡೆದುಕೊಳ್ಳುವುದಾಗಿ ಪ್ರಕಟಿಸಿದ ಬಳಿಕ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಷೇರುಗಳು ಶೇಕಡಾ ಕ್ಕಿಂತಲೂ ಹೆಚ್ಚು ಕುಸಿದವು. ಮತ್ತೊಂದೆಡೆ, ಯೆಸ್ ಬ್ಯಾಂಕ್ ಷೇರುಗಳು ಶೇಕಡಾ ೩೧ರ ಆಸುಪಾಸಿನಲ್ಲಿ ಸುತ್ತಿದವು.

ವ್ಯಾಪಾರಿಗಳ ಪ್ರಕಾರ, ವೇಗವಾಗಿ ಹರಡುತ್ತಿರುವ ಕೊರೋನಾವೈರಸ್ ವಿಶ್ವ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಜಾಗತಿಕ ಮಾರುಕಟ್ಟೆ ಚಂಚಲವಾಗಿರುವುದರಿಂದ ದೇಶೀಯ ಷೇರುಗಳು ಭಾರೀ ಕುಸಿತ ಅನುಭವಿಸಿವೆ.

ಶಾಂಘೈ, ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೊದಲ್ಲಿನ ಪರಪ್ರದೇಶ ವ್ಯಾಪಾರ ಕಟ್ಟೆಗಳು (ಬೋರ್ಸ್ಗಳು) ಸೋಮವಾರ ಶೇಕಡಾ ರಷ್ಟು ಕುಸಿತ ದಾಖಲಿಸಿವೆ. ಐರೋಪ್ಯ ಸೂಚ್ಯಂಕಗಳು ಕೂಡಾ ಬೆಳಗಿನ ಅವಧಿಗಳಲ್ಲಿ ಶೇಕಡಾ ರಷ್ಟು ಕುಸಿದವು.

ಮುಂಚೂಣಿಯ ತೈಲ ರಫ್ತುದಾರ ರಾಷ್ಟವಾದ ಸೌದಿ ಅರೇಬಿಯಾವು ಇತರ ರಶ್ಯಾ ಸೇರಿದಂತೆ ತೈಲ ಉತ್ಪಾದಕ ರಾಷ್ಟ್ರಗಳ ಜೊತೆಗೆ ದರ ಸಮರ ಆರಂಭಿಸಿದ ಪರಿಣಾಮವಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲೂ ದರಗಳು ಕುಸಿದಿವೆ.

ಹಿಂದಿನ ದಿನ ಶೇಕಡಾ ೩೦ ರಷ್ಟು ಗಳಿಕೆ ಬಳಿಕ, ಬ್ರೆಂಟ್ ಕಚ್ಚಾ ತೈಲ ಭವಿಷ್ಯವು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು ಮತ್ತು ೧೮.೩೩ ಶೇಕಡಾ ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ ೩೬.೯೭ ಡಾಲರ್ಗಳಿಗೆ ತಲುಪಿತ್ತು.

ಕರೆನ್ಸಿ ರಂಗದಲ್ಲಿ ಭಾರತೀಯ ರೂಪಾಯಿ ಪ್ರತಿ ಅಮೆರಿಕನ್ ಡಾಲರ್ಗೆ ೧೩ ಪೈಸೆಯಷ್ಟು ಮೌಲ್ಯ ಕಳೆದುಕೊಂಡು ೭೪ ರೂಪಾಯಿಗೆ ಇಳಿಯಿತು.

ಸೌದಿ ಅರೇಬಿಯಾವು ರಶ್ಯಾಕ್ಕೆ  ಪೈಪೋಟಿ ನೀಡಲು ತೈಲ ದರ ಸಮರ ನಡೆಸಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ ೩೦ರಷ್ಟು ಇಳಿಕೆಯಾಗಿ ಬ್ಯಾರೆಲ್ಗೆ ೩೨.೧೧ ಡಾಲರ್ (ಅಂದಾಜು ,೩೭೪ ರೂಪಾಯಿ) ಆಗಿದೆ. ಷೇರುಪೇಟೆ ವಹಿವಾಟು ಆರಂಭದಿಂದ ಇಳಿಕೆಯಾದ ಸೂಚ್ಯಂಕ ಶೇ ೬ರಷ್ಟು (,೩೨೬.೩೬ ಅಂಶ) ಕುಸಿದು ೩೫,೨೫೦.೨೬ ಅಂಶಗಳಿಗೆ ಇಳಿದಿತ್ತು.

ರಾಷ್ಟ್ರೀಯ
ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ .೭೮ರಷ್ಟು (೬೨೯.೭೦ ಅಂಶ) ಕಡಿಮೆಯಾಗಿ ೧೫ ತಿಂಗಳಲ್ಲೇ ಅತ್ಯಂತ ಕನಿಷ್ಠ, ೧೦,೩೫೯.೭೫ ಅಂಶಗಳಿಗೆ ತಲುಪಿತು.
ಕಳೆದ ವಹಿವಾಟಿನಲ್ಲಿ ಸೂಚ್ಯಂಕ ೮೯೩.೯೯ ಅಂಶ ಕಡಿಮೆಯಾಗಿ ೩೭,೫೭೬.೬೨ ಅಂಶಕ್ಕೆ ಕುಸಿದಿತ್ತು. ನಿಫ್ಟಿ ೨೭೯.೫೫ ಅಂಶ ಇಳಿಕೆಯಾಗಿ ೧೦,೯೮೯.೪೫ ಅಂಶ ಮುಟ್ಟಿತ್ತು.

ಶುಕ್ರವಾರದ ಮಾಹಿತಿ ಪ್ರಕಾರ, ವಿದೇಶ ಸಾಂಸ್ಥಿಕ ಹೂಡಿಕೆದಾರರು ,೫೯೪.೮೪ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ,೫೪೩.೭೮ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಸೋಮವಾರ ಒಎನ್ ಜಿಸಿ ಷೇರು ಶೇ ೧೨ರಷ್ಟು ಕುಸಿಯುವ ಮೂಲಕ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿದೆ. ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಪವರ್ ಗ್ರಿಡ್, ಟಾಟಾ ಸ್ಟೀಲ್, ಎಲ್ ಅಂಡ್ ಟಿ, ಎಸ್ ಬಿಐ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಶೇ -೧೩ರಷ್ಟು ಇಳಿಕೆಯಾಗಿವೆ. ಅಲ್ಪ ಏರಿಕೆ ಕಂಡಿದ್ದ ಸನ್ ಫಾರ್ಮಾ ಸಹ ಶೇ ೨ರಷ್ಟು ಕುಸಿದಿದೆ. ಕಚ್ಚಾ ತೈಲ ದರ ಇಳಿಕೆಯಾಗಿರುವುದರಿಂದ, ಹೂಡಿಕೆದಾರರು ರಿಲಯನ್ಸ್ ಷೇರುಗಳ ಮಾರಾಟಕ್ಕೆ ಮುಂದಾದರು.

ವಿದೇಶಿ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿರುವುದು, ಕೋವಿಡ್-೧೯ ಭೀತಿ ಹೆಚ್ಚುತ್ತಿರುವುದು ಹಾಗೂ ಕಚ್ಚಾ ತೈಲ ದರ ಇಳಿಕೆಯಾಗಿರುವುದು ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮಾರಾಟ ಒತ್ತಡ ಉಂಟಾಗಿ ತಲ್ಲಣ ಸೃಷ್ಟಿಯಾಗಿದೆ. ಯೆಸ್ ಬ್ಯಾಂಕ್ ಸಂಬಂಧಿಸಿದ ಬಿಕ್ಕಟ್ಟು ಸಹ ದೇಶ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಉಂಟು ಮಾಡಿದೆ.

ಚೀನಾದ ಶಾಂಘೈ ಷೇರುಪೇಟೆ ಶೇಕಡಾ .೪೧ರಷ್ಟು ಇಳಿಕೆಯಾಗಿದೆ. ಹಾಂಕಾಂಗ್ ಷೇರುಪೇಟೆಯಲ್ಲಿ ಶೇ .೫೩, ಸೋಲ್ ಷೇರುಪೇಟೆ ಶೇ .೮೯ ಹಾಗೂ ಟೋಕಿಯೊ ಷೇರುಪೇಟೆ ಶೇ .೬೫ರಷ್ಟು ಕುಸಿದಿದ್ದು, ಇಡೀ ಏಷ್ಯಾ ಷೇರುಪೇಟೆ ಇಳಿಮುಖವಾಗಿತ್ತು.

ರಿಲಯನ್ಸ್ ಷೇರು ಶೇ ೧೩ ಕುಸಿತ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದುದರ ಪರಿಣಾಮ ಕಚ್ಚಾ ತೈಲ ಶೋಧ ಮತ್ತು ಸಂಸ್ಕರಣೆ ನಡೆಸುವ ಕಂಪನಿಗಳ ಷೇರುಗಳು ಮಹಾ ಕುಸಿತಕ್ಕೆ ಒಳಗಾದವು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರು ಶೇ ೧೨ ಮತ್ತು ಒಎನ್ಜಿಸಿ  ಷೇರು ಶೇ ೧೫ರಷ್ಟು ಇಳಿಮುಖವಾದವು.

ಜಾಮ್ ನಗರದಲ್ಲಿ  ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಶುದ್ಧೀಕರಣ ಘಟಕ ಮತ್ತು ಕೃಷ್ಣ ಗೋದಾವರಿ ತೀರದಲ್ಲಿ  ಕೆಜಿ-ಡಿ ಅನಿಲ ಶೋಧ ಘಟಕಗಳನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇಕಡಾ ೧೩.೦೨ರಷ್ಟು ಇಳಿಕೆ ಕಂಡಿತು. ಕಳೆದ ೧೦ ವರ್ಷಗಳಲ್ಲಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಕುಸಿತ ಇದಾಗಿದ್ದು, ಪ್ರತಿ ಷೇರು ಬೆಲೆ ,೧೦೫ ರೂಪಾಯಿಗೆ ತಲುಪಿತು.

ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ ಟಿಸಿಎಸ್ ಕಂಪನಿಗಿಂತಲೂ ಕಡಿಮೆಯಾಗಿದ್ದು, .೯೭ ಲಕ್ಷ ಕೋಟಿ ರೂಪಾಯಿ ತಲುಪಿದೆ. ರಿಲಯನ್ಸ್ ಷೇರುದಾರರು ಒಂದೇ ದಿನದಲ್ಲಿ .೦೮ ಲಕ್ಷ ಕೋಟಿ ರೂಪಾಯಿ ಸಂಪತ್ತು ಕಳೆದುಕೊಂಡಿದ್ದಾರೆ. ಟಿಸಿಎಸ್ ಮಾರುಕಟ್ಟೆ ಮೌಲ್ಯ .೩೧ ಲಕ್ಷ ಕೋಟಿ ರೂಪಾಯಿ ಇದೆ.

ಶೇ ೧೫ರಷ್ಟು ಇಳಿಕೆಯಾಗಿರುವ ಒಎನ್ ಜಿಸಿ ಷೇರು ಬೆಲೆ ೭೫.೦೫ ರೂಪಾಯಿಗೆ ಕುಸಿದಿದೆ.

No comments:

Advertisement