ಕೊರೋನಾ ವಿರುದ್ಧ ಚಿಕಿತ್ಸೆಗೆ ಮಲೇರಿಯಾ ನಿಗ್ರಹ ಔಷಧ: ಐಸಿಎಂಆರ್ ಅಸ್ತು
ನವದೆಹಲಿ: ಹೆಚ್ಚು ಅಪಾಯ ಎದುರಿಸುತ್ತಿರುವ ಕೋವಿಡ್ -೧೯ ರೋಗಿಗಳಿಗೆ ‘ಅಸಾಧಾರಣ ಸಂದರ್ಭಗಳಲ್ಲಿ’ ಚಿಕಿತ್ಸೆ ನೀಡಲು ಮಲೇರಿಯಾ-ವಿರೋಧಿ ಔಷಧsವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) 2020
ಮಾರ್ಚ್ 23ರ ಸೋಮವಾರ ಶಿಫಾರಸು ಮಾಡಿತು.
ಕೋವಿಡ್ -೧೯ ಚಿಕಿತ್ಸೆಯಲ್ಲಿ ಮಲೇರಿಯಾ-ವಿರೋಧಿ ಔಷಧವು ಪರಿಣಾಮಕಾರಿಯಾಗಿದೆಯೇ ಎಂಬ ಬಗ್ಗೆ ನಡೆಯುತ್ತಿರುವ ಜಾಗತಿಕ ಚರ್ಚೆ ಮತ್ತು ಜೈಪುರದಲ್ಲಿ ಕೋವಿಡ್ -೧೯ ರೋಗಿಗಳಿಗೆ ಚಿಕಿತ್ಸೆಯಾಗಿ ಎಚ್ಐವಿ ವಿರೋಧಿ ಹಾಗೂ ಮಲೇರಿಯಾ ವಿರೋಧಿ ಔಷಧ ಬಳಸಿದ್ದನ್ನು ಅನುಸರಿಸಿ ಕೆಲವು ಸಂದರ್ಭಗಳಲ್ಲಿ ಇದನ್ನು ಬಳಸಬಹುದು ಎಂದು ಶಿಫಾರಸು ಮಾಡಲಾಯಿತು.
ವಿದೇಶದಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಲು ಪ್ರತಿಜೀವಕ ಬಳಸುವ ಕಾರ್ಯವಿಧಾನವನ್ನು ಗಮನಿಸಿದರೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರಯೋಜನಕಾರಿಯಾಗಬಹುದು ಎಂಬುದಾಗಿ ಇತ್ತೀಚಿನ ಫ್ರೆಂಚ್ ಅಧ್ಯಯನವು ತೋರಿಸಿದೆ. ಆದಾಗ್ಯೂ, ಒಂದು ಔಷಧದ ಪರಿಣಾಮಕಾರಿತ್ವವನ್ನು ನಿರ್ಣಾಯಕವಾಗಿ ನಿರ್ಧರಿಸಲು ಹೆಚ್ಚು ದೊಡ್ಡ ಮಾಪಕಗಳ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಬೇಕಾಗಿರುವುದರಿಂದ ಈ ಸಂಶೋಧನೆಯು ಪ್ರಸ್ತುತ ಅತ್ಯಂತ ಸೀಮಿತ ಪ್ರಮಾಣದ್ದು ಮಾತ್ರ ಎಂದು ವೈಜ್ಞಾನಿಕ ಸಮುದಾಯವು ಎಚ್ಚರಿಕೆ ನೀಡಿದೆ.
ಈ ಚಿಕಿತ್ಸೆಯು ಸುಳ್ಳು ಭದ್ರತೆಯ ಪ್ರಜ್ಞೆಗೆ ಕಾರಣವಾಗಬಾರದು. ಕೈ ತೊಳೆಯುವುದು, ಮತ್ತು ೧ ಮೀಟರ್ ದೂರವನ್ನು ಕಾಯ್ದುಕೊಳ್ಳುವುದು ಮುಂತಾದ ಎಲ್ಲಾ ಮುನ್ನೆಚ್ಚರಿಕೆಯ ರಕ್ಷಣಾತ್ಮಕ ಕ್ರಮಗಳನ್ನು ಎಂದಿನಂತೆ ಅನುಸರಿಸಬೇಕು ಎಂದು ಮಂಡಳಿ ಹೇಳಿದೆ.
ಐಸಿಎಂಆರ್‌ನ ಮಹಾನಿರ್ದೇಶಕ ಡಾ.ಬಲರಾಮ ಭಾರ್ಗವ ಅವರು ಭಾನುವಾರ ಶಿಫಾರಸು ಕುರಿತು ಟಿಪ್ಪಣಿ ನೀಡಿದ್ದಾರೆ.
ಔಷಧವನ್ನು ಹೇಗೆ ಮತ್ತು ಯಾವಾಗ ಬಳಸಬೇಕು ಮತ್ತು ಯಾವ ವರ್ಗದ ರೋಗಿಗಳಿಗೆ ನೀಡಬಹುದು ಎಂಬ ಸಲಹೆಯೊಂದಿಗೆ ಟಿಪ್ಪಣಿಯನ್ನು ನೀಡಲಾಗಿದೆ. ಈ ಔಷಧವನ್ನು ಏಕೆ ಶಿಫಾರಸು ಮಾಡಲಾಗುತ್ತಿದೆ ಎಂಬುದಾಗಿ ಸಂಕ್ಷಿಪ್ತ ವಿವರಣೆಯನ್ನು ಸಹ ಇದು ಒದಗಿಸಿದೆ.
ನೋಂದಾಯಿತ ವೈದ್ಯಕೀಯ ವೈದ್ಯರ ಪ್ರಿಸ್ಕ್ರಿಪ್ಷನ್ ಮೇಲೆ ಮಾತ್ರ ಔಷಧವನ್ನು ನೀಡಬೇಕು ಎಂದು ಮಂಡಳಿ ಸೂಚಿಸಿದೆ.
"ರಾಷ್ಟ್ರೀಯ ಕಾರ್ಯಪಡೆಯಿಂದ ಶಿಫಾರಸು ಮಾಡಲಾದ ಪ್ರೋಟೋಕಾಲ್ ಅನ್ನು ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗಾಗಿ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಅನುಮೋದಿಸಿದ್ದಾರೆ" ಎಂದು ಅದು ಹೇಳಿದೆ.
ಪ್ರಯೋಗಾಲಯ ಅಧ್ಯಯನಗಳು ಮತ್ತು ಇನ್-ವಿವೋ ಅಧ್ಯಯನಗಳಲ್ಲಿ ಕೊರೊನಾವೈರಸ್ ವಿರುದ್ಧ ಔಷಧವು ಪರಿಣಾಮಕಾರಿ ಎಂದು ಐಸಿಎಂಆರ್ ಟಿಪ್ಪಣಿ ತಿಳಿಸಿದೆ,
No comments:
Post a Comment