Thursday, March 12, 2020

ಎನ್‌ಪಿಆರ್‌ಗೆ ಯಾವ ದಾಖಲೆಯೂ ಬೇಕಿಲ್ಲ: ರಾಜ್ಯಸಭೆಯಲ್ಲಿ ಶಾ ಸ್ಪಷ್ಟನೆ

ಎನ್‌ಪಿಆರ್‌ಗೆ ಯಾವ ದಾಖಲೆಯೂ
ಬೇಕಿಲ್ಲ: ರಾಜ್ಯಸಭೆಯಲ್ಲಿ ಶಾ ಸ್ಪಷ್ಟನೆ
ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್‌ಪಿಆರ್) ಪರಿಷ್ಕರಣೆಯ ಸಂದರ್ಭದಲ್ಲಿ ’ಯಾರನ್ನೂ ’ಡಿ ಅಥವಾ ಡೌಟ್ ಫುಲ್ (ಸಂಶಯಾಸ್ಪದ) ಎಂಬುದಾಗಿ ಗುರುತಿಸಲಾಗುವುದಿಲ್ಲ ಮತ್ತು ಯಾರು ಕೂಡಾ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿಶ್ ಶಾ 2020 ಮಾರ್ಚ್ 13ರ ಗುರುವಾರ  ರಾಜ್ಯಸಭೆಯಲ್ಲಿ ಸ್ಪಷ್ಟ ಪಡಿಸಿದರು.

ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯ ವೇಳೆ ವಿರೋಧಿ ನಾಯಕರು ಮಾಡಿದ ಆಪಾದನೆಗಳಿಗೆ ಉತ್ತರ ನೀಡಿದ ಶಾ, ’ಎನ್‌ಪಿಆರ್ ಪರಿಷ್ಕರಣೆ ಪ್ರಕ್ರಿಯೆಯ ವೇಳೆಯಲ್ಲಿ ತಾವು ಬಯಸಿದ ಮಾಹಿತಿಯನ್ನು ಮಾತ್ರ ಎಣಿಕೆದಾರರ ಬಳಿ ಘೋಷಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎಂದು ನುಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗೆಗಿನ ಎಲ್ಲ ಸಂಶಯಗಳನ್ನು ಕೂಡಾ ಸ್ಪಷ್ಟ ಪಡಿಸುವ ಕಾಲ ಬಂದಿದೆ ಮತ್ತು ಎಲ್ಲ ಪಕ್ಷಗಳೂ ಈಗ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಕೋರಿದರು. ೫೨ ಮಂದಿಯನ್ನು ಬಲಿತೆಗೆದುಕೊಂಡ ದೆಹಲಿ ಗಲಭೆಗಳಲ್ಲಿ ಶಾಮೀಲಾದ ೧೯೨೨ ಜನರನ್ನು ಗುರುತಿಸಲಾಗಿದೆ ಎಂದೂ ಅವರು ತಿಳಿಸಿದರು.

No comments:

Advertisement