ದೆಹಲಿಗೆ
ಅಪ್ಪಳಿಸಿದ ಭಾರೀ ಆಲಿಕಲ್ಲು ಮಳೆ, ಸಂಚಾರ ಅಸ್ತವ್ಯಸ್ತ
ನವದೆಹಲಿ:
ದೆಹಲಿಯ ಹಲವಡೆಗಳಲ್ಲಿ 2020 ಮಾರ್ಚ್
14ರ ಶನಿವಾರ ಮಧ್ಯಾಹ್ನ
ದಿಢೀರನೆ ಗುಡುಗು ಮಿಂಚು ಸಹಿತವಾದ ಆಲಿಕಲ್ಲಿನ ಭಾರೀ ಮಳೆ ಸುರಿಯಿತು. ಪರಿಣಾಮವಾಗಿ ರಾಷ್ಟ್ರ ರಾಜಧಾನಿಯ ಹಲವಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ರಾಷ್ಟ್ರದ
ರಾಜಧಾನಿಯಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣ ಉಂಟಾಗಿ ತಾಪಮಾನವು ಋತುವಿನ ಸರಾಸರಿಗಿಂತ ೧೬.೪ ಡಿಗ್ರಿ
ಸೆಲ್ಸಿಯಸ್ಗಿಂತ ಹೆಚ್ಚಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿತು.
ಬೆಳಗ್ಗೆ
೮.೩೦ಕ್ಕೆ ಶೇಕಡಾ ೮೮ರಷ್ಟು ಆರ್ದ್ರತೆಯ ಮಟ್ಟ ದಾಖಲಾಗಿತ್ತು.
"ದೆಹಲಿಯ
ಮಧ್ಯ ಭಾಗಗಳಲ್ಲಿ ತುಂಬಾ ಚಿಕ್ಕದಾದ, ಆದರೆ ತೀವ್ರವಾದ ಸಂವಹನ ಮೋಡವಿದೆ, ಇದರಿಂದಾಗಿ ಮುಂದಿನ ೨ ಗಂಟೆಗಳಲ್ಲಿ ಗುಡುಗು
ಮತ್ತು ಆಲಿಕಲ್ಲು ಸಹಿತವಾದ ಮಧ್ಯಮ
ಮಳೆಯಾಗುವ ಸಾಧ್ಯತೆಯಿದೆ. ಅದು ನಂತರ ಕಡಿಮೆಯಾಗುತ್ತದೆ’ ಎಂದು
ಭಾರತ ಹವಾಮಾನ ಇಲಾಖೆ (ಐಎಂಡಿ) ಟ್ವೀಟ್ ಮಾಡಿತ್ತು.
ಆಕಾಶವು
ಮೋಡಮಯವಾಗಿರುತ್ತದೆ ಮತ್ತು ಸಂಜೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿತ್ತು.
"ಗರಿಷ್ಠ
ತಾಪಮಾನವು ಸುಮಾರು ೨೭ ಡಿಗ್ರಿ ಸೆಲ್ಸಿಯಸ್ವರೆಗೆ ಏರಿ ನೆಲೆಗೊಳ್ಳುವ ಸಾಧ್ಯತೆಯಿದೆ" ಎಂದು ಹವಾಮಾನ ಅಧಿಕಾರಿಯೊಬ್ಬರು ಹೇಳಿದರು.
ಅಕಾಲಿಕ
ಮಳೆಯ ಫೋಟೋ, ವಿಡಿಯೋಗಳು ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. #ಡೆಲ್ಹಿರೈನ್ (#ದೆಹಲಿಮಳೆ) ಟ್ವಿಟರ್ನಲ್ಲಿ ಟಾಪ್ ಟ್ರೆಂಡಿಂಗ್ ಹ್ಯಾಶ್ಟ್ಯಾಗ್ಗಳಲ್ಲಿ ಒಂದಾಯಿತು.
"ಈ
ಹಿಂದೆಂದೂ ಇಂತಹ ಸ್ಥಿತಿಯನ್ನು ಈ ರೀತಿ ನೋಡಿಲ್ಲ"
ಎಂದು ಕೆಲವು ಟ್ವಿಟ್ಟರ್ ಬಳಕೆದಾರರು ಟ್ವಿಟರ್ನಲ್ಲಿ ಬರೆದು ಆಲಿಕಲ್ಲು ಮಳೆಯ ಚಿತ್ರಗಳನ್ನು ಅದಕ್ಕೆ ಸೇರಿಸಿದ್ದಾರೆ.
"#ಡೆಲ್ಹಿರೈನ್ಸ್
ಜಾಗತಿಕ ಸಂಕಷ್ಟದ ಸಮಯದಲ್ಲಿ ನಮಗೆ ಏಕಾಏಕಿ ಮಳೆ. ಕೆಟ್ಟ ಪರಿಸ್ಥಿತಿ. ಸ್ವರ್ಗವೇ ನಮ್ಮ ಮೇಲೆ ಕರುಣೆ ತೋರು’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದರು.
No comments:
Post a Comment