ಯೆಸ್
ಬ್ಯಾಂಕ್ ನೆರವಿಗೆ ಎಸ್ಬಿಐ: ರೂ. ೧೦,೦೦೦ ಕೋಟಿ
ಹೂಡಿಕೆ ಮಿತಿ
ಮುಂಬೈ:
ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕಿನ ಪುನಶ್ಚೇತನಕ್ಕೆ ಗರಿಷ್ಠ ೧೦ ಸಾವಿರ ಕೋಟಿ
ರೂಪಾಯಿಗಳವರೆಗಿನ ಹೂಡಿಕೆ
ಮಿತಿಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನಿಗದಿ ಪಡಿಸಿದೆ.
‘ಪುನಶ್ಚೇತನ
ಯೋಜನೆಯ ಕುರಿತಾಗಿ ನಮ್ಮ ಕಾನೂನು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ಅದು ಪೂರ್ಣಗೊಂಡ ಬಳಿಕ ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್ಬಿಐ) ನಮ್ಮ ಸಲಹೆ ಮತ್ತು ಪ್ರತಿಕ್ರಿಯೆ ನೀಡಲಾಗುವುದು. ಆರ್ಬಿಐ , ಬ್ಯಾಂಕಿಗೆ ವಿಧಿಸಿರುವ ೩೦ ದಿನಗಳ ಗಡುವು
ಮುಗಿಯುವುದರ ಒಳಗಾಗಿ ಯೋಜನೆಗೆ ಅನುಮತಿ ಪಡೆದು, ಜಾರಿಗೊಳಿಸಲು ಪ್ರಯತ್ನಿಸಲಾಗುವುದು’ ಎಂದು
ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ 2020 ಮಾರ್ಚ್ 07ರ ಶನಿವಾರ ತಿಳಿಸಿದರು.
‘ಪಾಲು
ಬಂಡವಾಳ ಖರೀದಿಸುವ ಸಂಬಂಧ ಒಕ್ಕೂಟವನ್ನು ರಚಿಸುವಂತೆ ಎಸ್ಬಿಐಗೆ ಹಲವು ಹೂಡಿಕೆದಾರರು ಕೇಳಿದ್ದಾರೆ. ಈ ಬಗ್ಗೆ ಚರ್ಚೆ
ನಡೆಯುತ್ತಿದೆ. ಶೇ ೪೯ರಷ್ಟು ಷೇರನ್ನು
ಎಸ್ಬಿಐ ಒಂದೇ ಖರೀದಿಸುವುದಾದರೆ ತಕ್ಷಣಕ್ಕೆ ೨,೪೫೦ ಕೋಟಿ
ರೂಪಾಯಿ ಹೂಡಿಕೆಯ ಅಗತ್ಯವಿದೆ. ಯೆಸ್ ಬ್ಯಾಂಕಿನ ರಕ್ಷಣೆಗಾಗಿ ಮಾಡಲಿರುವ ಹೂಡಿಕೆಯಿಂದ ಎಸ್ಬಿಐನ ಬಂಡವಾಳ ಲಭ್ಯತೆ ಪ್ರಮಾಣದ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ’ ಎಂದು
ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
No comments:
Post a Comment