Saturday, March 7, 2020

ಯೆಸ್ ಬ್ಯಾಂಕ್ ರಕ್ಷಣಾ ಯೋಜನೆಯೇ ವಿಲಕ್ಷಣ: ಚಿದಂಬರಂ


ಯೆಸ್ ಬ್ಯಾಂಕ್ ರಕ್ಷಣಾ ಯೋಜನೆಯೇ ವಿಲಕ್ಷಣ: ಚಿದಂಬರಂ
ನವದೆಹಲಿ: ಬಿಕ್ಕಟ್ಟಿನಲ್ಲಿ ಸಿಲುಕಿರುವ ಯೆಸ್ ಬ್ಯಾಂಕ್ ರಕ್ಷಣೆಗೆ ರೂಪಿಸಲಾಗಿರುವ ಯೋಜನೆವಿಲಕ್ಷಣವಾದುದಾಗಿದ್ದು,  ಆರ್ಥಿಕ ದುಸ್ಥಿತಿಗೆ ಹೊಣೆಗಾರರೇ ಇಲ್ಲ ಎಂದು 2020 ಮಾರ್ಚ್  07ರ ಶನಿವಾರ ಟೀಕಿಸಿದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರುಬಿಜೆಪಿ ನೇತೃತ್ವದ ಸರ್ಕಾರವು ೨೦೧೪ರಿಂದೀಚೆಗೆ ಬ್ಯಾಂಕಿನ ಸಾಲವು ಪ್ರತಿರ್ಷ ಶೇಕಡಾ ೩೫ರಷ್ಟು ಏರಲು ಅವಕಾಶ ನೀಡಿದ್ದು ಇದು ದೂರದೃಷ್ಟಿಯ ಸಂಪೂರ್ಣ ವೈಫಲ್ಯವಾಗಿದೆ ಎಂದು ದೂರಿದರು.

ಯೋಜನೆಯ ಪ್ರಕಾರ ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ,೪೫೦ ಕೋಟಿ ರೂಪಾಯಿಗಳನ್ನು ಪುನರ್ರಚನಾ ಬಂಡವಾಳವಾಗಿ ಹೂಡಿಕೆ ಮಾಡಿ ರೂಪಾಯಿ ಮುಖಬೆಲೆಯ ಬ್ಯಾಂಕಿನ  ಶೇಕಡಾ ೪೯ರಷ್ಟು ಷೇರುಗಳನ್ನು ತಲಾ ೧೦ ರೂಪಾಯಿಗಳಂತೆ ಪಡೆಯಲಿದೆ. ಬ್ಯಾಂಕಿನ ಬೆಲೆ ಶೂನ್ಯಕ್ಕೆ ಇಳಿದಿರುವಾಗ ಹೀಗೆ ಮಾಡುವುದು ವಿಲಕ್ಷಣವಾದ ಕ್ರಮ ಎಂದು ಚಿದಂಬರಂ ಹೇಳಿದರು.

ರಕ್ಷಣಾ ಕೆಲಸಕ್ಕೆ ಎಸ್ಬಿಐ ಸ್ವಯಂ ಸ್ಫೂರ್ತಿಯಿಂದ ಮುಂದಾಗಿದೆ ಎಂದು ನಾನು ಭಾವಿಸುವುದಿಲ್ಲ. ಐಡಿಬಿಐ (ಬ್ಯಾಂಕಿಗೆ) ಎಲ್ ಐಸಿ (ಜೀವ ವಿಮಾ ನಿಗಮ) ನೆರವಾದಂತೆ ಇವೆಲ್ಲವೂ ಆದೇಶ ಪಾಲನೆಯ ಕೆಲಸಗಳಂತೆ ಕಾಣುತ್ತಿವೆ ಎಂದು ಮಾಜಿ ವಿತ್ತ ಸಚಿವರು ನುಡಿದರು.

ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣಗಳನ್ನು ಹೇರಿದ ಬಳಿಕ ಯೆಸ್ ಬ್ಯಾಂಕ್ ಪುನಃಶ್ಚೇತನಕ್ಕಾಗಿ ರೂಪಿಸಲಾಗಿರುವ ಪುನರ್ರಚನಾ ಯೋಜನೆ ಬಗ್ಗೆ ವಿವರಿಸುತ್ತಾ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಅವರು ವಿರೋಧ ಪಕ್ಷಗಳನ್ನು ಅವುಗಳ ಟೀಕೆಗಾಗಿ ತರಾಟೆಗೆ ತೆಗೆದುಕೊಂಡಿದ್ದರು. ಬ್ಯಾಂಕ್ ಬಿಕ್ಕಟ್ಟು ಕಾಂಗ್ರೆಸ್ ಕಣ್ಗಾವಲಿನಲ್ಲಿಯೇ ಜನಿಸಿತ್ತು ಎಂದು ಅವರು ಪ್ರತಿಪಾದಿಸಿದ್ದರು. ಚಿದಂಬರಂ ಅವರುಸ್ವಯಂ ಘೋಷಿತ ಸಮರ್ಥ ವೈದ್ಯಎಂಬುದಾಗಿ ಛೇಡಿಸಿದ್ದ ಸಚಿವೆ ಅವರ ಇತಿಹಾಸದ ದಾಖಲೆಯನ್ನು ಪ್ರಶ್ನಿಸಿದ್ದರು.

ನಿರ್ಮಲಾ ಸೀತಾರಾಮನ್ ಅವರಿಗೆ ಶನಿವಾರ ಎದಿರೇಟು ನೀಡಿದ ಚಿದಂಬರಂಕೆಲವೊಮ್ಮ ವಿತ್ತ ಸಚಿವರ ಮಾತುಗಳನ್ನು ಆಲಿಸುತ್ತಿದ್ದರೆ ನನಗೆ ಯುಪಿಎ (ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ) ಈಗಲೂ ಅಧಿಕಾರದಲ್ಲಿ ಇದೆಯೇನೋ ಎಂಬ ಭಾವನೆ ಬರುತ್ತದೆ. ಬಹುಶಃ ನಾನು ವಿತ್ತ ಸಚಿವನಾಗಿದ್ದು, ಆಕೆ ವಿರೋಧ ಪಕ್ಷದಲ್ಲಿ ಇದ್ದಾರೆ ಎಂದು ಅನಿಸುತ್ತದೆ  ಎಂದು ಚುಚ್ಚಿದರು.

೨೦೧೪ರಲ್ಲಿ ೫೫,೬೩೩ ಕೋಟಿ ರೂಪಾಯಿಗಳಷ್ಟಿದ್ದ ಸಾಲ ೨೦೧೯ರಲ್ಲಿ ,೪೧,೪೯೯ ಕೋಟಿ ರೂಪಾಯಿಗಳಿಗೆ ಏರಿದ್ದಕ್ಕೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವನ್ನೇ ನೇರವಾಗಿ ದೂಷಿಸಿದ ಚಿದಂಬರಂ, ’ಖಂಡಿತವಾಗಿ ನೀವು ಕೆಟ್ಟ ನಿರ್ವಹಣೆ ಮಾಡಿದ್ದೀರಿ, ನೀವು ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟಿಗೆ ಹಾರುತ್ತಿದ್ದೀರಿಎಂದು ಹೇಳಿದರು.

ಆರ್ ಬಿಐ ಮತ್ತು ಸರ್ಕಾರದ ಮೇಲುಸ್ತುವಾರಿಯ ಹೊರತಾಗಿಯೂ ಸಾಲವನ್ನು ಪ್ರತಿವರ್ಷ ಶೇಕಡಾ ೩೫ರ ದರದಲ್ಲಿ ಏರಲು ಅವಕಾಶ ನೀಡಲಾಗಿದೆ. ೨೦೧೬-೧೭ ಮತ್ತು ೨೦೧೭-೧೮ರಲ್ಲಿ ನೋಟು ಅಪಮೌಲ್ಯದ ಬಳಿಕದ ಎರಡು ವರ್ಷಗಳಲ್ಲಿನ ಆರ್ಥಿಕ ಕುಸಿತವನ್ನೂ ಗಮನದಲ್ಲಿ ಇಟ್ಟುಕೊಳ್ಳಿಎಂದೂ ಚಿದಂಬರಂ ಬೊಟ್ಟು ಮಾಡಿದರು.

೨೦೧೪ರ ಮಾರ್ಚ್ ಬಳಿಕ ಹೊಸ ಸಾಲಗಳಿಗೆ ಯಾರು ಅನುಮತಿ ನೀಡಿದರು? ಯೆಸ್ ಬ್ಯಾಂಕ್ ಸಾಲ ನೀಡಿಕೆಯ ಭರಾಟೆಯಲ್ಲಿತ್ತು ಎಂಬುದು ಆರ್ಬಿಐ ಮತ್ತು ಸರ್ಕಾರಕ್ಕೆ ಅರಿವಿರಲಿಲ್ಲವೇ? ಅದು ಬ್ಯಾಂಕಿಂಗ್ ಅಲ್ಲ, ಸಮುದ್ರಗಳ್ಳತನವಾಗಿತ್ತು. ಆರ್ಬಿಐ ಅಥವಾ ಸರ್ಕಾರದ ಯಾರೊಬ್ಬರೂ ಪ್ರತಿವರ್ಷದ ಕೊನೆಯಲ್ಲಿ ಬ್ಯಾಂಕ್ ಸಿದ್ಧಪಡಿಸುವ ಬ್ಯಾಲೆನ್ಸ್ ಶೀಟ್ನ್ನು ಓದಲಿಲ್ಲವೇ? ೨೦೧೯ರ ಮಾರ್ಚ್ ತಿಂಗಳಲ್ಲಿ ತನ್ನ ಮೊದಲ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ನಷ್ಟದ ವರದಿ ಮಾಡಿದಾಗ ಎಚ್ಚರಿಕೆಯ ಗಂಟೆಯನ್ನು ಏಕೆ ಮೊಳಗಿಸಲಿಲ್ಲ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದರು.

ಯೆಸ್ ಬ್ಯಾಂಕಿನ ದುರವಸ್ಥೆಯು ಬಿಜೆಪಿ ಸರ್ಕಾರದ ಕಣ್ಗಾವಲಿನಲ್ಲಿ ನಡೆದ ಆರ್ಥಿಕ ಸಂಸ್ಥೆಗಳ ದುರುಪಯೋಗದ ಭಾಗ ಮಾತ್ರ ಎಂದು ಅವರು ನುಡಿದರು.

ಬ್ಯಾಂಕಿನ ದುಸ್ಥಿತಿಗೆ ಹೊಣೆಗಾರರನ್ನು ಪತ್ತೆ ಹಚ್ಚಿ ಉತ್ತರದಾಯಿತ್ವ ನಿಗದಿ ಪಡಿಸಬೇಕು ಎಂದು ಅವರು ಆಗ್ರಹಿಸಿದರು.

ನಿರಂತರ ಹಣಕಾಸು ಸ್ಥಿತಿಯ ಕುಸಿತದ ಹಲವಾರು ತಿಂಗಳುಗಳ ಬಳಿಕ ಯೆಸ್ ಬ್ಯಾಂಕ್ ವಹಿವಾಟಿನ ಮೇಲೆ ಗುರುವಾರ ನಿರ್ಬಂಧಗಳನ್ನು ವಿಧಿಸಿದ ಆರ್ ಬಿಐ ಬ್ಯಾಂಕಿನ ಆಡಳಿತ ಮಂಡಳಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಹಣ ಹಿಂಪಡೆಯಲು ಖಾತೆಯೊಂದಕ್ಕೆ ಒಂದು ತಿಂಗಳ ಅವಧಿಗೆ ೫೦,೦೦೦ ರೂಪಾಯಿಗಳ ಮಿತಿಯನ್ನು ವಿಧಿಸಿದೆ.

ಆರ್ಬಿಐ ಕ್ರಮದ ಬಳಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು ಎಷ್ಟು ಕಡಿಮೆಯಾದರೂ ಸರಿ ಅಷ್ಟು ಹಣ ಪಡೆಯಲು ಗ್ರಾಹಕರು ಎಟಿಎಂಗಳಿಗೆ ಮುಗಿ ಬೀಳುತ್ತಿದ್ದಾರೆ.

No comments:

Advertisement