ವಾಹ್ ಫ್ಲಾಮಿಂಗೋ
ವಾಹ್..!
(ಇದು ಸುವರ್ಣ
ನೋಟ)
ಫ್ಲಾಮಿಂಗೋ ಪಕ್ಷಿಗಳು ಅಮೆರಿಕ, ಆಫ್ರಿಕಾ, ಕ್ಯಾರಿಬಿಯನ್, ಯುರೋಪ್ ಮತ್ತು ಏಷ್ಯಾದಲ್ಲಿ ಕಂಡು ಬರುವ ವಿಶಿಷ್ಠವಾದ ಪಕ್ಷಿಗಳು. ಇವುಗಳಲ್ಲಿ ನಾಲ್ಕು ಪ್ರಭೇದಗಳಿದ್ದು, ಎರಡು ಪ್ರಭೇದಗಳು ಏಷ್ಯಾ, ಯುರೋಪ್ ಮತ್ತು ಆಫ್ರಿಕಾದಲ್ಲಿ ಕಂಡು ಬರುತ್ತವೆ.
ಫ್ಲಾಮಿಂಗೋ ಪಕ್ಷಿಗಳು ಸಾಮಾನ್ಯವಾಗಿ ವಲಸೆ ಸ್ವಭಾವದ ಪಕ್ಷಿಗಳಲ್ಲ ಎನ್ನಲಾಗುತ್ತದೆ. ವಲಸೆ ಹೋದರೂ ಯಾವುದಾದರೂ ಒಂದು ಕಡೆ ತಂಗಿ ಮೊಟ್ಟ್ಟೆ ಇಟ್ಟು ಮರಿಗಳಾದ ಮೇಲೆ ಅವುಗಳೊಂದಿಗೆ ಬೇರೆಡೆಗೆ ವಲಸೆ ಹೊರಡುತ್ತವೆ. ಮೋಡರಹಿತ ಆಕಾಶದಲ್ಲಿ ರಾತ್ರಿಯ ತಂಪಿನಲ್ಲಿ ಹಾರುವುದು ಅವುಗಳಿಗೆ ಇಷ್ಟ.
ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ವಲಸೆ ಹೊರಡುವ ಹಕ್ಕಿಗಳು ಗಂಟೆಗೆ 50-60 ಕಿಮೀ ವೇಗದಲ್ಲಿ ಹಾರುತ್ತಾ ಒಂದು ರಾತ್ರಿಯಲ್ಲಿ ಸುಮಾರು 600 ಕಿಮೀ (373 ಮೈಲು) ದೂರ ಸಾಗಬಲ್ಲವು.
ಕಾಡಿನಲ್ಲಿ 20-30 ವರ್ಷ ಬದುಕುವ ಫ್ಲಾಮಿಂಗೋ ಪಕ್ಷಿಗಳು ಪಕ್ಷಿ ಸಂಗ್ರಹಾಲಯಗಳಲ್ಲಿ 50 ವರ್ಷ ಬದುಕುತ್ತವೆ. ಫ್ಲಾಮಿಂಗೋಗಳನ್ನು ತಿನ್ನುವವರಿದ್ದಾರೆ. ಆದರೆ ಅಮೆರಿಕದಲ್ಲಿ ಇವುಗಳನ್ನು ಕೊಲ್ಲುವುದು, ತಿನ್ನುವುದಕ್ಕೆ ನಿಷೇಧವಿದೆ. ಅಮೆರಿಕದ ಕಾನೂನಿನ ಪ್ರಕಾರ ವಲಸೆ ಹಕ್ಕಿಗಳಿಗೆ ರಕ್ಷಣೆ ಇದೆ.ನೋಡಲು ಬಾತುಕೋಳಿಗಳಂತೆ ಕಾಣುವ ಈ ಫ್ಲಾಮಿಂಗೋ ಪಕ್ಷಗಳು ಕರ್ನಾಟಕದ ಬಾಗಲಕೋಟೆ ಸೇರಿದಂತೆ ವಿವಿಧ ಕಡೆಗಳಿಗೆ ಚಳಿಗಾಲದಲ್ಲಿ ಗುಜರಾತಿನ ಕಡೆಯಿಂದ ವಲಸೆ ಬಂದು ಮಳೆಗಾಲಕ್ಕೆ ಮುನ್ನ ಏಪ್ರಿಲ್ ತಿಂಗಳಲ್ಲಿ ತಮಿಳುನಾಡಿನ ಕಡೆಗೆ ವಲಸೆ ಹೋಗುತ್ತವೆ.
ಬಾಗಲಕೋಟೆಯ
ಹಿನ್ನೀರಿಗೆ ಕೆಲ ಸಮಯದ ಹಿಂದೆ ಫ್ಲಾಮಿಂಗೋ ಪಕ್ಷಿಗಳ
ದಂಡು ಬಂದಾಗ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು
ಕ್ಲಿಕ್ಕಿಸಿದ್ದು ಹೀಗೆ.
ಸಮೀಪದೃಶ್ಯದ ಅನುಭವಕ್ಕಾಗಿ ಚಿತ್ರಗಳನ್ನು ಕ್ಲಿಕ್ಕಿಸಿ.
No comments:
Post a Comment