ಭಾರತಕ್ಕೆ ಚೀನೀ ವೈದ್ಯಕೀಯ ಸಾಮಗ್ರಿ, ಇನ್ನೂ ೨೦ ವಿಮಾನ ಸರಕು ನಿರೀಕ್ಷೆ
ನವದೆಹಲಿ: ಚೀನಾವು ಭಾರತಕ್ಕೆ ೨೪ ವಿಮಾನಗಳಷ್ಟು ಕೋವಿಡ್ -೧೯ಕ್ಕೆ ಸಂಬಂಧಿಸಿದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ್ದು, ಮುಂದಿನ ವಾರ ಚೀನಾದ ಕಂಪನಿಗಳು ೨೦ ವಿಮಾನಗಳಷ್ಟು ವೈದ್ಯಕೀಯ ಸಾಮಗ್ರಿಗಳ ಸರಕನ್ನು ಭಾರತಕ್ಕೆ ಕಳುಹಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು 2020 ಏಪ್ರಿಲ್ 20ರ ಸೋಮವಾರ ತಿಳಿಸಿದರು.
ಏಪ್ರಿಲ್ ೨೧ ಮತ್ತು ೨೭ ರ ನಡುವಿನ ಅವಧಿಯಲ್ಲಿ ಈ ವಿಮಾನಗಳಲ್ಲಿ ವೈದ್ಯಕೀಯ ಸಾಮಗ್ರಿ ರವಾನೆಯ ವಿನಂತಿಯನ್ನು ಚೀನಾದ ನಾಗರಿಕ ವಿಮಾನಯಾನ ಆಡಳಿತದ ಮುಂದೆ ಇರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಭಾರತೀಯ ಕಂಪೆನಿಗಳ ಮೇಲೆ ನೆರೆರಾಷ್ಟ್ರವು ಸ್ವಾಧೀನತೆ ಸಾಧಿಸದಂತೆ ಭಾರತವು ನಿರ್ಬಂಧಗಳನ್ನು ವಿಧಿಸಿದ್ದರ ಹೊರತಾಗಿಯೂ ಕೋವಿಡ್ -೧೯ರ ವಿರುದ್ಧದ ಸಮರದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ ಮುಂದುವರೆಸುವ ಸಾಧ್ಯತೆಗಳನ್ನು ಈ ಬೆಳವಣಿಗೆಯು ತೆರೆದಿಟ್ಟಿದೆ.
ಏಪ್ರಿಲ್ ೪ ರಿಂದೀಚೆಗೆ ಕಳೆದ ಎರಡು ವಾರಗಳಲ್ಲಿ, ಶಾಂಘೈ, ಗುವಾಂಗ್ಜೋವು, ಶೆನ್ಜೆನ್, ಕ್ಸಿಯಾನ್ ಮತ್ತು ಹಾಂಕಾಂಗ್ನಿಂದ ಸುಮಾರು ೨೪ ವಿಮಾನಗಳ ಹಾರಾಟದಲ್ಲಿ ೩೯೦ ಟನ್ ವೈದ್ಯಕೀಯ ಸಾಮಗ್ರಿಗಳನ್ನು ಭಾರತದತ್ತ ಕಳುಹಿಸಲಾಗಿತ್ತು.
ಇವುಗಳಲ್ಲಿ ಆರ್ಟಿ-ಪಿಸಿಆರ್ ಪರೀಕ್ಷಾ ಕಿಟ್ಗಳು, ತ್ವರಿತ ಪ್ರತಿಕಾಯ ಪರೀಕ್ಷಾ ಕಿಟ್ಗಳು, ಥರ್ಮಾಮೀಟರ್ಗಳು, ವೈಯಕ್ತಿಕ ರಕ್ಷಣಾ ಸಾಧನಗಳು ಸೇರಿವೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಇಂಪೀರಿಯಲ್ ಲೈಫ್ ಸೈನ್ಸಸ್, ಎಚ್ಎಲ್ಎಲ್, ಮ್ಯಾಟ್ರಿಕ್ಸ್ ಲ್ಯಾಬ್ಸ್, ಇನ್ವೆಕ್ಸ್ ಹೆಲ್ತ್ಕೇರ್, ಮ್ಯಾಕ್ಸ್ ಮತ್ತು ರಿಲಯನ್ಸ್, ಟಾಟಾ, ಅದಾನಿ ಗುಂಪಿನ ಕಂಪನಿಗಳಿಗೆ ಈ ಸರಕುಗಳು ಬಂದವು. ಈ ಪಟ್ಟಿಯಲ್ಲಿ ಕರ್ನಾಟಕ, ಅಸ್ಸಾಂ, ತಮಿಳುನಾಡು ಮತ್ತು ರಾಜಸ್ಥಾನ ಈ ನಾಲ್ಕು ರಾಜ್ಯ ಸರ್ಕಾರಗಳೂ ಇದ್ದವು.
ಕಳೆದ ವಾರ ಎರಡು ಸರಕು ವಿಮಾನಗಳಲ್ಲಿ ಪಡೆದ ೬೫೦,೦೦೦ ಪರೀಕ್ಷಾ ಕಿಟ್ಗಳನ್ನು ಚೀನಾದಿಂದ ರವಾನಿಸಲಾಗಿದೆ. ಚೀನಾದ ಕಂಪೆನಿಗಳು ಸುಮಾರು ೧೫ ಮಿಲಿಯನ್ ಪಿಪಿಇ ಕಿಟ್ಗಳಿಗೆ ಮತ್ತು ೧.೫ ಮಿಲಿಯನ್ ಕ್ಷಿಪ್ರ ಪರೀಕ್ಷಾ ಕಿಟ್ಗಳಿಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಒಪ್ಪಂದ ಮಾಡಿಕೊಂಡಿವೆ ಎಂದು ಅಧಿಕಾರಿಗಳು ಆಗ ಹೇಳಿದ್ದರು.
ಭಾರತದ ಕೋವಿಡ್ -೧೯ ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಅನುಕೂಲವಾಗುವಂತೆ ಮತ್ತು ಔಷಧೇ ಉತ್ಪಾದನಾ ಪೂರೈPಗೆ ಅವಕಾಶ ನೀಡಿರುವುದು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ಚೀನಾಕ್ಕೆ ನೀಡಲಾಗಿರುವ ಅತ್ಯುತ್ತಮ ಸಂಕೇತ ಎಂದು ಚೀನಾzಲ್ಲಿನ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಕಳೆದ ವಾರ ಹೇಳಿದ್ದರು.
ನೆರೆಯ ದೇಶದಲ್ಲಿ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ ಭಾರತವು ಚೀನಾದ ಕೊರೋನವೈರಸ್ ಪೀಡಿತ ನಗರವಾದ ವುಹಾನ್ಗೆ ವಿಮಾನ ಮೂಲಕ ವೈದ್ಯಕೀಯ ಉಪಕರಣಗಳನ್ನು ಕಳುಹಿಸಿತ್ತು.
No comments:
Post a Comment