Monday, April 20, 2020

ಕೋವಿಡ್-೧೯: ಸ್ಥಿತಿ ಸುಧಾರಣೆ: ಈಗ ೭.೫ ದಿನಕ್ಕೊಮ್ಮೆ ದುಪ್ಪಟ್ಟು

ಕೋವಿಡ್-೧೯: ಸ್ಥಿತಿ ಸುಧಾರಣೆ: ಈಗ . ದಿನಕ್ಕೊಮ್ಮೆ ದುಪ್ಪಟ್ಟು
ಕೇರಳ ಅತ್ಯುತ್ತಮ, ೭೨. ದಿನಕ್ಕೊಮ್ಮೆ ಸೋಂಕು ಎರಡುಪಟ್ಟು
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ (ಕೋವಿಡ್ -೧೯) ಸೋಂಕಿನ ದುಪ್ಪಟ್ಟು ದರವು (ಡಬ್ಲಿಂಗ್ ರೇಟ್) . ದಿನಗಳಿಗೆ ಸುಧಾರಿಸಿದೆ ಎಂದು ಕೇಂದ್ರ ಸರ್ಕಾರವು  2020 ಏಪ್ರಿಲ್ 20ರ ಸೋಮವಾರ ಪ್ರಕಟಿಸಿತು.

ಭಾರತದ ಕೋವಿಡ್-೧೯ ದುಪ್ಪಟ್ಟು ದರವು ಸುಧಾರಿಸಿದೆ. ರಾಷ್ಟ್ರವ್ಯಾಪಿ ದಿಗ್ಬಂಧನಕ್ಕಿಂತ ಮೊದಲು . ದಿನಗಳಿಗೆ ದುಪ್ಪಟ್ಟಾಗುತ್ತಿದ್ದ ಸೋಂಕು ಈಗ . ದಿನಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರಾಡಳಿತ ಪ್ರದೇಶ - ದೆಹಲಿ ಮತ್ತು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಛತ್ತೀಸ್ ಗಢ, ತಮಿಳುನಾಡು ಹಾಗೂ ಬಿಹಾರ ಎಂಟು ರಾಜ್ಯಗಳಲ್ಲಿ ೨೦ಕ್ಕೂ ಕಡಿಮೆ ದಿನಗಳಿಗೆ ಒಮ್ಮೆ ಸೋಂಕು ದುಪ್ಪಟ್ಟಾಗುತ್ತಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಅಸ್ಸಾಂ, ಉತ್ತರಾಖಂಡ ಮತ್ತು ಲಡಾಖ್ನಲ್ಲಿ ಸೋಂಕು ೨೦ರಿಂದ ೩೦ ದಿನಗಳ ನಡುವಣ ಅಂತರದಲ್ಲಿ ದುಪ್ಪಟ್ಟಾಗುತ್ತಿದೆ ಎಂದು ಅಗರವಾಲ್ ವಿವರಿಸಿದರು.

ಒಡಿಶಾದಲ್ಲಿ ೩೯. ದಿನಗಳಿಗೆ ಒಮ್ಮೆ ಸೋಂಕು ದುಪ್ಪಟ್ಟಾಗುತ್ತಿದ್ದರೆ, ಕೇರಳದ ಸ್ಥಿತಿ ಅತ್ಯುತ್ತಮವಾಗಿದ್ದು ಅಲ್ಲಿ ೭೨. ದಿನಗಳಿಗೆ ಒಮ್ಮೆ ಸೋಂಕು ದುಪ್ಪಟ್ಟಾಗುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರವು ಕೋವಿಡ್-೧೯ರ ,೫೫೩ ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸಿದ್ದು, ದೇದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ೧೭,೨೬೫ಕ್ಕೆ ಏರಿದೆ. ಒಟ್ಟು ೫೪೩ ಸಾವುಗಳು ದಾಖಲಾಗಿವೆ. ಕಳೆದ ೨೪ ಗಂಟೆಗಳಲ್ಲಿ ೩೬ ಮಂದಿ ಮೃತರಾಗಿದ್ದಾರೆ ಎಂದು ಅಗರವಾಲ್ ನುಡಿದರು.

,೫೪೬ ಮಂದಿ ಈವರೆಗೆ ಗುಣಮುಖರಾಗಿದ್ದಾರೆ. ಅಂದರೆ ಚೇತರಿಕೆಯ ದರ ಶೇಕಡಾ ೧೪.೭೫ಕ್ಕೆ ಏರಿದೆ. ಕಳೆದ ೧೪ ದಿನಗಳಲ್ಲಿ ೫೯  ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಅಧಿಕಾರಿ ಹೇಳಿದರು.

ಪುದುಚೆರಿಯ ಮಾಹೆ, ಕರ್ನಾಟಕದ ಕೊಡಗು ಮತ್ತು ಉತ್ತರಾಖಂಡದಲ್ಲಿನ ಗಢವಾಲದ ಪೌರಿಯಲ್ಲಿ ಕಳೆದ ೨೮ ದಿನಗಳಲ್ಲಿ ಯಾವುದೇ ಕೊರೋನಾವೈರಸ್ ಪ್ರಕರಣ ವರದಿಯಾಗಿಲ್ಲ. ಕಳೆದ ೧೪ ದಿನಗಳಲ್ಲಿ ಯಾವುದೇ ಪ್ರಕರಣ ವರದಿಯಾಗದ ಜಿಲ್ಲೆಗಳ ಸಂಖ್ಯೆ ೫೯ಕ್ಕೆ ಏರಿದೆ. ಗೋವಾ ಕೋವಿಡ್ ಮುಕ್ತ ರಾಜ್ಯವಾಗಿದೆ ಎಂದು ಅಗರವಾಲ್ ಹೇಳಿದರು.

ಶೇಕಡಾ ೮೦ರಷ್ಟು ಕೊರೋನಾವೈರಸ್ ರೋಗಿಗಳು ರೋಗ ಲಕ್ಷಣ ರಹಿತರು ಅಥವಾ ಅತ್ಯಂತ ಸ್ವಲ್ಪ ಲಕ್ಷಣ ಉಳ್ಳವರು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಮಣ್ ಗಂಗಾಖೇಡ್ಕರ್  ವಿವರಿಸಿದರು.

ಭಾರತದ ಸಾಧನೆ
ಕೊರೊನಾವೈರಸ್  ವಿರುದ್ಧದ ಹೋರಾಟದಲ್ಲಿ ಭಾರತ ದಿನದಿಂದ ದಿನಕ್ಕೆ ಉತ್ತಮ ಸಾಧನೆ ತೋರುತ್ತಿದೆ. ಕೊರೊನಾ ಚಿಕಿತ್ಸೆಗೆ ಸಂಬಂಧಿಸಿ ದೇಶದಲ್ಲಿನ ಆರೋಗ್ಯ ಸೌಲಭ್ಯಗಳೂ ಹೆಚ್ಚುತ್ತಿವೆ. ಸಂಬಂಧ ಕೇಂದ್ರ ಸರ್ಕಾರ ಏಪ್ರಿಲ್ ೧೭ರವರೆಗಿನ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ದೇಶಾದ್ಯಂತ ಇದೀಗ ,೧೪೪ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು .೭೩ ಲಕ್ಷ ಐಸೊಲೇಷನ್ ಹಾಸಿಗೆಗಳು ಇದೀಗ ಲಭ್ಯ ಇವೆ. ೨೧,೦೮೬ ಐಸಿಯು ಹಾಸಿಗೆಗಳನ್ನೂ ಭಾರತದಾದ್ಯಂತ ಸಜ್ಜುಗೊಳಿಸಲಾಗಿದೆ.

ದೇಶದ ಒಟ್ಟು ೨೭೬ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳು ಕೊರೊನಾ ಪರೀಕ್ಷೆ ನಡೆಸುತ್ತಿವೆ. ಈವರೆಗೆ ಒಟ್ಟು ೨೨.೩೧ ಲಕ್ಷ ಎನ್೯೫ ಮಾಸ್ಕ್ಗಳನ್ನು ವಿತರಿಸಲಾಗಿದೆ. ಜತೆಗೆ .೨೯ ಕೋಟಿ ಮಾಸ್ಕ್ಗಳ ಖರೀದಿಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ.

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಾಗಿ ೨೭ ಲಕ್ಷ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್ ಈವರೆಗೆ ವಿತರಿಸಲಾಗಿದೆ. ಜೊತೆಗೆ .೬೪ ಕೋಟಿ ಕಿಟ್ ಖರೀದಿಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ದೇಶಾದ್ಯಂತ ಎಲ್ಲ ರಾಜ್ಯಗಳಿಗೂ ಈವರೆಗೆ ೪೭೯.೫೫ ಟನ್ ಔಷಧಗಳನ್ನು ವಿಮಾನಗಳ ಮೂಲಕ ರವಾನಿಸಲಾಗಿದೆ. ಇದು ಏಪ್ರಿಲ್ ೧೭ರವರೆಗಿನ ಮಾಹಿತಿ. ನಂತರದ ದಿನಗಳಲ್ಲಿ ಅಂಕಿಅಂಶ ಸೇರಿದರೆ ಇದು ಇನ್ನೂ ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೨೪,೩೦,೨೯೦, ಸಾವು ,೬೬,೨೬೨
ಚೇತರಿಸಿಕೊಂಡವರು- ,೩೬,೯೯೦
ಅಮೆರಿಕ ಸೋಂಕಿತರು ,೬೭,೧೮೯, ಸಾವು ೪೦,೭೪೩
ಸ್ಪೇನ್ ಸೋಂಕಿತರು ,೦೦,೨೧೦, ಸಾವು ೨೦,೮೫೨
ಇಟಲಿ ಸೋಂಕಿತರು ,೭೮,೯೭೨,  ಸಾವು ೨೩,೬೬೦
ಜರ್ಮನಿ ಸೋಂಕಿತರು ,೪೫,೭೪೩, ಸಾವು ,೬೪೨
ಚೀನಾ ಸೋಂಕಿತರು ೮೨,೭೪೭, ಸಾವು ,೬೩೨
ಇಂಗ್ಲೆಂಡ್ ಸೋಂಕಿತರು ,೨೦,೦೬೭, ಸಾವು ೧೬,೦೬೦
ಅಮೆರಿಕದಲ್ಲಿ  ೧೬೮, ಬೆಲ್ಜಿಯಂನಲ್ಲಿ ೧೪೫, ಸ್ಪೇನಿನಲ್ಲಿ ೩೯೯, ಒಟ್ಟಾರೆ ವಿಶ್ವಾದ್ಯಂತ ,೨೩೧ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement