Tuesday, April 14, 2020

ಕೊರೋನಾವೈರಸ್ ಮಾದರಿ ಗುಂಪು ಪರೀಕ್ಷೆ: ಐಸಿಎಂಆರ್ ಒಪ್ಪಿಗೆ


ಕೊರೋನಾ ಮಾದರಿ ಗುಂಪು ಪರೀಕ್ಷೆ: ಐಸಿಎಂಆರ್ ಒಪ್ಪಿಗೆ
ಭಾರತದಲ್ಲಿ ೧೦,೮೧೫ಕ್ಕೆ ಏರಿಕೆ,  ಸಾವಿನ ಸಂಖ್ಯೆ ೩೫೩
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಏಪ್ರಿಲ್ 14ರ ಮಂಗಳವಾರ ೧೦,೮೧೫ಕ್ಕೇ ಏರಿದ್ದು, ಸಾವಿನ ಸಂಖ್ಯೆ ೩೫೩ಕ್ಕೆ ಏರಿತು. ಬೆನ್ನಲ್ಲೇ ಕೊರೊನಾವೈರಸ್ ಮಾದರಿಗಳ ಗುಂಪು ಪರೀಕ್ಷೆ ನಡೆಸಲು ಭಾರತ ತೀರ್ಮಾನಿಸಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇದಕ್ಕೆ ಒಪ್ಪಿಗೆ ನೀಡಿತು.
ಕೊರೋನಾವೈರಸ್ ಮಾದರಿಗಳ ಗುಂಪು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳಿಗೆ ಐಸಿಎಂಆರ್ ಮಂಗಳವಾರ ಅನುಮೋದನೆ ನೀಡಿತು. ಇದರಂತೆ ಐದು ಮಾದರಿಗಳನ್ನು ಇನ್ನು ಮಂದೆ ಒಂದೇ ಸಲಕ್ಕೆ ಪರೀಕ್ಷಿಸಲಾಗುವುದು.

ಭಾರತದ ೧೦,೮೧೫ ಕೊರೋನಾವೈರಸ್ ಪ್ರಕರಣಗಳ ಪೈಕಿ ,೨೭೨ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ,೧೮೯ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೨೧೧ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತು.

ಇದೇ ವೇಳೆಗೆ ಜಾಗತಿಕ ಮಟ್ಟದಲ್ಲಿ ಕೊರೋನಾವೈರಸ್ ಸೋಂಕು ೨೦ ಲಕ್ಷ ಮಂದಿಯನ್ನು ಬಾಧಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರ ಪುನಾರಂಭದ ಯೋಜನೆಯನ್ನು ಪೂರ್ಣಗೊಳಿಸುವ ಸನಿಹಕ್ಕೆ ತಾವು ಬಂದಿರುವುದಾಗಿ ಸೋಮವಾರ ಪ್ರಕಟಿಸಿದರು. ಮಾರಕ ಕೊರೋನಾವೈರಸ್ ಸೋಂಕು ೩೩೦ ದಶಲಕ್ಷ ಜನರಿರುವ ಅಮೆರಿಕದ ಶೇಕಡಾ ೯೫ಕ್ಕೂ ಹೆಚ್ಚು ಮಂದಿಗೆ ಹರಡಿದ್ದರಿಂದ ಇಷ್ಟೂ ಮಂದಿಗೆ ಗೃಹ ಬಂಧನದಲ್ಲಿ ಇರುವಂತೆ ಸರ್ಕಾರ ಆದೇಶ ನೀಡಿದೆ.

ಲಾಕ್‌ಡೌನ್ ವಿಸ್ತರಣೆಗೆ ಕೇಜ್ರಿವಾಲ್ ಸ್ವಾಗತ
ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮೇ ೩ರವರೆಗೆ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಸ್ವಾಗತಿಸಿದರು ಮತ್ತು ಕೊರೋನಾವೈರಸ್ ಸೋಂಕಿನಿಂದ ಮುಕ್ತರಾಗಲು ಲಾಕ್ ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಜನರನ್ನು ಒತ್ತಾಯಿಸಿದರು.

ಖಾಸಗಿ ವೈದ್ಯಸೇವೆಗೆ ಬಿಎಂಸಿ ನಿರ್ಧಾರ
ಮುಂಬೈಯಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು ಮತ್ತು ದಾದಿಯರ ಸೇವೆಗಳನ್ನು ವಿವಿಧ ಐಸೋಲೇಷನ್ ಮತ್ತು ಕ್ವಾರಂಟೈನ್ ಸವಲತ್ತು ಘಟಕಗಳಲ್ಲಿ ಚಿಕಿತ್ಸೆಗಾಗಿ ಬಳಸಿಕೊಳ್ಳಲು ಬೃಹನ್ಮುಂಬಯಿ ಮುನಿಸಿಪಲ್ ಕಾಪೋರೇಷನ್ ಸೋಮವಾರ ತೀರ್ಮಾನಿಸಿತು.

ಅರೆ ವೈದ್ಯಕೀಯ ಸಿಬ್ಬಂದಿ, ವಾರ್ಡ್ ಬಾಯ್ ಮತ್ತು ಇತರ ಆರೋಗ್ಯ ಸಿಬ್ಬಂದಿಯನ್ನು ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ ನೇಮಕ ಮಾಡಿಕೊಳ್ಳಲೂ ಬಿಎಂಸಿ ನಿರ್ಧರಿಸಿತು.

ಅಮೆರಿಕದಿಂದ ಎಚ್-೧ಬಿ ವೀಸಾ ವಿಸ್ತರಣೆ
ಭಾರೀ ಸಂಖ್ಯೆಯ ಭಾರತೀಯ ವೃತ್ತಿ ನಿರತದ ವೀಸಾ ಅವಧಿ ಶೀಘ್ರದಲ್ಲಿಯೇ ಮುಕ್ತಾಗೊಳ್ಳುವ ಹಿನ್ನೆಲೆಯಲ್ಲಿ ಎಚ್-೧ಬಿ ವೀಸಾ ಹೊಂದಿರುವವರು ದೇಶದಲ್ಲಿ ವಾಸ್ತವ್ಯ ಮುಂದುವರಿಕೆಗೆ ಅನುಮತಿ ಕೋರಿ ಸಲ್ಲಿಸಿದ  ಅರ್ಜಿಗಳಿಗೆ ಅನುಮೋದನೆ ನೀಡಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಅಮೆರಿಕದಲ್ಲಿ ಸಿಕ್ಕಿಹಾಕಿಕೊಂಡಿರುವ ಸಹಸ್ರಾರು ಭಾರತೀಯರಿಗೆ ನಿರಾಳತೆ ಲಭಿಸಿದೆ. ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಶೀಘ್ರವೇ ಅರ್ಜಿಗಳನ್ನು ಅಂಗೀಕರಿಸಲಿದೆ ಎಂದು ಮೂಲಗಳು ಹೇಳಿವೆ.

ಜಾಗತಿಕ ಆರ್ಥಿಕತೆ ಶೇಕಡಾ -೩ರಷ್ಟು ಕುಸಿತ
ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಭಾರತದ ಬೆಳವಣಿಗೆ ದರವು ೨೦೨೦ರಲ್ಲಿ ಶೇಕಡಾ .೯ರಷ್ಟು ಇರಲಿದ್ದು, ಜಾಗತಿಕ ಬೆಳವಣಿಗೆ ದರವು ಶೇಕಡಾ -೩ರಷ್ಟು ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ. ಇದು ೨೦೦೮-೦೯ರ ಹಣಕಾಸು ಬಿಕ್ಟಟ್ಟಿಗಿಂತಲೂ ಕೆಟ್ಟ ಸ್ಥಿತಿ ಎಂದು ಐಎಂಎಫ್ ತಿಳಿಸಿದೆ.

ಗಡಿಯಲ್ಲಿ ಸಿಕ್ಕಿಹಾಕಿಕೊಂಡ ಪಾಕ್ ಪ್ರಜೆಗಳು
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಾಘಾ-ಅಟ್ಟಾರಿ ಗಡಿಯನ್ನು ಮುಚ್ಚಿದ ಪರಿಣಾಮವಾಗಿ ಪಾಕಿಸ್ತಾನದ ಹಲವಾರು ಕುಟುಂಬಗಳು ತಾಯ್ನಾಡಿಗೆ ಮರಳಲಾಗದೆ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿವೆ ಎಂದು ವರದಿಗಳು ಹೇಳಿವೆ.

ಕೋವಿಡ್-೧೯ ಸೋಂಕು ಹರಡದಂತೆ ತಡೆಯುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ಮಾರ್ಚ್ ೧೩ರಂದು ಗಡಿಯನ್ನು ಮುಚ್ಚಿವೆ. ಗಡಿ ಮುಚ್ಚುವ ಮಾಹಿತಿ ಇಲ್ಲದ್ದರಿಂದ ತಾವು ಇಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಯಿತು ಎಂದು ಕುಟುಂಬಗಳು ಹೇಳಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೧೯,೪೭,೮೬೭, ಸಾವು ,೨೧,೭೯೩
ಚೇತರಿಸಿಕೊಂಡವರು- ,೬೦,೨೫೧
ಅಮೆರಿಕ ಸೋಂಕಿತರು ,೮೮,೪೬೫, ಸಾವು ೨೩,೭೧೧
ಸ್ಪೇನ್ ಸೋಂಕಿತರು ,೭೨,೫೪೧, ಸಾವು ೧೮,೦೫೬
ಇಟಲಿ ಸೋಂಕಿತರು ,೫೯,೫೧೬, ಸಾವು ೨೦,೪೬೫
ಜರ್ಮನಿ ಸೋಂಕಿತರು ,೩೦,೪೩೪, ಸಾವು ,೨೨೦
ಚೀನಾ ಸೋಂಕಿತರು ೮೨,೨೪೯, ಸಾವು ,೩೪೧
ಇಂಗ್ಲೆಂಡ್ ಸೋಂಕಿತರು ೯೩,೮೭೩, ಸಾವು ೧೨,೧೦೭
ಸ್ಪೇನಿನಲ್ಲಿ ೩೦೦, ಬೆಲ್ಜಿಯಂನಲ್ಲಿ ೨೫೪, ಇಂಗ್ಲೆಂಡಿನಲ್ಲಿ ೭೭೮, ಒಟ್ಟಾರೆ ವಿಶ್ವಾದ್ಯಂತ ,೧೭೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement