Monday, April 27, 2020

ಮುಖ್ಯಮಂತ್ರಿಗಳ ಜೊತೆ ನರೇಂದ್ರ ಮೋದಿ ನಾಲ್ಕನೇ ವಿಡಿಯೋ ಕಾನ್ಫರೆನ್ಸ್

ಮುಖ್ಯಮಂತ್ರಿಗಳ ಜೊತೆ ನರೇಂದ್ರ ಮೋದಿ ನಾಲ್ಕನೇ ವಿಡಿಯೋ ಕಾನ್ಫರೆನ್ಸ್
ನವದೆಹಲಿ: ಕೇಂದ್ರ ಸರ್ಕಾರವು ಕೊರೋನಾವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ವಿಧಿಸಿರುವ ರಾಷ್ಟ್ರವ್ಯಾಪಿ ದಿಗ್ಬಂಧನವು ಹಾಟ್‌ಸ್ಪಾಟ್‌ಗಳಲ್ಲಿ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 27ರ ಸೋಮವಾರ ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ವಿಡಿಯೋ ಸಂವಹನದಲ್ಲಿ ಹೇಳಿದರು.

ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ಮುಂದಿನ ಹೋರಾಟದ ಮಾರ್ಗದ ಬಗ್ಗೆ ರಾಜ್ಯ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ Zರ್ಚಿಸಿದ ಪ್ರಧಾನಿ, ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ವಿಸ್ತರಿಸುವ ಬಗ್ಗೆ ಎರಡನೇ ಹಂತದ ಲಾಕ್ ಡೌನ್ ಮೇ ೩ರಂದು ಮುಗಿದ ಬಳಿಕ ನಿರ್ಧರಿಸಲಾಗುವುದು ಎಂದು ನುಡಿದರು.

ಏನಿದ್ದರೂ, ನಿರ್ಬಂಧಗಳನ್ನು ತೆರವುಗೊಳಿಸುವುದು ಪ್ರತಿಯೊಂದು ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಅವಲಂಬಿಸಿದೆ. ಸುಧಾರಣೆ ಕಂಡು ಬಂದ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು ಎಂದು ಪ್ರಧಾನಿ ಹೇಳಿದರು.

ಆರ್ಥಿಕ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ ಪ್ರಧಾನಿ ಮೋದಿ ಚಿಂತಿಸಲು ಕಾರಣವಿಲ್ಲ ಎಂದು ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಅಮಿತ್ ಶಾ ಅವರುಆರ್ಥಿಕ ಚಟುವಟಿಕೆಗಳನ್ನು ನಿರಂತರ ಸ್ಥಗಿತಗೊಳಿಸಲು ಸಾಧ್ಯವಿಲ್ಲ, ಆದರೆ ಸಾಮಾಜಿಕ ಅಂತರ ಪಾಲನೆ ಮತ್ತು ಮುಖಗವಸುಗಳ ಬಳಕೆ ನಗರ ಪ್ರದೇಶಗಳಲ್ಲಿ ಮಾತ್ರವೇ ಅಲ್ಲ ಗ್ರಾಮೀಣ ಪ್ರದೇಶಗಳಲ್ಲೂ ದೈನಂದಿನ ಬದುಕಿನ ಅಂಗವಾಗಲಿದೆಎಂದು ಹೇಳಿದರು.

ಇನ್ನಷ್ಟು ಸುಧಾರಣೆಗಳು ಕಾದಿದ್ದು ಶೀಘ್ರವೇ ಸರ್ಕಾರ ಅವುಗಳನ್ನು ಪ್ರಕಟಿಸಿಲಿದೆ ಎಂದು ಸುದ್ದಿ ಮೂಲಗಳು ಹೇಳಿದವು.

ಮಧ್ಯಮ ಹಾಗೂ ಸಣ್ಣ ಕೈಗಾರಿಕಾ ರಂಗದ ಇನ್ನೂ ಕೆಲವು ಉದ್ಯಮಗಳನ್ನು ತೆರೆಯಲು ಬಂದಿರುವ ಬೇಡಿಕೆಗಳ ಹಿನ್ನೆಲೆಯಲ್ಲಿ ಪ್ರಧಾನಿಯವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಕೆಲವು ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸಿನಲ್ಲಿ ತಮ್ಮ ಕಳವಳಗಳನ್ನು ವ್ಯಕ್ತ ಪಡಿಸಿದರು. ಉದಾಹರಣೆಗೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜನರನ್ನು ರಾಜ್ಯಗಳಿಗೆ ಮರಳಿ ಕರೆತರಲು ನೀತಿಯೊಂದನ್ನು ರೂಪಿಸುವಂತೆ ಪ್ರಧಾನಿ ಮೋದಿ ಮತು ಅಮಿತ್ ಶಾ ಅವರನ್ನು ಕೋರಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದ್ಯಾರ್ಥಿಗಳನ್ನು  ಹಿಂದಕ್ಕೆ ಒಯ್ಯಲು ಒಪ್ಪಿಗೆ ಕೊಟ್ಟರೂ, ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆತರಲು ನಿರಾಕರಿಸಿದ್ದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಟೀಕೆಗೆ ಗುರಿಯಾಗಿದ್ದರು.

ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಾವು ನಿರ್ಧಾರ ಕೈಗೊಂಡಿದ್ದುದಾಗಿ ನುಡಿದ ನಿತೀಶ್ ಕುಮಾರ್, ಆದರೆ ಇತರ ರಾಜ್ಯಗಳಿಗೆ ರೀತಿ ಮಾಡಲು ಅನುಮತಿ ಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದರು.

ಮಧ್ಯೆ ಒಡಿಶಾ ಸರ್ಕಾರವು ದಿಗ್ಬಂಧನವನ್ನು ಇನೊಂದು ತಿಂಗಳ ಅವಧಿಗೆ ವಿಸ್ತರಿಸಬೇಕು ಎಂದು ಕೋರಿತು. ದಿಗ್ಬಂಧನವನ್ನು ಒಂದು ತಿಂಗಳ ಅವಧಿಗೆ ವಿಸ್ತರಿಸಬೇಕು ಎಂಬ ಒಡಿಶಾ ಬೇಡಿಕೆಯನ್ನು ಇತರ ರಾಜ್ಯಗಳೂ ಬೆಂಬಲಿಸಿದವು ಎಂದು ಒಡಿಶಾದ ಆರೋಗ್ಯ ಸಚಿವ ನಬ ದಾಸ್ ಮಾಧ್ಯಮಗಳಿಗೆ ತಿಳಿಸಿದರು.

ದೇಶದಲ್ಲಿ ಕೋವಿಡ್-೧೯ ಹರಡತೊಡಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ನಾಲ್ಕನೇ ವಿಡಿಯೋ ಕಾನ್ಪರೆನ್ಸ್ ಇದು.

ಭಾನುವಾರ ತಮ್ಮಮನ್ ಕಿ ಬಾತ್ಬಾನುಲಿ ಕಾರ್‍ಯಕ್ರಮದಲ್ಲಿ ಪ್ರಧಾನಿಯವರು ರಾಷ್ಟ್ರವು ಕೊರೋನಾ ವಿರುದ್ಧದಯುದ್ಧ ಮಧ್ಯಭಾಗದಲ್ಲಿದೆ ಎಂದು ಹೇಳಿದ್ದರು ಮತ್ತು ಜನರು ಎಚ್ಚರಿಕೆಯನ್ನು ಮುಂದುವರೆಸಬೇಕು ಮತ್ತು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದರು.

ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ದಿಗ್ಬಂಧನ ನಿಯಮಗಳನ್ನು ಸಡಿಲಗೊಳಿಸಿದ್ದರೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು.

ಅತಿಯಾಗಿ ವಿಶ್ವಾಸವನ್ನು ಹೊಂದಬೇಡಿ ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮ ಅತ್ಯುತ್ಸಾಹದ ಭರದಲ್ಲಿ ಕೊರೋನಾ ನಿಮ್ಮ ನಗರ, ಗ್ರಾಮ, ರಸ್ತೆ ಅಥವಾ ಕಚೇರಿಗೆ ಇನ್ನೂ ತಲುಪಿಲ್ಲ, ಮತ್ತು ಈಗ ತಲುಪುವುದಿಲ್ಲ ಎಂದು ಯೋಚಿಸಬೇಡಿ. ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ. ಜಗತ್ತಿನ ಅನುಭವವು ಬಗ್ಗೆ ನಮಗೆ ಸಾಕಷ್ಟು ಹೇಳುತ್ತಿದೆಎಂದು ಮೋದಿ ಹೇಳಿದ್ದರು.

ತಮ್ಮ ಮಾತನ್ನು ಸಮರ್ಥಿಸಲು ಪ್ರಧಾನಿಎಚ್ಚರ ತಪ್ಪಿದಾಗ ಅಪಘಾತ ಸಂಭವಿಸುತ್ತದೆ’ (ಸಾವಧಾನಿ ಹಟಿ, ದುರ್ಘಟನಾ ಘಟಿ) ಎಂಬ ಹಿಂದಿ ನುಡಿಗಟ್ಟನ್ನು ಉಲ್ಲೇಖಿಸಿದ್ದರು.

ಕೇಂದ್ರವು ಪ್ರಕಟಿಸಿದ ಪರಿಷ್ಕೃತ ಮಾರ್ಗಸೂಚಿಯಲ್ಲಿ ನೆರೆಹೊರೆಯ ಮತ್ತು ನಗರ ಪ್ರದೇಶಗಳ ವಸತಿ ಸಮುಚ್ಚಯಗಳ ಸಮೀಪದ ಏಕಾಂಗಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮಾರುಕಟ್ಟೆಗಳಲ್ಲಿನ ಅಂಗಡಿU ಬಂದ್  ಮೇ ೩ರವರೆಗೂ ಮುಂದುವರೆಯಲಿವೆ.

ಗ್ರಾಮೀಣ ಪ್ರದೇಶಗಳಲ್ಲಿ, ಶಾಪಿಂಗ್ ಮಾಲ್‌ಗಳನ್ನು ಹೊರತು ಪಡಿಸಿ, ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಶುಕ್ರವಾರ ತಡರಾತ್ರಿ ಹೊರಡಿಸಲಾದ ಆದೇಶದಲ್ಲಿ ಗೃಹ ಸಚಿವಾಲಯವು ಗ್ರಾಮೀಣ ಪ್ರದೇಶಗಳಲ್ಲಿ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಮಾಲ್ ಬಂದ್ ಮುಂದುವರೆಯುವುದು ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಮಾರುಕಟ್ಟೆಗಳನ್ನು ತೆರೆಯಬಹುದು ಎಂದು ಗೃಹ ಸಚಿವಾಲಯ ಹೇಳಿತ್ತು.

ಏನಿದ್ದರೂ, ಕೋವಿಡ್ -೧೯ ಹಾಟ್ ಸ್ಪಾಟ್ ಮತ್ತ ಕಂಟೈನ್ ಮೆಂಟ್ ವಲಯಗಳಲ್ಲಿ ಅಗತ್ಯೇತರ ವಸ್ತಗಳನ್ನು -ಕಾಮರ್ಸ್ ವೇದಿಕೆಗಳು ಮತ್ತು ಮದ್ಯ ಮಾರಾಟದ ನಿಷೇಧ ಮುಂದುವರೆಯುತ್ತದೆ ಎಂದ ಗೃಹ ಸಚಿವಾಲಯ ತಿಳಿಸಿತ್ತು.

ಏಪ್ರಿಲ್ ೧೧ರ ವಿಡಿಯೋ ಸಂವಹನ ವೇಳೆಯಲ್ಲಿ ಹಲವಾರು ಮುಖ್ಯಮಂತ್ರಿಗಳು ಏಪ್ರಿಲ್ ೧೪ಕ್ಕೆ ಮುಕ್ತಾಯಗೊಳ್ಳಲಿದ್ದ ೨೧ ದಿನಗಳ ದಿಗ್ಬಂಧನವನ್ನು ಮತ್ತೆರಡು ವಾರಗಳ ಕಾಲ ವಿಸ್ತರಿಸುವಂತೆ ಶಿಫಾರಸು ಮಾಡಿದ್ದರು. ಏಪ್ರಿಲ್ ೧೪ರಂದು ಪ್ರಧಾನಿಯವರು ದಿಗ್ಬಂಧನವನ್ನು ಮೇ ೩ರವರೆಗೆ ವಿಸ್ತರಿಸಿರುವುದಾಗಿ ಪ್ರಕಟಿಸಿದ್ದರು.

ಮಾರ್ಚ್ ೨೪ರಂದು ದಿಗ್ಬಂಧನ ಪ್ರಕಟಿಸುವುದಕ್ಕೆ ಮುನ್ನ ಪ್ರಧಾನಿಯವರು ಮಾರ್ಚ್ ೨೦ರಂದು ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೊರೋನಾವೈರಸ್ ಪ್ರಸರಣವನ್ನು ತಡೆಯುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದರು.

No comments:

Advertisement