ಭಾರತದಲ್ಲಿ ೫೦೮ ಹೊಸ ಕೊರೋನಾ
ಸೋಂಕು, ೧೩ ಸಾವು
ಒಟ್ಟು ಸೋಂಕಿತರು ೪,೭೮೯, ಸಾವು ೧೨೪
ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೫೦೮ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಮತ್ತು ೧೩ ಸಾವುಗಳು ವರದಿಯಾಗಿವೆ.
ಇದರೊಂದಿಗೆ ಬಾರತದಲ್ಲಿ ಕೊರೋನಾವೈರಸ್ ಸೋಂಕು ದೃಢಪಟ್ಟವರ ಸಂಖ್ಯೆ 2020 ಏಪ್ರಿಲ್ 07ರ ಮಂಗಳವಾರ ೪,೭೮೯ಕ್ಕೆ ಏರಿದ್ದು, ಸಾವಿನ ಸಂಖ್ಯೆ ೧೨೪ಕ್ಕೆ ಏರಿತು.
ಇದರೊಂದಿಗೆ ಬಾರತದಲ್ಲಿ ಕೊರೋನಾವೈರಸ್ ಸೋಂಕು ದೃಢಪಟ್ಟವರ ಸಂಖ್ಯೆ 2020 ಏಪ್ರಿಲ್ 07ರ ಮಂಗಳವಾರ ೪,೭೮೯ಕ್ಕೆ ಏರಿದ್ದು, ಸಾವಿನ ಸಂಖ್ಯೆ ೧೨೪ಕ್ಕೆ ಏರಿತು.
೪೭೮೯ ಕೊರೋನಾ ಸೊಂಕು ಪ್ರಕರಣಗಳಲ್ಲಿ ೪,೩೧೨ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು ೩೫೩ ಪ್ರಕರಣಗಳು ವಾಸಿಯಾಗಿದ್ದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತು.
ಗುಜರಾತಿನಲ್ಲಿ ೧೯ ಪ್ರಕರಣಗಳಲ್ಲಿ ಕೊರೋನಾವೈರಸ್ ಪಾಸಿಟಿವ್ ವರದಿಗಳು ಬಂದರೆ, ಮುಂಬೈಯಲ್ಲಿ ೧೦೦ ಹೊಸ ಪ್ರಕರಣಗಳು ವರದಿಯಾಗಿವೆ. ಪಂಜಾಬಿನಲ್ಲಿ ೮ ಹೊಸ ಪ್ರಕರಣಗಳು, ಹರಿಯಾಣದಲ್ಲಿ ೩೩ ಹೊಸ ಪ್ರಕಣಗಳು, ಕೇರಳದಲ್ಲಿ ೯ ಪಾಸಿಟಿವ್ ಪ್ರಕಣಗಳು, ತಮಿಳುನಾಡಿನಲ್ಲಿ ೬೯ ಪಾಸಿಟಿವ್ ಪ್ರಕರಣಗಳು, ಕರ್ನಾಟಕದಲ್ಲಿ ೧೨ ಹೊಸ ಪ್ರಕರಣಗಳು ವರದಿಯಾದವು..
ಪಶ್ಚಿಮ ಬಂಗಾಳದಲ್ಲಿ ಸಾವಿನ ಸಂಖ್ಯೆ ೫ಕ್ಕೇ ಏರಿಕೆಯಾಗಿದ್ದರೆ, ಕೇರಳದಲ್ಲಿ ಇದುವರೆಗೆ ನೆಗೆಟಿವ್ ತೋರಿಸುತ್ತಿದ್ದ ಇಬ್ಬರ ಪರೀಕ್ಷೆಗಳು ಪಾಸಿಟಿವ್ ಆಗಿ ಕಂಡು ಬಂದಿದೆ ಎಂದು ವರದಿಗಳು ಹೇಳಿದವು.
ಈ ಮಧ್ಯೆ, ಐರೋಪ್ಯ ಒಕ್ಕೂಟವು ಬಡ ರಾಷ್ಟ್ರಗಳಿಗೆ ಕೊರೋನಾವಿರುದ್ಧ ಹೋರಾಟಕ್ಕಾಗಿ ೧೬.೪ ಬಿಲಿಯನ್ ಡಾಲರ್ (೧೬೪೦ ಕೋಟಿ) ಡಾಲರ್ ನೆರವನ್ನು ಪ್ರಕಟಿಸಿದೆ.
ಒಬ್ಬನಿಂದ ೪೦೬ ಮಂದಿಗೆ ಸೋಂಕು: ಈ ಮಧ್ಯೆ, ಕೊರೋನಾವೈರಸ್ ಪಾಸಿಟಿವ್ ವ್ಯಕ್ತಿಯೊಬ್ಬ ಲಾಕ್ ಡೌನ್ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ೩೦ ದಿನಗಳ ಅವಧಿಯಲ್ಲಿ ೪೦೬ ಮಂದಿಗೆ ಸೋಂಕು ಹರಡಬಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ತಿಳಿಸಿದೆ.
ಆದರೆ ಲಾಕ್ ಡೌನ್ ಕ್ರಮಗಳು ಶೇಕಡಾ ೭೦ರಷ್ಟಾದರೂ ಪಾಲನೆಯಾಗಿದ್ದಲ್ಲಿ ಒಬ್ಬ ಸೋಂಕಿತನಿಂದ ಗರಿಷ್ಠ ೨.೫ ವ್ಯಕ್ತಿಗಳಿಗೆ ಮಾತ್ರವೇ ಸೋಂಕು ಹರಡುತ್ತದೆ ಎಂಬುದು ಇತ್ತೀಚಿನ ಅಧ್ಯಯನ ವರದಿಯಿಂದ ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ಹೇಳಿದರು.
ವಿಶ್ವದಲ್ಲಿ ಕೊರೋನಾ ಸಾವು-ನೋವು
ಇದೇ ವೇಳೆಗೆ ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಮಂಗಳವಾರ ೧೩,೬೬,೬೮೫ಕ್ಕೆ ಏರಿದ್ದು, ಒಟ್ಟು ಸಾವಿನ ಸಂಖ್ಯೆ ೭೬೫೫೧ಕ್ಕೆ ಏರಿದೆ. ಚೇತರಿಸಿಕೊಂಡರವರ ಸಂಖ್ಯೆ ೨,೯೪,೦೮೮ಕ್ಕೆ ಏರಿತು.
ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ೩,೭೦,೩೯೭ಕ್ಕೆ ಏರಿದ್ದು, ಸಾವಿನ ಸಂಖ್ಯೆ ೧೧,೦೪೨ಕ್ಕೆ ಏರಿದೆ. ಸ್ಪೇನಿನಲ್ಲಿ ಸೋಂಕಿತರ ಸಂಕ್ಯೆ ೧,೪೦,೫೧೦ ಏರಿದರೆ, ಸಾವಿನ ಸಂಖ್ಯೆ ೧೩,೭೯೮ಕ್ಕೆ ಏರಿದೆ. ಇಟಲಿಯಲ್ಲಿ ೧,೩೨,೫೪೭ ಮಂದಿಗೆ ಸೋಂಕು ತಗುಲಿದ್ದರೆ, ಸಾವಿನ ಸಂಖ್ಯೆ ೧೬,೫೨೩ಕ್ಕೆ ಮುಟ್ಟಿದೆ. ಜರ್‍ಮನಿಯಲ್ಲಿ ಸೋಂಕಿತರ ಸಂಖ್ಯೆ ೧,೦೪,೧೯೯ಕ್ಕೆ ಏರಿದ್ದರೆ, ಸಾವಿನ ಸಂಖ್ಯೆ ೧೮೪೨ಕ್ಕೆ ತಲುಪಿದೆ. ಸ್ಪೇನಿನಲ್ಲಿ ಅತ್ಯಧಿಕ ಅಂದರೆ ೪೫೭ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment