ಭಾರತದಲ್ಲಿ 5274ಕ್ಕೆ ಏರಿದ ಪ್ರಕರಣ, ಸಾವಿನ ಸಂಖ್ಯೆ 150ಕ್ಕೆ
ಏರಿಕೆ
ದೆಹಲಿ, ಮುಂಬೈಯಲ್ಲಿ ಮಾಸ್ಕ್ ಕಡ್ಡಾಯ, ಇಲ್ಲದಿದ್ದಲ್ಲಿ ಜೈಲು
ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩೨ ಕೊರೋನಾ ಸಾವುಗಳ ಪ್ರಕರಣ ವರದಿಯಾಗಿದ್ದು, ಒಟ್ಟು
ಸಾವಿನ ಸಂಖ್ಯೆ ೧೪೯ಕ್ಕೆ ಏರಿದೆ. ೭೭೩ ಹೊಸ
ಸೋಂಕಿನ ಪ್ರಕರಣಗಳೊಂದಿಗೆ ಒಟ್ಟು
ಪ್ರಕರಣಗಳ ಸಂಖ್ಯೆ ೫೨೭೪ಕ್ಕೆ ಏರಿದೆ.
ಇದೇ ವೇಳೆಗೆ ಸೋಂಕು
ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 2020
ಏಪ್ರಿಲ್ 8ರ ಬುಧವಾರ ದೆಹಲಿ ಮತ್ತು ಮುಂಬೈಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು.
ಹೀಗಾಗಿ ಮುಖಗವಸು ಧರಿಸದೆ ರಸ್ತೆಗೆ ಬಂದರೆ
ಜೈಲು ಸೇರುವ ಅಪಾಯ
ಎದುರಾಯಿತು.
ಮುಂಬೈ
ನಿವಾಸಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು (ಮಾಸ್ಕ್) ಧರಿಸುವುದನ್ನು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಬುಧವಾರ ಕಡ್ಡಾಯಗೊಳಿಸಿತು. ಮುಖಗವಸುಗಳು ಕೊರೋನಾವೈರಸ್ ಸೋಂಕು
ಹರಡುವುದನ್ನು ತಡೆಗಟ್ಟುತ್ತವೆ ಎಂಬುದಾಗಿ ಹಲವಾರು ಅಧ್ಯಯಗಳು ತಿಳಿಸಿರುವುದನ್ನು ಉಲ್ಲೇಖಿಸಿ ಬಿಎಂಸಿ ಈ ಕ್ರಮ ಕೈಗೊಂಡಿತು.
ಮುಖಗವಸು ಧರಿಸದೇ ರಸ್ತೆಗೆ ಬಂದವರು ಭಾರತೀಯ ದಂಡ ಸಂಹಿತೆಯ ೧೮೮ನೇ ವಿಧಿಯ ಅಡಿಯಲ್ಲಿ ಬಂಧನಕ್ಕೆ ಒಳಗಾಗಬಹುದು ಎಂದು
ಬಿಎಂಸಿ ಸುತ್ತೋಲೆ ಒಂದರಲ್ಲಿ ತಿಳಿಸಿತು.
ಮುನಿಸಿಪಲ್ ಕಮೀಷನರ್ ಪ್ರವೀನ್ ಪರದೇಶಿ ಅವರು ಸುತ್ತೋಲೆಯನ್ನು ಹೊರಡಿಸಿದ್ದು, ಸಾರ್ವಜನಿಕರ ವಿಶಾಲ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಯಾರೇ ವ್ಯಕ್ತಿಗಳು ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೂರು
ಪದರದ ಮುಖಗವಸು ಅಥವಾ
ಬಟ್ಟೆಯ ಮುಖಗವಸನ್ನು ಜನರು
ಕಡ್ಡಾಯವಾಗಿ ಧರಿಸಬೇಕು ಎಂದು
ಸುತ್ತೋಲೆ ತಿಳಿಸಿದೆ.
‘ಖಾಸಗಿ ವಾಹನದಲ್ಲಿ ಅಥವಾ ಅಧಿಕೃತ ವಾಹನದಲ್ಲಿ ಯಾರೇ ವ್ಯಕ್ತಿ ಸಂಚರಿಸುತ್ತಿದ್ದರೂ ಮುಖಗವಸು ಧರಿಸಲೇಬೇಕು. ಈ ಮುಖಗವಸುಗಳನ್ನು ಧರಿಸದೆ ಯಾರೇ ವ್ಯಕ್ತಿ/ ಅಧಿಕಾರಿ ಯಾವುದೇ ಸಭೆ, ಸಮೂಹದಲ್ಲಿ, ಕೆಲಸದ ಸ್ಥಳದಲ್ಲಿ ಹಾಜರಾಗುವಂತಿಲ್ಲ’ ಎಂದು ಸುತ್ತೋಲೆ ಹೇಳಿದೆ.
ಈ ಮುಖಗವಸುಗಳು ಔಷಧದ
ಅಂಗಡಿಯಿಂದ ಪಡೆದ, ಮಾನದಂಡಕ್ಕೆ ಅನುಗುಣವಾದ ಮುಖಗವಸು ಆಗಿರಬಹುದು ಅಥವಾ ಮನೆಯಲ್ಲೇ ತಯಾರಿಸಿದ ತೊಳೆಯಬಹುದಾದ ಮುಖಗವಸು ಆಗಿರಬುದು. ಇವುಗಳನ್ನು ಸಮರ್ಪಕವಾಗಿ ತೊಳೆದು, ಸೋಂಕುಮುಕ್ತಗೊಳಿಸಿ ಬಳಸಬಹುದು’ ಎಂದು
ಸುತ್ತೋಲೆ ಸೂಚಿಸಿದೆ.
ಮುಖಗವಸು ಧರಿಸದೆ ಬರುವವರನ್ನು ಬಂಧಿಸಬಹುದು. ಈ ಸೂಚನೆಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ)
ಸೆಕ್ಷನ್ ೧೮೮ರ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದು, ದಂಡನೆಗೆ ಗುರಿಪಡಿಸಬಹುದು ಮತ್ತು ವಾರ್ಡುಗಳ ಅಸಿಸ್ಟೆಂಟ್ ಕಮೀಷನರ್ ಗಳಿಂದ
ನೇಮಕಗೊಂಡ ಪೊಲೀಸ್ ಅಧಿಕಾರಿಗಳ ಮೂಲಕ ಬಂಧಿಸಬಹುದು. ಈ ಎಲ್ಲ ಅಧಿಕಾರಿಗಳಿಗೆ ಇಂತಹ ಉಲ್ಲಂಘನಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದು
ಸುತ್ತೋಲೆ ತಿಳಿಸಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೂಡಾ ಸಾಮಾಜಿಕ ಮಾಧ್ಯಮದ ಮೂಲಕ ಬಿಡುಗಡೆ ಮಾಡಲಾದ ತಮ್ಮ ಭಾಷಣದಲ್ಲಿ ಹೊರಕ್ಕೆ ಹೋಗುವಾಗ ಮುಖಗಸುಗಳನ್ನು ಧರಿಸುಂತೆ ಸಾರ್ವಜನಿಕರಿಗೆ ಮನವಿ
ಮಾಡಿದ್ದಾರೆ. ಜನರು ಮುಖಗವಸುಗಳನ್ನು ಧರಿಸಬಹುದು ಅಥವಾ ಶುದ್ಧವಾದ ಹತ್ತಿಯ ಕರವಸ್ತ್ರವನ್ನು ಕೂಡಾ
ಮುಖಗವಸು ಆಗಿ ಬಳಸಬಹುದು ಎಂದು ಅವರು ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಅವರು ದೆಹಲಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದನ್ನು ಪ್ರಕಟಿಸಿದರು.
ದೇಶವ್ಯಾಪಿ ಅಂಕಿಸಂಖ್ಯೆ: ಈಮಧ್ಯೆ, ಭಾರತದಲ್ಲಿ ೭೭೩ ಹೊಸ ಕೋವಿಡ್ ಪ್ರಕರಣಗಳು ಕಳೆದ ೨೪ ಗಂಟೆಗಳಲ್ಲಿ ವರದಿಯಾಗಿದ್ದು ಒಟ್ಟು ಸೋಂಕಿನ ಪ್ರಕರಣಗಳು ೫೨೭೪ಕ್ಕೆ ಏರಿಕೆಯಾಗಿದೆ, ಈವರೆಗೆ ೪೦೨ ಮಂದಿ ಚೇತರಿಸಿಕೊಂಡಿದ್ದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಮತ್ತು
೩೨ ಮಂದಿ ಕಳೆದ
೨೪ ಗಂಟೆಗಳಲ್ಲಿ ಸಾವನ್ನಪ್ಪಿದ್ದು ಒಟ್ಟು ಸಾವಿನ ಸಂಖ್ಯೆ ೧೪೯ಕ್ಕೆ ಏರಿದೆ ಎಂದು
ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿತು.
ಕೋವಿಡ್-೧೯ ಪ್ರಕರಣಗಳು ದೇಶದಲ್ಲಿ ಹೆಚ್ಚುವುದರೊಂದಿಗೆ, ಅದಕ್ಕೆ ಅನುಗುಣವಾಗಿ ಕೇಂದ್ರದ ಪ್ರತಿಕ್ರಿಯೆ ಮತ್ತು
ಸಿದ್ಧತೆಯೂ ಹೆಚ್ಚುತ್ತಿದೆ. ೭೭೩
ಹೊಸ ಸೋಂಕಿನ ಪ್ರಕರಣಗಳು ಮತ್ತು ೩೨ ಸಾವುಗಳು ಮಂಗಳವಾರದಿಂದೀಚೆಗೆ ವರದಿಯಾಗಿವೆ ಎಂದು
ಆರೋಗ್ಯ ಸಚಿವಾಲಯದ ಜಂಟಿ
ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.
ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು, ದಾದಿಯರು ಮತ್ತು
ಇತರ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವ ಸಲುವಾಗಿ ಕಟ್ಟು ನಿಟ್ಟಿನ ಸೋಂಕು ತಡೆ ಮತ್ತು
ನಿಯಂತ್ರಣ ಕ್ರಮಗಳನ್ನು ಎಲ್ಲೆಡೆ ಆಸ್ಪತ್ರೆಗಳಲ್ಲಿ ಅನುಸರಿಸಲಾಗುತಿದೆ ಎಂದು
ಅವರು ಹೇಳಿದರು.
ಆಸ್ಪತ್ರೆಗಳ ನಿರ್ಮಾಣ, ಕಣ್ಗಾವಲು ಮತ್ತು
ಸಂಪರ್ಕಗಳ ಪತ್ತೆ ಹಚ್ಚುವಿಕೆಯ ಕಡೆಗೆ ಗಮನ ಕೇಂದ್ರೀಕರಿಸುವಂತೆ ಕೇಂದ್ರವು ಎಲ್ಲ ರಾಜ್ಯಗಳಿಗೆ ಸೂಚಿಸಿದೆ ಎಂದು ಅವರು
ನುಡಿದರು.
ವೈದ್ಯಕೀಯ ನೆರವಿನ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಅಗರವಾಲ್, ’ಇವತ್ತು ಮಾತ್ರವೇ ಅಲ್ಲ, ಭವಿಷ್ಯದಲ್ಲಿ ಕೂಡಾ ಹೈಡ್ರಾಕ್ಸಿಕ್ಲೊರೋಕ್ವೀನ್ (ಎಚ್ಸಿಕ್ಯೂ) ಕೊರತೆ
ಉಂಟಾಗುವುದಿಲ್ಲ ಎಂಬ ಖಾತರಿಯನ್ನು ನಾವು ನೀಡುತ್ತೇವೆ. ದೇಶದಲ್ಲಿ ಬೇಕಾದಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಸಂಗ್ರಹ ಇದೆ’ ಎಂದು ಅವರು
ಹೇಳಿದರು.
ದೇಶದಲ್ಲಿ ಈವರೆಗೆ ೧,೨೧,೨೭೧ ಕೋವಿಡ್ -೧೯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ವಿಜ್ಞಾನಿ ಆರ್. ಗಂಗಾಖೇಡ್ಕರ್ ನುಡಿದರು.
ವಿಶ್ಯಾದ್ಯಂತ ಕೊರೋನಾ ಸಾವು-ನೋವು
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೧೪,೫೫,೫೧೯, ಸಾವು
೮೩೬೬೪
ಚೇತರಿಸಿಕೊಂಡರವರು- ೩,೦೯,೮೨೩.
ಅಮೆರಿಕದಲ್ಲಿ ಸೋಂಕಿತರು ೪,೦೪,೦೫೬, ಸಾವು
೧೨,೯೮೮
ಸ್ಪೇನಿನಲ್ಲಿ ಸೋಂಕಿತರು ೧,೪೬,೬೯೦, ಸಾವು
೧೪,೫೫೫
ಇಟಲಿಯಲ್ಲಿ ಸೋಂಕಿತರು ೧,೩೫,೫೮೬, ಸಾವು
೧೭೧೨೭
ಜರ್ಮನಿಯಲ್ಲಿ ಸೋಂಕಿತರು ೧,೦೯,೩೨೯, ಸಾವು
೨,೦೯೬.
ಸ್ಪೇನಿನಲ್ಲಿ ೫೧೦ ಮಂದಿ ಒಂದೇ
ದಿನ ಸಾವನ್ನಪ್ಪಿದ್ದಾರೆ.
No comments:
Post a Comment