Tuesday, April 21, 2020

ಪಾಕ್ ಉಗ್ರಗಾಮಿಗಳ ನಿಗಾ ಪಟ್ಟಿಯಿಂದ ಲಖ್ವಿ ಸಹಿತ ೪,೦೦೦ ಮಂದಿಗೆ ಮುಕ್ತಿ

ಪಾಕ್ ಉಗ್ರಗಾಮಿಗಳ ನಿಗಾ ಪಟ್ಟಿಯಿಂದ  ಲಖ್ವಿ ಸಹಿತ ,೦೦೦ ಮಂದಿಗೆ ಮುಕ್ತಿ
ನವದೆಹಲಿ/ ವಾಷಿಂಗ್ಟನ್: ೨೦೦೮ರ ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಪಾತಕಿ ಸೇರಿದಂತೆ ಸುಮಾರು ,೦೦೦ ಭಯೋತ್ಪಾದಕರ ಹೆಸರನ್ನು ಪಾಕಿಸ್ತಾನವು ತನ್ನ ವಿವೇಚನಾಧಿಕಾರ ಬಳಸಿ ಭಯೋತ್ಪಾದಕರ ಮೇಲಿನ ನಿಗಾ ಪಟ್ಟಿಯಿಂದ ತೆಗೆದುಹಾಕಿದೆ ಎಂದುಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ)’ ಎಂಬ ಅಮೆರಿಕದ ಸ್ಟಾರ್ಟ್ಅಪ್   2020 ಏಪ್ರಿಲ್ 21ರ ಮಂಗಳವಾರ ಬಹಿರಂಗಪಡಿಸಿತು..

ಭಾರತ ಮತ್ತು ವಿಶ್ವದ ಇತರ ಭಾಗಗಳಿಗೆ ಭಯೋತ್ಪಾದನೆಯನ್ನು ರಫ್ತು ಮಾಡುವ ಪಾಕಿಸ್ತಾನದ ಸುದೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ಭಯೋತ್ಪಾದಕರಿಗೆ ಧನಸಹಾಯ ಮಾಡುವುದರ ಮೇಲೆ ಕಣ್ಣಿಟ್ಟಿರುವ ಜಾಗತಿಕ ನಿಗಾ ಸಂಸ್ಥೆಯಾಗಿರುವ ಹಣಕಾಸು ಕಾರ್ಯಪಡೆಯು (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ -ಎಫ್ಎಟಿಎಫ್) ದೇಶವನ್ನು ಬೂದು ಪಟ್ಟಿಯಲ್ಲಿ ಇರಿಸಿದೆ.

ಭಯೋತ್ಪಾದನೆ-ನಿಧಿಯನ್ನು ನಿಗ್ರಹಿಸುವ ನಿಟ್ಟಿನ ಪಾಕಿಸ್ತಾನದ ಕ್ರಮಗಳ ಬಗ್ಗೆ ಅಸಮಾಧಾನಗೊಂಡ ಎಫ್ಎಟಿಎಫ್, ಫೆಬ್ರವರಿಯಲ್ಲಿ ಬೂದು ಪಟ್ಟಿಯಿಂದ ಹೊರಬರಲು ಪಾಲಿಸಬೇಕಾದ ೨೭ ಷರತ್ತುಗಳಲ್ಲಿ ೧೪ ಅಂಶಗಳನ್ನು ಮಾತ್ರ ಪಾಕಿಸ್ತಾನ ಈಡೇರಿಸಿದೆ ಎಂದು ಹೇಳಿತ್ತು.

ಹಣಕಾಸು ಕಾರ್ಯ ಪಡೆಯು, ನಿಟ್ಟಿನಲ್ಲಿ ಪಾಕಿಸ್ತಾನ ಮಾಡಿರುವ  ಪ್ರಗತಿಯನ್ನು ಜೂನ್ ತಿಂಗಳಲ್ಲಿ ಮತ್ತೊಮ್ಮೆ ಮೌಲ್ಯಮಾಪನ ಮಾಡಲಿದೆ.

ನಿಗಾಪಟ್ಟಿ ಅನುಸರಣೆಯನ್ನು ಸ್ವಯಂಚಾಲಿತಗೊಳಿಸುವ ನ್ಯೂಯಾರ್ಕ್ ಮೂಲದ ಸ್ಟಾರ್ಟ್ಅಪ್ ಕ್ಯಾಸ್ಟೆಲ್ಲಮ್, ಕಳೆದ ಒಂದೂವರೆ ವರ್ಷದಲ್ಲಿ ಪಾಕಿಸ್ತಾನವು "ಸಾರ್ವಜನಿಕರಿಗೆ ವಿವರಣೆ ಅಥವಾ ಅಧಿಸೂಚನೆ ಇಲ್ಲದೆ, ನಿಷೇಧಿತ ವ್ಯಕ್ತಿಗಳ ಪಟ್ಟಿಯಿಂದ ,೮೦೦ ಹೆಸರುಗಳನ್ನು ಅಳಿಸಿದೆ" ಎಂಬುದನ್ನು ಕಂಡುಹಿಡಿದಿದೆ.

ಲಷ್ಕರ್--ತೊಯ್ಬಾ ನಾಯಕ ಯಾನೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ಝಕಾ ಉರ್-ರೆಹಮಾನ್ ಸೇರಿದಂತೆ, ಮಾರ್ಚ್ ರಿಂದ ತನ್ನ ಭಯೋತ್ಪಾದಕ ನಿಗಾ ಪಟ್ಟಿಯಿಂದ ಸುಮಾರು ,೮೦೦ ಹೆಸರುಗಳನ್ನು  ಇಮ್ರಾನ್ ಖಾನ್ ಸರ್ಕಾರವು ಯಾವುದೇ ಸಾರ್ವಜನಿಕ ವಿವರಣೆಯಿಲ್ಲz ತೆಗೆದುಹಾಕಿದೆಎಂದು ಕ್ಯಾಸ್ಟೆಲ್ಲಮ್ ವರದಿ ತಿಳಿಸಿದೆ.

ಎಫ್ಎಟಿಎಫ್ ವರದಿಯ ಪ್ರಕಾರ, ಪಾಕಿಸ್ತಾನದ ಭಯೋತ್ಪಾದಕ ನಿಗಾ ಪಟ್ಟಿಯು ೨೦೧೮ ಅಕ್ಟೋಬರ್ನಲ್ಲಿ ಸುಮಾರು ,೬೦೦ ಹೆಸರುಗಳನ್ನು ಹೊಂದಿತ್ತು.

ಹೊಸ ಮಾಹಿತಿ ಮೂಲಗಳನ್ನು ನಿಯಮಿತವಾಗಿ ಬಳಸುವ ಕ್ಯಾಸ್ಟೆಲ್ಲಮ್.ಎಐ, ಮಾರ್ಚ್ ರಂದು ಪಾಕಿಸ್ತಾನದ ನಿಷೇಧಿತ ವ್ಯಕ್ತಿಗಳ ಪಟ್ಟಿಯನ್ನು ತನ್ನ  ಮಾಹಿತಿ ಮೂಲಕ್ಕೆ ಸೇರಿಸಿತ್ತು.

ಮಾರ್ಚ್ ಮತ್ತು ಮಾರ್ಚ್ ೨೭ ನಡುವಣ ಅವಧಿಯಲ್ಲಿ, ಇಮ್ರಾನ್ ಖಾನ್ ಸರ್ಕಾರವು ,೦೬೯ ಹೆಸರುಗಳನ್ನು ನಿಷೇಧಿತ ವ್ಯಕ್ತಿಗಳ ಪಟ್ಟಿಯಿಂದ ತೆಗೆದುಹಾಕಿದೆ ಮತ್ತು ಹೆಸರುಗಳೆಲ್ಲವೂ ಪಾಕಿಸ್ತಾನದ ಅಧಿಕೃತ ಡಿನೋಟೈಫೈಡ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ ಎಂದು ಕ್ಯಾಸ್ಟೆಲ್ಲಮ್.ಎಐ ದತ್ತಾಂಶವು ತೋರಿಸಿದೆ. ಮಾರ್ಚ್ ೨೭ ರಿಂದ, ಇನ್ನೂ ೮೦೦ ಅಥವಾ ಅದಕ್ಕಿಂತ ಹೆಚ್ಚು ಹೆಸರುಗಳನ್ನು ಅಳಿಸಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಟ್ಟಿ ಮಾಡಲಾದ ಭಯೋತ್ಪಾದಕರನ್ನು ತೆಗೆದುಹಾಕುವ ಸಾಧ್ಯತೆ ಇರುವ ಪ್ರಕರಣಗಳನ್ನು ಮಾತ್ರ ನೋಡಿದೆ ಎಂದು ಖಚಿತಪಡಿಸಿಕೊಳ್ಳಲು, ಸ್ಟಾರ್ಟಪ್ ಮೊದಲಿಗೆ ಅಧಿಕೃತ ಡಿನೋಟೈಫೈಡ್ ಪಟ್ಟಿಯನ್ನು ಡೌನ್ಲೋಡ್ ಮಾಡಿತು, ನಂತರ ಅದರ ಮಾಹಿತಿ ಮೂಲಕ್ಕೆ ವಿರುದ್ಧವಾಗಿ ಹೆಸರುಗಳನ್ನು ಪರಿಶೀಲಿಸಿತ್ತು.

ಇದನ್ನು ಅನುಸರಿಸಿ, ಸ್ಟಾರ್ಟಪ್ ಎಲ್ಲ ಹೆಸರಿನ ಭಾಗಗಳಿಗೆ ಹೊಂದಿಕೆಯಾಗದ ಎಲ್ಲ ಹೆಸರುಗಳನ್ನೂ ತೆಗೆದುಹಾಕಿತು ಮತ್ತು ಪಟ್ಟಿ ಮಾಡಲಾದ ಯಾವ ವ್ಯಕ್ತಿಗಳು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನದ ನಾಗರಿಕರಲವೋ ಅಂತಹವರ ಎಲ್ಲ  ಹೆಸರುಗಳನ್ನು ತೆಗೆದುಹಾಕಿತು.

ಬಳಿಕ ಸಂಸ್ಥೆಯು ಖಾತರಿಪಡಿಸುವ ಮಾಹಿತಿಯು ಅಸ್ತಿತ್ವದಲ್ಲಿಲ್ಲ ಎಂದು ಖಚಿತಪಡಿಸಿತು, ಉದಾಹರಣೆಗೆ, ಹೊಂದಿಕೆಯಾಗದ ಐಡಿಗಳು ಅಥವಾ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ಸುದ್ದಿ /ವರದಿಗಳು. ಹೆಸರು ನಿಖರವಾಗಿಲ್ಲದಿದ್ದರೆ, ಅಧಿಕೃತ ಅಲಿಯಾಸ್ಗೆ ಹೊಂದಿಕೆಯಾಗುತ್ತದೆ ಎಂದು ಸಂಸ್ಥೆ ಖಚಿತಪಡಿಸಿತು. ಉದಾಹರಣೆಗೆ, ಝಕಿ ಉರ್ ರೆಹಮಾನ್ ಲಖ್ವಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಜಕಾ ಉರ್ ರೆಹಮಾನ್, ಆದರೆ ಅಧಿಕೃತ ಅಲಿಯಾಸ್ಝಕಿ ಉರ್ ರೆಹಮಾನ್ ಎಂಬ ಅಡ್ಡ ಹೆಸರನ್ನು ಹೊಂದಿದ್ದಾನೆ.

ಝಕಾ ಉರ್ ರೆಹಮಾನ್ ವಿಷಯದಲ್ಲಿ, ಝಕಾ ಮತ್ತು ಝಕಿ ನಡುವಿನ ವ್ಯತ್ಯಾಸವು ನಿಖರವಾದ ಫೋನೆಟಿಕ್ ಅನುವಾದದ ನಿಯತಾಂಕಗಳಲ್ಲಿ ಹೊಂದಿಕೊಳ್ಳುತ್ತದೆ. ಕ್ಯಾಸ್ಟೆಲ್ಲಮ್.ಎಐ ಪಾಕಿಸ್ತಾನದ ನಿಷೇಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಲಷ್ಕರ್--ತೊಯ್ಬಾ ನಾಯಕನ ಪೂರ್ಣ ಹೆಸರು ಝಕಿ ಉರ್ ರೆಹಮಾನ್ ಲಖ್ವಿಯನ್ನು ಸಹ ಹುಡುಕಿದೆ, ಮತ್ತು ಆತ ಪಟ್ಟಿಯಲ್ಲಿ ಇರಲಿಲ್ಲ ಎಂಬುದಾಗಿ ವರದಿ ತಿಳಿಸಿದೆ.

No comments:

Advertisement