ಕಾಶ್ಮೀರ:
ಕಾರಿನಲ್ಲಿ ಪ್ರಬಲ ಐಇಡಿ ಸ್ಫೋಟಕ ಪತ್ತೆ
ತಪ್ಪಿದ
ಪುಲ್ವಾಮ ಮಾದರಿಯ ಭಾರೀ ದಾಳಿ, ಕಾರುಚಾಲಕ ಪರಾರಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಿಗುಂಡ್ ರಾಜ್‌ಪೊರಾ ಪ್ರದೇಶದಲ್ಲಿ ಕಾರಿನಿಂದ ಪ್ರಬಲ ಐಇಡಿ ಸ್ಫೋಟಕವನ್ನು ಪತ್ತೆ ಹಚ್ಚಿ ಸ್ಫೋಟಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನೆಯ ಬಾಂಬ್ ವಿಲೇವಾರಿ ದಳ ಸಂಭವಿಸಬಹುದಾಗಿದ್ದ ಪುಲ್ವಾಮಾ ಮಾದರಿಯ ಭಾರೀ ಭಯೋತ್ಪಾದಕ ದಾಳಿಯನ್ನು 2020 ಮೇ 28ರ ಗುರುವಾರ ತಪ್ಪಿಸಿದವು.
ಪುಲ್ವಾಮಾ
ಪ್ರದೇಶದಲ್ಲಿ ಸ್ಫೋಟಕ ತುಂಬಿದ ಸ್ಯಾಂಟ್ರೊ ಕಾರಿನೊಂದಿಗೆ ಭಯೋತ್ಪಾದಕನು ಸಂಚರಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ಅನುಸರಿಸಿ ಶೋಧ ಆರಂಭಿಸಿದ ಪೊಲೀಸರು ವಾಹನವನ್ನು ತಡೆದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಮತ್ತು ಸಿಆರ್ ಪಿಎಫ್ ಕೂಡಾ ಪೊಲೀಸರ ನೆರವಿಗೆ ಬಂದವು.
ಪೊಲೀಸರು
ಮತ್ತು ಎನ್‌ಐಎ ಸಿಬ್ಬಂದಿ ಮುತ್ತಿಗೆ ಹಾಕಿ ಕೆಲವು ಸುತ್ತುಗಳ ಗುಂಡು ಹಾರಿಸಿದವು. ಬಳಿಕ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಸಂಘಟನೆಯ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಉಗ್ರ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ವರದಿಗಳು ತಿಳಿಸಿದವು.
"ಜೈಶ್-ಎ-ಮೊಹಮ್ಮದ್ ಉಗ್ರಗಾಮಿ
ಸಂಘಟನೆ ಭಯೋತ್ಪಾದಕ ಕಾರ್ಯಾಚರಣೆ ನಡೆಸಲಿದೆ ಎಂಬ ಮಾಹಿತಿ ನಮಗೆ ಬಂದಿತ್ತು. ಆದ್ದರಿಂದ ಐಇಡಿ ಇದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಕಾರಿನ ಚಾಲಕ ಅದಿಲ್ ಜೈಶ್-ಇ- ಮೊಹಮ್ಮದ್ ಜೊತೆ
ಸಂಪರ್ಕದಲ್ಲಿದ್ದಾನೆ’ ಎಂಬ
ಅನುಮಾನ ನಮಗಿದೆ ಎಂದು ಕಾಶ್ಮೀರ ಐಜಿ ವಿಜಯಕುಮಾರ್ ಹೇಳಿದರು.
ಭದ್ರತಾ
ಪಡೆಗಳ ವಾಹನಗಳನ್ನು ಗುರಿಯಾಗಿಸುವ ಉದ್ದೇಶವನ್ನು ಅವರು ಹೊಂದಿದ್ದರು ಎಂದು ವಿಜಯ ಕುಮಾರ್ ನುಡಿದರು.
"ವಾಹನವು
ಸುಮಾರು ೪೦-೪೫ ಕೆಜಿ
ಸ್ಫೋಟಕಗಳನ್ನು ಸಾಗಿಸುತ್ತಿತ್ತು’ ಎಂದು
ಅವರು ಹೇಳಿದರು.
ಸ್ಥಳೀಯ
ವರದಿಗಳ ಪ್ರಕಾರ, ಹಿಂದಿನ ಸೀಟಿನ ಡ್ರಮ್‌ನಲ್ಲಿ ಸ್ಫೋಟಕಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬಾಂಬ್ ವಿಲೇವಾರಿ ದಳಗಳನ್ನು ಕರೆಸಲಾಯಿತು. ಬಳಿಕ ಬಾಂಬ್ ವಿಲೇವಾರಿ ದಳದವರು ಕಾರುಸಹಿತವಾಗಿ ಸ್ಫೋಟಕಗಳನ್ನು ಸ್ಫೋಟಿಸಿದರು. ಅದರ ಸಮಿಪಕ್ಕೆ ಯಾರೂ ಹೋಗದಂತೆ ತಂಡದ ಪೊಲೀಸರು ಕಾವಲು ನಿಂತಿದ್ದರು.
ವಾಹನದಲ್ಲಿ
ನಕಲಿ ನಂಬರ್ ಪ್ಲೇಟ್ ಇತ್ತು. ಕೆಲವು ವರದಿಗಳು ಇದು ಜಮ್ಮು ವಲಯದ ಕಥುವಾ ಜಿಲ್ಲೆಯಲ್ಲಿ ಎಲ್ಲೋ ನೋಂದಾಯಿತ ಸ್ಕೂಟರ್ ಸಂಖ್ಯೆ ಎಂದು ಹೇಳಿವೆ. ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
೨೦೧೯ರಲ್ಲಿ
ಪುಲ್ವಾಮದಲ್ಲಿ ಇದೇ ಮಾದರಿಯಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಸೇರಿದ್ದ ೪೦ ಮಂದಿ ಯೋಧರು
ಹುತಾತ್ಮರಾಗಿದ್ದರು.
ಕಾರ್
ಬಾಂಬನ್ನು ನಿಷ್ಕ್ರಿಯಗೊಳಿಸಲು ಯತ್ನಿಸುವುದು ತುಂಬಾ ಅಪಾಯಕಾರಿ ಎಂದು ಪರಿಗಣಿಸಿದ್ದರಿಂದ ಬಳಿಕ ಅದನ್ನು ಸ್ಫೋಟಿಸಲಾಯಿತು ಎಂದು ವರದಿ ಹೇಳಿದೆ.
ಜಮ್ಮು
ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ ವಿಡಿಯೊವೊಂದರಲ್ಲಿ, ಈ ಪ್ರದೇಶವು ದಟ್ಟ
ಹೊಗೆಯಿಂದ ಆವರಿಸಿಕೊಳ್ಳುವ ಮುನ್ನ ಕಾರು ದೊಡ್ಡ ಬೆಂಕಿಯ ಚೆಂಡಾಗಿ ಉರಿಯುವ ದೃಶ್ಯವಿದೆ.
’ಇದು
ಮಹಾನ್ ಕೆಲಸ. ಇದು ಪ್ರಾಣಹಾನಿಗೆ ಕಾರಣವಾಗಿದ್ದರೆ ಕಲ್ಪಿಸಿಕೊಳ್ಳಿ. ಇದು ಮಾನವ ಬೂದಿಯೊಂದಿಗೆ ಬೆರೆತಿಲ್ಲ, ಅದಕ್ಕಾಗಿ ಕೃತಜ್ಞರಾಗಿರಬೇಕು’ ಎಂದು
ಕಾಶ್ಮೀರ ಪೊಲೀಸ್ ಅಧಿಕಾರಿ ರಯೀಸ್ ಮೊಹಮ್ಮದ್ ಭಟ್ ಹೇಳಿದರು.
ಸ್ಫೋಟದ
೯ ಸೆಕೆಂಡುಗಳ ವೀಡಿಯೊವನ್ನು ಅವರು
ಟ್ವೀಟ್ ಮಾಡಿದರು.
ಕಾರ್
ಬಾಂಬ್ ಸ್ಫೋಟಗೊಳ್ಳುವ ಮೊದಲು ಅದನ್ನು ಪರೀಕ್ಷಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ
ಗುಂಪಿನ ಕುಖ್ಯಾತ ಬಾಂಬ್ ತಯಾರಕ ವಲೀದ್ ಭಾಯ್ ಈ ಕಾರು ಬಾಂಬ್
ನಿರ್ಮಾಣದ ಹಿಂದಿರಬಹುದು ಎಂದು ಶಂಕಿಸಿದ್ದಾರೆ.
‘ಇದು
ಸಂಪೂರ್ಣವಾಗಿ ಜೈಶ್ ಮತ್ತು ಲಷ್ಕರ್ ಜಂಟಿ ಕಾರ್ಯಾಚರಣೆ. ಆದರೆ (ಭಯೋತ್ಪಾದನೆಯ) ಕಾರ್ಖಾನೆ ಪಾಕಿಸ್ತಾನದಲ್ಲಿದೆ, ಅದು ಹಿಜ್ಬುಲ್, ಜೈಶ್ ಅಥವಾ ಟಿಆರ್‌ಎಫ್ (ದಿ ರೆಸಿಸ್ಟೆನ್ಸ್ ಫ್ರಂಟ್)
ಭಯೋತ್ಪಾದಕರನ್ನು ತಯಾರು ಮಾಡುತ್ತದೆ’
ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದರು.
ಪುಲ್ವಾಮಾದಲ್ಲಿ
ರಾತ್ರಿಯ ಕಾರ್ಯಾಚರಣೆಗೆ ಕಾರಣವಾದ ಪ್ರಾಥಮಿಕ ಗುಪ್ತಚರ ಮಾಹಿತಿಯ ಪ್ರಕಾರ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನೊಬ್ಬ ಕಾರನ್ನು ಓಡಿಸುತ್ತಿದ್ದ. ಆತ ಯಾವ ಮಾರ್ಗದತ್ತ
ತಿರುಗುತ್ತಾನೆ ಎಂಬ ಸುಳಿವು ಈ ಮಾಹಿತಿಯಲ್ಲಿ ಇರಲಿಲ್ಲ.
ಆದ್ದರಿಂದ ಜಮ್ಮು-ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಯ ಜಂಟಿ
ತಂಡಗಳು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ನಕ್ಷೆ ಮಾಡಿ ಚೆಕ್‌ಪೋಸ್ಟ್‌ಗಳಿಗೆ ರವಾನಿಸಿದವು’ ಎಂದು
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಬಾಂಬ್
ಹೊತ್ತೊಯ್ಯುತ್ತಿರಬಹುದೆಂದು
ಶಂಕಿಸಲಾಗಿರುವ ಕಾರನ್ನು ಆಯೆಖಂಡ್‌ನಲ್ಲಿ ಗುರುತಿಸಿದಾಗ, ಭದ್ರತಾ ಪಡೆಗಳು, ರಸ್ತೆಯಿಂದ ದೂರವಾಗಿ ನಿಂತುಕೊಂಡು ಕಾರಿಗೆ ಗುಂಡು ಹಾರಿಸಲಾರಂಭಿಸಿದವು. ಕಾರನ್ನು ಬಿಟ್ಟು ಕಾಡಿನಲ್ಲಿ ತಪ್ಪಿಸಿಕೊಳ್ಳುವ ಮುನ್ನ ಭಯೋತ್ಪಾದಕ ಸ್ವಲ್ಪ ದೂರ ಅದನ್ನು ಓಡಿಸಿದ.
ನಕಲಿ
ನೋಂದಣಿ ಫಲಕವನ್ನು ಹೊಂದಿದ್ದ ಸ್ಯಾಂಟ್ರೊ ಕಾರಿನ ಹಿಂದಿನ ಸೀಟಿನಲ್ಲಿ ಡ್ರಮ್‌ನಲ್ಲಿ ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತು. "ವಾಹನದಲ್ಲಿ ಬೇರೆಡೆ ಹೆಚ್ಚಿನ ಸ್ಫೋಟಕಗಳನ್ನು ಅಳವಡಿಸಿರಲೂ ಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಭದ್ರತಾ
ಪಡೆಗಳು ಮುಂಜಾನೆ ತನಕ ಕಾಯುತ್ತಿದ್ದವು ಮತ್ತು ನೆರೆಹೊರೆಯಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಿದವು. "ಬಾಂಬ್ ವಿಲೇವಾರಿ ದಳಗಳು ವಾಹನವನ್ನು ಇದ್ಧ ಸ್ಥಳದಲ್ಲೇ ಸ್ಫೋಟಿಸಿವೆ, ಏಕೆಂದರೆ ವಾಹನವನ್ನು ಓಡಿಸಿದರೆ ಗಂಭೀರ ಆಪಾಯವಾಗುವ ಸಾಧ್ಯತೆ
ಇತ್ತು" ಎಂದು ಪೊಲೀಸರು ತಿಳಿಸಿದರು.
"ಈ
ಕಾರಿನಿಂದ ೨೦೧೯ರ ಪುಲ್ವಾಮಾ ಬಾಂಬ್ ಸ್ಫೋಟದ ಘಟನೆಯ ಪುನರಾವರ್ತನೆಯಾಗುವ ಸಾಧ್ಯತೆ ಇತ್ತು’ ಎಂದು ಅವರು ನುಡಿದರು.
೨೦೧೯ರಲ್ಲಿ
ಸಿಆರ್‌ಪಿಎಫ್ ಬೆಂಗಾವಲು ವಾಹನದ ಮೇಲೆ ಆತ್ಮಹತ್ಯಾ ಕಾರುಬಾಂಬ್ ನಡೆಸಿದ್ದ ಭಯೋತ್ಪಾದಕರು ೪೦ ಸೈನಿಕರನ್ನು ಬಲಿತೆಗೆದುಕೊಂಡದ್ದಕ್ಕೆ
ಪ್ರತಿಯಾಗಿ ಭಾರತವು ಪಾಕಿಸ್ತಾನದ ಬಾಲಾಕೋಟ್‌ನ ಭಯೋತ್ಪಾದಕ ತರಬೇತಿ ಕೇಂದ್ರದ ಮೇಲೆ ವಾಯುದಾಳಿ ನಡೆಸಿದ ಹಲವಾರು ಭಯೋತ್ಪಾದಕರನ್ನು ಸದೆ ಬಡಿದಿತ್ತು.
ಬೆನ್ನಲ್ಲೇ ಪಾಕಿಸ್ತಾನವು ಪ್ರತೀಕಾರಕ್ಕಾಗಿ ಕಾಶ್ಮೀರದ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಆಗ ಭಾರತವು ಪಾಕಿಸ್ತಾನಿ ಸೇನೆಯ ಎಫ್ -೧೬ ವಿಮಾನವನ್ನು ಹೊಡೆದುರುಳಿಸಿತ್ತು.
No comments:
Post a Comment