Thursday, May 14, 2020

ಗಮ್ಯ ವಿಳಾಸ ಕಡ್ಡಾಯ: ವಿಶೇಷ ರೈಲುಪ್ರಯಾಣಿಕರಿಗೆ ಇಲಾಖೆ ಸೂಚನೆ

ಗಮ್ಯ ವಿಳಾಸ ಕಡ್ಡಾಯ:  ವಿಶೇಷ ರೈಲುಪ್ರಯಾಣಿಕರಿಗೆ ಇಲಾಖೆ ಸೂಚನೆ
ನವದೆಹಲಿ: ಮಂಗಳವಾರದಿಂದ ಓಡಾಟ ಆರಂಭಿಸಿರುವ ವಿಶೇಷ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸುವವರು ತಮ್ಮ ಗಮ್ಯ ವಿಳಾಸಗಳನ್ನು ಟಿಕೆಟ್ ಬುಕಿಂಗ್ ಸಮಯದಲ್ಲಿಯೇ ನೀಡುವುದು ಕಡ್ಡಾಯ ಎಂದು ರೈಲ್ವೇ ಇಲಾಖೆ ಸೂಚಿಸಿತು.

ಕೋವಿಡ್-೧೯ ಸೋಂಕು ತಗುಲಿದವರ ಪಯಣದ ಇತಿಹಾಸ ಪತ್ತೆಗೆ ಇದರಿಂದ ಅನುಕೂಲವಾಗುತ್ತದೆ ಎಂದು ರೈಲ್ವೇ ಸಚಿವಾಲಯವು 2020 ಮೇ 14ರ ಗುರುವಾರ  ಪ್ರಕಟಿಸಿತು.
ಆನ್ ಲೈನಿನಲ್ಲಿ ಟಿಕೆಟ್ ಬುಕಿಂಗ್ ಮಾಡುತ್ತಿರುವ ಭಾರತೀಯ ರೈಲ್ವೇ ಕ್ಯಾಟರಿಂಗ್ ಪ್ರವಾಸೋದ್ಯಮ ನಿಗಮವು (ಐಆರ್ಸಿಟಿಸಿ) ಟಿಕೆಟ್ ಬುಕ್ ಮಾಡುವ ಪ್ರತಿಯೊಬ್ಬ ಪ್ರಯಾಣಿಕನ ಗಮ್ಯ ವಿಳಾಸವನ್ನೂ ಗುರುತಿಸಿಕೊಳ್ಳುವುದು ಎಂದು ಸಚಿವಾಲಯ ತಿಳಿಸಿತು.

ಮುಂದಕ್ಕೆ ಸಂಪರ್ಕ ಪತ್ತೆಗೆ ಬೇಕಾದಲ್ಲಿ ಇದು ನಮಗೆ ಅನುಕೂಲಕರವಾಗುವುದು ಎಂದು ಸಚಿವಾಲಯದ ವಕ್ತಾರರು ಹೇಳಿದರು.

ಜೂನ್ ೩೦ರವರೆಗಿನ ಎಲ್ಲ ಟಿಕೆಟ್ ರದ್ದು, ಶ್ರಮಿಕ ರೈಲು ಓಡಾಟ ಅಬಾಧಿತ
ಸಚಿವಾಲಯವು ದಿಗ್ಬಂಧನಕ್ಕೆ ಮುಂಚಿತವಾಗಿ ಮತ್ತು ದಿಗ್ಬಂಧನದ ಅವಧಿಯಲ್ಲಿ ಜೂನ್ ೩೦ರವರೆಗೆ ಪ್ರಯಾಣಕ್ಕಾಗಿ ಬುಕ್ ಮಾಡಲಾಗಿದ್ದ ಎಲ್ಲ ಟಿಕೆಟ್ಗಳನ್ನು ರದ್ದು ಪಡಿಸಿದೆ. ಟಿಕೆಟ್ ಹಣವನ್ನು ಪೂರ್ತಿಯಾಗಿ ಹಿಂದಿರುಗಿಸಲಾಗುವುದು ಎಂದು ಸಚಿವಾಲಯ ಹೇಳಿತು.

ಲಾಕ್ ಡೌನ್ಗಿಂತ ಮೊದಲು, ಪಯಣದ ದಿನಾಂಕಕ್ಕಿಂತ ೧೨೦ ದಿನ ಮುಂಚಿತವಾಗಿ ಮುಂಗಡ ಟಿಕೆಟ್ ಕಾದಿರಿಸಲು ಅವಕಾಶವಿತ್ತು.

ಮೇ ಮತ್ತು ಜೂನ್ ತಿಂಗಳಿಗಾಗಿ ಬುಕ್ ಮಾಡಲಾದ ಟಿಕೆಟ್ಗಳು ಜನವರಿ-ಫೆಬ್ರುವರಿ- ಮಾರ್ಚ್ ತಿಂಗಳಲ್ಲಿ ಬುಕಿಂಗ್ ಆಗಿರಬಹುದು, ನಾವು ಎಲ್ಲ ಟಿಕೆಟ್ಗಳ ಪೂರ್ಣ ಹಣವನ್ನು ವಾಪಸ್ ಮಾಡಿದ್ದೇವೆ ಎಂದು ವಕ್ತಾರರು ನುಡಿದರು.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ವಿಶೇಷ ಪ್ಯಾಸೆಂಜರ್ ರೈಲುಗಳಿಗಾಗಿ ಬುಕಿಂಗ್ ಮೇ ೧೨ರಿಂದ ಆರಂಭವಾಗಿದ್ದು, ಇದು ಮುಂದುವರೆಯುತ್ತದೆ. ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಕರೆದೊಯ್ಯವ ಸಲುವಾಗಿ ಆರಂಭಗೊಂಡಿರುವ ಶ್ರಮಿಕ್ ವಿಶೇಷ ರೈಲುಗಳು ಓಡಾಟ ಮುಂದುವರೆಸಲಿವೆ ಎಂದು ಸಚಿವಾಲಯ ಸ್ಪಷ್ಟ ಪಡಿಸಿತು.

ಗುರುವಾರ ಬೆಳಗಿನವರೆಗೆ ೮೦೦ ಶ್ರಮಿಕ ವಿಶೇಷ ರೈಲುಗಳು ಸುಮಾರು ೧೦ ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ತಲುಪಿಸಿವೆ ಎಂದು ರೈಲ್ವೇ ಇಲಾಖೆ ತಿಳಿಸಿತು.

ಬುಧವಾರದವರೆಗೆ ಎಲ್ಲ ೩೦ ರೈಲುಗಳಿಗೆ ,೩೪,೪೧೧ ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡಿದ್ದಾರೆ, ಇದರಿಂದ ಇಲಾಖೆಗೆ ೪೫.೩೦ ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

೧೫ ಜೊತೆ ವಿಶೇಷ ರೈಲುಗಳಿಗಾಗಿ ದಿನಗಳಷ್ಟು ಮುಂಚಿತವಾಗಿ ಅಧಿಕಾರಿಗಳು ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ.

ಈಗ ಓಡಾಡುತ್ತಿರುವ ಪ್ಯಾಸೆಂಜರ್ ರೈಲುಗಳಿಗೆ ಸಚಿವಾಲಯದ ಪಕಟಿಸಿದ ಮರುಪಾವತಿ ನಿಯಮಗಲೂ ಅನ್ವಯಿಸುತ್ತವೆ.

ರೈಲುಹೊರಡುವ ನಿಗದಿತ ಸಮಯಕ್ಕಿಂತ ೨೪ ಗಂಟೆಗಳಷ್ಟು ಮುಂಚಿತವಾಗಿ ಆನ್ ಲೈನ್ ಟಿಕೆಟ್ ರದ್ದು ಪಡಿಸಲು ಅನುಮತಿ ನೀಡಲಾಗಿದೆ. ಟಿಕೆಟ್ ರದ್ದು ಶುಲ್ಕವು ಪ್ರಯಾಣ ದರದ ಶೇಕಡಾ ೫೦ರಷ್ಟು ಆಗುತ್ತದೆ.

ಹಾಲಿ ಮಾರ್ಗಸೂಚಿಗಳ ಪ್ರಕಾರ, ಪ್ರಯಾಣಿಕರು ಸಾಮಾನ್ಯ ವರ್ಗದಲ್ಲಿ (ಜನರಲ್ ಕೆಟಗರಿ) ಆನ್ ಲೈನ್ ಟಿಕೆಟ್ ಗಳನ್ನು ಐಆರ್ಸಿಟಿಸಿ ವೆಬ್ ಸೈಟ್ ಮತ್ತು ಅದರ ಆಪ್ ಮೂಲಕ ಬುಕ್ ಮಾಡಬೇಕು. ಎಚ್ಒಆರ್ (ಹೈ ಅಫೀಷಿಯಲ್ ರಿಕ್ವಿಸಿಷನ್) ಹೊಂದಿರುವವರು, ಸ್ವಾತಂತ್ರ್ಯ ಯೋಧರು ಮತ್ತು ಹಾಲಿ ಹಾಗೂ ಮಾಜಿ ಶಾಸನ ಕರ್ತರು ಮತ್ತಿತರರಿಗಾಗಿ ಕೆಲವೇ ಕೆಲವು ಮುಂಗಡ ಟಿಕೆಟ್ ಬುಕಿಂಗ್ ಕೌಂಟರುಗಳು ತೆರೆದಿರುತ್ತವೆ.

ಆದಾಗ್ಯೂ, ರೈಲುಗಳಲ್ಲಿ ಆರ್ಎಸಿ (ರಿಸರ್ವೇಷನ್ ಅಗೆಯಿನ್ಸ್ಟ್ ಕ್ಯಾನ್ಸಲೇಷನ್) ಇರುವುದಿಲ್ಲ.
ರೋಗ ಲಕ್ಷಣಗಳ ಕಾರಣಕ್ಕಾಗಿ ರೈಲು ಏರಲು ಯಾರಿಗೆ ಅನುಮತಿ ನೀಡಲಾಗುವುದಿಲ್ಲವೋ ಅಂತಹವರಿಗೆ ಟಿಕೆಟಿನ ಪೂರ್ತಿ ಹಣ ಮರುಪಾವತಿ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ.

ವೈಟ್ ಲಿಸ್ಟೆಟ್ ಟಿಕೆಟ್
ಬುಧವಾರ ರಾತ್ರಿ ತಡವಾಗಿ ಹೊರಡಿಸಿದ ಆದೇಶದಲ್ಲಿ ಕೇಂದ್ರ ಸರ್ಕಾರವು ಮೇ ೨೨ರಿಂದ ವಿಶೇಷ ಪ್ರಯಾಣಿಕ ರೈಲುಗಳಿಗೆ ವೈಟ್ ಲಿಸ್ಟೆಡ್ ಟಿಕೆಟ್ಗಳನ್ನು ನೀಡಲು ಅನುಮತಿ ನೀಡಿದೆ. ಟಿಕೆಟ್ಗಳಿಗೆ ಮೇ ೧೫ರಿಂದ ಬುಕ್ಕಿಂಗ್ ಆರಂಭವಾಗಲಿದೆ.

ಮೇ ೧೨ರಿಂದ ಆರಂಭವಾಗಿರುವ ಪ್ಯಾಸೆಂಜರ್ ರೈಲುಗಳಿಗೆ ವೈಟ್ ಲಿಸ್ಟೆಡ್ ಟಿಕೆಟ್ಗಳನ್ನು ಪ್ರಸ್ತುತ ನೀಡಲಾಗುತ್ತಿಲ್ಲ.

ರೈಲ್ವೇಯು ಶತಾಬ್ದಿ ಮತ್ತು ಇತರ ಮೆಯಿಲ್ ಎಕ್ಸ್ ಪ್ರಸ್ ರೈಲುಗಳನ್ನು ಕೂಡಾ ಆರಂಭಿಸಬಹುದು. ಆದರೆ ಪ್ರಸ್ತುತ ರಾಜಧಾನಿ ರೈಲುಗಳು ಮಾತ್ರವೇ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ.

ವಿಶೇಷ ರೈಲುಗಳಲ್ಲಿ ಮತ್ತು ಕಾಲಾನುಕ್ರಮದಲ್ಲಿ ತಿಳಿಸಲಾಗುವ ವಿಶೇಷ ರೈಲುಗಳಲ್ಲಿ ರಿಸರ್ವೇಷನ್ ಅಗೆಯಿನ್ಸಟ್ ಕ್ಯಾನ್ಸಲೇಷನ್ (ಆರ್ಎಸಿ) ಇರಬಾರದು ಮತ್ತು; ಸ್ಲೀಪರಿಗೆ ೨೦೦ ಮತ್ತು ಎಸಿ ಚೇರ್ ಕಾರಿಗೆ ೧೦೦, ಎಸಿ, ಎಸಿಗೆ ೫೦ ಮತ್ತು ಎಕ್ಸಿಕ್ಯೂಟಿವ್ ದರ್ಜೆಗೆ ೨೦ ಮತ್ತು ಎಸಿಯಂತೆ ಗರಿಷ್ಠ ಮಿತಿಗಳಿಗೆ ಒಳಪಟ್ಟು ವೈಟ್ ಅಗೆಯಿನ್ಸಟ್ ಟಿಕೆಟ್ಗಳನ್ನು ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಆದೇಶ ತಿಳಿಸಿದೆ.

ರೈಲುಗಳಲ್ಲಿ ಟಿಕೆಟ್ ಬುಕಿಂಗ್ ಮಾಡುತ್ತಿರುವ ಪ್ರಯಾಣಿಕರು ಕೊನೆಯ ಕ್ಷಣಗಳಲ್ಲಿ ಕೆಲವು ಟಿಕೆಟುಗಳನ್ನು ರದ್ದು ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ನಾವು ಕೆಲವೇ ಕೆಲವು ವೈಟ್ ಲಿಸ್ಟ್ ಟಿಕೆಟ್ಗಳನ್ನು ಮೇ ೨೨ರಿಂದ ನೀಡಲು ಆರಂಭಿಸುತ್ತೇವೆ ಏಕೆಂದರೆ, ಕೆಲವು ಪ್ರಯಾಣಿಕರು ತಮ್ಮ ಟಿಕೆಟ್ಗಳನ್ನು ಕೊನೆ ಕ್ಷಣದಲ್ಲಿ ರದ್ದು ಮಾಡುತ್ತಿದ್ದಾರೆ ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ನುಡಿದರು.

No comments:

Advertisement