ಭಾರತದಲ್ಲಿನ ತನ್ನ ಪ್ರಜೆಗಳ ವಾಪಸಿಗೆ ಚೀನಾ ಯೋಜನೆ
ಬೀಜಿಂಗ್: ಭಾರತದ ಜೊತೆಗಿನ ಗಡಿ ಪ್ರಕ್ಷುಬ್ಧತೆ ಹೆಚ್ಚುತ್ತಿರುವುದರ ಮಧ್ಯೆಯೇ ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭಾರತದಲ್ಲಿರುವ ತನ್ನ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಯೋಜಿಸಿದೆ ಎಂದು ನವದೆಹಲಿಯಲ್ಲಿನ ಚೀನೀ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯೊಂದು 2020 ªÉÄà 25gÀ ಸೋಮವಾರ
ತಿಳಿಸಿತು.
ರಾಯಭಾರ ಕಚೇರಿಯ ವೆಬ್ಸೈಟಿನಲ್ಲಿ
ಪ್ರಕಟವಾಗಿರುವ ನೋಟಿಸ್ ಪ್ರಕಾರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಚೀನೀ ವಿದ್ಯಾರ್ಥಿಗಳು, ಪ್ರವಾಸಿಗಳು ಮತ್ತು ವ್ಯವಹಾರೋದ್ಯಮಿಗಳಿಗೆ ವಿಶೇಷ ವಿಮಾನ ಮೂಲಕ ಚೀನಾಕ್ಕೆ ಮರಳಲು ಅವಕಾಶ ನೀಡಲಾಯಿತು.
ಪ್ರಸ್ತುತ ಭಾರತದಲ್ಲಿ ಅಧ್ಯಯನ ಮಾಡುತಿರುವ ಅಥವಾ ವಾಸ್ತವ್ಯದಲ್ಲಿ ಇರುವ ಅಥವಾ ಕೆಲಸ ಮಾಡುತ್ತಿರುವ ಚೀನೀ ನಾಗರಿಕರ ಸಂಖ್ಯೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ.
ಚೀನಾಕ್ಕೆ ವಾಪಸಾಗಬಯಸುವ ತನ್ನ ನಾಗರಿಕರಿಗೆ ಮೇ ೨೭ರ ಬೆಳಗಿಗಿಂತ ಮುಂಚಿತವಾಗಿ ಹೆಸರು ನೋಂದಾಯಿಸುವಂತೆ ಚೀನಾ ಸರ್ಕಾರ ಸೂಚಿಸಿತು.
ಭಾರತದಲ್ಲಿ ಯೋಗ ಅಭ್ಯಾಸ ಮಾಡುತ್ತಿರುವ ಅಥವಾ ಧಾರ್ಮಿಕ ಯಾತ್ರೆಗಾಗಿ ಬಂದಿರುವ ಬೌದ್ಧ ಯಾತ್ರಿಕರಿಗೂ ಈ ಸೂಚನೆ ಅನ್ವಯಿಸಿದೆ.
ವಿಶೇಷ ವಿಮಾನUಳು ಯಾವಾಗ ಭಾರತದಿಂದ ಹೊರಡುತ್ತವೆ ಎಂಬುದನ್ನು ಸೂಚನೆ ಸ್ಷಪ್ಟ ಪಡಿಸಿಲ್ಲ.
ಭಾರತ ಮತ್ತು ಚೀನಾ ನಡುವಣ ವಿವಾದಿತ ಗಡಿಯಲ್ಲಿ ಪ್ರಕ್ಷುಬ್ಧತೆ ಹೆಚ್ಚುತ್ತಿರುವ ಹೊತ್ತಿನಲ್ಲೇ ಚೀನಾದಿಂದ ಈ ತೆರವು ಸೂಚನೆ ಬಂದಿರುವುದು ಗಮನಾರ್ಹವಾಗಿದೆ.
ವಿಮಾನ ಮೂಲಕ ಚೀನಾಕ್ಕೆ ವಾಪಸಾಗಬಯಸುವವರು ಟಿಕೆಟ್ ಹಣ ಮತು ಚೀನಾದಲ್ಲಿ ಇಳಿದ ಬಳಿಕ ೧೪ದಿನಗಳ ಕ್ವಾರಂಟೈನ್ ವೆಚ್ಚವನ್ನು ಸ್ವತಃ ಭರಿಸಬೇಕು ಎಂದು ನೋಟಿಸ್ ತಿಳಿಸಿದೆ.
‘ವಿದೇಶಾಂಗ ವ್ಯವಹಾರ ಸಚಿವಾಲಯ ಮತ್ತು ಇತರ ಸಂಬಂಧಿತ ಇಲಾಖೆಗೆ ಸಮನ್ವಯಿತ ವ್ಯವಸ್ಥೆಯಂತೆ ಭಾರತದಲ್ಲಿನ ಚೀನಾ ರಾಜತಾಂತ್ರಿಕ ಕಚೇರಿಗಳು ಮತ್ತು ರಾಯಭಾರ ಕಚೇರಿಯು ವಿದ್ಯಾರ್ಥಿಗಳು, ಪ್ರವಾಸಿಗಳು, ತಾತ್ಕಾಲಿಕ ವ್ಯವಹಾರಕ್ಕಾಗಿ ಭಾರತಕ್ಕೆ ಬಂದು ಸಿಕ್ಕಿಹಾಕಿಕೊಂಡವರು ಮತ್ತು ಸಂಕಷ್ಟದಲ್ಲಿದ್ದು ತುರ್ತಾಗಿ ಚೀನಾಕ್ಕೆ ವಾಪಸಾಗುವ ಅಗತ್ಯ ಇರುವವರಿಗೆ ಚೀನಾಯಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನೋಟಿಸ್ ಹೇಳಿದೆ.
ಕೋವಿಡ್-೧೯ ಸೋಂಕಿತರು, ಶಂಕಿತರು ಅಥವಾ ೧೪ ದಿನಗಳಿಂದ ಜ್ವರ, ಕಫ ಲಕ್ಷಣಗಳಿರುವವರು ವಿಮಾನ ಏರುವಂತಿಲ್ಲ ಎಂದು ನೋಟಿಸ್ ಸ್ಪಷ್ಟ ಪಡಿಸಿದೆ.
ಕೋವಿಡ್ -೧೯ ರೋಗಿಗಳ ಜೊತೆ ನಿಕಟ ಸಂಪರ್ಕ ಹೊಂದಿದವರು ಅಥವಾ ಯಾರ ದೇಹದ ತಾಪಮಾನ ೩೭.೩ ಡಿಗ್ರಿ ಸೆಂಟಿಗ್ರೇಡ್ ಮೀರುತ್ತದೆಯೋ ಅಂತಹವರಿಗೂ ವಿಮಾನ ಏರಲು ಅವಕಾಶ ನೀಡಲಾಗುವುದಿಲ್ಲ ಎಂದೂ ನೋಟಿಸ್ ತಿಳಿಸಿದೆ.
ಅರ್ಜಿದಾರರು ತಮ್ಮ ವೈದ್ಯಕೀಯ ಇತಿಹಾಸವನ್ನು ಮುಚ್ಚಿಡದಂತೆ ಕಠಿಣ ಎಚ್ಚರಿಕೆಯನ್ನೂ ಸೂಚನೆ ನೀಡಿದೆ. ’ಪ್ರಯಾಣಿಕನು ತನ್ನ ಅಸ್ವಸ್ಥತೆ ಮತ್ತು ಸಂಪರ್ಕ ಇತಿಹಾಸವನ್ನು ಮುಚ್ಚಿಟ್ಟರೆ ಅಥವಾ ಆತನು/ ಆಕೆ ಆಂಟಿಸೆಪ್ಟಿಕ್ ಮತ್ತು ಇತರ ನಿರ್ಬಂಧಿತ ಔಷಧ ಬಳಸಿದ್ದು ಕ್ವಾರಂಟೈನ್ ತಪಾಸಣೆ ವೇಳೆಯಲ್ಲಿ ಗೊತ್ತಾದರೆ ಆತನನ್ನು ಸಾರ್ವಜನಿಕ ಸುರಕ್ಷತೆಗೆ ಅಪಾಯ ಒಡ್ಡಿದ ಅಪರಾಧಕ್ಕೆ ಗುರಿ ಪಡಿಸಲಾಗುತ್ತದೆ’
ಎಂದು ನೋಟಿಸ್ ಹೇಳಿದೆ.
ಚೀನಾದಲ್ಲಿ ಕಳೆದ ವರ್ಷ ಫೆಬ್ರುವರಿಯಲ್ಲಿ ಕೋವಿಡ್ -೧೯ ಸೋಂಕು ಬಾಧಿಸಿದಾಗ ಕೇಂದ್ರ ಚೀನಾದ ಅತಿಬಾಧಿತ ಹುಬೀ ಪ್ರಾಂತ್ಯದಿಂದ ೭೦೦ಕ್ಕೂ ಹೆಚ್ಚು ನಾಗರಿಕರನ್ನು ಮತ್ತು ವಿದೇಶೀ ಪ್ರಜೆಗಳನ್ನು ತೆರವು ಗೊಳಿಸಿದ್ದ ರಾಷ್ಟ್ರಗಳಲ್ಲಿ ಭಾರತವೂ ಒಂದು.
ಚೀನಾದಿಂದ ತನ್ನ ಎರಡನೇ ತಂಡವನ್ನು ಭಾರತವು ಫೆಬ್ರುವರಿ ಅಂತ್ಯದ ವೇಳೆಗೆ ತೆರವುಗೊಳಿಸಿತ್ತು ಚೀನೀ ಅಧಿಕಾರಿಗಳ ವಿಳಂಬದ ಬಳಿಕ ಭಾರತಕ್ಕೆ ಎರಡನೇ ತಂಡವನ್ನು ಅಲ್ಲಿಂದ ತೆರವುಗೊಳಿಸಲು ಸಾಧ್ಯವಾಗಿತ್ತು.
No comments:
Post a Comment