ಇನ್ನಷ್ಟು ರೈಲುಗಳು ಇಷ್ಟರಲ್ಲೇ, ಶೀಘ್ರ ಕೌಂಟರಿನಲ್ಲಿ ಬುಕಿಂಗ್
ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯಲು ಹೇರಲಾದ ಹಲವಾರು ವಾರಗಳ
ಲಾಕ್ ಡೌನ್ ಬಳಿಕ
ಇದೀಗ ರಾಷ್ಟ್ರವನ್ನು ಸಹಜ
ಸ್ಥಿತಿಗೆ ಒಯ್ಯಲು ಇದೀಗ
ಸಕಾಲ ಎಂದು 2020
ಮೇ 21ರ ಗುರುವಾರ ಇಲ್ಲಿ ನುಡಿದ
ರೈಲ್ವೇ ಸಚಿವ ಪೀಯೂಷ್ ಗೋಯಲ್, ಶೀಘ್ರದಲ್ಲೇ ಇನ್ನಷ್ಟು ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಹೇಳಿದರು.
‘ಇನ್ನಷ್ಟು ರೈಲುಗಳ ಸಂಚಾರ ಪುನಾರಂಭವನ್ನು ಪ್ರಕಟಿಸಲಾಗುವುದು. ಇದು ಭಾರತವನ್ನು ಸಹಜ
ಸ್ಥಿತಿಯತ್ತ ಒಯ್ಯುವ ಕಾಲ’
ಎಂದು ಪೀಯೂಷ್ ಗೋಯಲ್
ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು.
ಸಂಬಂಧಿತ ಬೆಳವಣಿಗೆಯೊಂದರಲ್ಲಿ ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರುಗಳಲ್ಲಿ ಬುಕಿಂಗ್Uಳು ಶೀಘ್ರ ಆರಂಭವಾಗಲಿವೆ ಎಂದು ಸಚಿವರು ನುಡಿದರು.
‘ಬುಕಿಂಗ್‌ಗಳು ಕೂಡಾ
ನಿಲ್ದಾಣಗಳ ಟಿಕೆಟ್ ಕೌಂಟರುಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಆರಂಭವಾಗಲಿವೆ. ನಾವು ಅಧ್ಯಯನಗಳನ್ನು ಮಾಡುತ್ತಿದ್ದು ಶಿಷ್ಟಾಚಾರಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ’ ಎಂದು ಸಚಿವರು ಹೇಳಿದರು.
ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುವಲ್ಲಿ ನೀಡಿದ ಸಹಕಾರಕ್ಕಾಗಿ ಉತ್ತರ
ಪ್ರದೇಶದ ಮುಖ್ಯಮಂತ್ರಿ ಯೋಗಿ
ಆದಿತ್ಯನಾಥ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ರೈಲ್ವೇ ಸಚಿವರು ಶ್ಲಾಘಿಸಿದರು ಮತ್ತು ಅಸಹಕಾರಕ್ಕಾಗಿ ಪಶ್ಚಿಮ ಬಂಗಾಳ ಮತ್ತು
ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಟೀಕಿಸಿದರು.
ಬುಧವಾರದವರೆಗೆ ೨೭೯ ಶ್ರಮಿಕ ರೈಲುಗಳು ೫ ಲಕ್ಷ ವಲಸೆ
ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು
ಸಿಕ್ಕಿಹಾಕಿಕೊಂಡಿದ್ದ ಪ್ರವಾಸಿಗರನ್ನು ಅವರವರ
ಹುಟ್ಟೂರುಗಳಿಗೆ ತಲುಪಿಸಿವೆ ಎಂದು
ಸಚಿವರು ನುಡಿದರು.
೨೭ ರೈಲುಗಳು ಪಶ್ಚಿಮ ಬಂಗಾಳ ತಲುಪುವಲ್ಲಿ ಯಶಸ್ವಿಯಾಗಿವೆ, ಮೇ ೮ ಅಥವಾ
೯ರವರೆಗೆ ಕೇವಲ ೨ ರೈಲುಗಳಿಗೆ ಮಾತ್ರ
ಅಲ್ಲಿಗೆ ತಲುಪಲು ಸಾಧ್ಯವಾಗಿತ್ತು ಎಂದು ಗೋಯಲ್ ಹೇಳಿದರು.
ಜೂನ್
೧ರಿಂದ ೨೦೦ ಹೊಸ
ರೈಲುಗಳು ಓಡಾಟ ಆರಂಭಿಸಲಿವೆ ಎಂದು ರೈಲ್ವೇಯು ಮಂಗಳವಾರ ಪ್ರಕಟಿಸಿತ್ತು. ಶ್ರಮಿಕ ವಿಶೇಷ
ರೈಲುಗಳ ಹೊರತಾಗಿ ಓಡಾಡಲಿರುವ ಹೊಸ ರೈಲುಗಳು ಇವು
ಎಂದು ನುಡಿದ ರೈಲ್ವೇ, ಶ್ರಮಿಕ ವಿಶೇಷ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದು
ತಿಳಿಸಿತ್ತು.
ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದ್ದ ರೈಲುಗಳ ಓಡಾಟವನ್ನು ಹಂತ
ಹಂತವಾಗಿ ಆರಂಭಿಸಲಾಗುವುದು ಎಂದು
ಸರ್ಕಾರ ಪ್ರಕಟಿಸಿದ ಬಳಿಕ
ಓಡಿಸಲಾಗುವ ಎರಡನೇ ಕಂತಿನ
ವಿಶೇಷ ಪ್ರಯಾಣಿಕ ಸೇವೆ
ಇದಾಗಿದೆ.
No comments:
Post a Comment