ಮೋದಿ ಪ್ಯಾಕೇಜ್ : ಅಮೆರಿಕ, ಜಪಾನ್ ಬಳಿಕದ ಅತಿದೊಡ್ಡ ಕೊಡುಗೆ
ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಮಹಾ ಬಿಕ್ಕಟ್ಟಿನಲ್ಲಿ ಸಿಲುಕಿ ವಿಲ ವಿಲ ಒಡ್ಡಾಡುತ್ತಿರುವ ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಉತ್ತೇಜಕ ಆರ್ಥಿಕ ಕೊಡುಗೆಗಳ ಘೋಷಣೆ ಸಹಿತವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿವೆ. ಪ್ರಧಾನಿ ನರೇಂದ್ರ ಮೋದಿಯವರೂ 2020 ಮೇ 12ರ ಮಂಗಳವಾರ ೨೦
ಲಕ್ಷ ಕೋಟಿ ರೂಪಾಯಿಗಳ ’ಮಹಾ ಕೊಡುಗೆ’ ಘೋಷಿಸಿದ್ದಾರೆ.
ಪ್ರಧಾನಿ ಮೋದಿಯವರು ಪ್ರಕಟಿಸಿದ ಕೊಡುಗೆ ಕಡಿಮೆ ಮೊತ್ತದ್ದಲ್ಲ. ಇದು ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ.
೧೦ ರಷ್ಟು ಪ್ರಮಾಣದ್ದಾಗಿದೆ. ಈ ಮೊತ್ತ ಪಾಕಿಸ್ತಾನದ ಮುಂಗಡಪತ್ರದ ಗಾತ್ರಕ್ಕೆ ಸಮವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ತೇಜಕ ಪ್ಯಾಕೇಜ್ ಘೋಷಿಸಿದ ದೇಶಗಳು ಅತ್ಯಂತ ವಿರಳ. ಜಿಡಿಪಿಯ ಭಾಗದ ಆಧಾರದಲ್ಲಿ ಭಾರತ ಘೋಷಿಸಿದ ಕೊಡುಗೆ ವಿಶ್ವದಲ್ಲಿ ೩ನೇ ಗರಿಷ್ಠ ಮೊತ್ತ ಎನಿಸಿದೆ. ಮೊದಲೆರಡು ಸ್ಥಾಗಳು ಜಪಾನ್ ಮತ್ತು ಅಮೆರಿಕಕ್ಕೆ ಹೋಗುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದರು.
ಜಪಾನ್ ಸರ್ಕಾರ ತನ್ನ ಜಿಡಿಪಿಯ ಶೇ.
೨೧ ರಷ್ಟು ಪ್ರಮಾಣದ ಮೊತ್ತವನ್ನು ಉತ್ತೇಜಕ ಕೊಡುಗೆಯಾಗಿ ಘೋಷಿಸಿದೆ. ಅಮೆರಿಕ ಸರ್ಕಾರ ಕೂಡ ಜಿಡಿಪಿಯ ಶೇ. ೧೩ರಷ್ಟು ಪ್ರಮಾಣದ ಹಣವನ್ನು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಕಟಿಸಿದೆ. ಇದು ಬಿಟ್ಟರೆ ಬೇರೆ ಯಾವ ದೇಶಗಳೂ ಕೂಡ ಭಾರತದಕ್ಕಿಂತ ಹೆಚ್ಚು ಮೊತ್ತದ ಉತ್ತೇಜಕ ಕೊಡುಗೆಯನ್ನು ಈವರೆಗೂ ಘೋಷಿಸಿಲ್ಲ.
ಆದರೆ, ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ ೨೦
ಲಕ್ಷ ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯಲ್ಲಿ ಕೊರೋನಾ ಬಿಕ್ಕಟ್ಟು ಉದ್ಭವಿಸಿದ ನಂತರ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಕಟಿಸಿದ ಕೆಲವು ಕೊಡುಗೆಗಳೂ ಅಡಕವಾಗಿವೆ. ಸುಮಾರು ೬.೫ ಲಕ್ಷ ಕೋಟಿ ಮೌಲ್ಯದ ಅಂದರೆ, ಜಿಡಿಪಿಯ ಶೇ ೩.೨ ಭಾಗದ ಕೊಡುಗೆಯನ್ನು ಈ ಮೊದಲೇ ಪ್ರಕಟಿಸಲಾಗಿತ್ತು.
ಕೊರೋನಾ ಬಿಕ್ಕಟ್ಟು ಉದ್ಭವಿಸಿದ ಬಳಿಕ ಕೇಂದ್ರ ಸರ್ಕಾರ ಘೋಷಿಸಿದ ಕೊಡುಗೆಗಳಲ್ಲಿ ಬಡವರು, ಮಹಿಳೆಯರು, ವೃದ್ಧರಿಗೆ ಸಹಾಯವಾಗಿ ನೀಡಲಾದ ೧.೭ ಲಕ್ಷ ಕೋಟಿ ರೂಪಾಯಿಗಳ ಕೊಡುಗೆ ಕೂಡಾ ಸೇರಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಡ್ಡಿ ದರ
ಕಡಿಮೆ ಮಾಡಿದ್ದು, ದ್ರವ್ಯತೆಗಾಗಿ (ಲಿಕ್ವಿಡಿಟಿ) ಕ್ರಮ ತೆಗೆದುಕೊಂಡದ್ದೂ ಇದರಲ್ಲಿ ಸೇರಿದೆ. ಹಾಗೆಯೇ, ಮಾರ್ಚ್ ತಿಂಗಳಲ್ಲಿ ಘೋಷಿಸಿದ ಉತ್ತೇಜಕ ಕೊಡುಗೆ ಕೂಡಾ ಇದ್ದು, ಇವೆಲ್ಲವೂ ಸೇರಿ ೬.೫ ಲಕ್ಷ ಕೊಟಿ ರೂಪಾಯಿ ಮೊತ್ತವಾಗುತ್ತದೆ.
ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡುವುದರ ಜೊತೆಗೆ ಭೂಸುಧಾರಣೆ, ಕಾರ್ಮಿಕ ಸಮಸ್ಯೆ, ಕಾನೂನು, ಲಿಕ್ವಿಡಿಟಿ ಇತ್ಯಾದಿಗಳ ಸುಧಾರಣೆಗೆ ಈ ವಿಶೇಷ ಕೊಡುಗೆ ವಿನಿಯೋಗವಾಗಲಿದೆ. ಗುಡಿಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರು, ಮಧ್ಯಮವರ್ಗ ಮತ್ತು ಉದ್ಯಮಗಳಿಗೆ ಈ ಕೊಡುಗೆ ನೆರವಾಗಲಿದೆ.
No comments:
Post a Comment