Wednesday, June 3, 2020

ಜೂನ್ 15ರ ವೇಳೆಗೆ ಭಾರತದಲ್ಲಿ ದಿನಕ್ಕೆ ೧೫,೦೦೦ ಕೊರೋನಾ: ಚೀನಾ

ಜೂನ್ 15ರ ವೇಳೆಗೆ ಭಾರತದಲ್ಲಿ ದಿನಕ್ಕೆ ೧೫,೦೦೦ ಕೊರೋನಾ: ಚೀನಾ

ಬೀಜಿಂಗ್: ಭಾರತದ ಕೋವಿಡ್ -೧೯ ಪ್ರಕರಣಗಳು ಜೂನ್ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿವೆ ಎಂದು ಚೀನಾ 2020 ಜೂನ್  03ರ ಬುಧವಾರ ಭವಿಷ್ಯ ನುಡಿಯಿತು.

ಜೂನ್ ತಿಂಗಳಲ್ಲಿ ಭಾರತವು ಕೋವಿಡ್ -೧೯ ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಾಣುವ ಸಾಧ್ಯತೆಯಿದೆ, ದೈನಂದಿನ ಹೆಚ್ಚಳವು ತಿಂಗಳ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿದೆ ಎಂದು ಚೀನಾದ ಸಂಶೋಧಕರು ಸಿದ್ಧಪಡಿಸಿದ ಕೊರೋನವೈರಸ್ ಸಾಂಕ್ರಾಮಿಕ ರೋಗದ ಜಾಗತಿಕ ಮುನ್ಸೂಚನೆ ಮಾದರಿ ಭವಿಷ್ಯ ನುಡಿಯಿತು.

ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದ ಲ್ಯಾನ್ ಝೋವು ವಿಶ್ವವಿದ್ಯಾಲಯವು ಸ್ಥಾಪಿಸಿದಗ್ಲೋಬಲ್ ಕೋವಿಡ್ -೧೯ ಪ್ರಿಡಿಕ್ಟ್ ಸಿಸ್ಟಮ್೧೮೦ ದೇಶಗಳಿಗೆ ದೈನಂದಿನ ಮುನ್ಸೂಚನೆಯನ್ನು ನೀಡುತ್ತದೆ.

ಜೂನ್ ರಂದು ಭಾರತದಲ್ಲಿ ,೨೯೧ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳ ಬಗ್ಗೆ ಸಂಶೋಧನಾ ಗುಂಪಿನ ಮುನ್ಸೂಚನೆ ಮಾದರಿಯು ಭವಿಷ್ಯ ನುಡಿದಿತ್ತು. ಭಾರತ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ,೯೦೯ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಈವರೆಗಿನ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ.

ಬುಧವಾರದಿಂದ, ಮುಂದಿನ ನಾಲ್ಕು ದಿನಗಳವರೆಗೆ ೯೬೭೬, ೧೦,೦೭೮, ೧೦,೪೯೮ ಮತ್ತು ೧೦,೯೩೬ ದೈನಂದಿನ ಹೊಸ ಪ್ರಕರಣಗಳ ಮುನ್ಸೂಚನೆಯನ್ನು ಸಂಸ್ಥೆ ನೀಡಿದೆ.

ಮತ್ತೊಂದು ಉದಾಹರಣೆಯಂತೆ, ಮೇ ೨೮ (ಗುರುವಾರ)ರಂದು ,೪೬೭ ಹೊಸ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. "ಮೇ ೨೮ ಕ್ಕೆ, ಭಾರತದಲ್ಲಿ  ,೬೦೭ ಹೊಸ ಕೋವಿಡ್ -೧೯ ಪ್ರಕರಣಗಳ ದಾಖಲಾಗುವ ಬಗ್ಗೆ ನಾವು ಭವಿಷ್ಯ ನುಡಿದಿದ್ದೆವು. ಅದು ಬಳಿಕ ವರದಿಯಾದ ಸಂಖ್ಯೆಗೆ ಹತ್ತಿರದಲ್ಲಿದೆ. ನಮ್ಮ ಭವಿಷ್ಯವು ಆರಂಭಿಕ ಹಂತದಲ್ಲಿದೆ. ದೋಷ ವಿಶ್ಲೇಷಣೆಯನ್ನು ಶೀಘ್ರದಲ್ಲೇ ನಮ್ಮ ವೆಬ್ಸೈಟ್ನಲ್ಲಿ ನವೀಕರಿಸಲಾಗುವುದುಎಂದು ಯೋಜನೆಯ ಮುಖ್ಯಸ್ಥರಾಗಿರುವ ಲ್ಯಾನ್ ಝೋವು ವಿಶ್ವವಿದ್ಯಾಲಯದ ಸಹಕಾರಿ ಇನ್ನೋವೇಶನ್ ಸೆಂಟರ್ ಆಫ್ ವೆಸ್ಟರ್ನ್ ಇಕಾಲಜಿಕಲ್ ಸೇಫ್ಟಿಯ ನಿರ್ದೇಶಕ ಹುವಾಂಗ್ ಜಿಯಾನ್ಪಿಂಗ್ ತಿಳಿಸಿದರು.

ಜೂನ್ ೧೫ ಹೊತ್ತಿಗೆ, ಭಾರತವು ಪ್ರತಿದಿನ ೧೫ ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಸೋಂಕಿನ ಪ್ರಕರಣಗಳನ್ನು ಕಾಣಬಹುದು ಎಂದು ಅವರು ನುಡಿದರು.

ಭಾರತವು ಸತತ ಮೂರು ದಿನಗಳವರೆಗೆ ,೦೦೦ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ, ಒಟ್ಟು ಸೋಂಕುಗಳ ಸಂಖ್ಯೆ ಈಗ ,೦೦,೦೦೦ ಕ್ಕಿಂತ ಹೆಚ್ಚಾಗಿದೆ.

ಜೂನ್ನಲ್ಲಿ ಅಮೆರಿಕವು ಪ್ರತಿದಿನ ೩೦,೦೦೦ದಷ್ಟು  ಹೊಸ ಪ್ರಕರಣಗನ್ನು ದಾಖಲಿಸುತ್ತದೆ ಮತ್ತು ಯುರೋಪಿನ ಪ್ರಮುಖ ದೇಶಗಳು ಹೊಸ ದೈನಂದಿನ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಕಾಣುತ್ತವೆ ಎಂದು ಅದೇ ವ್ಯವಸ್ಥೆಯು ಭವಿಷ್ಯ ನುಡಿದಿದೆ.

ಕಳೆದ ವಾರ ಆನ್ಲೈನ್ನಲ್ಲಿ ಅನಾವರಣಗೊಂಡ ಡೈನಾಮಿಕ್ ಮುನ್ಸೂಚನೆ ಮಾದರಿಯು ಹವಾಮಾನ ಮತ್ತು ಪರಿಸರ ಪರಿಸ್ಥಿತಿಗಳು, ಜನಸಂಖ್ಯಾ ಸಾಂದ್ರತೆ ಮತ್ತು ಸರ್ಕಾರಗಳು ಜಾರಿಗೆ ತಂದ ನಿಯಂತ್ರಣ ಕ್ರಮಗಳ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

"ವೈರಸ್ ಹರಡುವಿಕೆಯು ಜನಸಂಖ್ಯಾ ಸಾಂದ್ರತೆ, ಸಂಪರ್ಕತಡೆಯ ಕ್ರಮಗಳು ಮತ್ತು ಪರಿಸರ ಅಂಶಗಳು ಸೇರಿದಂತೆ ಅನೇಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ವಿಶ್ವದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಅಂಶಗಳು ವಿಭಿನ್ನವಾಗಿ ಕೊಡುಗೆ ನೀಡುತ್ತವೆಎಂದು ಹುವಾಂಗ್ ಹೇಳಿದರು.

ಹವಾಮಾನ ಅಂಶಗಳು ವೈರಸ್ ಹರಡುವಿಕೆಯ ಮೇಲೆ ಪರಿಣಾಮ ಬೀರಬಹುದು. ತಾಪಮಾನ ಮತ್ತು ತೇವಾಂಶದ ಪ್ರಭಾವವನ್ನು ಪರಿಗಣಿಸುವುದು ಅಗತ್ಯವೆಂದು ನಾವು ನಂಬುತ್ತೇವೆ, ಆದರೂ ಅವುಗಳ ಪ್ರಭಾವದ ಮಟ್ಟವು ವಿವಿಧ ಪ್ರದೇಶಗಳಲ್ಲಿ ಬದಲಾಗುತ್ತದೆಎಂದು ಯೋಜನೆಯ ನಾಯಕ ಹುವಾಂಗ್ ಹೇಳಿದರು.

ಭಾರತದಲ್ಲಿ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯು ಸಾಮಾಜಿಕ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಸಾಂಕ್ರಾಮಿಕ ಬೆಳವಣಿಗೆಗೆ ಅನುಕೂಲಕರವಾಗಿದೆ. ಇತರ ಅಂಶಗಳೊಂದಿಗೆ ಹೋಲಿಸಿದರೆ ತಾಪಮಾನದ ಪ್ರಭಾವ ಸೀಮಿತವಾಗಿದೆಎಂದು ಅವರು ನುಡಿದರು.

ಸರ್ಕಾರವು ಕ್ರಮೇಣ ದಿಗ್ಬಂಧನವನ್ನು ಸಡಿಲಗೊಳಿಸುವುದರಿಂದ ಭಾರತದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದರು.

No comments:

Advertisement