Wednesday, June 10, 2020

ದೆಹಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಫಲಕ: ಬೈಜಾಲ್ ಆದೇಶ

ದೆಹಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಫಲಕ: ಬೈಜಾಲ್ ಆದೇಶ

ನವದೆಹಲಿ: ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕಲು ಓಡಾಡುವ ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ, ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲಿ ಇರುವ ರೋಗಿಗಳು, ಹಾಸಿಗೆಗಳ ಲಭ್ಯತೆಯನ್ನು ಸೂಚಿಸುವ ಎಲೆಕ್ಟ್ರಾನಿಕ್ ಫಲPವನ್ನು ಆಸ್ಪತ್ರೆಗಳ ಪ್ರವೇಶದ್ವಾರದಲ್ಲಿ ಅಳವಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ೨೦೨೦ ಜೂನ್ ೧೦ರ ಬುಧವಾರ ಆದೇಶ ನೀಡಿದರು.

ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಸೂಕ್ತ ಆದೇಶ ನೀಡುವಂತೆ ಬೈಜಾಲ್ ಅವರು ಈಗಾಗಲೇ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರಿಗೆ ಸೂಚಿಸಿದರು.

ಎಲೆಕ್ಟ್ರಾನಿಕ್ ಫಲಕಗಳ ಸಂಪರ್ಕವನ್ನು ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗುವ ಕೇಂದ್ರ ನಿಯಂತ್ರಣ ಘಟಕಕ್ಕೆ ಒದಗಿಸುವಂತೆ ಕೂಡಾ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದರು.

ಸರ್ಕಾರವು ಹಿಂದೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ತಿಳಿಯಲು ಆಸ್ಪತ್ರೆಗಳಲ್ಲಿ ಎಲೆಕ್ಟ್ರಾನಿಕ್ ಫಲಕ ಅಳವಡಿಸುವುದರ ಜೊತೆಗೆ ಸರ್ಕಾರ ಸ್ಥಾಪಿಸಿದ ವೆಬ್ ಸೈಟ್ ಮತ್ತು ಆಪ್ಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಿತ್ತು. ಆದರೆ ವೆಬ್ ಸೈಟ್ ಮತ್ತು ಆಪ್ಗಳಲ್ಲಿ ಹಾಸಿಗೆ ಲಭ್ಯತೆಯ ಮಾಹಿತಿ ಇದ್ದರೂ, ಆಸ್ಪತ್ರೆಗೆ ಹೋದಾಗಿ ಹಾಸಿಗೆ ಇಲ್ಲ ಎಂಬುದಾಗಿ ವಾಪಸ್ ಕಳುಹಿಸಲಾಗುತ್ತಿದೆ ಎಂಬ ದೂರುಗಳು ಬಂದಿದ್ದವು.

ಗವರ್ನರ್ ಆದೇಶ ಪಾಲನೆ:  ಕೋವಿಡ್-೧೯ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಆದೇಶ ಪಾಲಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಸ್ಪಷ್ಟ ಪಡಿಸಿದರು. ಇದೇ ವೇಳೆಗೆ ರೋಗ ಪ್ರಸರಣದ ಕುರಿತ ಸ್ಪಷ್ಟ ಚಿತ್ರಣ ಪಡೆಯಲು ತಜ್ಞರ ನೆರವು ಪಡೆಯಲು ಬೈಜಾಲ್ ಅವರು ಮುಂದಾಗಿದ್ದಾರೆ.

ಮುಂದಿನ ಕೆಲವು ವಾರಗಳು ಮತ್ತು ತಿಂಗಳುಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಹರಡುವಿಕೆಯ ಸ್ಪಷ್ಟ ಚಿತ್ರಣವನ್ನು ಪಡೆಯಲು ತಜ್ಞರ ಸಮಿತಿಯನ್ನು ರಚಿಸಲು ಲೆಫ್ಟಿನೆಂಟ್ ಗವರ್ನರ್ ಒಲವು ತೋರಿದ್ದಾರೆ.

ರೋಗಿಗಳಿಗೆ ವೈದ್ಯಕೀಯ ಆರೈಕೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕೋವಿಡ್ -೧೯ ರೋಗಿಗಳಿಗೆ ಲಭ್ಯವಿರುವ ಹಾಸಿಗೆಗಳನ್ನು ನಗರವು ಹೇಗೆ ವೇಗವಾಗಿ ಒದಗಿಸಬಹುದು ಎಂಬುದಾಗಿ ತಜ್ಞರು ಮಾರ್ಗದರ್ಶನ ನೀಡಬೇಕೆಂದು ಬೈಜಾಲ್ ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ರಚಿಸಿದ ಸಮಿತಿಯು ಜುಲೈ ೩೧ ವೇಳೆಗೆ ನಗರದಲ್ಲಿ ಕೋವಿಡ್-೧೯ ಪೀಡಿತರ ಸಂಖ್ಯೆಯು ಲಕ್ಷ ಮೀರಬಹುದು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಪಡೆಯಲು ಬೈಜಾಲ್ ಮುಂದಾಗಿದ್ದಾರೆ ಎಂದ ಮೂಲಗಳು ತಿಳಿಸಿವೆ.

ಜುಲೈ ಅಂತ್ಯದ ವೇಳೆಗೆ ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡಲು ನಗರಕ್ಕೆ . ಲಕ್ಷ ಹಾಸಿಗೆಗಳು ಬೇಕಾಗುತ್ತವೆ, ಇದಕ್ಕೆ ವ್ಯತಿರಿಕ್ತವಾಗಿ ದೆಹಲಿಯಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸುಮಾರು ೫೮,೦೦೦ ಆಸ್ಪತ್ರೆ ಹಾಸಿಗೆಗಳಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಅಂದಾಜು ಮಾಡಿದೆ. ಹಿನ್ನೆಲೆಯಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಮನೆಯಲ್ಲಿಯೇ ಪ್ರತ್ಯೇಕವಾಸ ಮಾಡುವಂತೆ ಸಮಿತಿ ಸೂಚಿಸಿದೆ.

ದೆಹಲಿಯಲ್ಲಿ ಕೋವಿಡ್-೧೯ ರೋಗಿಗಳಿಗೆ ಚಿಕಿತ್ಸೆಗಾಗಿ ಗೊತ್ತು ಪಡಿಸಲಾಗಿರುವ ಆಸ್ಪತ್ರೆಗಳಲ್ಲಿ ಮಂಗಳವಾರದ ವೇಳೆಗೆ, ,೮೯೨ ಆಸ್ಪತ್ರೆ ಹಾಸಿಗೆಗಳು, ೫೮೨ ಐಸಿಯು ಹಾಸಿಗೆಗಳು, ೫೦೭ ವೆಂಟಿಲೇಟರ್ ಹಾಸಿಗೆಗಳು ಮತ್ತು ,೫೯೦ ಆಮ್ಲಜನಕ ಬೆಂಬಲಿತ ಹಾಸಿಗೆಗಳು ಚಿಕಿತ್ಸೆಗೆ ಲಭ್ಯ ಇವೆ.

ಕೊರೋನವೈರಸ್ ಕಾಯಿಲೆಯ ಆರಂಭಿಕ ಹಂತದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ತಜ್ಞರ ಸಮಿತಿಯನ್ನು ನೇಮಿಸಿತ್ತು. ಸಮಿತಿಯು ಪ್ರತಿದಿನ ,೦೦೦ ಹೊಸ ಕೋವಿಡ್ -೧೯ ಪ್ರಕರಣಗಳಲ್ಲಿ ಚಿಕಿತ್ಸಾ ಪೂರ್ವಸಿದ್ಧತೆ ನಡೆಸುವಂತೆ ಸರ್ಕಾgಕ್ಕೆ ಸಮಿತಿ ಹೇಳಿದೆ.

ಮುಂದಿನ ವಾರ ನಗರವು ಎರಡು ಪಟ್ಟು ಹೆಚ್ಚು ಪ್ರಕರಣಗಳನ್ನು ನಿರೀಕ್ಷಿಸಬಹುದು ಎಂದು ಕೆಲವು ತಜ್ಞರು ಸರ್ಕಾರಕ್ಕೆ ತಿಳಿಸಿದ್ದಾರೆ.

ಕೋವಿಡ್ -೧೯ ಪ್ರಕರಣಗಳಲ್ಲಿ ಯೋಜಿತ ಏರಿಕೆಯ ಕುರಿತಾದ ಕಳವದ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ್ ಸಚಿವ ಸಂಪುಟವು ದೆಹಲಿಯ ನಿವಾಸಿಗಳಿಗೆ ಮಾತ್ರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಮೀಸಲು ಪಡಿಸಿ, ಹೊರಗಿನ ರೋಗಿಗಳಿಗೆ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಲು ಯೋಜಿಸಿತ್ತು.

ಏನಿದ್ದರೂ, ಆದೇಶವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರದ್ದು ಪಡಿಸಿದರು. ಆರೋಗ್ಯದ ಹಕ್ಕು ಜೀವನದ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಲೆಫ್ಟಿನೆಂಟ್ ಗವರ್ನರ್ ಉಲ್ಲೇಖಿಸಿದ್ದರು.

ಲೆಫ್ಟಿನೆಂಟ್ ಗವರ್ನರ್ ನಿರ್ಧಾರಕ್ಕೆ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಮಂಗಳವಾರ  ಲೆಫ್ಟಿನೆಂಟ್ ಗವರ್ನರ್ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ವಿಡಿಯೋ ಹೇಳಿಕೆಯಲ್ಲಿ ತಮ್ಮ ಸರ್ಕಾರವು ಅನಿಲ್ ಬೈಜಾಲ್ ಅವರ ನಿರ್ಧಾರವನ್ನು ಸಂಪೂರ್ಣವಾಗಿ ಪಾಲಿಸುತ್ತದೆ ಮತ್ತು ಕೋವಿಡ್-೧೯ ರೋಗದೊಂದಿಗೆ ಹೋರಾಡಲು ಮುಂದಾಗಿದೆ ಎಂದು ಹೇಳಿದರು.

No comments:

Advertisement