Friday, June 12, 2020

‘ಪಾಪಿಗಳ ನಾಶ ಪವಿತ್ರ ಕೆಲಸ’, ವಿಡಿಯೋ ಸಮರ್ಥಿಸಿದ ಚೌಹಾಣ್

‘ಪಾಪಿಗಳ ನಾಶ ಪವಿತ್ರ ಕೆಲಸ’, ವಿಡಿಯೋ ಸಮರ್ಥಿಸಿದ ಚೌಹಾಣ್

ಭೋಪಾಲ್: ಕಮಲನಾಥ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪಕ್ಷದ ವರಿಷ್ಠ ಮಂಡಳಿಯ ಸೂಚನೆ ಮೇರೆಗೇ ಕೆಡವಲಾಯಿತು ಎಂಬುದಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರು ಒಪ್ಪಿಕೊಂಡ ಆಡಿಯೋ ಮತ್ತು ವಿಡಿಯೋ ದೃಶ್ಯಾವಳಿಗಳು ವೈರಲ್ ಆದ ಒಂದು ದಿನದ ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಚೌಹಾಣ್ ತಮ್ಮ ನಿಲುವನ್ನು 2020 ಜೂನ್ 11ರ ಗುರುವಾರ ಸಮರ್ಥಿಸಿಕೊಂಡರು.

ಪಾಪಿಗಳನ್ನು ನಾಶ ಮಾಡುವುದು ಪವಿತ್ರ ಕಾರ್ಯ ಎಂಬುದಾಗಿ ಮುಖ್ಯಮಂತ್ರಿ ಪ್ರತಿಪಾದಿಸಿದರು..

ಪಾಪಿಯೋಂಕಾ ವಿನಾಶ್ ಕರನಾ ತೋ ಪುಣ್ಯ ಕಾ ಕಾಮ್ ಹೈ. ಹಮಾರಾ ಧರಮ್ ತೊ ಯಹೀ ಕೆಹ್ತಾ ಹೈ ಕ್ಯೋಂ? ಬೋಲೋ! ಸಿಯಾಪತಿ ರಾಮಚಂದ್ರ ಕಿ ಜೈ (ಪಾಪಿಗಳನ್ನು ನಾಶ ಮಾಡುವುದು ಪವಿತ್ರ ಕಾರ್. ನಮ್ಮ ಧರ್ಮ ಇದನ್ನೇ ಹೇಳುತ್ತದೆ. ಅಲ್ಲವೇ?’ ಎಂದು ಚೌಹಾಣ್ ಟ್ವೀಟ್ ಮಾಡಿದರು.

ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಪಕ್ಷದ ವರಿಷ್ಠ ಮಂಡಳಿ ಸೂಚಿಸಿತ್ತು ಇಲ್ಲದೇ ಇದ್ದಲ್ಲಿ ಅದು ಎಲ್ಲವನ್ನೂ ನಾಶ ಮಾಡುತ್ತಿತ್ತು ಎಂಬುದಾಗಿ ಚೌಹಾಣ್ ಹೇಳಿದ್ದ ಆಡಿಯೋ, ವಿಡಿಯೋ ದೃಶ್ಯಾವಳಿಗಳು ವೈರಲ್ ಆದ ಬಳಿಕ ಮಧ್ಯಪ್ರದೇಶದಲ್ಲಿ ಭಾರೀ ವಿವಾದ ಉದ್ಭವಿಸಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಸಹಾಯಕ ತುಲಸೀರಾಮ್ ಸಿಲಾವತ್ ಹೊರತಾಗಿ ಇದು ಸಾಧ್ಯವಿರಲಿಲ್ಲ ಎಂದೂ ಚೌಹಾಣ್ ಹೇಳಿದ್ದು ಆಡಿಯೋ ವಿಡಿಯೋದಲ್ಲಿ ದಾಖಲಾಗಿತ್ತು.

ಬಿಜೆಪಿಯು ಸಂಚು ಮತ್ತು ಪ್ರಲೋಭನೆಗಳ ಮೂಲಕ ತಮ್ಮನ್ನು  ಅಧಿಕಾರದಿಂದ ಕಿತ್ತುಹಾಕಿತು ಎಂಬುದಕ್ಕೆ ಇದು ಸಾಕ್ಷಿ ಎಂದು ಕಮಲನಾಥ್  ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳಿದ್ದರು.

ಇದಕ್ಕೆ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಆಡಿಯೋ ಕ್ಲಿಪ್ಸೃಷ್ಟಿತ ಎಂದು ಹೇಳಿದ್ದರು. ’ಬುದ್ಧಿ ಇಲ್ಲದೆ ಆಡಿಯೋ ಕ್ಲಿಪ್ನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದ್ದರು. ’ಇದರಲ್ಲಿ ಆಕ್ಷೇಪಾರ್ಹವಾದದ್ದೇನೂ ಇಲ್ಲ, ಏಕೆಂದರೆ ನಮ್ಮ ಪಕ್ಷದಲ್ಲಿ ವರಿಷ್ಠ ಮಂಡಳಿಯ ಸೂಚನೆಯ ಬಳಿಕವೇ ಎಲ್ಲ ಕೆಲಸಗಳನ್ನೂ ಮಾಡಲಾಗುತ್ತದೆ ಎಂದೂ ಅವರು ಹೇಳಿದ್ದರು.

ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯವರನ್ನು ಭೇಟಿ ಮಾಡುವುದಾಗಿ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲು ಏರುವುದಾಗಿ ಕಾಂಗ್ರೆಸ್ ಹಾಕಿದ ಬೆದರಿಕೆಗೆ ಪ್ರತಿಕ್ರಿಯಿಸಿದ ವಿಜಯವರ್ಗೀಯಅವರು ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಹೇಳಿದ್ದರು.

ನಾವು ಎಲ್ಲ ೨೪ ವಿಧಾನಸಭಾ ಸ್ಥಾನಗಳನ್ನೂ ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ ವಿಜಯವರ್ಗೀಯ, ಕಮಲನಾಥ್ ಸರ್ಕಾರವು ತನ್ನ ೧೪ ತಿಂಗಳುಗಳ ಅವಧಿಯಲ್ಲಿ ಮರಳು ಗಣಿಗಾರಿಕೆ, ಸಾರಾಯಿ, ವರ್ಗಾವಣೆ, ಉದ್ಯಮ ಅಥವಾ ರೈತರು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಆದ ವಂಚನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿತ್ತು ಎಂದು ದೂರಿದ್ದರು.

ಚೌಹಾಣ್ ಆಡಿಯೋ/ವಿಡಿಯೋದಲ್ಲಿ ಪ್ರಸ್ತಾಪಗೊಂಡಿದ್ದ ಕಮಲನಾಥ್ ಸಂಪುಟದಲ್ಲಿ ಸಚಿವರಾಗಿದ್ದ ಸಿಲಾವತ್ ಅವರು ಕೂಡಾ ಗುರುವಾರ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ’ಬೀದಿಗಳಿಗೆ ಹೋಗಿ ಎಂಬುದಾಗಿ ನಮಗೆ ಸೂಚಿಸಲಾಗಿತ್ತು. ಆದ್ದರಿಂದ ನಾವು ಬೀದಿಗಳಿಗೆ ಇಳಿದೆವು ಎಂದು ಅವರು ಹೇಳಿದರು.

ಬೀದಿಗೆ ಇಳಿಯಬೇಕಾಗುತ್ತದೆ ಎಂಬ ಸಿಂಧಿಯಾ ಅವರ ಎಚ್ಚರಿಕೆಗೆ ಕಮಲನಾಥ್ ಅವರುಅವರು ಹಾಗೆ ಮಾಡಲಿ ಎಂಬುದಾಗಿ ನೀಡಿದ್ದ ಹಳೆಯ ಹೇಳಿಕೆಯನ್ನು ಸಿಲಾವತ್ ಉಲ್ಲೇಖಿಸಿದರು.

No comments:

Advertisement