Friday, June 19, 2020

ದೇಶದಲ್ಲಿ ೩.೮೦ ಲಕ್ಷಕ್ಕೆ ಏರಿದ ಕೊರೋನಾ

ದೇಶದಲ್ಲಿ ೩.೮೦ ಲಕ್ಷಕ್ಕೆ ಏರಿದ ಕೊರೋನಾ

ಚೇತರಿಕೆ ಪ್ರಮಾಣ ಶೇಕಡಾ 53.79ಕ್ಕೆ ಏರಿಕೆ

ನವದೆಹಲಿ: ಭಾರತವು ಒಂದೇ ದಿನದಲ್ಲಿ ೧೩,೫೮೬ ಹೊಸ ಕೋವಿಡ್-೧೯ ಪ್ರಕರಣಗಳನ್ನು ದಾಖಲಿಸುವುದರೊಂದಿಗೆ  ಶುಕ್ರವಾರ ಸೋಂಕು ಪ್ರಕರಣಗಳ ಸಂಖ್ಯೆ ,೮೦,೫೩೨ಕ್ಕೆ ತಲುಪಿದೆ. ೩೩೬ ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ ೧೨,೫೭೩ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿದವು.

ಮಧ್ಯೆ, ರೋಗದಿಂದ ಗುಣಮುಖರಾಗಿ ಚೇತರಿಸಿಕೊಂಡವರ ಸಂಖ್ಯೆ ಎರಡು ಲಕ್ಷವನ್ನು ದಾಟಿದ ಆಶಾದಾಯಕ ವರದಿಗಳೂ ಬಂದಿವೆ. .೮೦ ಲಕ್ಷ ಸೋಂಕು ಪ್ರಕರಣಗಳ ಪೈಕಿ ,೦೪,೭೧೦ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ,೬೩.೨೪೮ ಸಕ್ರಿಯ ಪ್ರಕರಣಗಳಿವೆ ಎಂದು ಶುಕ್ರವಾರ ಬೆಳಗ್ಗೆ ಪ್ರಕಟಿಸಲಾದ ನವೀಕೃತ ಅಂಕಿಅಂಶಗಳು ಹೇಳಿವೆ.

"ಹೀಗಾಗಿ, ಇದುವರೆಗೆ ಚೇತರಿಕೆಯ ಪ್ರಮಾಣ ಶೇಕಡಾ ೫೩.೭೯ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಭಾರvವು ಸತತ ಎಂಟನೇ ದಿನ ೧೦,೦೦೦ ಪ್ರಕರಣಗಳನ್ನು ದಾಖಲಿಸಿದೆ. ಕೋವಿಡ್-೧೯ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿರುವ ಪ್ರಮುಖ ಐದು ರಾಜ್ಯಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್ ಮತ್ತು ಉತ್ತರ ಪ್ರದೇಶಗಳು ಜೂನ್ ರಿಂದ ೧೯ ರವರೆಗೆ ,೮೯,೯೯೭ ಸೋಂಕುಗಳ ಉಲ್ಬಣವನ್ನು ಕಂಡಿದೆ.

ಐಸಿಎಂಆರ್ ಪ್ರಕಾರ, ಜೂನ್ ೧೮ ರವರೆಗೆ ಒಟ್ಟು ೬೪,೨೬,೬೨೭ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ,೭೬,೯೫೯ ಮಾದರಿಗಳನ್ನು ಗುರುವಾರ ಪರೀಕ್ಷಿಸಲಾಗಿದೆ, ಇದುವರೆಗೆ ಒಂದು ದಿನದಲ್ಲಿ ಅತಿ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿದೆ.

ಶುಕ್ರವಾರ ಬೆಳಗಿನವರೆಗೆ ವರದಿಯಾದ ೩೩೬ ಹೊಸ ಸಾವುಗಳ ಪೈಕಿ ಮಹಾರಾಷ್ಟ್ರದಲ್ಲಿ ೧೦೦, ದೆಹಲಿಯಲ್ಲಿ ೬೫, ತಮಿಳುನಾಡಿನಲ್ಲಿ ೪೯, ಗುಜರಾತಿನಲ್ಲಿ ೩೧, ಉತ್ತರಪ್ರದೇಶದಲ್ಲಿ ೩೦, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ೧೨, ರಾಜಸ್ಥಾನದಲ್ಲಿ ೧೦, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ಸಾವುಗಳು ಸಂಭವಿಸಿವೆ. ಪಂಜಾಬಿನಲ್ಲಿ ಐದು, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ತಲಾ ನಾಲ್ಕು, ತೆಲಂಗಾಣದಲ್ಲಿ ಮೂರು, ಆಂಧ್ರಪ್ರದೇಶದಲ್ಲಿ ಎರಡು ಮತ್ತು ಅಸ್ಸಾಂ, ಜಾರ್ಖಂಡ್ ಮತ್ತು ಕೇರಳದಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಅಮೆರಿಕ, ಬ್ರೆಜಿಲ್ ಮತ್ತು ರಷ್ಯಾ ನಂತರ ಸಾಂಕ್ರಾಮಿಕ ರೋಗದಿಂದ ಅತಿಯಾಗಿ ಬಾಧಿಸಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಪ್ರಪಂಚದಾದ್ಯಂತದ ಕೋವಿಡ್-೧೯ ಅಂಕಿಸಂಖ್ಯೆ ಸಂಗ್ರಹಿಸುತ್ತಿರುವ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಸಾವಿನ ಸಂಖ್ಯೆಯ ವಿಷಯದಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ.

ಒಟ್ಟು ೧೨,೫೭೩ ಸಾವುಗಳಲ್ಲಿ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ,೭೫೧ ಸಾವುಗಳು ಸಂಭವಿಸಿವೆ, ನಂತರ ದೆಹಲಿಯಲ್ಲಿ ,೯೬೯ ಸಾವುಗಳು ಸಂಭವಿಸಿವೆ. ಗುಜರಾತಿನಲ್ಲಿ ,೫೯೧, ತಮಿಳುನಾಡಿನಲ್ಲಿ ೬೨೫, ಪಶ್ಚಿಮ ಬಂಗಾಳದಲ್ಲಿ ೫೧೮, ಮಧ್ಯಪ್ರದೇಶದಲ್ಲಿ ೪೮೬, ರಾಜಸ್ಥಾನದಲ್ಲಿ ೩೨೫ ಮತ್ತು ತೆಲಂಗಾಣದಲ್ಲಿ ೧೯೫ ಸಾವುಗಳು ಸಂಭವಿಸಿವೆ.

ಕೋವಿಡ್-೧೯ ಸಾವಿನ ಸಂಖ್ಯೆ ಹರಿಯಾಣದಲ್ಲಿ ೧೩೪, ಕರ್ನಾಟಕದಲ್ಲಿ ೧೧೪, ಆಂಧ್ರಪ್ರದೇಶದಲ್ಲಿ ೯೨, ಪಂಜಾಬಿನಲ್ಲಿ ೮೩, ಜಮ್ಮು ಮತ್ತು ಕಾಶ್ಮೀರದಲ್ಲಿ ೭೧, ಬಿಹಾರದಲ್ಲಿ ೪೪, ಉತ್ತರಾಖಂಡದಲ್ಲಿ ೨೬, ಕೇರಳದಲ್ಲಿ ೨೧ ಮತ್ತು ಒಡಿಶಾದಲ್ಲಿ ೧೧ ಕ್ಕೆ ತಲುಪಿದೆ. ಜಾರ್ಖಂಡಿನಲ್ಲಿ ೧೧, ಛತ್ತೀಸ್ ಗಢದಲ್ಲಿ ೧೦, ಅಸ್ಸಾಂ , ಹಿಮಾಚಲ ಪ್ರದೇಶ , ಪುದುಚೇರಿ , ಚಂಡೀಗಢದಲ್ಲಿ ಮಂದಿ ಸಾವನ್ನಪ್ಪಿದ್ದರೆ, ಮೇಘಾಲಯ, ತ್ರಿಪುರ ಮತ್ತು ಲಡಾಖ್ ತಲಾ ಸಾವನ್ನು ದಾಖಲಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸಹ ಅಸ್ವಸ್ಥತೆಗಳಿಂದಾಗಿ ಶೇಕಡಾ ೭೦ ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಸಚಿವಾಲಯ ಹೇಳಿದೆ.

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಗರಿಷ್ಠ ,೨೦,೫೦೪, ತಮಿಳುನಾಡು ೫೨,೩೩೪, ದೆಹಲಿ ೪೯,೯೭೯, ಗುಜರಾತ್ ೨೫,೬೦೧, ಉತ್ತರ ಪ್ರದೇಶ ೧೫,೧೮೧, ರಾಜಸ್ಥಾನ ೧೩,೮೫೭ ಮತ್ತು ಪಶ್ಚಿಮ ಬಂಗಾಳ ೧೨,೭೩೫ ಪ್ರಕರಣಗಳು ದಾಖಲಾಗಿವೆ.

ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ಮಧ್ಯಪ್ರದೇಶದಲ್ಲಿ ೧೧,೪೨೬, ಹರಿಯಾಣದಲ್ಲಿ ,೨೧೮, ಕರ್ನಾಟಕದಲ್ಲಿ ,೯೪೪, ಆಂಧ್ರಪ್ರದೇಶದಲ್ಲಿ ,೫೧೮ ಮತ್ತು ಬಿಹಾರದಲ್ಲಿ ,೦೨೫ ಪ್ರಕರಣಗಳಿಗೆ ಏರಿದೆ.

ಇದು ತೆಲಂಗಾಣದಲ್ಲಿ ,೦೨೭, ಜಮ್ಮು ಮತ್ತು ಕಾಶ್ಮೀರದಲ್ಲಿ ,೫೫೫, ಅಸ್ಸಾಂನಲ್ಲಿ ,೭೭೭ ಮತ್ತು ಒಡಿಶಾದಲ್ಲಿ ,೫೧೨ ಕ್ಕೆ ಏರಿದೆ. ಪಂಜಾಬ್ ಇದುವರೆಗೆ ,೬೧೫ ಕೊರೋನಾವೈರಸ್ ಪ್ರಕರಣಗಳನ್ನು ವರದಿ ಮಾಡಿದ್ದರೆ, ಕೇರಳದಲ್ಲಿ ,೭೯೪ ಪ್ರಕರಣಗಳಿವೆ.

ಉತ್ತರಾಖಂಡದಲ್ಲಿ ಒಟ್ಟು ,೧೦೨ ಜನರು, ಛತ್ತೀಸ್ ಗಢದಲ್ಲಿ ,೯೪೬, ಜಾರ್ಖಂಡಿನಲ್ಲಿ ,೯೨೦, ತ್ರಿಪುರಾದಲ್ಲಿ ,೧೫೫, ಗೋವಾದಲ್ಲಿ ೭೦೫, ಲಡಾಖ್‌ನಲಿ ೬೮೭, ಮಣಿಪುರದಲ್ಲಿ ೬೦೬ ಮತ್ತು ಹಿಮಾಚಲ ಪ್ರದೇಶದಲ್ಲಿ ೫೯೫ ಜನರು ಸೋಂಕಿಗೆ ಒಳಗಾಗಿದ್ದಾರೆ.

ಚಂಡೀಗಢದಲ್ಲಿ ೩೭೪, ಪುದುಚೇರಿಯಲ್ಲಿ ಕೋವಿಡ್ -೧೯ ಪ್ರಕರಣಗಳು ದಾಖಲಾಗಿವೆ.

 ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೮೬,೧೬,೭೪೮, ಸಾವು ,೫೭,೦೭೪ ಚೇತರಿಸಿಕೊಂಡವರು- ೪೫,೬೨,೪೪೮

ಅಮೆರಿಕ ಸೋಂಕಿತರು ೨೨,೬೪,೮೬೨, ಸಾವು ,೨೦,೭೦೭

ಸ್ಪೇನ್ ಸೋಂಕಿತರು ,೯೨,೩೪೮, ಸಾವು ೨೭,೧೩೬

ಇಟಲಿ ಸೋಂಕಿತರು ,೩೮,೧೫೯, ಸಾವು ೩೪,೫೧೪

ಜರ್ಮನಿ ಸೋಂಕಿತರು ,೯೦,೨೬೪, ಸಾವು ,೯೫೨

ಚೀನಾ ಸೋಂಕಿತರು ೮೩,೩೨೫, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೦೦,೪೬೯, ಸಾವು ೪೨,೨೮೮

ಭಾರತ ಸೋಂಕಿತರು ,೮೨,೪೯೭, ಸಾವು ೧೨,೬೧೬

ಅಮೆರಿಕದಲ್ಲಿ ೧೯, ಇರಾನಿನಲ್ಲಿ ೧೨೦, ಬೆಲ್ಜಿಯಂನಲ್ಲಿ ೧೨, ಇಂಡೋನೇಷ್ಯ ೩೪, ನೆದರ್ ಲ್ಯಾಂಡ್ಸ್‌ನಲ್ಲಿ , ರಶ್ಯಾದಲ್ಲಿ ೧೮೧, ಪಾಕಿಸ್ತಾನದಲ್ಲಿ ೧೩೬, ಮೆಕ್ಸಿಕೋದಲ್ಲಿ ೬೬೭, ಒಟ್ಟಾರೆ ವಿಶ್ವಾದ್ಯಂತ ,೪೯೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೦೫,೮೪೪ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement