ಲಡಾಖ್‌ಗೆ ಕಾಶ್ಮೀರದಿಂದ
ಭಾರತದ ಸೇನಾ ತುಕಡಿ ರವಾನೆ
ನವದೆಹಲಿ: ಚೀನಾದೊಂದಿಗಿನ ಬಿಕ್ಕಟ್ಟು ೨೬ ನೇ ದಿನವೂ ಮುಂದುವರೆದಿರುವಂತೆಯೇ ಭಾರತೀಯ ಸೇನೆಯು ಗಲ್ವಾನ್ ಕಣಿವೆಯ ಕಡೆಗೆ ಸೈನಿಕರು, ಯಂತ್ರೋಪಕರಣಗಳು ಮತ್ತು ಸರಬರಾಜುಗಳನ್ನು ಹೊತ್ತ ಟ್ರಕ್ಕುಗಳನ್ನು ನಿತ್ಯ ಕಳುಹಿಸುತ್ತಿದೆ ಎಂದು ಸುದ್ದಿ ಮೂಲಗಳು 2020 ಜೂನ್ 01ರ ಸೋಮವಾರ ತಿಳಿಸಿದವು.
ಲಡಾಖ್ಗೆ
ಕಳುಹಿಸಲಾಗುತ್ತಿರುವ ಬಹುತೇಕ ಸೇನಾ ತುಕಡಿಗಳು ಕಾಶ್ಮೀರದ ಕಡೆಯಿಂದ ಸಾಗುತ್ತಿವೆ ಎಂದು ಮೂಲಗಳು ಹೇಳಿದವು.
"ಎಲ್ಒಸಿಯಿಂದ ಎಲ್ಎಸಿಗೆ
ಸೈನ್ಯವನ್ನು ಸ್ಥಳಾಂತರಿಸುವ ಪ್ರಕ್ರಿಯೆ ಸಾಮಾನ್ಯವಾಗಿ ಭೀಕರ ಸಂದರ್ಭಗಳಲ್ಲಿ ನಡೆಯುತ್ತದೆ, ಈಗಿನದ್ದು ಭೀಕರ ಸಂದರ್ಭವಾಗಿದೆ’
ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕಮಾಂಡ್ ಮತ್ತು ಕೋರ್ ಮಟ್ಟದಲ್ಲಿ, ‘ಬದ್ಧತೆ ರಹಿತವಾದ ಮೀಸಲು ಪಡೆಗಳು’
ಇರುತ್ತವೆ. ಭೂಮಿಯ ಮೇಲ್ಮೈ ಮಟ್ಟದ ಯಾವುದೇ ಕಾರ್ಯಾಚರಣೆಗೆ
ಅಡ್ಡಿಯಾಗದಂತೆ ಈ ಮೀಸಲು ಪಡೆಗಳನ್ನು ರವಾನಿಸಬಹುದು.ಕಾಶ್ಮೀರದ ವಿಚಾರದಲ್ಲಿ ಇದು ಅದು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ’
ಎಂದು ಅವರು ನುಡಿದರು.
‘ಪಿಎಲ್ಎ ಮೇಲೆ ಸ್ವಲ್ಪ ಒತ್ತಡವನ್ನು ಸೃಷ್ಟಿಸಲು’
ಈ ಪಡೆಗಳನ್ನು ರಸ್ತೆ ಮತ್ತು ವಾಯುಮಾರ್ಗದ ಮೂಲಕ ಸ್ಥಳಕ್ಕೆ ಕಳುಹಿಸಲಾಗುತ್ತಿದೆ ಎಂದು ಬೆಳವಣಿಗೆಗಳ ಬಗ್ಗೆ ಅರಿವು ಇರುವ ಮೂಲಗಳು ಹೇಳಿವೆ.
ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗುವಷ್ಟು ಸನಿಹದಲ್ಲಿರುವ ಸ್ಥಳದ ಹತ್ತಿರದಲ್ಲೇ ಇರುವ ಡಾರ್ಬುಕ್ ಗ್ರಾಮಸ್ಥರು, ಪ್ರತಿ ರಾತ್ರಿ ೮೦ ರಿಂದ ೯೦ ಟ್ರಕ್ಗಳು
ತಮ್ಮ ಪ್ರದೇಶದ ಮೂಲಕ ಹಾದು ಹೋಗುತ್ತವೆ ಎಂದು ಹೇಳುತ್ತಾರೆ. ಇದು ಬೆಂಗಾವಲು ಸೈನ್ಯ ಮತ್ತು ಸಿವಿಲ್ ವಾಹನಗಳ ಮಿಶ್ರಣವಾಗಿದ್ದು, ಸೈನಿಕರು, ಮದ್ದುಗುಂಡು ಮತ್ತು ಸರಬರಾಜುಗಳನ್ನು ಟ್ರಕ್ಕುಗಳು ಒಯ್ಯುತ್ತಿವೆ.
ಆದಾಗ್ಯೂ, "ಈ ಚಲನೆಯು ಚಳಿಗಾಲದ ದಾಸ್ತಾನು ಸಲುವಾಗಿ ಆಗಿರಬಹುದು. ಹಿಮ ಕರಗಿದ ಬಳಿಕ, ಮುಂದಿನ ಚಳಿಗಾಲಕ್ಕಾಗಿ ಸೈನ್ಯವು ತನ್ನ ಮುಂದಿರುವ ಠಾಣೆಗಳಲ್ಲಿ ಇಂತಹ ಸಂಗ್ರಹವನ್ನು ಮಾಡುತ್ತದೆ’
ಎಂದು ಲೆಫ್ಟಿನೆಂಟ್ ಜನರಲ್ ಎಸ್.ಎಲ್. ನರಸಿಂಹನ್ ಎಚ್ಚರಿಕೆಯ ಹೇಳಿಕೆ ನೀಡಿದರು.
ಬೇಸಿಗೆಯ ತಿಂಗಳುಗಳಲ್ಲಿ, ಚೀನಾದ ಒಳನುಗ್ಗುವಿಕೆಯ ಬೆದರಿಕೆ ಉತ್ತುಂಗದಲ್ಲಿದ್ದಾಗ, ಭಾರತೀಯ ಸೇನೆಯು ಲಡಾಖ್ನಲ್ಲಿ
ಒಂದು ಕವಾಯತನ್ನು ನಡೆಸುತ್ತದೆ. ಚೀನಿಯರೂ ಅದೇ ರೀತಿ ಮಾಡುತ್ತಾರೆ. ಆದಾಗ್ಯೂ, ಈ ವರ್ಷ, ಕೋವಿಡ್ -೧೯ ರ ಕಾರಣದಿಂದಾಗಿ, ಸೈನ್ಯವು ತನ್ನ ಎಲ್ಲಾ ಕವಾಯತುಗಳನ್ನೂ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಚೀನೀಯರು ಒಳನುಗ್ಗಿದಾಗ ಈ ಪ್ರದೇಶದಲ್ಲಿ ಯಾವುದೇ ಮೀಸಲು ಸೈನಿಕ ಪಡೆ ಇರಲಿಲ್ಲ. ಮತ್ತೊಂದೆಡೆ ಚೀನಿಯರು ತಮ್ಮ ಕವಾಯತಿನ ಸೋಗಿನಲ್ಲಿ ಬಂದರು.
ಇದು ಗುಪ್ತಚರ ಮತ್ತು ಕಾರ್ಯಾಚರಣೆಯ ವೈಫಲ್ಯವೇ ಎಂಬ ಪ್ರಶ್ನೆಗೆ, ಹಿರಿಯ ಅಧಿಕಾರಿಯೊಬ್ಬರು, "ಚೀನಾ
ನಮ್ಮ ಬೆನ್ನಿಗೆ ಇರಿದಿದೆ. ಸಾಂಕ್ರಾಮಿಕದ ಮಧ್ಯದಲ್ಲಿ, ನಾವು ಇದನ್ನು ನಿರೀಕ್ಷಿಸಿರಲಿಲ್ಲ" ಎಂದು
ಹೇಳಿದರು.
ಮಾತುಕತೆಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ಮತ್ತೊಂದು ಪ್ರಯತ್ನವನ್ನು ಭಾರತೀಯ ಸೇನೆಯ ಈ ವಾರ ನಡೆಸಲಿದೆ. ಎರಡನೇ ಸುತ್ತಿನ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆಯುತ್ತಿದೆ. ಮೊದಲ ಸುತ್ತಿನ ಮಾತುಕತೆ ಮೇ ೨೨ ಮತ್ತು ೨೩ ರಂದು ನಡೆದಿತ್ತು. ಆದರೆ ಏನೂ ಫಲ ನೀಡಲಿಲ್ಲ. ಚೀನಿಯರು ಮತ್ತೆ ತಮ್ಮ ಸೇನೆಯ ಜಮಾವಣೆಯನ್ನು ಮುಂದುವರೆಸಿದರು ಮತ್ತು ಅದರ ಬಗ್ಗೆ ಹೆಮ್ಮೆಟ್ಟಕೊಳ್ಳುತ್ತಿದ್ದಾರೆ ಎಂದು ಅವರು ನುಡಿದರು.
ಚೀನಾದ ಕಮ್ಯುನಿಸ್ಟ್ ಪಕ್ಷದ ಅಧಿಕೃತ ಮುಖವಾಣಿಯಾದ ಗ್ಲೋಬಲ್ ಟೈಮ್ಸ್ನ ಲೇಖನವೊಂದು ‘ಟೈಪ್ ೧೫ ಟ್ಯಾಂಕ್ಗಳು,
ಝಡ್-೨೦ ಹೆಲಿಕಾಪ್ಟರುಗಳು ಮತ್ತು ಜಿಜೆ -೨ ಡ್ರೋನ್ಗಳನ್ನು
ಭಾರತದ ವಿರುದ್ಧದ ಎತ್ತರ ಪ್ರದೇಶದ ಘರ್ಷಣೆಗಳಿಗಾಗಿ ಚೀನಾದ ಶಸ್ತ್ರಾಗಾರಕ್ಕೆ ಸೇರಿಸಲಾಗಿದೆ. "ಗಲ್ವಾನ್
ಕಣಿವೆಯಲ್ಲಿ ಚೀನಾದ ಭೂಪ್ರದೇಶಕ್ಕೆ ಗಡಿಯುದ್ದಕ್ಕೂ ರಕ್ಷಣಾ ಸೌಲಭ್ಯಗಳನ್ನು ಭಾರತ ಅಕ್ರಮವಾಗಿ ನಿರ್ಮಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಚೀನಾದ ಪಡೆಗಳು ಗಡಿ ನಿಯಂತ್ರಣ ಕ್ರಮಗಳನ್ನು ಹೆಚ್ಚಿಸಿವೆ" ಎಂದು
ಬರೆದಿದೆ.
ಬೆದರಿಕೆ ಇಷ್ಟಕ್ಕೇ ನಿಂತಿಲ್ಲ. ಮತ್ತೊಂದು ಲೇಖನದಲ್ಲಿ, ಅಮೆರಿಕ-ಚೀನಾ ಶೀತಲ ಸಮರದಿಂದ ದೂರವಿರುವಂತೆ ಗ್ಲೋಬಲ್ ಟೈಮ್ಸ್ ಭಾರತಕ್ಕೆ ಎಚ್ಚರಿಕೆ ನೀಡಿದೆ.
"ಹೊಸ ಶೀತಲ ಸಮರದಲ್ಲಿ, ಭಾರತವು ಅಮೆರಿಕದ ಕಡೆಗೆ ವಾಲುತ್ತಿದ್ದರೆ ಅಥವಾ ಚೀನಾದ ಮೇಲೆ ಆಕ್ರಮಣ ಮಾಡುವಲ್ಲಿ ಅಮೆರಿಕದ ದಾಳವಾದರೆ, ಏಷ್ಯಾದ ಇಬ್ಬರು ನೆರೆಹೊರೆಯವರ ನಡುವಿನ ಆರ್ಥಿಕ ವ್ಯಾಪಾರ ಸಂಬಂಧಗಳು ವಿನಾಶಕಾರಿ ಹೊಡೆತವನ್ನು ಅನುಭವಿಸುತ್ತವೆ. ಮತ್ತು ಪ್ರಸ್ತುತ ಹಂತದಲ್ಲಿ ಭಾರತೀಯ ಆರ್ಥಿಕತೆಯು ಅಂತಹ ಪೆಟ್ಟು ಅನುಭವಿಸುವುದು ಗಂಡಾಂತರಕಾರಿಯಾದೀತು’
ಎಂದು ಪತ್ರಿಕೆ ಹೇಳಿದೆ.
‘ಅಭದ್ರತೆಯ ಸ್ಥಳದಿಂದ ಈ ಲೇಖನ ಸಂದೇಶ ಬರುತ್ತಿದೆ ಮತ್ತು ಅಮೆರಿಕ-ಚೀನಾ ಶೀತಲ ಸಮರದ ಸಂದರ್ಭದಲ್ಲಿ ಭಾರತದಿಂದ ತಾಟಸ್ತ್ಯದ ಭsರವಸೆಯನ್ನು ಪಡೆಯಲು ಒಂದು ’ಒತ್ತಡ ತಂತ್ರ’ವಾಗಿ ಚೀನಾ ಪೂರ್ವ-ಲಡಾಖ್ನಲ್ಲಿ
ಈ ಪರಿಸ್ಥಿತಿ ನಿರ್ಮಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಏತನ್ಮಧ್ಯೆ, ಭಾರತ ಮತ್ತು ಚೀನಾ ಎರಡೂ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ’ಮಿಲಿಟರಿ ಮತ್ತು ರಾಜತಾಂತ್ರಿಕ’ ಮಟ್ಟದ ಮಾತುಕತೆ ನಡೆಯುತ್ತಿದೆ ಎಂದು ಪ್ರತಿಪಾದಿಸಿವೆ.
No comments:
Post a Comment