‘ಪ್ರಕೃತಿ’ ನರ್ತನದ
ಅಪಾಯದಿಂದ ಮುಂಬೈ, ಗುಜರಾತ್ ಪಾರು
ಮುಂಬೈ: ಮುಂಬೈಯಿಂದ ೯೫ ಕಿಮೀ ದೂರದಲ್ಲಿರುವ ಅಲಿಬಾಗ್ನಲ್ಲಿ ’ನಿಸರ್ಗ’ ಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಮುಂಬೈ ಮಹಾನಗರ ಹಾಗೂ ಗುಜರಾತ್ ’ಪ್ರಕೃತಿ’ ನರ್ತನದ ಮಹಾವಿಪತ್ತಿನಿಂದ ಪಾರಾದವು.
‘ಚಂಡಮಾರುತವು
ಮುಂಬೈನ ಆಗ್ನೇಯಕ್ಕೆ ೭೫ ಕಿ.ಮೀ
ಮತ್ತು ಪುಣೆಯ ಪಶ್ಚಿಮಕ್ಕೆ ೬೫ ಕಿ.ಮೀ
ದೂರದಲ್ಲಿದ್ದು ದುರ್ಬಲಗೊಳ್ಳಲು ಪ್ರಾರಂಭಿಸಿದೆ. ಗಾಳಿಯ ವೇಗವು ಪ್ರಸ್ತುತ ಗಂಟೆಗೆ ೯೦-೧೦೦ ಕಿ.ಮೀ. ಮತ್ತು ಸಂಜೆಯ ಹೊತ್ತಿಗೆ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ" ಎಂದು ಅಧಿಕಾರಿಗಳು ಹೇಳಿದರು.
ನಿರ್ಗ
ಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಬೀಸಿದ ಭಾರೀ ಗಾಳಿ ಮತ್ತು ಮಳೆಯನ್ನು ಅನುಸರಿಸಿ ಮುಂಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಜೆ ೭ ಗಂಟೆಯವರೆಗೆ ಮುಚ್ಚಲಾಯಿತು.
"ಫೆಡೆಕ್ಸ್ ಎಂಡಿ ೧೧ ವಿಮಾನ (ಎನ್
೫೮೩ ಎಫ್ಇ) ಬುಧವಾರ ಮುಂಬೈನಲ್ಲಿ
ರನ್ವೇ ೧೪ ರಲ್ಲಿ ಸುತ್ತುತ್ತಿದೆ.
ವಿಮಾನವು ರನ್ವೇ ಅಂತ್ಯದಿಂದ ೯ ಮೀಟರ್ ದೂರದಲ್ಲಿದೆ.
ವಿಮಾನ ಮೂಲಸೌಕರ್ಯ ಮತ್ತು ವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ" ಎಂದು ವರದಿಗಳು ಹೇಳಿವೆ.
ಈ
ಮಧ್ಯೆ, ಪುಣೆಯಲ್ಲಿ ೬೦ ಮರಗಳು ಬೇರು
ಸಹಿತವಾಗಿ ನೆಲಕ್ಕೆ ಉರುಳಿರುದ್ದು, ಪುಣೆ ಅಗ್ನಿಶಾಮಕ ಇಲಾಖೆಗೆ ೯ ಕಡೆಗಳಲ್ಲಿ ತಗ್ಗು
ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ಕರೆಗಳು ಬಂದಿವೆ. ಮರಗಳು ಉರುಳಿರುವ ಬಗ್ಗೆ ಬಂದ ೬೦ ಕರೆಗಳು ಮತ್ತು
ಜಲಾವೃತಗೊಂಡಿರುವ ಬಗ್ಗೆ ಬಂದ ೯ ಕರೆಗಳಿಗೆ ಅಗ್ನಿಶಾಮಕ
ಇಲಾಖೆ ಮತ್ತು ಪುಣೆ ಮಹಾನಗರ ಪಾಲಿಕೆ ಸ್ಪಂದಿಸಿವೆ.
ಮುಂಬೈ
ಮಹಾನಗರವು ’ನಿಸರ್ಗ’ ಚಂಡಮಾರುತದ ಅಪಾಯದಿಂದ ಪಾರಾಗಿದೆ ಎಂದು ಮಹಾರಾಷ್ಟ್ರದ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.
‘ಮುಂಬೈಗೆ
’ನಿಸರ್ಗ’ ಚಂಡಮಾರುತದಿಂದ
ಉಂಟಾಗುವ ಬೆದರಿಕೆ ಕಡಿಮೆಯಾಗಿದೆ, ಆದರೆ ಮುಂದಿನ ಕೆಲವು ಗಂಟೆಗಳು ಸಾಕಷ್ಟು ನಿರ್ಣಾಯಕವಾಗುತ್ತವೆ’ ಎಂದು
ಥೋರಟ್ ಹೇಳಿದ್ದಾರೆ.
ವಿವಿಧ
ಸ್ಥಳಗಳಲ್ಲಿ ಮರಗಳು ಉರುಳಿವೆ. ವಿದ್ಯುತ್ ಕಂಬಗಳು ಉರುಳಿದ್ದರಿಂದ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ. ಚಂಡಮಾರುತದ ಪಥವನ್ನು ಪರಿಗಣಿಸಿ ಪುಣೆ, ನಾಸಿಕ್ ಮತ್ತು ಅಹ್ಮದ್ನಗರದ ಅಧಿಕಾರಿಗಳು ಜಾಗರೂಕರಾಗಿದ್ದಾರೆ ಎಂದು ಅವರು ಹೇಳಿದರು.
ನಿಸರ್ಗ
ಚಂಡಮಾರುತವು ಮಹಾರಾಷ್ಟ್ರದಲ್ಲಿ ಅಪ್ಪಳಿಸಿದ ಬಳಿಕ ಅದರ ರೌದ್ರಾಕಾರ ತಗ್ಗುತ್ತಿರುವುದರಿಂದ ಗುಜರಾತ್ ರಾಜ್ಯವು ಭಾರೀ ಅಪಾಯದಿಂದ ಪಾರಾಗಿದೆ.
ರಾಜ್ಯದಲ್ಲಿ ಮಧ್ಯಮದಿಂದ ಕಡಿಮೆ ಮಳೆಯಾಗುತ್ತದೆ. ಎರಡು ದಿನಗಳವರೆಗೆ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದ ಪ್ರದೇಶಗಳಲ್ಲಿಯೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
No comments:
Post a Comment