Tuesday, June 9, 2020

ಲಡಾಖ್ ಬಿಕ್ಕಟ್ಟಿಗೆ ತೆರೆ, ಚೀನಾ-ಭಾರತ ಸೇನೆಗಳು ವಾಪಸ್

ಲಡಾಖ್ ಬಿಕ್ಕಟ್ಟಿಗೆ ತೆರೆ, ಚೀನಾ-ಭಾರತ ಸೇನೆಗಳು ವಾಪಸ್

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾ ಮತ್ತು ಭಾರತೀಯ ಪಡೆಗಳು ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ ಇತರ ಎರಡು ಪ್ರದೇಶಗಳಲ್ಲಿ 2020 ಜೂನ್ 09ರ ಮಂಗಳವಾರ ‘’ಹಿಂದಕ್ಕೆ ತೆರಳಲುಆರಂಭಿಸಿದವು.

ಮಾತುಕತೆಗಳ ಮೂಲಕ ಒಂದು ತಿಂಗಳ ಅವಧಿಯ ಬಿಕ್ಕಟ್ಟನ್ನು ಪರಿಹರಿಸುವ ಇಚ್ಛೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸೇನಾ ಮೂಲಗಳು ತಿಳಿಸಿದವು.

ಲಡಾಖ್ ಗಡಿಯಿಂದ sಸೋಮವಾರ ರಾತ್ರಿ, ರಿಂದ . ಕಿ.ಮೀ ಹಿಂದೆ ಸರಿದಿರುವ ಚೀನಿ ಪಡೆಗಳು, ಮೂಲಕ ಗಡಿಯಲ್ಲಿ ಸುದೀರ್ಘ ಸೈನಿಕ ಚಟುವಟಿಕೆಗಳಿಗೆ ತೆರೆ ಎಳೆದಿವೆ. ಪ್ರತಿಯಾಗಿ ಭಾರತೀಯ ಪಡೆಗಳು ಮಂಗಳವಾರ ಸಂಜೆ, ಗಡಿಯಿಂದ ಹಿಂದಕ್ಕೆ ಸರಿದವು ಎಂದು ಮೂಲಗಳು ಹೇಳಿದವು.

ಆದಾಗ್ಯೂ, ಪ್ಯಾಂಗೊಂಗ್ ತ್ಸೊ ಮತ್ತು ದೌಲತ್ ಬೇಗ್ ಓಲ್ಡಿಯಂತಹ ಪ್ರದೇಶಗಳಲ್ಲಿ ಅವರ ನಿಲುವುಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಮೂಲಗಳು ಹೇಳಿದವು.

ಏನಿದ್ದರೂ, ರಕ್ಷಣಾ ಸಚಿವಾಲಯದಿಂದ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಸೇನೆಯನ್ನು ನಿಯೋಜಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಮಾತುಕತೆಗಳಲ್ಲಿ ಪ್ರಗತಿಯ ಬಗೆಗೂ ಚೀನಾದ ಕಡೆಯಿಂದ ಯಾವುದೇ ಹೇಳಿಕೆಗಳು ಬಂದಿಲ್ಲ.

ಚೀನಾ ಮತ್ತು ಭಾರತೀಯ ಸೇನೆಗಳು ಕೆಲವು ಪಡೆಗಳನ್ನು ಹಿಂತೆಗೆದುಕೊಂಡಿವೆ ಮತ್ತು ಗಾಲ್ವಾನ್ ಮತ್ತು ಹಾಟ್ ಸ್ಪ್ರಿಂಗ್ಸ್ ಮತ್ತು ಗಸ್ತು ಪ್ರದೇಶ ಪಿಪಿ -೧೫ ನಿಂದ ತಾತ್ಕಾಲಿಕ ಮೂಲಸೌಕರ್ಯಗಳನ್ನು ತೆಗೆದುಹಾಕಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತ ಮತ್ತು ಚೀನಾದ ಸೇನೆಗಳು ಶನಿವಾರ ಉನ್ನತ ಮಟ್ಟದ ಧನಾತ್ಮಕ ಮಾತುಕತೆಗಳನ್ನು ನಡೆಸಿದ್ದು, ಪೂರ್ವ ಲಡಾಖ್ನಲ್ಲಿ ತಮ್ಮ ತಿಂಗಳ ಕಾಲದ ಕಹಿ ಬಿಕ್ಕಟ್ಟನ್ನು ಶಾಂತಿಯುತ ಸಂವಾದದ ಮೂಲಕ ಕೊನೆಗೊಳಿಸುವ ಉದ್ದೇಶವನ್ನು ಸೂಚಿಸುತ್ತದೆ ಎಂದು ಬೆಳವಣಿಗೆಗಳ ಬಗ್ಗೆ ಅರಿವುಳ್ಳ ಜನರು ತಿಳಿಸಿದ್ದಾರೆ.

ಉಭಯ ದೇಶಗಳ ಉನ್ನತ ಸೇನಾ ಕಮಾಂಡರುಗಳ ಸಭೆಯಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಮಾತುಕತೆಗಳಿಗೆ ಒತ್ತು ನೀಡುವ ಕುರಿತು ಸಹಮತ ಮೂಡಿತ್ತು

ಭಾರತೀಯ ನಿಯೋಗದ ನೇತೃತ್ವವನ್ನು ಲೆಹ್ ಮೂಲದ ೧೪ ಕೋರ್ ಕಮಾಂಡಿಂಗ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ವಹಿಸಿದ್ದರು. ಚೀನಾದ ಕಡೆಯಿಂದ ಟಿಬೆಟ್ ಮಿಲಿಟರಿ ಜಿಲ್ಲೆಯ ಕಮಾಂಡರ್ ನೇತೃತ್ವ ವಹಿಸಿದ್ದರು.

"ಮಾತುಕತೆ ಸಕಾರಾತ್ಮಕ ವಾತಾವರಣದಲ್ಲಿ ನಡೆಯಿತು. ವಿಧಾನವು (ಎರಡೂ ಕಡೆಯಿಂದ) ಸಕಾರಾತ್ಮಕವಾಗಿತ್ತು" ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದರು.

ಬಿಕ್ಕಟ್ಟಿನ ಆರಂಭ: ಕಳೆದ ಮೇ ೧೦ರಂದು ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಚೀನಿ ಸೈನಿಕರು ಸಂಘರ್ಷಕ್ಕೆ ಇಳಿದಿದ್ದರು. ಇದಾದ ಬಳಿಕ ಲಡಾಖ್ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆಗೊಳಿಸಲು ಚೀನಾ ಮುಂದಾಗಿತ್ತು.

ಸಿಕ್ಕಿಂ ಸಂಘರ್ಷವನ್ನು ಉಭಯ ದೇಶಗಳ ಸೈನ್ಯಾಧಿಕಾರಿಗಳ ಸಭೆಯ ಮೂಲಕ ಕೊನೆಗಾಣಿಸಲಾಯಿತಾದರೂ, ಲಡಾಖ್ ಗಡಿ ಸಮಸ್ಯೆ ಉಲ್ಬಣವಾಗುತ್ತಲೇ ಹೋಯಿತು. ಲಡಾಖ್ ಗಡಿಯಲ್ಲಿ ಸುಮಾರು ,೦೦೦ ಕ್ಕೂ ಹೆಚ್ಚು ಸೈನಿಕರನ್ನು ಜಮಾವಣೆಗೊಳಿಸಿದ ಚೀನಾ, ಗಡಿಯಲ್ಲಿ ಭಾರತೀಯ ಸೈನಿಕರಿಗೆ ಕಿರುಕುಳ ನೀಡುವುದನ್ನು ಮುಂದುವರೆಸಿತು.

ಪೂರ್ವ ಲಡಾಖಿನ ಪ್ಯಾಂಗೊಂಗ್ ತ್ಸೋ ಸರೋವರ ಹಾಗೂ ಗಾಲ್ವಾನ್ ನದಿ ಪಾತ್ರದಲ್ಲಿ ಬೀಡು ಬಿಟ್ಟ ಚೀನಿ ಪಡೆಗಳು, ಭಾರತೀಯ ಸೈನಿಕರ ಸಾಮಾನ್ಯ ಗಸ್ತಿನ ಮೇಲೂ ವಕ್ರದೃಷ್ಟಿ ಬೀರಿದವು. ಗಡಿಯಲ್ಲಿ ಚೀನಿ ಸೈನಿಕರ ಚಲನವಲನ ಕಂಡು ದಂಗಾದ ಭಾರತೀಯ ಸೇನೆ, ಕೂಡಲೇ ಗಡಿಗೆ ಹೆಚ್ಚುವರಿ ಸೈನ್ಯವನ್ನು ರವಾನಿಸಿ ಚೀನಿ ಸೈನಿಕರಿಗೆ ಸಡ್ಡು ಹೊಡೆಯಿತು.

ಹೀಗೆ ಆರಂಭವಾದ ತಕರಾರನ್ನು ಚೀನಾ ಸುಮಾರು ಒಂದು ತಿಂಗಳಿಗೂ ಅಧಿಕಾ ಕಾಲ ಎಳೆದುಕೊಂಡು ಬಂದಿತು. ಭಾರತದ ರಾಜತಾಂತ್ರಿಕ ಹಾಗೂ ಮಿಲಿಟರಿ ಮಾತುಕತೆಗಳ ಆಹ್ವಾನವನ್ನು ಒಪ್ಪಿದ ಚೀನಾ, ಅದರಂತೆ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ಒಪ್ಪಿಕೊಂಡಿತು.

ಗಡಿ ಉದ್ವಿಗ್ನತೆ ಕಡಿಮೆ ಮಾಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡು ರೀತಿಯ ಯೋಜನೆ ಹೆಣೆದಿತ್ತು. ಒಂದು ಚೀನಾದೊಂದಿಗಿನ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರೆಸುವುದು ಹಾಗೂ ಗಡಿಯಲ್ಲಿ ಮಿಲಿಟರಿ ಮಾತುಕತೆ ನಡೆಸುವುದು.

ಅದರಂತೆ ಕಳೆದ ಶನಿವಾರ (ಜೂನ್ ) ಉಭಯ ದೇಶಗಳ ನಡುವೆ ಉನ್ನತ ಸೇನಾ ಕಮಾಂqರುಗಳ ಮಾತುಕತೆ ನಡೆಯಿತು. ಗಡಿ ಉದ್ವಿಗ್ನತೆಯನ್ನು ಶಾಂತಿಯುತವಾಗಿ ಪರಿಹರಿಸಲು ಉಭಯ ದೇಶಗಳ ಸೈನ್ಯಾಧಿಕಾರಿಗಳು ಒಪ್ಪಿದರು.

ಅದರಂತೆ ಮಂಗಳವಾರ ಪೂರ್ವ ಲಡಾಖ್ ಗಡಿಯಿಂದ ಉಭಯ ದೇಶಗಳ ಸೇನೆ ಹಿಂದಕ್ಕೆ ಸರಿದಿದ್ದು, ಪ್ರಮುಖವಾಗಿ ಚೀನಾ ಸೇನೆ ಗಡಿಯಿಂದ ರಿಂದ . ಕಿ.ಮೀ ಹಿಂದಕ್ಕೆ ಸರಿದಿದೆ. ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ, ಚೀನಾ ಭಾರೀ ಪ್ರಮಾಣದಲ್ಲಿ ಪಡೆಗಳನ್ನು ಹಿಂದಕ್ಕೆ ಪಡೆದಿದೆ ಎಂದು ಹೇಳಿತು.

ಇದಕ್ಕೆ ಪೂರಕವಾಗಿ ಭಾರತ ಕೂಡ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿದ್ದು, ಮೂಲಕ ತಿಂಗಳಿಗೂ ಅಧಿಕ ಕಾಲ ಎದುರಾಗಿದ್ದ ಆತಂಕವನ್ನು ಕೊನೆಗೊಂಡಂತಾಗಿದೆ.

ಅದಾಗ್ಯೂ ಬುಧವಾರ ಭಾರತ-ಚೀನಾ ಸೇನೆ ನಡುವೆ ಮತ್ತೊಂದು ಸುತ್ತಿನ ಮಿಲಿಟರಿ ಮಾತುಕತೆ ನಡೆಯಲಿದ್ದು,  ಇದಾದ ಬಳಿಕವೇ ಗಡಿಯಿಂದ ಸಂಪೂರ್ಣವಾಗಿ ಸೇನೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಮೂಲಗಳೂ ಹೇಳಿವೆ.

ವಿಡಿಯೋದಲ್ಲಿ ಸುದ್ದಿ ಆಲಿಸಲು ಕೆಳಗೆ ಕ್ಲಿಕ್ ಮಾಡಿರಿ

No comments:

Advertisement