ಸಹಜ
ಸ್ಥಿತಿಗೆ ಭಾರತ, ಬಳಕೆ, ಬೇಡಿಕೆ
ಹೆಚ್ಚಳ: ಪ್ರಧಾನಿ
ಮೋದಿ
ನವದೆಹಲಿ: ಭಾರತದಲ್ಲಿ ವ್ಯಾಪಾರ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿವೆ ಮತ್ತು ಕೋವಿಡ್ ಪೂರ್ವ ಹಂvವನ್ನು ವೇಗವಾಗಿ ತಲುಪುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಜೂನ್ 18ರ ಗುರುವಾರ ಹೇಳಿದರು.
ಕೊರೋನಾವೈರಸ್
ಹರಡುವುದನ್ನು ತಡೆಯಲು ಜಾರಿಗೊಳಿಸಲಾಗಿದ್ದ ಸುದೀರ್ಘವಾದ ದಿಗ್ಬಂಧನ (ಲಾಕ್ಡೌನ್) ಪರಿಣಾಮವಾಗಿ ಕೈಗಾರಿಕಾ ಉತ್ಪಾದನೆ ಮತ್ತು ಗ್ರಾಹಕರ ಖರ್ಚು-ವೆಚ್ಚ ತೀವ್ರವಾಗಿ ಕುಸಿದಿದ್ದು, ದೇಶದ ಸಮಗ್ರ ಆಂತರಿಕ ಉತ್ಪಾದನೆಯು ಕುಸಿತದ ಸೂಚನೆಗಳನ್ನು ತೋರಿಸಿದ್ದವು.
ವಾಣಿಜ್ಯ
ಕಲ್ಲಿದ್ದಲು ಗಣಿಗಾರಿಕೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ವ್ಯವಹಾರ ಚಟುವಟಿಕೆಗಳು ವೇಗವಾಗಿ ಸಾಮಾನ್ಯ ಮಟ್ಟಕ್ಕೆ ಮರಳುತ್ತಿವೆ ಎಂದು ಹೇಳಿದರು.
"ಬಳಕೆ
ಮತ್ತು ಬೇಡಿಕೆ ಈಗ ಕೋವಿಡ್ ಪೂರ್ವ
ಮಟ್ಟವನ್ನು ತಲುಪುತ್ತಿದೆ" ಎಂದು ಅವರು ಹೇಳಿದರು.
ವಿದ್ಯುತ್
ಬೇಡಿಕೆ ಹೆಚ್ಚಳ ಮತ್ತು ಇಂಧನ ಬಳಕೆ ಚೇತರಿಕೆಗೆ ಕಾರಣವಾಗಿದ್ದ ಇತರ ಅಂಶಗಳನ್ನೂ ಪ್ರಧಾನಿ ಉಲ್ಲೇಖಿಸಿದರು.
"ಈ
ಸೂಚಕಗಳು ಭಾರತೀಯ ಆರ್ಥಿಕತೆಯು ವೇಗವಾಗಿ ಪುಟಿದೇಳಲು ತಯಾರಿ ನಡೆಸುತ್ತಿದೆ ಎಂಬುದನ್ನು ಸೂಚಿಸಿವೆ’
ಎಂದು ಪ್ರಧಾನಿ ನುಡಿದರು. "ಭಾರತವು ಈ ಹಿಂದೆ ದೊಡ್ಡ
ಬಿಕ್ಕಟ್ಟುಗಳಿಂದ ಹೊರಬಂದಿದೆ ಮತ್ತು ಅದು ಈಗಿನ ಬಿಕ್ಕಟ್ಟಿನಿಂದಲೂ ಹೊರಬರುತ್ತದೆ’ ಎಂದು
ಮೋದಿ ಹೇಳಿದರು.
’ಭಾರತದ
ಬೆಳವಣಿಗೆ ಮತ್ತು ಯಶಸ್ಸಿನ ಭರವಸೆ ಇದೆ, ಆಮದು ಕಡಿತಗೊಳಿಸುವ ಮೂಲಕ ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶವಿದೆ’ ಎಂದು
ಆಮದು ಕಡಿತದ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ತಮ್ಮ ಆಲೋಚನೆಯನ್ನು ಅವರು ಪ್ರಚಾರ ಮಾಡಿದರು.
"ಕೆಲವು
ವಾರಗಳ ಹಿಂದೆ ನಾವು ಎನ್ -೯೫ ಮುಖಗವಸು (ಫೇಸ್
ಮಾಸ್), ಕೊರೋನಾ ಪರೀಕ್ಷಾ ಉಪಕರಣಗಳು, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮತ್ತು ವೆಂಟಿಲೇಟರ್ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ನಾವು ಸ್ವಾವಲಂಬಿಗಳಾಗಿದ್ದೇವೆ
ಮತ್ತು ಕೆಲವು ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುವ ಸ್ಥಿತಿಯಲ್ಲಿದ್ದೇವೆ’ ಎಂದು
ಪ್ರಧಾನಿ ಹೇಳಿದರು.
ಭಾರತದಲ್ಲಿ
ಕೊರೋನಾ ಸೋಂಕು ೩,೬೬,೯೪೬
ಈ
ಮಧ್ಯೆ, ೧೨,೮೮೧ ಹೊಸ
ಪ್ರಕರಣಗಳೊಂದಿಗೆ ಭಾರತದಲ್ಲಿ ಕೊರೋನಾವೈರಸ್ ಸೊಂಕಿನ ಪ್ರಕರಣಗಳ ಸಂಖ್ಯೆ ಗುರುವಾರ ೩,೬೬,೯೪೬ಕ್ಕೆ
ಏರಿತು.
ಇದೇ
ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರು ಪುನಃ ದಿಗ್ಬಂಧನ (ಲಾಕ್ ಡೌನ್) ಜಾರಿ ಸಾಧ್ಯತೆಗಳನ್ನು ನಿರಾಕರಿಸಿದರು.
ವಿಶ್ವಾದ್ಯಂತ
೮೩,೩೧,೧೩೫ ಮಂದಿಗೆ
ಕೊರೋನಾ ಸೋಂಕು ತಗುಲಿದ್ದು, ೪,೪೮,೫೦೪
ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಅಮೆರಿಕದ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಘುರ್ಸ್ ಮತ್ತು ಇತರ
ಜನಾಂಗೀಯ ಅಲ್ಪಸಂಖ್ಯಾತರನ್ನು ದಮನಿಸಿದ್ದಕ್ಕಾಗಿ ಚೀನಾವನ್ನು ಶಿಕ್ಷಿಸಲು ಕೋರುವ ಶಾಸನಕ್ಕೆ ಸಹಿ ಹಾಕಿದ್ದಾರೆ.
ವೈದ್ಯರು,
ಆರೋಗ್ಯ ಕಾರ್ಯಕರ್ತರಿಗೆ ವೇತನ
ಸುಪ್ರೀಂಕೋರ್ಟ್
ನಿರ್ದೇಶನವನ್ನು ಅನುಸರಿಸಿ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಸಂಬಂಧಿತ ಸೇವೆಗಳಿಗೆ ಸಕಾಲಕ್ಕೆ ವೇತನ ಬಿಡುಗಡೆ ಮಆಡಲು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತು.
ಈ
ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧ ಎಂಬುದಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಹೇಳಿತು.
ಬುಧವಾರ
ನ್ಯಾಯಮೂರ್ತಿಗಳಾದ ಅಶೋಕ ಭೂಷಣ್, ಎಸ್ ಕೆ ಕೌಲ್ ಮತ್ತು
ಎಂ.ಆರ್. ಶಾ ಅವರನ್ನು ಒಳಗೊಂಡ
ಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ವೈದ್ಯರು, ಆರೋಗ್ಯ ಕಾರ್ಯಕರ್ತರ ವೇತನ ಬಿಡುಗಡೆ ಸಂಬಂಧ ಸೂಕ್ತ ನಿರ್ದೇಶನ ನೀಡುವಂತೆ ಆಜ್ಞಾಪಿಸಿತ್ತು. ಆದೇಶ ಪಾಲನೆ ಮಾಡದ ಆಡಳಿತ ಮಂಡಳಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ (೨೦೦೫) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ವಿಶ್ವಾದ್ಯಂತ
ಕೊರೋನಾವೈರಸ್ ಸೋಂಕಿತರು ೮೪,೭೮,೨೦೮,
ಸಾವು ೪,೫೨,೨೨೫
ಚೇತರಿಸಿಕೊಂಡವರು- ೪೪,೪೪,೪೧೮
ಅಮೆರಿಕ
ಸೋಂಕಿತರು ೨೨,೩೫,೯೯೪,
ಸಾವು ೧,೧೯,೯೫೯
ಸ್ಪೇನ್
ಸೋಂಕಿತರು ೨,೯೧,೭೬೩,
ಸಾವು ೨೭,೧೩೬
ಇಟಲಿ
ಸೋಂಕಿತರು ೨,೩೭,೮೨೮,
ಸಾವು ೩೪,೪೪೮
ಜರ್ಮನಿ
ಸೋಂಕಿತರು ೧,೮೯,೫೦೪,
ಸಾವು ೮,೯೨೭
ಚೀನಾ
ಸೋಂಕಿತರು ೮೩,೨೯೩, ಸಾವು
೪,೬೩೪
ಇಂಗ್ಲೆಂಡ್
ಸೋಂಕಿತರು ೩,೦೦,೪೬೯,
ಸಾವು ೪೨,೨೮೮
ಭಾರತ
ಸೋಂಕಿತರು ೩,೬೮,೭೦೫,
ಸಾವು ೧೨,೨೮೦
ಅಮೆರಿಕದಲ್ಲಿ ೧೮, ಇರಾನಿನಲ್ಲಿ ೮೭, ಬೆಲ್ಜಿಯಂನಲ್ಲಿ ೮, ಇಂಡೋನೇಷ್ಯ ೬೩, ನೆದರ್ ಲ್ಯಾಂಡ್ಸ್ನಲ್ಲಿ ೪, ರಶ್ಯಾದಲ್ಲಿ ೧೮೨, ಪಾಕಿಸ್ತಾನದಲ್ಲಿ ೧೧೮, ಮೆಕ್ಸಿಕೋದಲ್ಲಿ ೭೭೦, ಒಟ್ಟಾರೆ ವಿಶ್ವಾದ್ಯಂತ ೧,೭೭೩ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೧,೯೫,೧೩೯ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment