Wednesday, July 1, 2020

ಭಾರತ ವಿರೋಧಿ ಕೂಟಕ್ಕೆ ಇಮ್ರಾನ್ ಖಾನ್

ಭಾರತ ವಿರೋಧಿ ಕೂಟಕ್ಕೆ ಇಮ್ರಾನ್ ಖಾನ್

ನೇಪಾಳಿ ಪ್ರಧಾನಿ ಒಲಿಗೆ ಬೆಂಬಲ


ನವದೆಹಲಿ: ಪಕ್ಷದ ಒಳಗೆ ತಮ್ಮ ವಿರುದ್ಧದ ಬಂಡಾಯಕ್ಕಾಗಿ ಭಾರತವನ್ನು ದೂಷಿಸಿದ ಬಳಿಕ ನೇಪಾಳೀ ಕಮ್ಯೂನಿಸ್ಟ್ ಪಕ್ಷದಲ್ಲಿ ಪ್ರತ್ಯೇಕಿತರಾಗುತ್ತಿರುವ ಪ್ರಧಾನಿ ಕೆಪಿ ಶರ್ಮ ಒಲಿ ಅವರಿಗೆ ತಮ್ಮ ಬೆಂಬಲವನ್ನು ನೀಡಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್  2020 ಜುಲೈ 01ರ ಬುಧವಾರ ನಿರ್ಧರಿಸಿದರು.

ಪಕ್ಷದೊಳಗಿನ ತಮ್ಮ ವಿರೋಧಿಗಳು ತಮ್ಮ ಪದಚ್ಯುತಿಗೆ ಯತ್ನಿಸುತ್ತಿದಾರೆ, ತಮ್ಮನ್ನು ಪದಚ್ಯುತಿಗೊಳಿಸುವ ಸಂಚಿನಲ್ಲಿ ಭಾರತ ಮತ್ತು ನೇಪಾಳದ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರ ಪ್ರದೇಶಗಳನ್ನು ನೇಪಾಳೀ ಭೂಭಾಗ ಎಂಬುದಾಗಿ ಬಿಂಬಿಸಿ ಪರಿಷ್ಕೃತ ನಕ್ಷೆ ಪ್ರಕಟಿಸಿದ್ದಕ್ಕಾಗಿ ಯತ್ನ ನಡೆಯುತ್ತಿದೆ ಎಂದು ಪ್ರಧಾನಿ ಒಲಿ ಅವರು ಭಾನುವಾರ ಆಪಾದಿಸಿದ್ದರು.

ಏನಿದ್ದರೂ ಒಲಿ ಅವರಿಗೆ ಆಪಾದನೆ ತಿರುಗುಬಾಣವಾಗಿ ಪರಿಣಮಿಸಿತ್ತು. ಪ್ರತಿಸ್ಪರ್ಧಿ ನಾಯಕರಾದ ಪುಷ್ಪ ಕಮಲ್ ದಹಲ್ಪ್ರಚಂಡಅವರಂತಹ ನಾಯಕರು ಪಕ್ಷ ಮತ್ತು ಸರ್ಕಾರದ ನಾಯಕತ್ವ ತ್ಯಜಿಸುವಂತೆ ಆಗ್ರಹಿಸಿದ್ದರು. ಹಿಂದೆ ಅವರು ಒಲಿ ಅವರಿಗೆ ಎರಡು ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದರು.

ಅಧಿಕಾರದಲ್ಲಿ ಉಳಿದುಕೊಳ್ಳಲು ತೀವ್ರ ಹೆಣಗಾಡುತ್ತಿರುವ ಹೊತ್ತಿನಲ್ಲಿ ಇಮ್ರಾನ್ ಖಾನ್ ಅವರ ಬೆಂಬಲ ಪ್ರಧಾನಿ ಒಲಿ ಅವರಿಗೆ ಲಭಿಸಿದೆ. ಪ್ರಧಾನಿ ಒಲಿ ಅವರ ಜೊತೆಗೆ ದೂರವಾಣಿ ಸಂಭಾಷಣೆಗೆ ಸಮಯ ನಿಗದಿಪಡಿಸುವಂತೆ ಪಾಕಿಸ್ತಾನವು ನೇಪಾಳೀ ವಿದೇಶಾಂಗ ಸಚಿವಾಲಯಕ್ಕೆ ಔಪಚಾರಿಕ ಸಂದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನ ೧೨ ಗಂಟೆಯ (೧೨.೪೫ ಗಂಟೆ-ನೇಪಾಳದ ಸಮಯ ೧೨.೩೦ರ) ವೇಳೆಗೆ ದೂರವಾಣಿ ಕರೆಗೆ ಸಮಯ ನಿಗದಿ ಪಡಿಸುವಂತೆ ಇಮ್ರಾನ್ ಖಾನ್ ಕೋರಿದ್ದಾರೆ ಎಂದು ವರದಿಗಳು ಹೇಳಿವೆ.

ಮಾತುಕತೆಯ ತಿರುಳು ಭಾರತಕ್ಕೆ ಸಂಬಂಧಿಸಿದಂತೆಯೇ ಇರುತ್ತದೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.

ಇಮ್ರಾನ್ ಖಾನ್ ಅವರ ಪಾಕಿಸ್ತಾನವು ಕರಾಚಿಯಲ್ಲಿ ಪಾಕಿಸ್ತಾನ ಷೇರು ವಿನಿಮಯ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಭಾರತವೇ ರೂಪಿಸಿದೆ ಎಂದು ಆಪಾದಿಸಿದ್ದರೆ, ಪ್ರಧಾನಿ ಒಲಿ ಅವರು ಭಾರತವು ತಮ್ಮ ಸರ್ಕಾರವನ್ನ ಅಸ್ಥಿರಗೊಳಿಸುತ್ತಿದೆ ಎಂದು ದೂರಿದ್ದಾರೆ.

ಚೀನೀ ಪ್ರಧಾನಿ ಕ್ಷಿ ಜಿನ್ಪಿಂಗ್ ಅವರ ಚೀನಾವು ಭಾರತದೊಂದಿಗೆ ಲಡಾಖ್ ಘರ್ಷಣೆಯಲ್ಲಿ ತೊಡಗಿರುವ ವೇಳೆಯಲ್ಲಿಯೇ ಇಮ್ರಾನ್ ಖಾನ್ ಅವರಿಂದ ನೇಪಾಳದ ಪ್ರಧಾನಿಯನ್ನು ದೂರವಾಣಿ ಮೂಲಕ ಸಂಪರ್ಕಿಸುವ ಯತ್ನ ನಡೆದಿದೆ. ಉಭಯ ಪ್ರಧಾನಿಗಳೂ ವಿವಿಧ ಯೋಜನೆಗಳಿಗಾಗಿ ಚೀನಾಕ್ಕೆ ಭಾರೀ ಮೊತ್ತದ ಸಾಲ ಪಾವತಿಸಬೇಕಾಗಿದ್ದು, ಇದು ಚೀನಾದ ಹಿತಾಸಕ್ತಿಗಳಿಗೆ ಅನುಕೂಲಕರವಾಗಿದೆ ಎಂದು ಟೀಕಾಕಾರರು ಹೇಳುತ್ತಾರೆ.

ಚೀನಾವು ಸಮಾನ ಸಂಪರ್ಕ ಎಂದು ಕಠ್ಮಂಡು ಬೆಳವಣಿಗೆಗಳ ವೀಕ್ಷಕರೊಬ್ಬರು ಹೇಳಿದ್ದಾರೆ.

ದೇಶೀಯ ರಂಗದಲ್ಲಿ ಕಟ್ಟಾ ರಾಷ್ಟ್ರವಾದಿ ಭಾವನೆಗಳನ್ನು ಬಡಿದೆಬ್ಬಿಸುವ ಯತ್ನಕ್ಕಾಗಿ ರಾಷ್ಟ್ರದ ರಾಜಕೀಯ ನಕ್ಷೆಯನ್ನು ಪರಿಷ್ಕರಿಸಿ ಪ್ರಕಟಿಸುವ ಪ್ರಧಾನಿ ಒಲಿ ಅವರ ಕ್ರಮವು ಪಕ್ಷದಲ್ಲಿ ತಮ್ಮ ಬೆಂಬಲವನ್ನು ಕ್ರೋಡೀಕರಿಸುವ ಯತ್ನವಾಗಿದ್ದು, ವಾರಾಂತ್ಯದಲ್ಲಿ ಅದನ್ನು ಪೂರ್ಣವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು. ಆದರೆ ಅದು ಅವರಿಗೆ ತಿರುಗುಬಾಣವಾಗಿ ಪರಿಣಮಿಸಿತ್ತು.

ಪ್ರಚಂಡ ಮತ್ತು ಒಲಿ ಅವರು ನೇಪಾಳ ಕಮ್ಯೂನಿಸ್ಟ್ ಪಕ್ಷದ ಸಹ ಅಧ್ಯಕ್ಷರಾಗಿದ್ದು, ಚೀನಾದತ್ತ ವಾಲಿರುವ ಒಲಿ ಬೀಜಿಂಗ್ ಹಸ್ತಕ್ಷೇಪದ ಪರಿಣಾಮವಾಗಿ ಪ್ರಧಾನಿ ಪದವನ್ನು ಉಳಿಸಿಕೊಂಡಿದ್ದಾರೆ.

ಚೀನಾದ ಹಿತಾಸಕ್ತಿಗೆ ಅನುಕೂಲವಾಗುವಂತೆಯೇ ಪ್ರಧಾನಿ ಒಲಿ ಅವರು ನೇಪಾಳದ ರಾಜಕೀಯ ನಕ್ಷೆಯ ವಿವಾದವನ್ನು ಎಳೆದು ಭಾರತದ ಜೊತೆಗೆ ವಿವಾದ ಹುಟ್ಟು ಹಾಕಿದ್ದಾರೆ

No comments:

Advertisement