Wednesday, July 1, 2020

ಪ್ರಧಾನಿ ಮೋದಿ ವೀಬೋ ಖಾತೆಗೆ ಚೀನಾ ಕೊಕ್

ಪ್ರಧಾನಿ ಮೋದಿ ವೀಬೋ ಖಾತೆಗೆ  ಚೀನಾ ಕೊಕ್

ಫೊಟೋ, ಸಂದೇಶ ಮಾಯ: ಭಾರತದ ಖಂಡನೆ

ಬೀಜಿಂಗ್:  ಟ್ವಿಟ್ಟರ್ನಂತೆಯೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ವೀಬೋ ಖಾತೆಗೆ ಚೀನಾ ಕತ್ತರಿ ಹಾಕಿದೆ. ಖಾತೆಯಿಂದ ಅವರ ಪೋಸ್ಟ್ ಗಳು ಮತ್ತು ಫೊಟೋ ಕಿತ್ತು ಹಾಕಲಾಗಿದ್ದು, ಖಾತೆ ಖಾಲಿ ಖಾಲಿಖಾಲಿಯಾಗಿ ಕಾಣುತ್ತಿದೆ. ಚೀನಾದ ಈ ಕ್ರಮವನ್ನು ಪ್ರಧಾನಿ ಮೋದಿ  2020 ಜುಲೈ 01ರ ಬುಧವಾರ ಖಂಡಿಸಿದರು.

ಪ್ರಧಾನಿಯವರ ಹೇಳಿಕೆ ಸೇರಿದಂತೆ ಭಾರತದ ಮೂರು ಅಧಿಕೃತ ಪ್ರಕಟಣೆಗಳನ್ನು ಕಿತ್ತು ಹಾಕಿದ ೧೦ ದಿನಗಳ ಬಳಿಕ ಬೆಳವಣಿಗೆ ಆಗಿದೆ. ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ವಿಚಾಟ್ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಖಾತೆಯಿಂದ ಹತ್ತು ದಿನಗಳ ಹಿಂದೆ ಪ್ರಧಾನಿ ಹೇಳಿಕೆ ಸೇರಿ ಮೂರು ಅಧಿಕೃತ ಭಾರತೀಯ ಹೇಳಿಕೆಗಳನ್ನು ಅಳಿಸಿಹಾಕಲಾಗಿತ್ತು.

ಪ್ರಧಾನಿ ಮೋದಿ ಅವರ ವೀಬೋ ವೈಬೊ ಹ್ಯಾಂಡಲ್ ಡೌನ್ ಲೋಡ್ ಮಾಡಿದಾಗ, ತತ್ ಕ್ಷಣವೇ ಅದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಖಾತೆಯ ಪುಟಗಳು ಖಾಲಿ ಖಾಲಿಯಾಗಿದ್ದವು.

ಭದ್ರತೆ ಮತ್ತು ದತ್ತಾಂಶ ಉಲ್ಲಂಘನೆಯ ಕಾರಣಕ್ಕಾಗಿ ಭಾರತವು ಸೋಮವಾರ ೫೯ ಚೀನೀ ಆಪ್ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಬೆಳವಣಿಗೆ ನಡೆದಿದೆ.

ಮೋದಿಯವರ ಖಾತೆಯಿಂದ - ಅವರ ಪ್ರೊಫೈಲ್ ಫೋಟೋ ಸೇರಿದಂತೆ ಎಲ್ಲಾ ಮಾಹಿತಿಯನ್ನು ಬುಧವಾರ ತೆಗೆದುಹಾಕಲಾಗಿದೆ.

ಮೋದಿಯವರ ವೀಬೊ ಖಾತೆಯನ್ನು ಪ್ರಧಾನ ಮಂತ್ರಿಯಾಗಿ ಚೀನಾಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ಮುನ್ನ ಹೆಚ್ಚಿನ ಅಭಿಮಾನಿಗಳನ್ನು ಸಂಪರ್ಕಿಸುವ ಸಲುವಾಗಿ ಮತ್ತು ಪ್ರಚಾರದ ಸಲುವಾಗಿ ೨೦೧೫ ರಲ್ಲಿ ಆರಂಭಿಸಲಾಗಿತ್ತು.

ಅಂದಿನಿಂದ ಇಲ್ಲಿಯವರೆಗೆ ಖಾತೆಗೆ ,೪೪,೦೦೦ ಅನುಯಾಯಿಗಳು (ಫಾಲೋಯರ್ಸ್) ಇದ್ದರು, ಅವರಲ್ಲಿ ಬಹುತೇಕ ಮಂದಿ ಚೀನಿಯರು.

೨೦೧೫ ರಿಂದ, ವರ್ಷವನ್ನು ಹೊರತುಪಡಿಸಿ, ಜೂನ್ ೧೫ ರಂದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಅವರ  ಜನ್ಮದಿನದ ಮುನ್ನಾದಿನ ಪ್ರಧಾನಿ ಮೋದಿ ಮೋದಿ ಶುಭ ಹಾರೈಸಿದ್ದರು.

ಪ್ರಧಾನಿಯವರು ಕ್ಸಿ ಅವರೊಂದಿಗಿನ ಸಭೆಗಳ ನಂತರ ಚೀನಾ-ಭಾರತ ಸಂಬಂಧಗಳ ಕುರಿತು ಸಂದೇಶಗಳನ್ನು ಖಾತೆಯಲ್ಲಿ ಪ್ರಕಟಿದ್ದರು.

ವೀಬೊದಲ್ಲಿ ಮೋದಿಯವರ ಪೋಸ್ಟ್ಗಳು ಚೀನೀ ಭಾಷೆಯಲ್ಲಿವೆ.

ಮೋದಿಯವರ ವೀಬೊ ಖಾತೆಯನ್ನು ಹಠಾತ್ತನೆ ಖಾಲಿ ಮಾಡಿದ ಕ್ರಮ ಮತ್ತು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿನ ಭಾg ಸರ್ಕಾರದ ಪೋಸ್ಟ್ಗಳನ್ನು ತೆಗೆದುಹಾಕಿದ ಕ್ರಮಗಳು ಪೂರ್ವ ಲಡಾಖ್ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಸಂಭವಿಸಿದ ಭಾರತ ಮತ್ತು ಚೀನಾದ ಸೈನಿಕರ ನಡುವಣ ಹಿಂಸಾತ್ಮಕ ಘರ್ಷಣೆ ಮತ್ತು ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ನಡೆದಿವೆ.

ಘರ್ಷಣೆಯಲ್ಲಿ ೨೦ ಭಾರತೀಯ ಸೇನಾ ಸೈನಿಕರು ಹುತಾತ್ಮರಾಗಿದ್ದರೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಅನುಭವಿಸಿದ ಸಾವುನೋವುಗಳನ್ನು ಚೀನಾ ಸರ್ಕಾರ ಇದುವರೆಗೂ ಬಹಿರಂಗಪಡಿಸಿಲ್ಲ, ಆದಾಗ್ಯೂ ಚೀನಾ ತನ್ನ ಕಡೆಯ ಸಾವುನೋವುಗಳ ಬಗ್ಗೆ ಅಂತಾರಾಷ್ಟ್ರೀಯ ರಾಜತಾಂತ್ರಿಕರ ಬಳಿ ಒಪ್ಪಿಕೊಂಡಿದೆ.

ಜೂನ್ ೨೦ ರಂದು, ಚೀನಾದೊಂದಿಗೆ ನಡೆಯುತಿದ್ದ ಗಡಿ ಬಿಕ್ಕಟ್ಟಿನ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ನೀಡಿದ ಹೇಳಿಕೆಯ ವಿಚಾಟ್ ಪೋಸ್ಟ್ಗಳನ್ನು ಅಳಿಸುವ ಒಂದು ದಿನದ ಮೊದಲು ರಾಯಭಾರ ಕಚೇರಿಯ ಅಧಿಕೃತ ವೀಬೊ ಖಾತೆಯಿಂದಲೂ ನಿಗೂಢವಾಗಿ ಅಳಿಸಲಾಗಿತ್ತು.

ವಿಚಾಟ್ ಅನ್ನು ಹೊಂದಿರುವ ಚೀನಾದ ಪ್ರಮುಖ ಟೆಕ್ ಕಂಪನಿಯಾದ ಟೆನ್ಸೆಂಟ್, ಭಾರತೀಯ ಸರ್ಕಾರದ ಅಧಿಕೃತ ಹೇಳಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.

ಆದಾಗ್ಯೂ, ಗಲ್ವಾನ್ ಕಣಿವೆ ಘರ್ಷಣೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯನ್ನು ಕ್ಲಿಕ್ ಮಾಡಿದಾಗ ವಿಚಾಟ್ನಲ್ಲಿ ವಿಷಯವನ್ನು ಕೆಳಗಿನ ವೇದಿಕೆಯ ವರದಿಯಂತೆ ಸಂಬಂಧಿತ ಕಾನೂನುಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದಾಗಿ ಕಂಡು ಬಂದ ಕಾರಣ ಕಿತ್ತು ಹಾಕಲಾಗಿದೆಎಂಬ ಸಂದೇಶ ಕಾಣಿಸುತ್ತದೆ.

ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವುದು,  ರಾಜ್ಯ ರಹಸ್ಯಗಳನ್ನು ಬಹಿರಂಗಪಡಿಸುವುದು, ರಾಜ್ಯ ಅಧಿಕಾರವನ್ನು ಕುಗ್ಗಿಸುವುದು ಅಥವಾ ರಾಷ್ಟ್ರೀಯ ಏಕತೆಗೆ ಭಂಗ ತರುವುದು, ದ್ವೇಷವನ್ನು ಪ್ರಚೋದಿಸುವುದು, ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದು, ಅಕ್ರಮ ಸಭೆ, ಪ್ರದರ್ಶನ ಅಥವಾ ಸಾರ್ವಜನಿಕ ವ್ಯವಸ್ಥೆಯನ್ನು ಹಾಳುಗೆಡವಲು ಅಕ್ರಮ ಸಭೆ, ಪ್ರದರ್ಶನ ನಡೆಸಲು ಜನರನ್ನು ಒಟ್ಟುಗೂಡಿಸುವುದುಇತ್ಯಾದಿ ನಿಯಮಗಳ ಸುದೀರ್ಘ ಪಟ್ಟಿಯಲ್ಲಿ ಸೇರಿವೆ.

No comments:

Advertisement