Wednesday, July 15, 2020

ಅಶೋಕ ಲವಾಸಾ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕ

ಅಶೋಕ ಲವಾಸಾ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕ

ನವದೆಹಲಿ: ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್-ಎಡಿಬಿ) ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ 2020 ಜುಲೈ 15ರ ಬುಧವಾರ ಬುಧವಾರ ಮಧ್ಯಾಹ್ನ ಪ್ರಕಟಿಸಿತು.

೬೨ ವರ್ಷದ ಶ್ರೀ ಲವಾಸಾ ಅವರು ಶೀಘ್ರದಲ್ಲೇ ಚುನಾವಣಾ ಆಯೋಗದ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಲವಾಸಾ ಅವರು ೨೦೧೮ ಜನವರಿಯಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದು, ಅವರ ಅಧಿಕಾರಾವಧಿಯಲ್ಲಿ ಇನ್ನೂ ಎರಡು ವರ್ಷಗಳು ಉಳಿದಿವೆ. ಮುಂದಿನ ವರ್ಷ ಏಪ್ರಿಲ್ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ನಿವೃತ್ತಿಯೊಂದಿಗೆ ಸಿಇಸಿ ಹುದ್ದೆಗೆ ಏರುವ ಮೊದಲ ಸ್ಥಾನದಲ್ಲಿ ಅವರು ಇದ್ದಾರೆ.

"ಲವಾಸಾ ಅವರು ಭಾರತೀಯ ನಾಗರಿಕ ಸೇವೆಯಲ್ಲಿ ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಭಾರತದ ಚುನಾವಣಾ ಆಯುಕ್ತರಲ್ಲಿ ಒಬ್ಬರಾಗಿದ್ದಾರೆ ಮತ್ತು ಹಿಂದೆ ಹಲವಾರು ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ" ಎಂದು ಎಡಿಬಿ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್) ಹೇಳಿಕೆ ತಿಳಿಸಿದೆ.

"ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ರಾಜ್ಯ ಮತ್ತು ಫೆಡರಲ್ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅವರು ವ್ಯಾಪಕ ಅನುಭವ ಹೊಂದಿದ್ದಾರೆ, ಸಾರ್ವಜನಿಕ ನೀತಿ ಮತ್ತು ಖಾಸಗಿ ವಲಯದ ಪಾತ್ರದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ" ಎಂದೂ ಬ್ಯಾಂಕ್ ಹೇಳಿದೆ.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧದ ದೂರುಗಳ ಸಮಿತಿಯ ತೀರ್ಪಿನ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಅಶೋಕ ಲವಾಸಾ ಪತ್ರಿಕೆಗಳಲ್ಲಿ ರಾರಾಜಿಸಿ ಎಲ್ಲರ ಗಮನ ಸೆಳೆದಿದ್ದರು.

ಪ್ರಧಾನಿ ವಿರುದ್ಧ ಆರು ದೂರುಗಳು ದಾಖಲಾಗಿದ್ದವು. ದೂರುಗಳಿಗೆ ಸಂಬಂಧಿಸಿದಂತೆ ಕೆಲವು ವಿಚಾರಗಳಲ್ಲಿ ಲವಾಸಾ ಅರು ತ್ರಿಸದಸ್ಯ ಆಯೋಗದ ಇತರ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು.

ಘಟನೆಯ ಬಳಿಕ ಅವರು ಆಯೋಗದ ಸಭೆಗಳಿಗೆ ಹಾಜರಾಗುವುದನ್ನು ನಿಲ್ಲಿಸಿದರು, "ಅಲ್ಪಸಂಖ್ಯಾತ ನಿರ್ಧಾರಗಳನ್ನು "ಬಹು-ಸದಸ್ಯ ಶಾಸನಬದ್ಧ ಸಂಸ್ಥೆಗಳು ದಮನಿಸುತ್ತಿವೆ ಎಂದು ಅವರು ಹೇಳಿದ್ದರು.

ಕಳೆದ ವರ್ಷ ಡಿಸೆಂಬರ್ನಲಿ ಲವಾಸಾ ಅವರು ಪತ್ರಿಕೆಯೊಂದರಲ್ಲಿ ಬರೆದ ಲೇಖನದಲ್ಲಿ "ಆದಾಗ್ಯೂ, ಪ್ರಾಮಾಣಿಕರು ಲೆಕ್ಕಿಸದೆ ಮುಂದುವರಿಯುತ್ತಾರೆ, ಬಹುಶಃ ಆಂತರಿಕ ಶಕ್ತಿಯಿಂದ ಅವರು ನಡೆಸಲ್ಪಡುತ್ತಾರೆ. ಪ್ರಾಮಾಣಿಕರನ್ನು ದಣಿಸುವ ಅಥವಾ ಅವರನ್ನು ಘಾಸಿಗೊಳಿಸುವ ಅಡೆತಡೆಗಳನ್ನು ಸೃಷ್ಟಿಸುವ ಸಮಾಜ ತನ್ನದೇ  ವಿನಾಶಕ್ಕೆ ದಾರಿ ಮಾಡಿಕೊಳ್ಳುತ್ತದೆ ಎಂದು ಬರೆದಿದ್ದರು.

ಫೈಲಿಂಗ್ಗಳಲ್ಲಿನ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಪತ್ನಿ ನೋವೆಲ್ ಎಸ್ ಲವಸಾ ಅವರಿಗೆ ಆದಾಯ ತೆರಿಗೆ ನೋಟಿಸ್ ಕಳುಹಿಸಿದ ಎರಡು ತಿಂಗಳ ನಂತರ ಲವಾಸಾ ಲೇಖನ ಬರೆದಿದ್ದರು.

"ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೋರಲಾಗಿತ್ತು ಎಂದು ಮೂಲಗಳು ತಿಳಿಸಿದ್ದವು. ಶ್ರೀಮತಿ ಲವಾಸಾ ಅವರು "ಎಲ್ಲಾ ತೆರಿಗೆಗಳನ್ನು ಪಾವತಿಸಿದ್ದೇನೆ ಮತ್ತು "ಎಲ್ಲಾ ಆದಾಯವನ್ನು ಬಹಿರಂಗಪಡಿಸಿದ್ದೇನೆ ಮತ್ತು ತನಿಖೆಗೆ ಸಹಕರಿಸುತ್ತಿದ್ದೇನೆ ಎಂದು ಹೇಳಿದ್ದರು.

ಹಿಂದೆ ಜಾರಿ ನಿರ್ದೇಶನಾಲಯವು ಲವಾಸಾ ಅವರ ಪುತ್ರ ಅಬೀರ್ ಲವಾಸಾ ಮತ್ತು ಅವರು ನಿರ್ದೇಶಕರಾಗಿರುವ ಕಂಪನಿಯ ವಿರುದ್ಧ ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಮೇಲೆ ತನಿಖೆಯನ್ನು ಪ್ರಾರಂಭಿಸಿತ್ತು.

ಅಶೋಕ್ ಲವಾಸಾ ಆಸ್ಟ್ರೇಲಿಯಾದಿಂದ ವ್ಯವಹಾರ ಪದವಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ರಕ್ಷಣಾ ಮತ್ತು ಕಾರ್ಯತಂತ್ರದ ಅಧ್ಯಯನದಲ್ಲಿ ಪದವಿ ಪಡೆದಿದ್ದಾರೆ.

No comments:

Advertisement