ಭಾರತದ ಕೊರೋನಾ
ಪ್ರಕರಣ ಸಂಖ್ಯೆ, ಸಾವು ವಿಶ್ವದಲ್ಲೇ ಕಡಿಮೆ
ನವದೆಹಲಿ: ಭಾರತದ ಒಟ್ಟು ಕೊರೋನವೈರಸ್ ಪ್ರಕರಣಗಳು ಮತ್ತು ಪ್ರತಿ ಮಿಲಿಯನ್ (ದಶಲಕ್ಷ) ಜನಸಂಖ್ಯೆಗೆ ಅನುಗುಣವಾದ ಸಾವುನೋವುಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಜುಲೈ 07ರ ಮಂಗಳವಾರ ತಿಳಿಸಿತು.
ಈ ಮಧ್ಯೆ, ದೇಶzಲ್ಲಿ ಕೊರೋನಾವೈರಸ್ ಸೋಂಕು ಮಂಗಳವಾರ ೭ ಲಕ್ಷದ ಗಡಿ ದಾಟಿದೆ ಮತ್ತು ಸಾವಿನ ಸಂಖ್ಯೆ ೨೦,೧೬೦ ಕ್ಕೆ ಏರಿದೆ.
ಜುಲೈ ೬ ರ ದಿನಾಂಕದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವಸ್ತುಸ್ಥಿತಿ ವರದಿ -೧೬೮’ ನ್ನು ಉಲ್ಲೇಖಿಸಿರುವ ಸಚಿವಾಲಯವು, ಪ್ರತಿ ಮಿಲಿಯನ್ ಜನಸಂಖ್ಯೆಗೆ ಭಾರತದ ಕೋವಿಡ್ -೧೯ ಪ್ರಕರಣಗಳು ೫೦೫.೩೭ ಆಗಿದೆ, ಇದು ಜಾಗತಿಕ ಸರಾಸರಿ ೧,೪೫೩.೨೫ ಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಹೇಳಿತು.
ಚಿಲಿಯಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ೧೫,೪೫೯.೮ ಕೋವಿಡ್-೧೯ ಪ್ರಕರಣಗಳು ದಾಖಲಾಗಿದ್ದರೆ, ಪೆರುವಿನಲ್ಲಿ ಪ್ರತಿ ಮಿಲಿಯನ್ ಜನರಿಗೆ ೯,೦೭೦.೮ ಪ್ರಕರಣಗಳಿವೆ.
ಅಮೆರಿಕ, ಬ್ರೆಜಿಲ್, ಸ್ಪೇನ್, ರಷ್ಯಾ, ಇಂಗ್ಲೆಂಡ್, ಇಟಲಿ ಮತ್ತು ಮೆಕ್ಸಿಕೊಗಳು ಕ್ರಮವಾಗಿ ೮,೫೬೦.೫, ೭,೪೧೯.೧, ೫,೩೫೮.೭, ೪,೭೧೩.೫, ೪,೨೦೪.೪, ೩,೯೯೬.೧ ಮತ್ತು ೧,೯೫೫.೮ ಪ್ರಕರಣಗಳನ್ನು ಹೊಂದಿವೆ ಎಂದು ಡಬ್ಲ್ಯುಎಚ್ಒ ವರದಿ ತಿಳಿಸಿದೆ.
"ಡಬ್ಲ್ಯುಎಚ್ಒ ವಸ್ತುಸ್ಥಿತಿ ವರದಿಯ ಪ್ರಕಾರ ಭಾರತವು ಒಂದು ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಕೊರೋನಾವೈರಸ್ ಪ್ರಕರಣಗಳ ಸಾವುಗನ್ನು ದಾಖಲಿಸಿದೆ. ಪ್ರತಿ ಮಿಲಿಯನ್ ಜನಸಂಖ್ಯೆಗೆ ಭಾರತದ ಸಾವಿನ ಪ್ರಕರಣಗಳು ೧೪.೨೭ ಆಗಿದ್ದರೆ, ಜಾಗತಿಕ ಸರಾಸರಿ ನಾಲ್ಕು ಪಟ್ಟು ಹೆಚ್ಚು, ೬೮.೨೯’ ಎಂದು ಸಚಿವಾಲಯ ಹೇಳಿದೆ.
ಇಂಗ್ಲೆಂಡ್ ಪ್ರತಿ ಮಿಲಿಯನ್ ಜನಸಂಖ್ಯೆಗೆ ೬೫೧.೪ ಕೋವಿಡ್ -೧೯ ಸಂಬಂಧಿತ ಸಾವುಗಳನ್ನು ಹೊಂದಿದ್ದರೆ, ಸ್ಪೇನ್, ಇಟಲಿ, ಫ್ರಾನ್ಸ್, ಅಮೆರಿಕ, ಪೆರು, ಬ್ರೆಜಿಲ್ ಮತ್ತು ಮೆಕ್ಸಿಕೊ ಕ್ರಮವಾಗಿ ೬೦೭.೧, ೫೭೬.೬, ೪೫೬.೭, ೩೯೧.೦, ೩೧೫.೮, ೩೦೨.೩ ಮತ್ತು ೨೩೫.೫ ಸಾವುಗಳನ್ನು ದಾಖಲಿಸಿವೆ ಎಂದು ವರದಿ ಹೇಳಿದೆ.
ಕೊರೋನವೈರಸ್ ಪ್ರಕರಣಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಭಾರತ ತನ್ನ ಆಸ್ಪತ್ರೆಯ ಮೂಲಸೌಕರ್ಯವನ್ನು ಹೆಚ್ಚಿಸಿದೆ ಎಂದು ಸಚಿವಾಲಯ ತಿಳಿಸಿದೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೧,೧೭,೮೦,೬೭೬, ಸಾವು ೫,೪೧,೭೮೧
ಚೇತರಿಸಿಕೊಂಡವರು- ೬೭,೭೫,೪೯೮
ಅಮೆರಿಕ ಸೋಂಕಿತರು ೩,೪೨,೬೭೦, ಸಾವು ೧,೩೩,೦೬೨
ಸ್ಪೇನ್ ಸೋಂಕಿತರು ೨,೯೮,೮೬೯, ಸಾವು ೨೮,೩೮೮
ಇಟಲಿ ಸೋಂಕಿತರು ೨,೪೧,೮೧೯, ಸಾವು ೩೪,೮೬೯
ಜರ್ಮನಿ ಸೋಂಕಿತರು ೧,೯೮,೧೧೧, ಸಾವು ೯,೦೯೩
ಚೀನಾ ಸೋಂಕಿತರು ೮೩,೫೬೫, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೮೫,೭೬೮, ಸಾವು ೪೪,೨೩೬
ಭಾರತ ಸೋಂಕಿತರು ೭,೨೩,೧೯೫, ಸಾವು ೨೦,೨೦೧
ಅಮೆರಿಕದಲ್ಲಿ ೮೩, ಇರಾನಿನಲ್ಲಿ ೨೦೦, ಬ್ರೆಜಿಲ್ನಲ್ಲಿ ೭೫, ಇಂಡೋನೇಷ್ಯ ೬೮, ನೆದರ್ ಲ್ಯಾಂಡ್ಸ್ನಲ್ಲಿ ೪, ರಶ್ಯಾದಲ್ಲಿ ೧೯೮, ಪಾಕಿಸ್ತಾನದಲ್ಲಿ ೭೭, ಮೆಕ್ಸಿಕೋದಲ್ಲಿ ೪೮೦, ಭಾರತದಲ್ಲಿ ೨೭, ಒಟ್ಟಾರೆ ವಿಶ್ವಾದ್ಯಂತ ೧,೬೪೪ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೪,೪೧,೭೩೩ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment