Wednesday, July 15, 2020

ಪೈಲಟ್ ಜೊತೆ ಮತ್ತೆ ಸಂಧಾನಕ್ಕೆ ಕಾಂಗ್ರೆಸ್ ಯತ್ನ

ಪೈಲಟ್ ಜೊತೆ ಮತ್ತೆ ಸಂಧಾನಕ್ಕೆ ಕಾಂಗ್ರೆಸ್ ಯತ್ನ

ನವದೆಹಲಿ: ’ಬಿಜೆಪಿಯೊಂದಿಗಿನ ಎಲ್ಲ್ಲ ಸಂಭಾಷಣೆಯನ್ನು ನಿಲ್ಲಿಸಿ ಮತ್ತು ಜೈಪುರದ ನಿಮ್ಮ ಮನೆಗೆ ಹಿಂತಿರುಗಿ ಎಂಬ ಸೂಚನೆ ನೀಡುವ ಮೂಲಕ, ಬಂಡಾಯ ಎದ್ದಿರುವ ಸಚಿನ್ ಪೈಲಟ್ ಅವರನ್ನು ತಲುಪಲು ಕಾಂಗೆಸ್ 2020 ಜುಲೈ 15ರ ಬುಧವಾರ ಇನ್ನೊಂದು ಯತ್ನ ನಡೆಸಿತು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಪೈಲಟ್ ಬಹಿರಂಗ ಪಡಿಸಿದಂದಿನಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ.

ಬಂಡಾಯದ ಬಳಿಕ ಪಕ್ಷವು ಸಚಿನ್ ಪೈಲಟ್ ಅವರನ್ನು ಮಂಗಳವಾರ ಉಪಮುಖ್ಯಮಂತ್ರಿ ಸ್ಥಾನ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿತ್ತು.

ಬಿಜೆಪಿ ಜೊತೆಗೆ ಕೈಜೋಡಿಸುವ ಸಾಧ್ಯತೆಗಳನ್ನು ಬಂಡಾಯ ನಾಯಕ ಪೈಲಟ್ ಅವರು ಬುಧವಾರ ಬೆಳಗ್ಗೆ ಖಂಡತುಂಡವಾಗಿ ನಿರಾಕರಿಸಿದ ಬಳಿಕ, ಕಾಂಗ್ರೆಸ್ ನಾಯPತ್ವವು ಅವರ ಜೊತೆಗೆ ಸಂಧಾನದ ಇನ್ನೊಂದು ಯತ್ನಕ್ಕೆ ಕೈಹಾಕಿದೆ.

ಗಾಂಧಿ ಕುಟುಂಭದ ದೃಷ್ಟಿಯಲ್ಲಿ ನನ್ನ ಪ್ರತಿಷ್ಠೆಯನ್ನು ಹಾಳುಮಾಡುವ ದುರುದ್ದೇಶದಿಂದ ನಾನು ವಿರೋಧ ಪಕ್ಷವನ್ನು ಸಂಪರ್ಕಿಸುತ್ತಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ೪೨ರ ಹರೆಯದ ಪೈಲಟ್ ಬೆಳಗ್ಗೆ ಹೇಳಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಬಿಜೆಪಿಯ ವಿರುದ್ಧವೇ ಹೋರಾಡಿದ್ದೇನೆ ಎಂದು ಪೈಲಟ್ ಒತ್ತಿ ಹೇಳಿದ್ದರು.

ಸಚಿನ್ ಪೈಲಟ್ ಅವರು ಬಿಜೆಪಿ ಸೇರುವುದಿಲ್ಲ ಎಂಬುದಾಗಿ ನೀಡಿದ ಹೇಳಿಕೆಯನ್ನು ನಾವು ನೋಡಿದ್ದೇವೆ. ನಿಮಗೆ ಅದು ಬೇಡವಾದರೆ, ತಕ್ಷಣವೇ ಬಿಜೆಪಿಯ ಹರಿಯಾಣ ಸರ್ಕಾರದ ಭದ್ರತಾ ವ್ಯಾಪ್ತಿಯಿಂದ ಹೊರಬನ್ನಿ, ಅವರೊಂದಿಗಿನ ಎಲ್ಲ ಸಂಭಾಷಣೆಗಳನ್ನು ನಿಲ್ಲಿಸಿ ಜೈಪುರದ ನಿಮ್ಮ ಮನೆಗೆ ಹಿಂತಿರುಗಿ ಎಂದು ನಾನು  ಅವರಿಗೆ ಹೇಳಬಯಸುತ್ತೇನೆ ಎಂದು ಪಕ್ಷದ ವಕ್ತಾರ ರಣ್ದೀಪ್ ಸುರ್ಜೆವಾಲ ಬುಧವಾರ ಮಧ್ಯಾಹ್ನ ತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಚಿನ್ ಪೈಲಟ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಶನಿವಾರದಿಂದ ದೆಹಲಿಯಲ್ಲಿ ಶಿಬಿರ ಹೂಡಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಅವಿನಾಶ್ ಪಾಂಡೆ ಕೂಡಾಪೈಲಟ್ ಅವರಿಗೆ ಪಕ್ಷದ ಬಾಗಿಲು ಮುಚ್ಚಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸಚಿನ್ ಪೈಲಟ್ಗೆ ಕಾಂಗ್ರೆಸ್ ಬಾಗಿಲು ಮುಚ್ಚಿಲ್ಲ, ದೇವರು ಅವರಿಗೆ ವಿವೇಕವನ್ನು ನೀಡಲಿ ಮತ್ತು ಅವರು vಮ್ಮ ತಪ್ಪನ್ನು ಅರ್ಥಮಾಡಿಕೊಳ್ಳಲಿ. ಅವರು ಬಿಜೆಪಿಯ ಮೋಸಗೊಳಿಸುವ ಮಾರ್ಗಗಳಿಂದ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವಿನಾಶ್ ಪಾಂಡೆ ಟ್ವೀಟ್ ಮಾಡಿದರು.

ಮಧ್ಯೆ, ಸಚಿನ್ ಪೈಲಟ್ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಹೂತುಹಾಕುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮನವೊಲಿಸಲು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ಗೆಹ್ಲೋಟ್ ಹೆಚ್ಚು ಉತ್ಸುಕರಂತೆ ಕಾಣಿಸಿಲ್ಲ ಮತ್ತು ತಮ್ಮ ವಿರೋಧಿಯನ್ನು ತತ್ ಕ್ಷಣವೇ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ಹೊರಹಾಕಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಜೈಪುರದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಗೆಹ್ಲೋಟ್, ಇದಕ್ಕೆ ತಮ್ಮ ಬಳಿ ಪುರಾವೆ ಇದೆ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿಹೊಸ ತಲೆಮಾರಿನವರು ತಾಳ್ಮೆ ಹೊಂದಿಲ್ಲ ಎಂಬುದಾಗಿ ಹೇಳುವ ಮೂಲಕ ಗೆಹ್ಲೋಟ್ ಅವರು ಪೈಲಟ್ ಮೇಲೆ ಚಾಟಿ ಬೀಸಿದರು.

ನಾನು ೪೦ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ನಾವು ಹೊಸ ಪೀಳಿಗೆಯನ್ನು ಪ್ರೀತಿಸುತ್ತೇವೆ, ಭವಿಷ್ಯವು ಅವರದು. ಹೊಸ ತಲೆಮಾರಿನವರು ಕೇಂದ್ರ ಸಚಿವರು, ರಾಜ್ಯ ಅಧ್ಯಕ್ಷರು ಆಗಿದ್ದುದನ್ನು ನಾವು ಕಂಡಿದ್ದೇವೆ. ನಮ್ಮ ಕಾಲದಲ್ಲಿ ನಾವು ಮಾಡಿದ್ದನ್ನು ಅವರು ಅನುಭವಿಸಿದ್ದರೆ, ಅವರು ಪರಿಸ್ಥಿತಿ ಅರ್ಥಮಾಡಿಕೊಳ್ಳುತ್ತಿದ್ದರು ಎಂದು ಗೆಹ್ಲೋಟ್ ಹೇಳಿದರು.

No comments:

Advertisement