ರಾಷ್ಟ್ರಪತಿ
ಭವನ, ಪ್ರಧಾನಿ ಮನೆ ಎದುರೂ ಧರಣಿ: ಗೆಹ್ಲೋಟ್
ಜೈಪುರ: ರಾಜಸ್ಥಾನ ರಾಜಭವನದ ಮುಂದೆ ಧರಣಿ ನಡೆಸಿದ ಒಂದು ದಿನದ ಬಳಿಕ, ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಬಿಜೆಪಿ ಸಂಚನ್ನು ವಿಫಲಗೊಳಿಸಲು ತಾವು ಅಗತ್ಯ ಬಿದ್ದಲ್ಲಿ ರಾಷ್ಟ್ರಪತಿ ಭವನಕ್ಕೆ ಹೋಗಲು ಮತ್ತು ಪ್ರಧಾನಿಯವರ ನಿವಾಸದ ಮುಂದೆ ಧರಣಿ ನಡೆಸಲು ಸಿದ್ಧ ಎಂಬುದಾಗಿ 2020 ಜುಲೈ 25ರ ಶನಿವಾರ ಘೋಷಿಸಿದರು.
ಜೈಪುರದ
ಹೋಟೆಲಿನಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಗೆಹ್ಲೋಟ್ ಈ ಘೋಷಣೆ ಮೂಲಕ
ತಮ್ಮ ಹೋರಾಟವನ್ನು ಇನ್ನೂ ಮೇಲ್ಮಟ್ಟಕ್ಕೆ ಒಯ್ಯುವ ಇರಾದೆಯನ್ನು ಪ್ರಕಟಿಸಿದರು.
‘ನಾವು
ಬಿಜೆಪಿ ಪಿತೂರಿ ಯಶಸ್ವಿಯಾಗಲು ಬಿಡುವುದಿಲ್ಲ. ಅಗತ್ಯವಿದ್ದರೆ ರಾಷ್ಟ್ರಪತಿ ಭವನಕ್ಕೆ ಹೋಗುತ್ತೇವೆ. ಪ್ರಧಾನ ಮಂತ್ರಿ ನಿವಾಸದ ಹೊರಗಡೆ ಧರಣಿ ನಡೆಸಲೂ ಸಿದ್ಧ’ ಎಂದು ಗೆಹ್ಲೋಟ್ ಶಾಸಕರ ಸಭೆಯಲ್ಲಿ ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತು.
ವಿಧಾನಸಭೆ
ಅಧಿವೇಶನ ಕರೆಯಲು ಹೊಸ ಮನವಿಯನ್ನು ಸಲ್ಲಿಸಲು ಮುಖ್ಯಮಂತ್ರಿಯವರು ರಾಜ್ಯಪಾಲ ಕಲರಾಜ್ ಮಿಶ್ರ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.
ಶುಕ್ರವಾರ,
ಗೆಹ್ಲೋಟ್ ಮತ್ತು ಅವರ ಬೆಂಬಲಿU ಶಾಸಕರು ರಾಜಭವನದ ಹುಲ್ಲುಹಾಸಿನ ಮೇಲೆ ಧರಣಿ ನಡೆಸಿ, ರಾಜ್ಯ
ವಿಧಾನಮಂಡಲದ ಅಧಿವೇಶನವನ್ನು ಕರೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದರು.
ವಿಧಾನಮಂಡಲ
ಅಧಿವೇಶನವನ್ನು ಕರೆಯುವ ನಿರ್ಧಾರವನ್ನು ’ಮೇಲಿನ ಒತ್ತಡ’ದ ಕಾರಣ ರಾಜ್ಯಪಾಲರು ಸ್ಥಗಿತಗೊಳಿಸಿದ್ದಾರೆ
ಎಂದು ಗೆಹ್ಲೋಟ್ ಆರೋಪಿಸಿದ್ದರು.
ಸೋಮವಾರ
ಅಧಿವೇಶನ ನಡೆಯಬೇಕೆಂದು ಬಯಸಿರುವ ಮುಖ್ಯಮಂತ್ರಿ ಸದನದಲ್ಲಿ ತಮ್ಮ ಬಹುತಮ ಸಾಬೀತು ಪಡಿಸಲು ಬಯಸುವುದಾಗಿ ಹೇಳಿದರು.
ಅಸಾಮಾನ್ಯ
ಬೆಳವಣಿಗೆಗಳಲ್ಲಿ ಧರಣಿ ಕುಳಿತ ಶಾಸಕರು ’ಇನ್ಕ್ವಿಲಾಬ್ ಜಿಂದಾಬಾದ್, ಅಶೋಕ ಗೆಹ್ಲೋಟ್ ಜಿಂದಾಬಾದ್’ ಕೂಗುವ
ಮೂಲಕ ಮುಖ್ಯಮಂತ್ರಿಗೆ ಬೆಂಬಲ ವ್ಯಕ್ತ ಪಡಿಸಿದ್ದರು.
ಸುಮಾರು
ಐದು ಗಂಟೆಗಳ ನಂತರ ಧರಣಿ ಕೊನೆಗೊಂಡಿತ್ತು. ಸದನದಲ್ಲಿ ಬಲಾಬಲ ಪರೀಕ್ಷೆಗಾಗಿ ಅಧಿವೇಶನ ಕರೆಯಬೇಕು ಎಂಬ ಮನವಿಯೊಂದಿಗೆ ಶಾಸಕರ ಪಟ್ಟಿಯನ್ನೂ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು.
ಸಚಿನ್
ಪೈಲಟ್ ಶಿಬಿರಕ್ಕೆ ಭಾಗಶಃ ಪರಿಹಾರವಾಗಿ, ರಾಜಸ್ಥಾನ ಹೈಕೋರ್ಟ್ ಸಭಾಧ್ಯಕ್ಷ ಸಿಪಿ ಜೋಶಿ ಬಂಡಾಯ ಶಾಸಕರ ಗುಂಪಿಗೆ ನೀಡಿರುವ ಅನರ್ಹತೆ ನೋಟಿಸ್ ಸಂಬಂಧ ಮುಂದಿನ ಪ್ರಕ್ರಿಯೆ ವಿಚಾರದಲ್ಲಿ ಯಥಾಸ್ಥಿತಿ ಯಥಾಸ್ಥಿತಿ
ಕಾಯ್ದುಕೊಳ್ಳಲು ಆದೇಶ ನೀಡಿದೆ.
ಈ
ಬೆಳವಣಿಗೆಯ ನಂತರ, ಎರಡು ವಾರಗಳಿಂದ ಉಂಟಾಗಿರುವ ರಾಜಕೀಯ ಅನಿಶ್ಚಿತತೆಯನ್ನು ಕೊನೆಗೊಳಿಸುವ ಭರವಸೆಯೊಂದಿಗೆ ತಮ್ಮ ಬಹುಮತವನ್ನು ಸಾಬೀತುಪಡಿಸುವ ಸಲುವಾಗಿ ವಿಧಾನಮಂಡಲ ಅಧಿವೇಶನಕ್ಕಾಗಿ
ಮುಖ್ಯಮಂತ್ರಿ ತಮ್ಮ ಒತ್ತಡವನ್ನು ಹೆಚ್ಚಿಸಿದ್ದಾರೆ.
ಶಾಸಕಾಂಗ ಪಕ್ಷದ ಹಿಂದಿನ ಸಭೆಯಲ್ಲಿ ಗೆಹ್ಲೋಟ್ ಅವರು ಇಡೀ ರಾಷ್ಟ್ರವು ರಾಜಸ್ಥಾನದ ಬೆಳವಣಿಗೆಗಳನ್ನು ಗಮನಿಸುತ್ತಿರುವುದರಿಂದ ಬಂಡೆಯಂತೆ ದೃಢವಾಗಿ ನಿಲ್ಲಬೇಕು ಎಂದು ಬೆಂಬಲಿಗ ಶಾಸಕರಿಗೆ ಸಲಹೆ ಮಾಡಿದ್ದರು.
No comments:
Post a Comment