ರಫೇಲ್ ತಲುಪಿದ ಬೆನ್ನಲ್ಲೇ ಚೀನಾಕ್ಕೆ ರಾಜನಾಥ್ ಎಚ್ಚರಿಕೆ
ನವದೆಹಲಿ: ಫ್ರಾನ್ಸಿನಿಂದ ಹೊರಟಿದ್ದ ಐದು ರಫೇಲ್ ಯುದ್ಧ ವಿಮಾನಗಳ 2020 ಜುಲೈ 7ರ ಬುಧವಾರ ಭಾರತೀಯ ವಾಯುಸೇನೆಯ ಅಂಬಾಲಾ ವಾಯುನೆಲೆಗೆ ಬಂದಿಳಿದಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೆಸರು ಹೇಳದೆಯೇ ಚೀನಾಕ್ಷೆ ತೀಕ್ಷ್ಣ ಎಚ್ಚರಿಕೆ ನೀಡಿದರು.
ಭಾರತಕ್ಕೆ ಯುದ್ಧ ವಿಮಾನದ ಆಗಮನವು ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ಸಾಮರ್ಥ್ಯಕ್ಕೆ ‘ಸಮಯೋಚಿತ ಶಕ್ತಿಯನ್ನು’ ನೀಡುತ್ತದೆ ಮತ್ತು ನಮ್ಮ ದೇಶಕ್ಕೆ ಬರಬಹುದಾದ ಯಾವುದೇ ಬಾಹ್ಯ ಬೆದರಿಕೆಯನ್ನು ‘ತಡೆಯಲು ಭಾರತೀಯ ವಾಯುಪಡೆ ಈಗ ಹೆಚ್ಚು ಬಲಶಾಲಿಯಾಗಲಿದೆ’ ಎಂದು ರಾಜನಾಥ್ ಸಿಂಗ್ ಹೇಳಿದರು.
ಮೊದಲ ರಫೇಲ್ ಯುದ್ಧ ವಿಮಾನವನ್ನು ಔಪಚಾರಿಕವಾಗಿ ಸ್ವೀಕರಿಸಲು ಕಳೆದ ವರ್ಷ ಫ್ರಾನ್ಸಿಗೆ ಪ್ರಯಾಣಿಸಿದ್ದ ಸಿಂಗ್, ಬಹುಕಾರ್ಯಾಚರಣೆ ಸಾಮರ್ಥ್ಯದ ವಿಮಾನಗಳ ಶಕ್ತಿಯನ್ನು ಪಶಂಸೆ ಮಾಡಿದರು ಮತ್ತು ೩೬ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು.
ರಾಜನಾಥ್ ಸಿಂಗ್ ಅವರು ತಮ್ಮ ಸಂದೇಶದಲ್ಲಿ ಚೀನಾವನ್ನು ಹೆಸರಿಸಲಿಲ್ಲ. ಅವರ ಮಾತುಗಳು ನೇರವಾಗಿ ಚೀನಾದ ವರ್ತನೆಗೆ ನೀಡಿದ ತೀಕ್ಷ್ಣ ಪ್ರತಿಕ್ರಿಯೆಯಾಗಿತ್ತು.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ನೈಜ ನಿಯಂತ್ರಣ ರೇಖೆಯ ಸಮೀಪದಲ್ಲೇ ತನ್ನ ಸೈನಿಕರನ್ನು ಜಮಾವಣೆ ಮಾಡಿತ್ತು. ಮತ್ತು ಈ ವರ್ಷ ಮೇ ತಿಂಗಳಲ್ಲಿ ಭಾರತದ ರಕ್ಷಣಾ ಪಡೆಗಳ ಜೊತೆಗೆ ಮುಖಾಮುಖಿ ಘರ್ಷಣೆಗೆ ಇಳಿದಿತ್ತು. ಲಡಾಖ್ನ ಗಲ್ವಾನ್ ಪ್ರದೇಶದಲ್ಲಿ ರಕ್ತಸಿಕ್ತ ಘರ್ಷಣೆಯ ಬಳಿಕ, ಮುಂಚೂಣಿಯ ಘರ್ಷಣಾ ಸ್ಥಳಗಳಿಂದ ಸೇನೆ ಹಿಂಪಡೆಯಲು ಒಪ್ಪಿತ್ತು. ಪೀಪಲ್ ಲಿಬರೇಶನ್ ಆರ್ಮಿಯು ಡೇರೆ ನಿರ್ಮಿಸಲು ನಡೆಸಿದ ಯತ್ನವನ್ನು ಭಾರತೀಯ ಸೇನೆ ವಿರೋಧಿಸಿದಾಗ ನಡೆದ ಈ ಘರ್ಷಣೆಯಲ್ಲಿ ಭಾರತದ ೨೦ ಮಂದಿ ಯೋಧರು ಹುತಾತ್ಮರಾದರೆ ಚೀನಾದ ಕಡೆಯಲ್ಲೂ ಅನಿರ್ದಿಷ್ಟ ಸಂಖ್ಯೆಯ ಸಾವು ನೋವುಗಳು ಸಂಭವಿಸಿದ್ದವು.
ಆದರೆ ಹಲವಾರು ಸುತ್ತಿನ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆ ಹಾಗೂ ರಜತಾಂತ್ರಿಕ ಮಾತುಕತೆಗಳಲ್ಲಿ ಸೇನೆ ವಾಪಸಿಗೆ ಒಪ್ಪಿದ ಬಳಿಕವೂ ತನ್ನ ಪಡೆಗಳನ್ನು ಪೂರ್ತಿಯಾಗಿ ಹಿಂತೆಗೆದುಕೊಳ್ಳುವಲ್ಲಿ ಚೀನಾ ನಿಧಾನಗತಿಯನ್ನು ಅನುಸರಿಸುತ್ತಿದೆ. ಮುಂಚೂಣಿ ಪ್ರದೇಶಗಳಲ್ಲಿ ತನ್ನ ಪಡೆಗಳನ್ನು ಕಡಿಮೆಗೊಳಿಸಿದರೂ, ಅದರಾಚೆಗಿನ ಪ್ರದೇಶಗಳಲ್ಲಿ ಪಿಎಲ್ಎ ಸುಮಾರು ೫೦,೦೦೦ಕ್ಕೂ ಹೆಚ್ಚು ಪಡೆಗಳನ್ನು ಜಮಾವಣೆ ಮಾಡಿದೆ ಎಂದು ಸೇನಾ ಮೂಲಗಳು ವರದಿ ಮಾಡಿವೆ.
’ನಮ್ಮ ಭಾರತೀಯ ವಾಯುಪಡೆಯ ಈ ನೂತನ ಸಾಮರ್ಥ್ಯದ ಬಗ್ಗೆ ಯಾರಾದರೂ ಚಿಂತಿಸುವುದಿದ್ದರೆ ಅದು ನಮ್ಮ ಗಡಿ ಸಮಗ್ರತೆಗೆ ಬೆದರಿಕೆ ಒಡ್ಡುವವರೇ ಆಗಿರಬೇಕು ಎಂದು ಹೇಳಲು ನಾನು ಇಚ್ಛಿಸುತ್ತೇನೆ’ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದರು. ಮತ್ತು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಅಂಬಾಲ ನೆಲೆಯಲ್ಲಿ ಬಂದಿಳಿಯುವ ವಿಡಿಯೋ ದೃಶ್ಯಾವಳಿಯನ್ನು ಟ್ವಿಟ್ಟರಿನಲ್ಲಿ ಪ್ರಕಟಿಸಿದರು.
ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ (ಐಎಎಫ್) ಆಯಕಟ್ಟಿನ ದಾಳಿ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ’ಆಟ ಪರಿವರ್ತಕ ದಾಳ’ ಎಂಬುದಾಗಿ ಪರಿಗಣಿಸಲಾಗಿದೆ. ಈ ಯುದ್ಧ ವಿಮಾನಗಳು ನೆಲ ಮತ್ತು ಸಮುದ್ರದ ಮೇಲಿನಿಂದ ದಾಳಿ ನಡೆಸುವುದು, ವಾಯು ರಕ್ಷಣೆ, ಸ್ಥಳ ಪರಿಶೀಲನೆ ಮತ್ತು ಅಣ್ವಸ್ತ್ರ ದಾಳಿ ತಡೆಯುವುದೇ ಇತ್ಯಾದಿ ಪಾತ್ರಗಳನ್ನು ನಿರ್ವಹಿಸುವ ಮೂಲಕ ’ವಾಯು ಶ್ರೇಷ್ಠತೆ’ ಹೊಂದಿರುವ ಯುದ್ಧಾಸ್ತ್ರಗಳಾಗಿವೆ.
ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್. ಧನೋವಾ ಅವರು ಯುದ್ಧ ವಿಮಾನಗಳು ಬಂದಿಳಿಯುವುದಕ್ಕೆ ಸ್ವಲ್ಪ ಮುನ್ನ ಪತ್ರಿಕಾಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ’ಚೀನೀ ಸೇನೆಯು ಈ ಸಮರಾಸ್ತ್ರದ ಸನಿಹಕ್ಕೂ ಸುಳಿಯಲು ಸಾಧ್ಯವಿಲ್ಲ’ ಎಂದು ಹೇಳಿದರು.ಚೀನಾದ ಜೆ-೨೦ ವಿಮಾನಗಳು ರಫೇಲ್ ಯುದ್ಧ ವಿಮಾನಗಳ ಬಳಿಗೆ ಬರಲು ಕೂಡಾ ಸಾಧ್ಯವಿಲ್ಲ ಎಂದು ಅವರು ನುಡಿದರು.
ಚೀನೀ ಯುದ್ಧೋಪಕರಣಗಳ ಯಾವುದೇ ಬೆದರಿಕೆಯನ್ನಾದರೂ ಬಗ್ಗು ಬಡಿಯುವ ಸಾಮರ್ಥ್ಯ ಈ ರಫೇಲ್ ಯುದ್ಧ ವಿಮಾನಗಳಿಗೆ ಇದೆ ಎಂದು ಧನೋವಾ ನುಡಿದರು.
೨೦೧೬ರಲ್ಲಿ ಅತ್ಯಂತ ಸೂಕ್ತ ಕಾಲದಲ್ಲಿ ಯುದ್ಧ ವಿಮಾನಗಳನ್ನು ಖರೀದಿಸುವ ಸಕಾಲಿಕ ನಿರ್ಣಯ ಕೈಗೊಂಡ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದೂ ರಾಜನಾಥ್ ಸಿಂಗ್ ಹೇಳಿದರು. ನರೇಂದ್ರ ಮೋದಿ ಅವರು ರಫೇಲ್ ಯುದ್ಧ ವಿಮಾನ ಖರೀದಿಗೆ ಕೈಗೊಂಡ ನಿರ್ಣಯವು ಬಹುದೊಡ್ಡ ವಿವಾದವನ್ನು ಹುಟ್ಟು ಹಾಕಿತ್ತು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಫೇಲ್ ಯುದ್ಧ ವಿಮಾನಗಳನ್ನು ದುಬಾರಿ ಬೆಲೆ ತೆತ್ತು ತರಲಾಗುತ್ತಿದೆ ಎಂದು ಭಾರೀ ಆಪಾದನೆ ಮಾಡಿತ್ತು.
ಆದಾಗ್ಯೂ ಈ ಆಪಾದನೆ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮತು ಮಹಾಚುನಾವಣೆಯಲ್ಲಿ ಪ್ರಬಲವಾಗಿ ಎದುರಿಸಿ ಪ್ರಚಾರಾಭಿಯಾನ ಮೂಲಕ ಹೋರಾಡಿದ್ದ ಸರ್ಕಾರ ಎರಡೂ ಕಡೆ ವಿಜಯಗಳಿಸಿತ್ತು.
ವಿಮಾನ ಖರೀದಿ ಒಪ್ಪಂದದ ನಿಟ್ಟಿನಲ್ಲಿ ಮುಂದುವೆದ ದಿಟ್ಟತನದ ಕಾರಣ ಈ ವಿಮಾನಗಳು ಭಾರತಕ್ಕೆ ಬಂದಿವೆ ಎಂದು ಸಿಂಗ್ ಹೇಳಿದರು.
’ನರೇಂದ್ರ ಮೋದಿ ಅವರು ಫ್ರಾನ್ಸ್ ಜೊತೆಗೆ ಅಂತರ್-ಸರ್ಕಾರಿ ಒಪ್ಪಂದದ ಮೂಲಕ ಈ ಯುದ್ಧ ವಿಮಾನಗಳನ್ನು ಪಡೆಯುವ ಸಮರ್ಪಕ ನಿರ್ಧಾರ ಕೈಗೊಂಡ ಕಾರಣ ಮಾತ್ರವೇ ರಫೇಲ್ ಯುದ್ಧ ವಿಮಾನಗಳ ಖರೀದಿ ಸಾಧ್ಯವಾಯಿತು. ಈ ವಿಮಾನಗಳನ್ನು ಪಡೆಯುವ ನಿಟ್ಟಿನ ಸುದೀರ್ಘ ವಿಳಂಬದ ಬಳಿಕ ಪ್ರಧಾನಿಯವರು ಈ ನಿರ್ಧಾರ ಕೈಗೊಂಡರು. ಈ ಧೈರ್ಯ ಮತ್ತು ನಿರ್ಧಾರದ ನಿರ್ಣಾಯಕತೆಗಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ರಾಜನಾಥ್ ಸಿಂಗ್ ನುಡಿದರು.
No comments:
Post a Comment