ಐರೋಪ್ಯ ಒಕ್ಕೂಟಕ್ಕೆ ಪ್ರಧಾನಿ ಮೋದಿ ಸಂದೇಶ
ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟ (ಇಯು) ಪ್ರಜಾಪ್ರಭುತ್ವ ಮತ್ತು ಬಹುತ್ವದ ಸಾರ್ವತ್ರಿಕ ಮೌಲ್ಯಗಳನ್ನು ಹಂಚಿಕೊಂಡಿವೆ ಎಂದು 2020 ಜುಲೈ 15ರ ಬುಧವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯರ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಒಗ್ಗಟ್ಟು, ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಲು ದಾರಿದೀಪವಾಗಿದೆ ಎಂದು ಹೇಳಿದರು.
ಭಾರತ- ಐರೋಪ್ಯ ಒಕ್ಕೂಟದ ೧೫ನೇ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ’ಭಾರತ-ಐರೋಪ್ಯ ಒಕ್ಕೂಟದ ಯೂರೋಪಿಯನ್ ಒಕ್ಕೂಟದ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂದು ಆಶಿಸಿದರು.
೨೧ನೇ ಶತಮಾನದ ವೇಗಕ್ಕೆ ತಕ್ಕಂತೆ ಭಾರತ ಮತ್ತು ಐರೋಪ್ಯ ಒಕ್ಕೂಟ ಒಟ್ಟಿಗೆ ಹೆಜ್ಜೆ ಹಾಕಲಿವೆ. ಆರ್ಥಿಕ ಮತ್ತು ಸಾಮಾಜಿಕ ಒಗ್ಗಟ್ಟು ನಮ್ಮನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಲಿದೆ ಎಂದು ಅವರು ಹೇಳಿದರು.
ಭಾರತ-ಐರೋಪ್ಯ ಒಕ್ಕೂಟದ ಒಗ್ಗಟ್ಟು ಇಡೀ ವಿಶ್ವದ ಕಲ್ಯಾಣಕ್ಕೆ ಪೂರಕವಾಗಲಿ ಎಂದು ಹಾರೈಸಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ಹಾವಳಿಯ ಈ ಸಂಕಷ್ಟದ ಸಮಯದಲ್ಲಿ ಭಾರತ-ಐರೋಪ್ಯ ಒಕ್ಕೂಟ ಮಧ್ಯೆ ಇನ್ನಷ್ಟು ಆರ್ಥಿಕ ಒಪ್ಪಂದಗಳು ರೂಪುಗೊಳ್ಳಬೇಕಾಗಿದೆ ಎಂದು ನುಡಿದರು.
ಪರಸ್ಪರರ ಲಾಭಕ್ಕಾಗಿ ಪೂರಕ ವಾತಾವರಣ ನಿರ್ಮಾಣ ಮಾಡುವುದು ಭಾರತ-ಐರೋಪ್ಯ ಒಕ್ಕೂಟದ ಜವಾಬ್ದಾರಿಯಾಗಿದೆ. ನಮ್ಮ ಆರ್ಥಿಕ ಸಂಬಂಧಗಳು ದೀರ್ಘ ಮತ್ತು ಪರಿಣಾಮಕಾರಿಯಾಗಿರುವಂತೆ ಕರಾರುವಾಕ್ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.
ನೈಸರ್ಗಿಕ ಇಂಧನದ ಸಾಮರ್ಥ್ಯ ಹೆಚ್ಚಿಸುವ ಯೋಜನೆಯಲ್ಲಿ ಯುರೋಪ್ ಹೂಡಿಕೆಯನ್ನು ಭಾರತ ನಿರೀಕ್ಷಿಸುತ್ತಿದೆ ಎಂದು ಅವರು ನುಡಿದರು.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವದ ಇತರ ರಾಷ್ಟ್ರಗಳಿಗೆ ಭಾರತದ ಸಹಾಯಕ್ಕೆ ಧನ್ಯವಾದ ಅರ್ಪಿಸಿದ ಐರೋಪ್ಯ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಮೈಕಲ್ ಅವರು, ಭಾರತ-ಐರೋಪ್ಯ ಒಕ್ಕೂಟದ ಸಂಬಂಧ ವಿಶ್ವ ಶಾಂತಿ ಹಾಗೂ ಆರ್ಥಿಕ ಅದೃಢತೆಗೆ ಬಲ ತುಂಬಲಿ ಎಂದು ಹಾರೈಸಿzರು.
ಆರ್ಥಿಕ ಕ್ಷೇತ್ರದಲ್ಲಿನ ಪರಸ್ಪರ ಹೂಡಿಕೆ ನಂಬಿಕೆ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.
ಭಾರತ-ಐರೋಪ್ಯ ಒಕ್ಕೂಟದ ಸಂಬಂಧ ಎಲ್ಲಾ ಕ್ಷೇತ್ರಗಳಲ್ಲೂ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸಿದರು.
"ಈ ಶೃಂಗಸಭೆಯು ನಮ್ಮ ಆರ್ಥಿಕ ಮತ್ತು ಯುರೋಪಿನೊಂದಿಗಿನ ಸಾಂಸ್ಕೃತಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ಇದಕೆ ಮುನ್ನ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
ವ್ಯಾಪಾರ, ಹೂಡಿಕೆ ಮತ್ತು ರಕ್ಷಣೆ ಸೇರಿದಂತೆ ಹಲವಾರು ಕ್ಷೇತ್ರಗಳ ಮೇಲೆ ಮತ್ತಷ್ಟು ವಿಶಾಲವಾದ ಸಂಬಂಧಗಳನ್ನು ಬೆಳೆಸುವ ಉದ್ದೇಶವನ್ನು ಶೃಂಗಸಭೆ ಹೊಂದಿದೆ ಎಂದು ೨೭ ರಾಷ್ಟ್ರಗಳ ಬಣದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಭಾಷಣದ ಮುಖ್ಯಂಶಗಳು
ಭಾರತ ಮತ್ತು ಐರೋಪ್ಯ ಒಕ್ಕೂಟ ನೈಸರ್ಗಿಕ ಪಾಲುದಾರರು. ನಮ್ಮ ಪಾಲುದಾರಿಕೆ ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ಸಹ ಉಪಯುಕ್ತವಾಗಿದೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಈ ವಾಸ್ತವವು ಇನ್ನಷ್ಟು ಸ್ಪಷ್ಟವಾಗಿದೆ.
ಭಾರತ ಮತ್ತು ಇಯು ಎರಡೂ ಪ್ರಜಾಪ್ರಭುತ್ವ, ಬಹುತ್ವ, ಒಳಗೊಳ್ಳುವಿಕೆ, ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಗೌರವ, ಬಹುಪದರತೆ, ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ.
ಕೋವಿಡ್ ನಂತರದ ಜಗತ್ತಿನಲ್ಲಿ, ಜಾಗತಿಕವಾಗಿ ಆರ್ಥಿಕ ಜಗತ್ತಿನಲ್ಲಿ ಹೊಸ ಸವಾಲುಗಳು ಎದುರಾಗಲಿವೆ. ಇದನ್ನು ಪರಿಹರಿಸಲು ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಬೇಕು.
ನಾವು ಇಲ್ಲಿಯವರೆಗೆ ಸುಮಾರು ೧೫೦ ದೇಶಗಳಿಗೆ ಔಧಗಳನ್ನು ಕಳುಹಿಸಿದ್ದೇವೆ. ನಮ್ಮ ಪ್ರದೇಶದಲ್ಲಿ ಕೋವಿಡ್ ವಿರುದ್ಧ ಜಂಟಿ ಕಾರ್ಯಾಚರಣೆಯನ್ನು ನಡೆಸಲು ನಾವು ಮುಂದಾಗಿದ್ದೇವೆ.
ಇಯು ಮತ್ತು ಒಕ್ಕೂಟದ ದೇಶಗಳು ಕೈಗೊಂಡ ‘ಕೋವಿಡ್ ಪರಿಕರಗಳ ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸುವ’ ಉಪಕ್ರಮವನ್ನು ನಾವು ಆಹ್ವಾನಿಸುತ್ತೇವೆ. ಈ ಜಾಗತಿಕ ಪ್ರಯತ್ನಕ್ಕೆ ಭಾರತದ ಫಾರ್ಮಾ ಕಂಪನಿಗಳು ಕೊಡುಗೆ ನೀಡಲು ಸಿದ್ಧವಾಗಿ.
ಇಂದು, ನಮ್ಮ ಪ್ರಜೆಗಳು ಆರೋಗ್ಯ ಮತ್ತು ಸಮೃದ್ಧಿ ಎರಡೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಭಾರತ-ಇಯು ಸಹಭಾಗಿತ್ವವು ಆರ್ಥಿಕ ಪುನರ್ನಿರ್ಮಾಣದಲ್ಲಿ ಮತ್ತು ಮಾನವ ಕೇಂದ್ರಿತ ಜಾಗತೀಕರಣವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹಾಲಿ ಕೋವಿಡ್ ಸಂಬಂಧಿತ ಸವಾಲುಗಳ ಹೊರತಾಗಿ, ಹವಾಮಾನ ಬದಲಾವಣೆಯಂತಹ ದೀರ್ಘಕಾಲೀನ ಸವಾಲುಗಳು ನಮ್ಮಿಬ್ಬರಿಗೂ ಆದ್ಯತೆಯಾಗಿದೆ. ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳಲ್ಲಿ, ನಾವು ಯುರೋಪಿನ ಹೂಡಿಕೆ ಮತ್ತು ತಂತ್ರಜ್ಞಾನವನ್ನು ಆಹ್ವಾನಿಸುತ್ತೇವೆ.
No comments:
Post a Comment